ಬೆಂಗಳೂರು: ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ನಡೆದ ಧ್ವಂಸ, ಡಿಜೆಹಳ್ಳಿ – ಕೆಜಿಹಳ್ಳಿ ಗಲಭೆ, ಕೊರೋನಾ ತಪಾಸಣೆಗೆ ಬಂದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ, ಕೊರೋನಾ ನಿಯಮ ಉಲ್ಲಂಘಿಸಿ ಕಾಂಗ್ರೇಸ್ ಕಾರ್ಪೋರೇಟರ್ ನಡೆಸಿದ ರೋಡ್ ಷೋ – ಹೀಗೆ ಕಿಡಿಗೇಡಿತನಕ್ಕೆ, ಕಾನೂನು ವಿರೋಧಿ ಚಟುವಟಿಕೆಗೆ ಪಾದರಾಯನಪುರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ ಪಾದರಾಯನಪುರ ಇನ್ನೊಂದು ಘಟನೆಗೆ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯು ಪಾದರಾಯನ ಪುರದ ವಿವಿಧ ಅಡ್ಡರಸ್ತೆ ಹಾಗು ಮುಖ್ಯರಸ್ತೆಗಳಿಗೆ ನಾಮಕರಣ ಮಾಡಲು ಉದ್ದೇಶಿಸಿದ್ದು, ಅದರಂತೆ ಡಿಸೆಂಬರ್ 15ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಎಲ್ಲ ಹೆಸರುಗಳೂ
ಸಮಾಜ ಸೇವಕರ ಹೆಸರುಗಳನ್ನು ಇಡಲು ಬಿಬಿಎಂಪಿ ತೀರ್ಮಾನಿಸಿರುವ ಬಿಬಿಎಂಪಿ ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಹೆಸರುಗಳನ್ನು ರಸ್ತೆಗಳ ನಾಮಕರಣಕ್ಕೆ ಇಡುವುದು ಎಷ್ಟು ಸರಿ? ಮುಸ್ಲಿಮ್ ಬಹುಸಂಖ್ಯಾತರು ಎಂಬ ಕಾರಣಕ್ಕೆ ರಸ್ತೆ ಮುಂತಾದ ಸಾರ್ವಜನಿಕ ಪ್ರದೇಶಗಳಿಗೆ ಸಾಧಕರ ಗಂಧದಮಾಲೆಯನ್ನೇ ಹೊಂದಿರುವ ನಮ್ಮ ಕರುನಾಡಿನಲ್ಲಿ ಕೇವಲ ಮುಸ್ಲಿಮರ ಹೆಸರುಗಳನ್ನು ಇಡುವುದು ಸೂಕ್ತವೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯ 135ನೇ ವಾರ್ಡ್ ನಲ್ಲಿ ಬರುವ ಅಡ್ಡರಸ್ತೆಗಳಿಗೆ, ಮುಖ್ಯರಸ್ತೆಗಳಿಗೆ ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಪಾದರಾಯನಪುರದ ಎಚ್.ಎಂ. ರಸ್ತೆಗೆ ಪೆಹಲ್ವಾನ್ ಪರೂಕ್ ಪಾಶ ಸಾಬ್ ಸರ್ಕಲ್, 10ನೇ ಅಡ್ಡರಸ್ತೆಗೆ ಪೆಹಲ್ವಾನ್ ಪರೂಕ್ ಪಾಶ ಸಾಬ್ ಸರ್ಕಲ್, 7ನೇ ಅಡ್ಡರಸ್ತೆಗೆ ಟೋಪಿ ರಫೀಕ್ ಸಾಬ್ ಸರ್ಕಲ್, 7ನೇ ಮುಖ್ಯರಸ್ತೆಗೆ ರೋಷನ್ ಫಯಾಜ್ ಸಂಗಮ ಸರ್ಕಲ್, 9ನೇ ಅಡ್ಡರಸ್ತೆಗೆ ಆಲೀಲ್ ಪಟೇಲ್ ರಸ್ತೆ, 8ನೇ ಮುಖ್ಯರಸ್ತೆಗೆ ಹಾಜೀ ಹಬೀಬ್ ಬೇಗ್ ರಸ್ತೆ, 11ನೇ ಸಿ ಅಡ್ಡರಸ್ತೆಗೆ ಹಾಜೀ ವಝೀರ್ ಸಾಬ್ ರಸ್ತೆ, 9ನೇ ಅಡ್ಡರಸ್ತೆಯ ಮಸೀದಿ ರಸ್ತೆಗೆ ಹಾಜೀ ಶಾಮಿರ್ ಸಾಬ್ ರಸ್ತೆ, 13ನೇ ಸಿ ಅಡ್ಡರಸ್ತೆಗೆ ಹಾಜಿ ದಸ್ತಗೀರ್ ರಸ್ತೆ, 10ನೇ ಮುಖ್ಯರಸ್ತೆಗೆ ಹಾಜಿ ನೂರ್ ಸಾಬ್ ರಸ್ತೆ ಹಾಗೂ ವಿನಾಯಕನಗರದ 7ನೇ ಅಡ್ಡರಸ್ತೆಗೆ ಎಲ್ಜಿರ್ ಬಾಬು ಸಾಬ್ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ
ಈ ಕುರಿತು ಯಾವುದೇ ಆಕ್ಷೇಪಗಳಿದ್ದಲ್ಲಿ 30 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಬಿಬಿಎಂಪಿ ತಿಳಿಸಿದೆ.