ಕೇಂದ್ರ ಸರಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಹಾಗು ಅದರ ಅಂಗಸಂಸ್ಥೆಗಳನ್ನು ನಿಷೇಧ ಮಾಡಿದೆ. PFI ಅನ್ನು ಪ್ರತಿಬಂಧಿಸುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬಂದಿದ್ದು ಗೃಹ ಮಂತ್ರಿ ಅಮಿತ್ ಶಾ ಅವರು ಐದು ವರ್ಷಗಳ ಕಾಲ PFI ಹಾಗು ಅದರ ಪರಿವಾರ ಸಂಘಟನೆಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ಮತ್ತು ಅದರ ಜೊತೆಗೆ ನಂಟು ಹೊಂದುವುದು ಕಾನೂನುಬಾಹಿರವೆಂದು ಮುಂದಿನ ಐದು ವರ್ಷಗಳ ಕಾಲಕ್ಕೆ ಘೋಷಣೆ ಮಾಡಿದೆ.

ಪಿಎಫ್‌ಐ ಜೊತೆಗಿನ ಅಂಗ ಸಂಸ್ಥೆಯಾದ ರೆಹಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ,ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ್ಯಾಪಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್,ನ್ಯಾಷನಲ್ ಉಮೆನ್ಸ್ ಫ್ರಂಟ್,ಎಂಪವರ್ ಇಂಡಿಯಾ ಫೌಂಡೇಶನ್, ರೆಹಾಬ್ ಫೌಂಡೇಶನ್ ಸಂಘಟನೆಗಳನ್ನು ನಿಷೇಧ ಮಾಡಲಾಗಿದೆ.

ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ, ಕೋಮುಗಲಭೆಗಳಲ್ಲಿ ಈ ನಿಷೇಧಿತ ಸಂಘಟನೆ ಹಾಗು ಅಂಗಸಂಸ್ಥೆಗಳ ಪಾತ್ರ ದೊಡ್ಡದಿದ್ದು, ಅನೇಕ ಬಾರಿ ಪಿಎಫ್‌ಐ ಸಂಸ್ಥೆಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಅಲ್ಲದೆ ಇತ್ತೀಚೆಗಿನ ಹಿಜಾಬ್ ಗಲಾಟೆಯಲ್ಲೂ ಸಹ ಕ್ಯಾಂಪಸ್ ಫ್ರಂಟ್ ಹಾಗು ವುಮೆನ್ಸ್ ಫ್ರಂಟ್ ಮುಂತಾದ ಸಂಘಟನೆಗಳು ಸಮಾಜದಲ್ಲಿ ಸಾಮರಸ್ಯವನ್ನು ಕದಡಿದ್ದವು.

ಅಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘವು 2013ರಲ್ಲಿಯೇ ಕೇರಳದಲ್ಲಿ ನಡೆದ ಅದರ ಅಖಿಲ ಭಾರತೀಯ ಕಾರ್ಯಕಾರಣಿ ಮಂಡಳಿ ಸಭೆಯು ತನ್ನ ಮೊದಲ ರೆಸಲ್ಯೂಶನ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿತ್ತು.

RSS ABKM-Resolution-1: Growing Jehadi Radicalization in Southern States of Bharat

Leave a Reply

Your email address will not be published.

This site uses Akismet to reduce spam. Learn how your comment data is processed.