By Du Gu Lakshman

http://www.dreamstime.com/royalty-free-stock-images-baby-legs-mother-hands-image27399379

ಅದು 1975 ರ ತುರ್ತುಪರಿಸ್ಥಿತಿಯಕರಾಳದಿನಗಳು. ಆರೆಸ್ಸೆಸ್ಮೇಲೆಸರ್ಕಾರನಿಷೇಧಹೇರಿದ್ದರಿಂದಸಂಘದಕಾರ್ಯಕರ್ತರೆಲ್ಲಭೂಗತರಾಗಿಕಾರ್ಯನಿರ್ವಹಿಸಬೇಕಾದಅನಿವಾರ್ಯಸಂದರ್ಭ. ನಾನುಆಗಷ್ಟೇಪದವಿಮುಗಿಸಿಸಂಘದತಾಲೂಕುಪ್ರಚಾರಕನಾಗಿದಕ್ಷಿಣಕನ್ನಡದಸುಳ್ಯಕ್ಕೆಬಂದಿದ್ದೆ. ಅಲ್ಲಿಗೆಬಂದಒಂದುವಾರದಲ್ಲೇಸಂಘದಮೇಲೆನಿಷೇಧಹೇರಿದ್ದರಿಂದಾಗಿಯಾವುದೇಚಟುವಟಿಕೆಗಳನ್ನುಬಹಿರಂಗವಾಗಿನಡೆಸುವಂತಿರಲಿಲ್ಲ. ಕಾರ್ಯಾಲಯಗಳಿಗೆಬೀಗಮುದ್ರೆಬಿದ್ದಿದ್ದರಿಂದಾಗಿಹಿತೈಷಿಗಳಮನೆಯಲ್ಲೇವಾಸ . ಸಂಘದಕಾರ್ಯಕರ್ತರೆಂದುಅನುಮಾನಬಂದರೆಅಂತಹಮನೆಗಳಮೇಲೂಪೊಲೀಸರುದಾಳಿನಡೆಸಿ, ಅಲ್ಲಿರುತ್ತಿದ್ದಕಾರ್ಯಕರ್ತರನ್ನುಬಂಧಿಸಿಕರೆದೊಯ್ಯುತ್ತಿದ್ದರು. ಸಂಘದಪ್ರಮುಖಕಾರ್ಯಕರ್ತರನ್ನುಮನೆಗೆಸೇರಿಸುವುದೆಂದರೆಬೀದಿಯಲ್ಲಿದ್ದಮಾರಿಯನ್ನುಮನೆಗೆಕರೆತಂದಂತೆಅಥವಾವಿಪತ್ತೆಂಬಕೆಂಡವನ್ನುಸೆರಗಿನಲ್ಲಿಕಟ್ಟಿಕೊಂಡಂತೆಎಂಬುದುಗೊತ್ತಿದ್ದರೂಆಗಆನೇಕಮನೆಗಳುಸಂಘದಕಾರ್ಯಕರ್ತರಸುರಕ್ಷಿತಅಡಗುದಾಣಗಳಾಗಿದ್ದವು. ಮುಖ್ಯವಾಗಿಆಮನೆಗಳತಾಯಂದಿರುಧೈರ್ಯವಹಿಸಿಕಾರ್ಯಕರ್ತರಿಗೆಆಶ್ರಯ, ಊಟತಿಂಡಿ, ಧೈರ್ಯ, ಪ್ರೀತಿ, ಭರವಸೆಎಲ್ಲವನ್ನೂನೀಡಿದ್ದರಿಂದಲೇಸಂಘನಿಷೇಧದಬ್ರಹ್ಮಾಸ್ತ್ರದಿಂದಪಾರಾಗಿಗಟ್ಟಿಯಾಗಿಯೇಬೆಳೆದದ್ದು. ಮನೆಯಗಂಡಸರುಕೊಂಚಹೆದರಿದ್ದರೂತಾಯಂದಿರುಮಾತ್ರಧೈರ್ಯವಹಿಸಿ, ಪೊಲೀಸರಪಾಲಾಗಬೇಕಿದ್ದಕಾರ್ಯಕರ್ತರಿಗೆರಕ್ಷಣೆನೀಡಿದ್ದನ್ನುಎಂದಿಗೂಮರೆಯುವಂತಿಲ್ಲ. ಸುಳ್ಯಸಮೀಪದಜಾಲ್ಸೂರುಉಪೇಂದ್ರಕಾಮತ್ಅವರಪತ್ನಿಪದ್ಮಕ್ಕ, ಸುಬ್ರಹ್ಮಣ್ಯದಅನಂತನಲ್ಲೂರಾಯರಪತ್ನಿ, ಸುಳ್ಯದದಿವಂಗತಪಟ್ಟಪ್ಪಜೋಶಿಯವರಅಕ್ಕ, ಧನಂಜಯವಾಗ್ಲೆ, ಉಮೇಶ್, ಕುಕ್ಕುಜಡ್ಕದರವೀಶ್ಅವರತಾಯಂದಿರುಆಗಸಂಘದಕಾರ್ಯಕರ್ತರಿಗೆಮಾಡಿದಸೇವೆನಿಜಕ್ಕೂಬೆಲೆಕಟ್ಟಲಾಗದಂತಹದು. ರಾತ್ರಿಎಷ್ಟೇಹೊತ್ತಿಗೆಬಂದರೂಬೇಸರವಿಲ್ಲದೆಬಾಗಿಲುತೆಗೆದುಊಟಹಾಕಿ, ಕೆಲವೊಮ್ಮೆಅವರಿಗೆಅಗತ್ಯವಿರುವಬಟ್ಟೆಬರೆಒದಗಿಸಿ, ಹುಷಾರಾಗಿರಿ, ಪೊಲೀಸರಕೈಗೆಸಿಕ್ಕಿಹಾಕಿಕೊಳ್ಳಬೇಡಿಎಂದುಎಚ್ಚರಿಕೆಯಮಾತುಹೇಳುವವರೆಗೂಕಾಳಜಿತೋರಿಸುತ್ತಿದ್ದರು. ಜಾಲ್ಸೂರುಪದ್ಮಕ್ಕಅವರಂತೂನನಗೆ ‘ದುಗು, ಈಊರಿನಪರಿಚಯನಿನಗೆಅಷ್ಟಾಗಿಇಲ್ಲ. ಎಲ್ಲೆಲ್ಲೋತಿರುಗಾಡಿಸಿಕ್ಕಿಹಾಕಿಕೊಳ್ಳಬೇಡ. ಹುಷಾರಾಗಿರಬೇಕು’ ಎಂದುಅದೇಷ್ಟೋಬಾರಿಪ್ರೀತಿಯಿಂದಹೇಳಿದ್ದರು. ಇತ್ತೀಚೆಗೊಮ್ಮೆಅವರಮನೆಗೆಹೋದಾಗ , ಮತ್ತೆ  ಅದೇವಾತ್ಸಲ್ಯಪೂರ್ಣಧ್ವನಿಯಲ್ಲಿ  ‘ದುಗು, ಈಗನೀವೆಲ್ಲ  ದೊಡ್ಡಮನುಷ್ಯರಾಗಿದ್ದೀರಿ. ನಮ್ಮಮನೆಗೇಬರೊದಿಲ್ಲಅಲ್ವಾ? ಬರೀಪೇಪರ್‌ನಲ್ಲೇನಿಮ್ಮಚಿತ್ರನೋಡ್ಬೇಕಾ?’ ಎಂದುಹುಸಿಮುನಿಸುತೋರಿಮಾತನಾಡಿಸಿದ್ದರು. ತುರ್ತುಪರಿಸ್ಥಿತಿಯದಿನಗಳಲ್ಲಿನಾವೆಲ್ಲಅವರಮನೆಗೆಪೊಲೀಸರಿಗೆಗೊತ್ತಾಗದಂತೆಹೋಗಿ  ಊಟಮಾಡಿಬರುತ್ತಿದ್ದುದು, ಅಲ್ಲೇಬೈಠಕ್ನಡೆಸುತ್ತಿದ್ದುದುಎಲ್ಲವನ್ನೂಅವರುನೆನಪಿಸಿಕೊಂಡಿದ್ದರು.

***

ತುರ್ತುಪರಿಸ್ಥಿತಿಯಸಂದರ್ಭದಲ್ಲೇಬೆಂಗಳೂರಿನಜಯನಗರದಲ್ಲಿಬಿ.ಎನ್. ಮೂರ್ತಿ (ಶಾಸಕಬಿ. ಎನ್. ವಿಜಯಕುಮಾರ್ಅವರಅಣ್ಣ) ಅವರಮನೆಯಲ್ಲಿಕೆಲದಿನಗಳಿದ್ದೆ. ಮೂರ್ತಿಯವರತಾಯಿಗೆನನ್ನನ್ನುಕಂಡರೆಅದೇನೋಅಕ್ಕರೆ. ಅವರಮನೆಗೆನಾನುಹೋದಮೊದಲನೆಯದಿನವೇನನ್ನನ್ನುಪ್ರೀತಿಯಿಂದಮಾತನಾಡಿಸಿಊಟಹಾಕಿದ್ದರು. ಅವರಮಗಹರಿಯನ್ನುನಾನುಹೋಲುತ್ತಿದ್ದೆನಂತೆ. ಹಾಗೆಂದುಮೂರ್ತಿಯವರತಾಯಿಯೇಒಮ್ಮೆ  ನನಗೆಹೇಳಿದ್ದರು. ನಾನುಸಂಘದಭೂಗತಚಟುವಟಿಕೆಗಳನ್ನುಮುಗಿಸಿರಾತ್ರಿವೇಳೆಮನೆಗೆಬರುವುದುಕೊಂಚತಡವಾದರೂಆತಾಯಿಆತಂಕಪಡುತ್ತಿದ್ದರು. ಒಂದುತಿಂಗಳಬಳಿಕಸಂಘದಪ್ರಮುಖರುನನ್ನನ್ನುಮಲೇಶ್ವರಕ್ಷೇತ್ರಕ್ಕೆಹೋಗಲುತಿಳಿಸಿದರು. ಪ್ರಮುಖರಸೂಚನೆಯಂತೆನಾನುಅವರಮನೆಯಿಂದಹೊರಡಲುಇನ್ನೇನುತಯಾರಿನಡೆಸುತ್ತಿರುವಂತೆಯೇಆತಾಯಿಬೇಸರಪಟ್ಟುಕೊಂಡುಕಣ್ಣೀರುಹಾಕಿದ್ದರು. ನಾನಾದರೋ ‘ಏಕೆಬೇಸರಮಾಡಿಕೊಳ್ತೀರಿ? ನಾನುಬೆಂಗಳೂರಿನಲ್ಲೇಇರ‍್ತೀನಲ್ಲಾ ’ ಎಂದೆ. ಆದರೂಅವರಿಗೆಸಮಾಧಾನವಾಗಿರಲಿಲ್ಲ. ಅವರಮನೆಯಿಂದನಾನುದೂರಹೋಗುವುದೇಅವರಿಗೆಇಷ್ಟವಿರಲಿಲ್ಲ. ಅಷ್ಟರಮಟ್ಟಿಗೆನನ್ನನ್ನುಅವರುಹಚ್ಚಿಕೊಂಡಿದ್ದರು. ಕೊನೆಗವರುಕ್ಯಾನ್ಸರ್ರೋಗಕ್ಕೆತುತ್ತಾಗಿಸಾವಿಗೀಡಾದಾಗವಿಲ್ಸನ್ಗಾರ್ಡನ್‌ನಚಿತಾಗಾರದಲ್ಲಿಕೊನೆಯಬಾರಿಅವರದರ್ಶನಮಾಡಿದ್ದೆ. ಸಾಮಾಜಿಕಕಾರ್ಯಕರ್ತರಮೇಲೆಆತಾಯಿಸುರಿಸಿದಇಂತಹನಿರ್ವ್ಯಾಜಪ್ರೇಮವನ್ನುಮರೆಯುವುದುಹೇಗೆ?

***

೧೯೮೦ರಿಂದ೮೫ರವರೆಗೆಶಿವಮೊಗ್ಗಜಿಲ್ಲೆಯಲ್ಲಿಸಂಘದಪ್ರಚಾರಕನಾಗಿದ್ದಾಗಲೂಇಂತಹಇನ್ನಷ್ಟುಸ್ಮರಣೀಯಅನುಭವಗಳು. ಶಿವಮೊಗ್ಗಸಮೀಪದಮತ್ತೂರಿನಲ್ಲಿಟಿ.ಎನ್.ಸ್ವಾಮಿಎಂಬಕಾರ್ಯಕರ್ತರತಾಯಿನಾನುಹೋದಾಗಲೆಲ್ಲಹೊಟ್ಟೆತುಂಬಾಊಟಹಾಕುತ್ತಿದ್ದರು. ಬೆಳಿಗ್ಗೆಅಷ್ಟೊತ್ತಿಗೇಎದ್ದು  ಹಂಡೆಯಲ್ಲಿಬಿಸಿನೀರುಕಾಯಿಸಿ, ಅನಂತರನನ್ನನ್ನುಎಬ್ಬಿಸಿಎಣ್ಣೆ  ಸ್ನಾನಮಾಡಿಸುತ್ತಿದ್ದರು. ಮೊದಮೊದಲುನನಗೆತೀರಾಮುಜುಗರವಾಗಿದ್ದೂಉಂಟು. ಆದರೆಆತಾಯಿಯನಿಷ್ಕಲ್ಮಶಪ್ರೀತಿಯಸೇವೆಯಿಂದಮನಸ್ಸಿಗೆ , ಶರೀರಕ್ಕೆಬಣ್ಣಿಸಲಾಗದಂತಹಆನಂದಸಿಗುತ್ತಿದ್ದುದಂತೂನಿಜ. ನಾನುಅವರಮನೆಗೆಹೋದಾಗಲೆಲ್ಲಈ ‘ಸೇವೆ’ ತಪ್ಪುತ್ತಿರಲಿಲ್ಲ. ಬುದ್ಧಿತಿಳಿದಬಳಿಕ  ನನ್ನಸ್ವಂತತಾಯಿನನಗೆಎಣ್ಣೆನೀರಿನಸ್ನಾನಮಾಡಿಸಿದನೆನಪುನನಗಿಲ್ಲ. ಆದರೆಮತ್ತೂರಿನಆತಾಯಿಯಅಂತಃಕರಣಪೂರ್ವಕಪ್ರೀತಿನನಗೆ  ಆನೆಯಬಲವನ್ನೇನೀಡಿದೆಎಂದರೆಖಂಡಿತಅತಿಶಯೋಕ್ತಿಅಲ್ಲ.

ಶಿವಮೊಗ್ಗಸಮೀಪದಮಂಡೇನಕೊಪ್ಪ  ಎಂಬುದುಒಂದುಲಂಬಾಣಿತಾಂಡ. ಅಲ್ಲಿನಮನೆಯೊಂದಕ್ಕೆಒಮ್ಮೆನಾವುಕೆಲವುಕಾರ್ಯಕರ್ತರುಊಟಕ್ಕಾಗಿಹೋಗಿದ್ದೆವು. ಮನೆಯನ್ನೆಲ್ಲಸೆಗಣಿಯಿಂದಸಾರಿಸಿ, ಶುಚಿಗೊಳಿಸಿತಟ್ಟೆಹಾಕಿಊಟಬಡಿಸಿದರು. ಊಟವಾದಬಳಿಕಎಂಜಲುಬಳಿದುಶುಚಿಗೊಳಿಸಿ, ನಾವುಹೊರಡುವಮುನ್ನಅಡುಗೆಮಾಡಿಬಡಿಸಿದಆಮನೆಯತಾಯಿನಮ್ಮೆಲ್ಲರಕಾಲುಗಳಿಗೆಸಾಷ್ಟಾಂಗವೆರಗಿದ್ದರು !  ಶಿವಮೊಗ್ಗದಅಂಗಳಯ್ಯನಕೇರಿಯಕಾರ್ಯಕರ್ತರೊಬ್ಬರಮನೆಗೆಹೋದಾಗಲೂಅದೇರೀತಿಯಅನುಭವ. ಊಟವಾದಬಳಿಕನಮ್ಮೆಲ್ಲರಿಗೂಆಮನೆಯತಾಯಿಸಾಷ್ಟಾಂಗನಮಸ್ಕಾರಮಾಡಿದಾಗತೀವ್ರಮುಜುಗರವಾಗಿತ್ತು. ಸಾಮಾಜಿಕಕಾರ್ಯಕರ್ತರೆಂದರೆದೇವರಿಗೆಸಮಾನಎಂಬಈತಾಯಂದಿರಶ್ರದ್ಧೆ, ಗೌರವಗಳಿಗೆನಾವೆಲ್ಲನಿಜವಾಗಿಯೂಅರ್ಹರೆಎಂಬಪ್ರಶ್ನೆನನ್ನನ್ನುಪದೇಪದೇಕಾಡಿದ್ದುಂಟು.

*** ***

೧೯೭೮ರಲ್ಲಿಅರಸೀಕೆರೆಯಲ್ಲಿದ್ದಾಗರಾಮಚಂದ್ರಎಂಬಕಾರ್ಯಕರ್ತರಮನೆಗೆಆಗಾಗಊಟಕ್ಕೆಹೋಗುತ್ತಿದ್ದೆ. ಮೊದಲದಿನಊಟಕ್ಕೆಹೋದಾಗತಟ್ಟೆಯಲ್ಲಿರಾಗಿಮುದ್ದೆತಂದಿಟ್ಟು, ತಟ್ಟೆಯಕೆಳಗೆಒಂದುಇದ್ದಿಲುತುಂಡನ್ನುಇಟ್ಟರು. ಅನಂತರರಾಗಿಮುದ್ದೆನಂಜಿಕೊಳ್ಳಲು  ಬಸ್ಸಾರುಬಡಿಸಿದರು. ನನಗೆರಾಗಿಮುದ್ದೆತಿನ್ನುವುದುಹೇಗೆಂದೇಅದುವರೆಗೆಗೊತ್ತಿರಲಿಲ್ಲ. ಮುದ್ದೆಮುರಿದುಊಟಮಾಡುವುದುಹೇಗೆಂದುಕಲಿಸಿಕೊಟ್ಟವರುರಾಮಚಂದ್ರಅವರಪತ್ನಿ, ಆಮಹಾತಾಯಿ. ಮುದ್ದೆತಿನ್ನುವಸಂದರ್ಭಬಂದಾಗಲೆಲ್ಲಆಮಹಾತಾಯಿಯನೆನಪುಆಗುತ್ತಿರುತ್ತದೆ. ಆದೇಊರಿನಮಾಜಿಶಾಸಕರಾಗಿದ್ದಬಸವರಾಜ್ಅವರಪತ್ನಿವಿಶಾಲಕ್ಕನಾನುಜ್ವರಪೀಡಿತನಾಗಿ , ಪ್ರಜ್ಞೆತಪ್ಪಿಅಸ್ಪತ್ರೆಯಲ್ಲಿದ್ದಾಗಮಾಡಿದಆರೈಕೆಯನ್ನಂತೂಎಂದಿಗೂಮರೆಯಲುಸಾಧ್ಯವಿಲ್ಲ. ನನ್ನನ್ನುಮನೆಯಮಗನಂತೆಅವರುಆಗನೋಡಿಕೊಂಡುಉಪಚರಿಸಿದ್ದರು.

***

ಶಿವಮೊಗ್ಗದಲ್ಲಿದ್ದಾಗಹಲವುಬಾರಿಜಿಲ್ಲೆಯಪ್ರವಾಸಮುಗಿಸಿತಡರಾತ್ರಿಮರಳಿಬಂದಾಗಊಟಕ್ಕೆಎಲ್ಲಿಗೆಹೋಗುವುದೆಂಬುದುಬಹುದೊಡ್ಡಸಮಸ್ಯೆಯಾಗಿಕಾಡಿದ್ದುಂಟು. ಆಗತಕ್ಷಣನೆನಪಿಗೆಬರುತ್ತಿದ್ದುದುಬಿ.ಹೆಚ್. ರಸ್ತೆಯಲ್ಲಿರುವಸೋಮಯ್ಯ  ಬಂಗ್ಲೆಯಪಾಂಡುರಂಗಮಲ್ಯ(ಈಗಕಾರ್ಪೋರೇಶನ್ಬ್ಯಾಂಕಿನಹಿರಿಯಅಧಿಕಾರಿ) ಅವರಮನೆ.  ಮಲ್ಯನತಾಯಿಆಗಉಪ್ಪಿನಕಾಯಿತಯಾರಿಸಿಮಾರಾಟಮಾಡಿಬಹುಕಷ್ಟದಿಂದಜೀವನಸಾಗಿಸುತ್ತಿದ್ದರು. ಆದರೆಮನೆಗೆಯಾರೇಹೋದರೂಅವರನ್ನುಹಾಗೆಯೇಕಳಿಸುತ್ತಿರಲಿಲ್ಲ. ಸಂಘದಪ್ರಚಾರಕರುಹೋದರಂತೂಊಟಮಾಡಿಕೊಂಡೇಹೋಗಬೇಕೆಂಬಅಲಿಖಿತನಿಯಮಮಾಡಿದ್ದರು. ತಡರಾತ್ರಿಎಷ್ಟುಹೊತ್ತಿಗೆಹೋದರೂಗಂಜಿಊಟ, ಜೊತೆಗೆಉಪ್ಪಿನಕಾಯಿಇz ಇರುತ್ತಿತ್ತು. ಸಂಘದಕಾರ್ಯಕರ್ತರನ್ನು, ಪ್ರಚಾರಕರನ್ನುಅವರುಸನ್ಯಾಸಿಗಳಸಮಾನಎಂದೇಭಾವಿಸಿದ್ದರು. ಮಲ್ಯನತಾಯಿಯಕೈಯಿಂದಅದೆಷ್ಟುಬಾರಿನಾನುಊಟಮಾಡಿದ್ದೆನೋಲೆಕ್ಕಸಿಗುತ್ತಿಲ್ಲ!

***

ಇತ್ತೀಚೆಗೆ ‘ವಿಕ್ರಮ’ ವಾರಪತ್ರಿಕೆಯಲ್ಲಿ ‘ಚರಣ ’ ಎಂಬಹೆಸರಿನಲ್ಲಿಸಂಘದಪ್ರಚಾರಕರೊಬ್ಬರು ‘ಹೆತ್ತಮ್ಮಒಬ್ಬಳಾದರೆಸಲಹಿದಅಮ್ಮಂದಿರುನೂರಾರು’ ಎಂಬ  ಮಾರ್ಮಿಕಲೇಖನವೊಂದನ್ನುಬರೆದುತಮ್ಮಹೃದ್ಯಅನುಭವಗಳನ್ನುದಾಖಲಿಸಿದ್ದರು. ಅವರಲೇಖನದಕೆಲವುಸಾಲುಗಳು : ‘…ಈಗಬಹುಶಃಈಎಲ್ಲಾಅಮ್ಮಂದಿರುಕುಡಿಸುವ, ತಿನ್ನಿಸುವಹಾಲು, ಮೊಸರು, ಬೆಣ್ಣೆಇತ್ಯಾದಿಗಳಕಾರಣದಿಂದಲೇಶರೀರದಸಣ್ಣಪುಟ್ಟಸಮಸ್ಯೆಗಳಅನುಭವನಮಗಾಗುವುದೇಇಲ್ಲ. ಅದೆಷ್ಟುಪುಣ್ಯವಂತರುನಾವುಎಂಬಭಾವಮೂಡುತ್ತದೆ. ಹೆತ್ತಮ್ಮನನ್ನುಬಿಟ್ಟುಎಲ್ಲೋಇರುವಪ್ರಚಾರಕರಿಗೆಅದೆಷ್ಟುಅಮ್ಮಂದಿರಪ್ರೀತಿಯನ್ನುಸವಿಯುವಭಾಗ್ಯ. ತಮ್ಮಮಕ್ಕಳಿಗೆಉಳಿಸದೇಈಸಾಕುಮಕ್ಕಳಿಗೆಉಣಿಸುವಆತುರ. ಸ್ವಲ್ಪಊಟಕಡಿಮೆಮಾಡಿದರೆಸಿಡುಕುವಆಪರಿ. ತಿಂದುಹೆಚ್ಚಾಯಿತೆಂದುಒಂದುಹೊತ್ತುಉಪವಾಸಮಾಡಿದರೆಹಿರಿಯರಿಗೆಹೇಳುತ್ತೇನೆಂಬಧಮಕಿ! … ಪತಿ, ಮಕ್ಕಳೊಂದಿಗೆತಿರುಗಾಡಲೆಂದುಹೊರಟುಮನೆಯಬೀಗಹಾಕುತ್ತಿರುವಾಗಲೇನಾವುಬಂದೆವೆಂದುತಿರುಗಾಟರದ್ದುಮಾಡಿದಅಮ್ಮಂದಿರೆಷ್ಟು , ಪ್ರಚಾರಕರಿಗೆಆರೋಗ್ಯಸರಿಯಾಗಲೆಂದುದೇವರಮುಂದೆಪ್ರಾರ್ಥಿಸುತ್ತಕೂಡುವಅಮ್ಮಂದಿರೆಷ್ಟು , ಬಟ್ಟೆಒಗೆಯಲೆಂದುನೆನೆಸಿಟ್ಟುಹೊರಹೋಗಿಬರುವಷ್ಟರಲ್ಲಿಒಗೆದುಒಣಗಿಸಿಇಸ್ತ್ರಿಮಾಡಿಟ್ಟಅಮ್ಮಂದಿರೆಷ್ಟು – ಹೀಗೆಅವರಪ್ರೀತಿ, ವಾತ್ಸಲ್ಯಗಳನ್ನುನೆನಪುಮಾಡಿಕೊಂಡಂತೆಮನದಧನ್ಯತೆಯಭಾವಕಣ್ಣಂಚಿನಲ್ಲಿನೀರಾಗಿಹೋರಬರುತ್ತದೆ…’

***

ಇಂತಹಅಮ್ಮಂದಿರುಯಾವಪ್ರಚಾರವನ್ನೂಬಯಸಿದವರಲ್ಲ. ತಮ್ಮಮನೆಗೆಬಂದಸಾಮಾಜಿಕಕಾರ್ಯಕರ್ತರನ್ನುಉಪಚರಿಸಿದಬಳಿಕಕೊನೆಗೆಅವರಿಂದಒಂದುಧನ್ಯವಾದವನ್ನೂನಿರೀಕ್ಷಿಸಿದವರಲ್ಲ. ಸಾಮಾಜಿಕಕಾರ್ಯಕರ್ತರಿಗೆತಮ್ಮಿಂದಾದಸೇವೆ, ಉಪಚಾರಮಾಡುವುದೇತಮ್ಮಕರ್ತವ್ಯಎಂದುಭಾವಿಸಿದವರುಅವರು. ಅದರಲ್ಲೇಧನ್ಯತೆಯನ್ನುಕಾಣುವವರು. ವರ್ಷಕ್ಕೊಮ್ಮೆ ‘ತಾಯಂದಿರದಿನ ’ ವನ್ನುಬೇರೆಯವರುಆಚರಿಸಿದಾಗಲೂಈಅಮ್ಮಂದಿರಿಗೆಅದರಪರಿವೆಯೇಬಹುಶಃಇರುವುದಿಲ್ಲ. ಏಕೆಂದರೆವರ್ಷಕ್ಕೊಮ್ಮೆಮಾತ್ರಇವರುತಾಯಂದಿರಾಗಿಸೇವಾನಿರತರಲ್ಲ. ಇವರೇನಿದ್ದರೂಪ್ರತಿನಿತ್ಯವೂಪ್ರತಿಕ್ಷಣವೂಎಲ್ಲರಿಗೂತಾಯಂದಿರು. ಸೇವೆಎಂಬಯಜ್ಞದಲ್ಲಿಸಮಿಧೆಯಾಗಿಉರಿಯುವವರು. ಊದುಕಡ್ಡಿಯಂತೆಉರಿದುಸುತ್ತಮುತ್ತಸುಗಂಧದಸೌರಭ  ಬೀರುವವರು. ‘ತಾಯಂದಿರದಿನ ’ ದಂದುಇವೆಲ್ಲನೆನಪಾಗಿಇಲ್ಲಿದಾಖಲಿಸಬೇಕೆಂದುನನಗನ್ನಿಸಿದ್ದರಿಂದನಿಮ್ಮೊಡನೆಇದನ್ನೆಲ್ಲಹಂಚಿಕೊಂಡಿರುವೆ. ಇಂತಹಮಾತೆಯರಮಮತೆಗೆಬೆಲೆಕಟ್ಟಲುಸಾಧ್ಯವೆ?

Leave a Reply

Your email address will not be published.

This site uses Akismet to reduce spam. Learn how your comment data is processed.