ಇಂದು ಜಯಂತಿ

ನಾನಾ ಸಾಹೇಬರು ಅತ್ಯಂತ ಪ್ರಭಾವಿ ಆಡಳಿತಗಾರರಾಗಿ ಪ್ರಸಿದ್ಧಿ ಪಡೆದವರು. ಇವರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿರುವ ಕೊಡುಗೆ ಅಪಾರ. ಭಾರತದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಇಂದಿಗೂ ಮಹಾನ್‌ ನಾಯಕರಾಗಿ ನೆನಪಿಸಿಕೊಳ್ಳುವ ವೀರ. ಮರಾಠ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಆಡಳಿತಗಾರರಲ್ಲಿ ನಾನಾ ಸಾಹೇಬರು ಒಬ್ಬರು. ಇಂದು ಅವರ ಜಯಂತಿ.

ಪರಿಚಯ
ನಾನಾ ಸಾಹೇಬರು ಮೇ 19, 1824 ರಂದು ಈಗಿನ ಉತ್ತರ ಪ್ರದೇಶದ ಬಿತ್ತೂರ್‌ ನಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಭಟ್‌, ತಾಯಿ ಗಂಗಾಬಾಯಿ. ನಾನಾ ಸಾಹೇಬರ ಹೆಸರು ನಾನಾ ಗೋವಿಂದ ಧೋಂಡು ಪಂತ್‌. ನಾರಾಯಣ ಪಂತರು ವಿದ್ವಾಂಸರಾಗಿದ್ದು, ಪೇಶ್ವರ ಹೆಂಡತಿಯಲ್ಲಿ ಒಬ್ಬರ ತಂಗಿಯನ್ನು ಮದುವೆಯಾದರು. ಮರಾಠರ ಕೊನೆಯ ದೊರೆಯಾದ ಬಾಜಿರಾವ್‌ ಅವರಿಗೆ ಮಕ್ಕಳು ಆಗಿಲ್ಲದ ಕಾರಣ ನಾನಾ ಸಾಹೇಬ ಮತ್ತು ಬಾಳಸಾಹೇಬ್‌ ನನ್ನು ದತ್ತು ಪಡೆದು ತಮ್ಮ ಮಗಳಾಗಿ ಸ್ವೀಕರಿಸಿದರು. ನಾನಾ ಸಾಹೇಬ ನಂತರ ಮರಾಠರ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದರು.

ನಾನಾ ಸಾಹೇಬರು ಸಂಸ್ಕೃತವನ್ನು ಅಧ್ಯಯನ ಮಾಡಿದರು. ಧರ್ಮದ ಜ್ಞಾನವನ್ನು ಹೊಂದಿದ್ದ ನಾನಾ ಸಾಹೇಬರು ಮರಾಠ ಯೋಧರಾಗಿ ಯುದ್ಧ ಕಲೆಯನ್ನು ಕರಗತವಾಗಿ ಮಾಡಿಕೊಂಡರು. ತಂದೆ ಬಾಜಿರಾವ್‌ ಮರಣದ ನಂತರ ನಾನಾ ಸಾಹೇಬರು 20 ವರ್ಷಗಳ ಕಾಲ ಬಿತ್ತೂರ್‌ ಅನ್ನು ಆಳಿದರು. ಆ ಸಮಯದಲ್ಲಿ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯು ಅನೇಕ ಪ್ರದೇಶಗಳಲ್ಲಿ ಸಂಪೂರ್ಣ ಸಾಮ್ರಾಜ್ಯಶಾಹಿ ಆಡಳಿತಾತ್ಮಕ ಅಧಿಕಾರವನ್ನು ಹೊಂದಿತ್ತು. ನಂತರ 1848 ರಿಂದ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್‌ ಗವರ್ನರ್‌ – ಜನರಲ್‌ ಆಫ್‌ ಇಂಡಿಯಾ ಡಾಲ್ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ
ನೀತಿಯನ್ನು ಅನ್ವಯಿಸಿದರು. ಮಂಗಲ್ ಪಾಂಡೆ ಬ್ರಿಟಿಷರನ್ನು ಭಾರತದಿಂದ ಚದುರಿಸಲು ಬಂಗಾಳದ ಬರಾಕ್‌ಪೋರ್ ಸೇನಾ ಶಿಬಿರದಲ್ಲಿ 1857ರಲ್ಲಿ ಬ್ರಿಟಿಷರ ವಿರುದ್ಧ ಮೊದಲು ದಂಗೆಯನ್ನು ಪ್ರಾರಂಭಿಸಿದರು. ಕ್ರಮೇಣ ದಂಗೆಯು ಭಾರತದಾದ್ಯಂತ ಹರಡಿತು.


1857 ಸ್ವಾತಂತ್ರ್ಯ ಸಂಗ್ರಾಮ
ಸ್ವಾತಂತ್ರ್ಯ ಸಂಗ್ರಾಮದ ಪ್ರಾರಂಭಕ್ಕೂ ಮುನ್ನ ನಾನಾ ಸಾಹೇಬರು ಕಾನ್ಪುರದಲ್ಲಿರುವ ಯುರೋಪಿಯನ್ನರ ರಕ್ಷಣೆಗಾಗಿ ತಮ್ಮ ಸೇನೆಯನ್ನು ಕಂಪನಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಕಳುಹಿಸಿದರು. ಒಂದು ವೇಳೆ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಕಾನ್ಪುರಕ್ಕೂ ಹಬ್ಬಿದರೆ, ಬ್ರಿಟಿಷರ ವಿರುದ್ಧ ಹೋರಾಡಲು ನಾನಾ ಸಾಹೇಬರು 1,500 ಸೈನಿಕರ ಪಡೆಯನ್ನು ನಿಯೋಜಿಸಿದ್ದರು. 1857ರ ಜೂನ್ ನಲ್ಲಿ ನಾನಾ ಸಾಹೇಬ್ ಮತ್ತು ಅವರ ನೇತೃತ್ವದ ಸಿಪಾಯಿಗಳು ಕಾನ್ಪುರದಲ್ಲಿದ್ದ ಬ್ರಿಟಿಷರ ನಿವಾಸದ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡರು. ನಂತರ ಜುಲೈ 1857 ರಲ್ಲಿ ಬ್ರಿಟಿಷರು ನಾನಾ ಸಾಹೇಬರ ಪಡೆಗಳನ್ನು ಸೋಲಿಸುವ ಮೂಲಕ ಕಾನ್ಪುರವನ್ನು ಪುನಃ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ನಾನಾ ಸಾಹೇಬ್‌ ಕಾನ್ಪುರದಿಂದ ಬಿತ್ತೂರ್‌ ಗೆ ತೆರಳಬೇಕಾಯಿತು. ಆದರೂ ನಾನಾ ಸಾಹೇಬರು ತಮ್ಮ ಉತ್ಸಾಹ ಕಳೆದುಕೊಳ್ಳದೆ ಬ್ರಿಟಿಷರ ವಿರುದ್ಧ ಹೋರಾಡಲು ನಾನಾ ಭಾಗಗಳಲ್ಲಿ ನಿರಂತರವಾಗಿ ಪ್ರಯತ್ನಿಸಿದರು. ನಾನಾ ಸಾಹೇಬ್ ಪೇಶ್ವೆ ಸಿಪಾಯಿ ದಂಗೆಯ ಸಮಯದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದರು. ನಾನಾ ಸಾಹೇಬರು ಹೆಚ್ಚಿನ ಅಧಿಕಾರವನ್ನು ಪಡೆಯಲು ನೇಪಾಳದ ಪ್ರಧಾನ ಮಂತ್ರಿ ಜಂಗ್ ಬಹದ್ದೂರ್ ರಾಣಾ ಅವರನ್ನು ಆಶ್ರಯಿಸಿದರು.


ಬ್ರಿಟಿಷ್ ಕಂಪನಿ ಕಾನ್ಪುರವನ್ನು ವಶಪಡಿಸಿಕೊಂಡ ನಂತರ ನಾನಾ ಸಾಹೇಬ್ ನಾಪತ್ತೆಯಾದರು . ನವೆಂಬರ್ 1857ರಲ್ಲಿ ನಾನಾ ಸಾಹೇಬರು ತಾತ್ಯಾ ಟೋಪೆಯೊಂದಿಗೆ ಕಾನ್ಪುರವನ್ನು ಮರಳಿ ಪಡೆಯಲು ಪ್ರಯತ್ನಿಸಿದರು. ನಂತರ ಎರಡನೇ ಕಾನ್ಪುರ ಕದನದಲ್ಲಿ ಸೋಲಿಸಿದರು. 1858ರಲ್ಲಿ ನಾನಾ ಸಾಹೇಬರ ಸಹಚರರಾದ ರಾಣಿ ಲಕ್ಷ್ಮಿಬಾಯಿ ಮತ್ತು ತಾತ್ಯಾ ಟೋಪೆ ಅವರನ್ನು ಗ್ವಾಲಿಯರ್ ನಲ್ಲಿ ಪೇಶ್ವೆ ಎಂದು ಘೋಷಿಸಿದರು.


ನಾನಾ ಸಾಹೇಬರ ಮರಣದ ಕುರಿತು ನಾನಾ ದಾಖಲೆಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತವೆ. ಒಂದು ಮಾಹಿತಿಯ ಪ್ರಕಾರ ಸೆಪ್ಟೆಂಬರ್‌ 24, 1859 ತಮ್ಮ 35ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.