ಮಂಗಳೂರು Aug 18: ಸ್ವಾಮಿ ವಿವೇಕಾನಂದ ೧೫೦ನೇ ಜನ್ಮ ವರ್ಷಾಚರಣೆ ಸಮಿತಿ ಮಂಗಳೂರು ಇದರ ವತಿಯಿಂದ ಇಂದು ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನ ಬಿಬಿಎಂ ಆಡಿಟೋರಿಯಂನಲ್ಲಿ ಬೆಳಿಗ್ಗೆ ೧೦ ರಿಂದ ೧.೩೦ರವರೆಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.

Ph2

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಪಿ. ಎಸ್. ಯಡಪಡಿತ್ತಾಯರವರು ಶಿಕ್ಷಣ ಕ್ಷೇತ್ರಕ್ಕೆ ವಿವೇಕಾನಂದರ ಕೊಡುಗೆ ಏನು ಎಂಬುದನ್ನು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಎರಡು ಗೋಷ್ಠಿಗಳನ್ನು ಎರ್ಪಡಿಸಲಾಗಿದ್ದು, ಮೊದಲನೇ ವಿಚಾರಗೋಷ್ಠಿಯನ್ನು ಪೂನಾದ ಖ್ಯಾತ ಚಿಂತಕರಾದ ಶ್ರೀ ವಿನಯ ಸಹಸ್ರಬುದ್ಧೆಯವರು  ”What it means to be a Hindu in the Globalized world – Issues of Identity” ಎನ್ನುವ ವಿಷಯದ ಮೇಲೆ ತಮ್ಮ ಪ್ರಬಂಧವನ್ನು ಮಂಡಿಸಿದರು.

Ph3

ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ತಳಹದಿ. ಆದರೆ ವಿಪರ್ಯಾಸವೆಂದರೆ ನಾವು ಪಾಶ್ಚಿಮಾತ್ಯದ ಇತಿಹಾಸ, ಅವರ ಆಚರಣೆ ಅವುಗಳ ಅರಿವನ್ನು ಹೊಂದಿರುತ್ತೇವೆ. ಆದರೆ ನಮ್ಮ ದೇಶದ ಇತರ ಭಾಗಗಳಲ್ಲಿರುವ ಆಚರಣೆ, ಆ ಪ್ರದೇಶದ ಇತಿಹಾಸ ಅವುಗಳ ಅರಿವು ನಮಗಿಲ್ಲ.  ನಮ್ಮನ್ನು ನಾವು ಮೊದಲು ಅರಿಯುವ ಮೂಲಕ ನಮ್ಮ ದೇಶ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

ಎಲ್ಲಾ ಧರ್ಮಗಳಲ್ಲೂ ಮೌಲ್ಯ ಒಂದೇ ರೀತಿ ಇದೆ. ಆದರೆ ಅದನ್ನು ಅನುಸರಿಸುವ ಪ್ರಕ್ರಿಯೆ ಬೇರೆ ಬೇರೆ. ಆದರೆ ಹಿಂದೂ ಧರ್ಮದಲ್ಲಿರುವ ವಿವಿಧ ಆಚರಣೆಗಳಿಂದ ಅದು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದೆ.

ಎಲ್ಲವನ್ನೂ ನಾವು ಸ್ವೀಕರಿಸುವ ಸ್ವಭಾವ ನಮಗಿದೆ ಅದೇ ನಮ್ಮ ದೌರ್ಬಲ್ಯ ಎಂಬ ವಿಚಾರಗಳನ್ನು ಮಂಡಿಸಿದರು.

ಎರಡನೇ ವಿಚಾರಗೋಷ್ಠಿಯನ್ನು ಬೆಂಗಳೂರಿನ ಡಾ. ಎಂ. ಎಸ್. ಚೈತ್ರಾರವರು ’ಪರಿಭಾಷೆಗಳ ಬಲೆಯಲ್ಲಿ ಮಹಿಳೆ ಮತ್ತು ಸಮಾನತೆ (ಬಿಡುಗಡೆಯೋ ?  ಬಂಧನವೋ ?)’ ಈ ವಿಚಾರವಾಗಿ ತಮ್ಮ ಪ್ರಬಂಧವನ್ನು ಮಂಡಿಸಿದರು.

ಸಂಸ್ಕೃತಿ ಎಂದರೆ ಮನುಷ್ಯ ಬದುಕುವ ರೀತಿ ಮತ್ತು ಕಲಿಕೆಯ ಕ್ರಮ. ಭಾರತೀಯರು ತಮ್ಮ ಗುರು ಹಿರಿಯರಿಂದ, ತಾವು ಬೆಳೆದಿರುವ ವಾತಾವರಣ, ಪುರಾಣಗಳಿಂದ ಕಲಿಯುತ್ತಾರೆ. ನಾವು ಸಂಪ್ರದಾಯಕತೆಯಲ್ಲಿ ಬದುಕುತ್ತೇವೆ. ನಮ್ಮ ಜೀವನದಿಂದ ಸಂಪ್ರದಾಯಕತೆಯ ಆಚರಣೆಗಳನ್ನು ತೆಗೆದು ಹಾಕಿದರೆ ನಾವು ಶೂನ್ಯರಾಗುತ್ತೇವೆ. ಭಾರತ ಆಚರಣೆಗೆ ಯಾವುದೇ ಪಠ್ಯವನ್ನು ಆಧರಿಸಿಲ್ಲ. ಮನುಸ್ಮೃತಿಯಿಂದ ಸ್ತ್ರೀಯರ ಹರಣವಾಗಿದೆ ಎಂದು ಮಹಿಳಾವಾದಿಗಳು ಹೇಳುತ್ತಾರೆ. ಆದರೆ ಅವರಿಗೆ ಮನುಸ್ಮೃತಿ ಬಗ್ಗೆ ಎಷ್ಟು ಗೊತ್ತು ?

ಇಂದು ಮಹಿಳೆಯರ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಇದು ನಮ್ಮ ಬೌದ್ಧಿಕ ದಿವಾಳಿತನಕ್ಕೆ ಒಂದು ಉದಾಹರಣೆ ಎಂದು ಹೇಳಿದರು.

೧೫೦ ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನಗರದ ಚಿಂತಕರು,  ಪ್ರಬುದ್ಧರು ಹಾಗೂ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಸುವ್ರತ್ ಕುಮಾರ್‌ರವರು ಸ್ವಾಗತಿಸಿದರೆ, ಡಾ. ಭರತ್ ಶೆಟ್ಟಿಯವರು ವಂದನಾರ್ಪಣೆ ಗೈದರು.

Leave a Reply

Your email address will not be published.

This site uses Akismet to reduce spam. Learn how your comment data is processed.