ಕೇಂದ್ರ ಸರ್ಕಾರದ ಕೆಲವು ನಾಯಕರು ಮತ್ತು ರಾಜಕೀಯ ಪಕ್ಷಗಳು ರಾಜಕೀಯಪ್ರೇರಿತವಾಗಿ ಹಿಂದು ಮತ್ತು ಹಿಂದುತ್ವ ವಿರೋಧಿಯಾದ ದ್ವೇಷಪೂರ್ಣ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ದೇಶದಾದ್ಯಂತ ಎಲ್ಲಾ ರಾಜ್ಯದ ರಾಜಧಾನಿಗಳು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ್ ೧೦ರಂದು ಬೃಹತ್ ಪ್ರತಿಭಟನಾ ಧರಣಿಯನ್ನು ಕೈಗೊಳ್ಳಲು, ಅಕ್ಟೋಬರ್ ೩೧ರಂದು ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಮೂರು ದಿನಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ರಾಮ್ ಮಾಧವ್ ಅವರು ತಿಳಿಸಿದರು. ಅವರ ಹೇಳಿಕೆಯ ಪೂರ್ಣಪಾಠ ಇಲ್ಲಿದೆ:

ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆಯಂತಹ ಜನರನ್ನು ದಿಕ್ಕುತಪ್ಪಿಸುವ ಆಪಾದನೆಗಳು, ಹಿಂದೂ ಸಂತರನ್ನು, ಹಿಂದೂ ಸಂಘಟನೆಗಳನ್ನು ಕಳಂಕಿತರೆಂದು ಬಿಂಬಿಸುವ ಹುನ್ನಾರಗಳು, ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೆಸ್ಸೆಸ್ ಮತ್ತು ಆರೆಸ್ಸೆಸ್ಸಿನ ಕಾಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ – ಇವೆಲ್ಲಾ ಈ ಹಿಂದೂ ವಿರೋಧಿ ರಾಜಕೀಯ ಷಡ್ಯಂತ್ರದ ಭಾಗಗಳೇ ಆಗಿವೆ.

ಆರೆಸ್ಸೆಸ್ ಸಮಾಜದಲ್ಲಿ ಸನ್ನಡತೆ, ಶಿಸ್ತು ಹಾಗೂ ದೇಶಪ್ರೇಮಗಳನ್ನು ತುಂಬುದಕ್ಕೆ ಬದ್ಧವಾದ ಒಂದು ಸಂಘಟನೆ ಎನ್ನುವುದುಸುಪರಿಚಿತ ವಿಷಯವಾಗಿದೆ.  ಕಳೆದ ೮೫ ವರ್ಷಗಳಲ್ಲಿ ನಮ್ಮ ರಾಷ್ಟ್ರೀಯ ಜೀವನದಲ್ಲಿ ಆರೆಸ್ಸೆಸ್ ವಹಿಸುತ್ತಿರುವ ಪಾತ್ರ ಮಹತ್ವದ್ದು. ಸೈದ್ಧಾಂತಿಕವಾಗಿ ಹೇಳುವುದಾದರೆ ಜಿಹಾದಿಗಳು, ಮಾಮೋವಾದಿಗಳು, ಈಶಾನ್ಯ ಭಾರತದ ಬಂಡುಕೋರರು ಹಾಗೂ ಕಾಶ್ಮೀರಿ ಭಯೋತ್ಪಾದಕರು ಸೇರಿದಂತೆ ಎಲ್ಲ ಬಗೆಯ ಭಯೋತ್ಪಾದನೆಗಳ ಕುರಿತು ಆರೆಸ್ಸೆಸ್ ಮೃದುಧೋರಣೆಗಳನ್ನು ತಳೆದದ್ದಿಲ್ಲ. ಭಯೋತ್ಪಾದನೆಯಿಂದ ತೊಂದರೆಗೊಳಗಾದವರನ್ನೇ ಇಂದು ಕೆಲವು ಸ್ವಾರ್ಥಿ ರಾಜಕಾರಣಿಗಳು ಭಯೋತ್ಪಾದಕ ಕೃತ್ಯಗಳಿಗೆ ಜವಾಬ್ದಾರರನ್ನಾಗಿಸ ಹೊರಟಿರುವುದು ವಿಪರ್ಯಾಸವೇ ಸರಿ.

೨೦೦೭ ಮತ್ತು ೨೦೦೮ರಲ್ಲಿ ದೇಶದಲ್ಲಿ ಸಂಭವಿಸಿದ ಕೆಲವು ಬಾಂಬ್ ಸ್ಫೋಟದ ಪ್ರಕರಣಗಳ ತನಿಖೆಯ ಅಂಗವಾಗಿ ತನಿಖಾ ಸಂಸ್ಥೆಗಳು ಕೆಲವು ವ್ಯಕ್ತಿಗಳನ್ನು ಬಂಧಿಸಿವೆ. ಅಂಥವರ ವಿರುದ್ಧ ಮಾಡಲಾದ ದೋಷಾರೋಪಗಳು ನ್ಯಾಯಾಲಯಗಳಲ್ಲಿ ಇನ್ನಷ್ಟೇ ಸಾಬೀತಾಗಬೇಕಾಗಿದೆ. ದೇವೇಂದ್ರ ಗುಪ್ತ ಎನ್ನುವ ಆರೆಸ್ಸೆಸ್ ವಿಭಾಗ ಪ್ರಚಾರಕರು ಆ ಬಗ್ಗೆ ಆರೋಪಕ್ಕೆ ಗುರಿಯಾದ ಒಬ್ಬರಾಗಿದ್ದಾರೆ. ಅವರ ಬಂಧನಕ್ಕೆ ಆರೆಸ್ಸೆಸ್‌ನ ಸರಕಾರ್ಯವಾಹ ಭಯ್ಯಾಜಿ ಜೋಶಿ ಅವರು ತಕ್ಷಣವೇ ಹೇಳಿಕೆಯೊಂದನ್ನು ನೀಡಿ, ತನಿಖಾ ಸಂಸ್ಥೆಗಳಿಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದ್ದರು. ಆರೋಪಕ್ಕೊಳಗಾದ ಕಾರ್ಯಕರ್ತನ ಹೊಣೆಗಾರಿಕೆಗಳನ್ನು ಕೂಡಲೇ ರದ್ದುಪಡಿಸಲಾಯಿತು.

ತನಿಖಾ ಸಂಸ್ಥೆಗಳಿಗೆ ನೀಡಿದ ಭರವಸೆಗೆ ಅನುಗುಣವಾಗಿ ಸಂಘನೆಯ ಕಾರ್ಯಕರ್ತರು ಎಟಿಎಸ್ ರಾಜಸ್ಥಾನ, ಎಟಿಎಸ್ ಮಹಾರಾಷ್ಟ್ರ ಹಾಗೂ ಸಿಬಿಐಯಂತಹ ಸಂಸ್ಥೆಗಳಿಗೆ ಸಾಧ್ಯವಾದ ಎಲ್ಲ ಸಹಕಾರವನ್ನು ನೀಡಿದರು. ಜಾರ್ಖಂಡ್, ಮಧ್ಯಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಈ ಸಂಸ್ಥೆಗಳ ಕೆಲವು ಕಿರಿಯ ಅಧಿಕಾರಿಗಳು ತನಿಖೆಯ ವೇಳೆ ದೈಹಿಕ ಮತ್ತು ಮಾನಸಿಕ ಕಿರುಕುಳದಂತಹ ಆಕ್ಷೇಪಾರ್ಹ ವಿಧಾನಗಳನ್ನು ಅನುಸರಿಸಿದ್ದಿದೆ. ಆದರೆ, ಸಂಘಟನೆ ತನ್ನ ಉದಾರ ಚಿಂತನೆಗೆ ಅನುಗುಣವಾಗಿ ನ್ಯಾಯಸಮ್ಮತ ತನಿಖೆಯ ಹಿತದೃಷ್ಟಿಯಿಂದ ಈ ಲೋಪಗಳನ್ನು ಅಲಕ್ಷಿಸಿತು.

ರಾಜಸ್ಥಾನದ ಎಟಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯ ಕುರಿತು ಸೌಮ್ಯವಾಗಿ ಹೇಳಬೇಕೆಂದರೆ ’ನಿರಾಶಾದಾಯP’ ಎನ್ನಬೇಕಾಗುತ್ತದೆ. ಪ್ರತಿಯೊಬ್ಬ ಆರೋಪಿಯನ್ನು ಆರೆಸ್ಸೆಸ್ ಕಾರ್ಯಕರ್ತರೆಂದು ಉಲ್ಲೇಖಿಸಿದ್ದನ್ನು ಗಮನಿಸಿದರೆ ಇದರ ಹಿಂದೆ ಯಾವುದೋ ದುಷ್ಟ ಉದ್ದೇವಿದೆ ಎನಿಸದಿರದು. ನಿಜವೆಂದರೆ, ಮೇಲೆ ಹೇಳಿದ ವಿಭಾಗ ಪ್ರಚಾರಕ್ ದೇವೆಂದ್ರಗುಪ್ತ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಕಳೆದ ಹಲವಾರು ವರ್ಷಗಳಿಂದ ಆರೆಸ್ಸೆಸ್‌ನ ಸಂಪರ್ಕವೇ ಇಲ್ಲ. . ಅದೇ ರೀತಿ ಆರೆಸ್ಸೆಸ್ ಹಿರಿಯ ಮುಖಂಡರಾದ ಇಂದ್ರೇಶ್ ಕುಮಾರ್ ಅವರ ಹೆಸರನ್ನು ದೋಷಾರೋಪ ಪಟ್ಟಿಗೆ ಎಳೆದು ತರಲಾಗಿದೆ. ಆರೋಪಿಗಳು ಉಪಸ್ಥಿತರಿದ್ದ ಸಭೆಯೊಂದರಲ್ಲಿ ಅವರು ಭಾಷಣ ಮಾಡಿದ್ದರು ಎನ್ನುವ ಈ ಆರೋಪವನ್ನು ಕಾಣುವಾಗ ಇದೊಂದು ದುಷ್ಟ ಪಿತೂರಿಯಲ್ಲದೆ ಬೇರೇನೂ ಅಲ್ಲ ಎನಿಸುತ್ತದೆ. ದೋಷಾರೋಪ ಪಟ್ಟಿ ಆ ಸಭೆಯ ಬಗ್ಗೆ ಯಾವುದೇ ಸಾಕ್ಷ್ಯ ನೀಡುವುದಿಲ್ಲ. ಮತ್ತು ಇಂದ್ರೇಶ್ ಕುಮಾರ್ ವಿರುದ್ಧ ನಿರ್ದಿಷ್ಟ ಆರೋಪವನ್ನು ಕೂಡ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಇಂದ್ರೇಶ್ ಕುಮಾರ್ ಅವರನ್ನು ಹೇಗಾದರೂ ಮಾಡಿ ಸಿಲುಕಿಸುವುದು ಆ ಮೂಲಕ ಅವರ ಮತ್ತು ಸಂಘಟನೆಯ ಗೌರವಕ್ಕೆ ಮಸಿ ಬಳಿಯುವ ಪಿತೂರಿ ಇದರ ಹಿಂದಿರುವುದು ಸ್ಪಷ್ಟ.

ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಲೇ ರಾಜಸ್ಥಾನ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಇಂದ್ರೇಶ್ ಕುಮಾರ್ ಹಾಗೂ ಆರೆಸ್ಸೆಸ್ ವಿರುದ್ಧ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿದ್ದು ಎದ್ದುಕಾಣಿಸುವಂತಿತ್ತು. ’ಹಿಂದೂ ಭಯೋತ್ಪಾದನೆ’ ಎನ್ನುವ ವಿರೋಧಾಭಾಸದ ಹುಯಿಲನ್ನು ಇನ್ನೊಮ್ಮೆ ಎಬ್ಬಿಸುವುದಕ್ಕೆ ಕೂಡ ಅವರು ಯತ್ನಿಸಿದರು. ನಿಜವೆಂದರೆ, ಈ ವಿರೋಧಾಭಾಸಕ್ಕೆ ಜನ್ಮವಿತ್ತ ಕೀರ್ತಿ ಕೇಂದ್ರ ಗೃಹಸಚಿವರಿಗೆ ಸಲ್ಲಬೇಕು.

ಅಜ್ಮೀರ್, ಹೈದರಾಬಾದ್ ಹಾಗೂ ಸಂಜೌತಾ ಎಕ್ಸ್‌ಪ್ರೆಸ್‌ಗಳಲ್ಲಿನ ಬಾಂಬ್ ಸ್ಫೋಟಗಳಿಗೆ ಹುಜಿ ಮತ್ತು ಲಷ್ಕರ್ ಎ ತೋಯ್ಬಾ (ಎಲ್‌ಇಟಿ) ಗಳು ಕಾರಣವೆಂದು ಅವರ ಸರಕಾರವೇ ಹಿಂದೆ ಅಭಿಪ್ರಾಯಪಟ್ಟಿತೆಂಬುದನ್ನು ನಾವು ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ನೆನಪಿಸಬಯಸುತ್ತೇವೆ. ಜುಲೈ ೨೦೦೬ರಲ್ಲಿ ಸಂಭವಿಸಿದ ಮುಂಬಯಿ ಉಪನಗರ ರೈಲಿನ ಸ್ಫೋಟ ಮತ್ತು ಫೆಬ್ರವರಿ ೨೦೦೭ರಲ್ಲಿ ನಡೆದ ಸಂಜೌತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಎಲ್‌ಇಟಿಯ  ಮುಖ್ಯ ಸಂಚಾಲಕ ಅರಿಫ್ ಕಾಸ್ಮಾನಿ ಪಾಲ್ಗೊಂಡಿದ್ದನೆಂದು ಅಮೆರಿಕಾ ರಾಜ್ಯಾಂಗ ಇಲಾಖೆಯೇ ಹೇಳಿದೆ. ಪಾಕಿಸ್ತಾನದ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಒಂದು ವಿದೇಶಿ ಭಯೋತ್ಪಾದಕ ಸಂಘಟನೆ ಮತ್ತು ಅದರ ಸದಸ್ಯ ಇಲ್ಯಾಸ್ ಕಾಶ್ಮೀರಿ ಓರ್ವ ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಅಮೆರಿಕ ರಾಜ್ಯಾಂಗ ಇಲಾಖೆ ಆಗಸ್ಟ್ ೬, ೨೦೧೦ರಂದು ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ. ಅಮೆರಿಕದ ಸಲಹೆಯ ಮೇರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ವಿರೋಧಿ ನಿರ್ಬಂಧ ಸಮಿತಿಯು ಅದೇ ದಿನ ಅಂಥದೇ ಕ್ರಮವನ್ನು ಕೈಗೊಂಡಿತ್ತು. ಆದರೆ ಇದನ್ನು ಹಿಂದು ಭಯೋತ್ಪಾದನೆ ಎಂದು ಈಗ ನಮ್ಮ ಕೇಂದ್ರ ಸರಕಾರ ಹೇಳುತ್ತಿದೆ.

ಇದೆಲ್ಲದರಿಂದ ನಮಗೆ ಸ್ಪಷ್ಟವಾಗುವ ಸಂಗತಿಯೆಂದರೆ ವಿಶೇಷವಾಗಿ ಆರೆಸ್ಸೆಸ್ ಅನ್ನು ಹಾಗೂ ಒಟ್ಟಿನಲ್ಲಿ ಹಿಂದೂ ಚಳುವಳಿಯನ್ನು ಕಳಂಕಿತಗೊಳಿಸುವ ಕುಟಿಲ ರಾಜಕೀಯ ಪಿತೂರಿಯೊಂದು ಈಗ ಚಾಲನೆಯಲ್ಲಿದೆ. ಇದು ಓಟಿನ ದಾಹ ಹತ್ತಿಸಿಕೊಂಡ ರಾಜಕಾರಣಿಗಳ ಹಳೆಯ ಆಟವೇ ಸರಿ. ಅಲ್ಪಸಂಖ್ಯಾತರ ಮತೀಯ ಓಟ್ ಬ್ಯಾಂಕಿನ ಬೇಟೆಗೆ ಅವರು ಹೊರಟಾಗಲೆ ಆರೆಸ್ಸೆಸ್‌ನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಲು ಯತ್ನಿಸುವುದು ಮಾಮೂಲಿಯಾಗಿಬಿಟ್ಟಿದೆ.

ಆರೆಸ್ಸೆಸ್ ಮತ್ತು ಇತರ ಹಲವು ಸಂಘಟನೆಗಳು ಹುಟ್ಟು ಹಾಕಿದ ಹಿಂದೂ ಆಂದೋಲನಗಳು ಮತಾಂತರದಂತಹ ಚಟುವಟಿಕೆಗಳಲ್ಲಿ ತೊಡಗಿದ ರಾಷ್ಟ್ರವಿರೋಧಿ ಹಾಗೂ ಹಿಂದೂ ವಿರೋಧಿ ಶಕ್ತಿಗಳಿಗೆ ಗಂಟಲಿನ ಮುಳ್ಳಾಗಿ ಪರಿಣಮಿಸಿದೆ. ಈ ಶಕ್ತಿಗಳ ತಂತ್ರಗಳನ್ನು ಸೋಲಿಸುವಂತಹ ಚಳವಳಿಗಳಿಗೆ ಚಾಲನೆ ನೀಡುವಲ್ಲಿ ಆರೆಸ್ಸೆಸ್‌ನ ಸ್ವಯಂಸೇವಕರು ತುಂಬ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಮರನಾಥ ಚಳವಳಿ, ತಿರುಪತಿ ದೇವಳದ ಪಾವಿತ್ರ್ಯ ರಕ್ಷಣೆಯ ಚಳವಳಿ ಹಾಗೂ ನಾಶಗೊಳಿಸಲು ಹೊರಟಿದ್ದ ರಾಮಸೇತುವಿನ ರಕ್ಷಣೆ-ಇವು ಇತ್ತೀಚೆಗಿನ ಕೆಲವು ಉದಾಹರಣೆಗಳಾಗಿವೆ.

ವಾಸ್ತವವಾಗಿ, ಸಂತರು, ದೇವಾಲಯಗಳು ಹಾಗೂ ಸಂಘದ ವಿರುದ್ಧ ಈ ಹಿಂದು ವಿರೋಧಿ ಶಕ್ತಿಗಳು ಕಳೆದ ಕೆಲವು ವರ್ಷಗಳಿಂದ ನಿರಂತರ ಅಪಪ್ರಚಾರ  ನಡೆಸುತ್ತಾ ಬಂದಿರುವುದನ್ನು ರಾಷ್ಟ್ರ ಗಮನಿಸಿದೆ. ಕಾಂಚಿ ಮಠದ ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳು, ಬಾಬಾ ರಾಮದೇವ್, ಶ್ರೀಶ್ರೀ ರವಿಶಂಕರ್ ಗುರೂಜಿ ಹಾಗೂ ಆಶ್ರಮ್ ಬಾಪು ಅವರಂತಹ ಪ್ರಖ್ಯಾತ ಹಿಂದು ಸಂತರ ವಿರುದ್ಧ ಹೇಯ ಅಪಪ್ರಚಾರ, ಕಂದಮಾಲ್‌ನ ಸ್ವಾಮಿ ಲಕ್ಷಣಾನಂದ ಸರಸ್ವತಿ ಅವರ ಭೀಕರ ಹತ್ಯೆ-ಇವೆಲ್ಲ ಆ ಆಳವಾದ ಪಿತೂರಿಯ ಭಾಗವೇ ಆಗಿದೆ.

ಜಮ್ಮು -ಕಾಶ್ಮೀರದಲ್ಲಿನ ಅವರ ಕುತಂತ್ರಗಳಿಗೆ ಆರೆಸ್ಸೆಸ್ ಅತಿದೊಡ್ಡ ತಡೆಯಾಗಿ ಪರಿಣಮಿಸಿದ ಕಾರಣ ಈ ಹಿಂದು ವಿರೋಧಿ,   ರಾಷ್ಟ್ರವಿರೋಧಿ ಶಕ್ತಿಗಳಿಗೆ ಸಂಘವು ದಾಳಿಯ ಪ್ರಮುಖ ವಸ್ತುವಾಗಿದೆ. ಸಂಘದ ನಿರಂತರ ಪ್ರಯತ್ನದ ಫಲವಾಗಿ ಅಯೋಧ್ಯೆ ವಿಷಯದಲ್ಲಿ ಕೂಡ ಅವರ ಪಿತೂರಿ ವಿಫಲವಾಯಿತು. ಈಗ ಅವರ ದಾಳಿ ಆರೆಸ್ಸೆಸ್ ಮೇಲೆ ನಡೆಯುತ್ತಿರುವುದಕ್ಕೆ ಅದೇ ಕಾರಣವೆನ್ನಬಹುದು.

ನಕ್ಸಲ್ ದಾಂಧಲೆಕೋರರು ಹಾಗೂ ಗಿಲಾನಿ ಮತ್ತು ಅರುಂಧತಿ ರಾಯ್ ಅವರಂತಹ ವಿಷಕಾರುವ ರಾಷ್ಟ್ರವಿರೋಧಿಗಳ ವಿರುದ್ಧ ಅಸಹಾಯಕನಂತೆ ನಡೆದುಕೊಳ್ಳುವ ಕೇಂದ್ರ ಸರ್ಕಾರ ಆರೆಸ್ಸೆಸ್‌ನಂತಹ ದೇಶಪ್ರೇಮಿ ಸಂಘಟನೆಗಳಿಗೆ ಕಿರುಕುಳ ನೀಡುವಲ್ಲಿ ಅತ್ಯುತ್ಸಾಹ ತೋರಿಸುತ್ತಿರುವುದು ಅತ್ಯಂತ ದುಃಖದ ವಿಷಯ.

ಕಾಂಗ್ರೆಸ್ ಪಕ್ಷದ ಕೆಲವು ವಿಭಾಗಗಳ ದುಷ್ಟ ರಾಜಕಾರಣವು ದೇಶದ ಜನತೆಗೆ ಸುಪರಿಚಿತ. ರಾಜಕೀಯ ಅಧಿಕಾರಕ್ಕಾಗಿ ಈ ಜನ ಬಹಳಷ್ಟು ಸಲ ಸ್ಪಲ್ಪವೂ ಹಿಂಜರಿಕೆಯಿಲ್ಲದೆ ರಾಷ್ಟ್ರದ ಹಿತಾಸಕ್ತಿಗಳನ್ನು ಬಲಿಕೊಟ್ಟಿದ್ದಾರೆ. ಕಳೆದ ಆರು ದಶಕಗಳಲ್ಲಿ ಅವರು ಆರೆಸ್ಸೆಸ್ ಮೇಲೆ ದಾಳಿ ನಡೆಸಲು ಹಲವು ಬಾರಿ ಯತ್ನಿಸಿ ಸೋತಿದ್ದಾರೆ. ಆದರೆ, ಅಂತಹ ದುಷ್ಟ ಪಿತೂರಿ ನಡೆಸಿದ ಎಲ್ಲ ಸಂದರ್ಭಗಳಲ್ಲೂ ಆರೆಸ್ಸೆಸ್, ದೇಶದ ಜನತೆಯ ಪ್ರೀತಿ, ವಿಶ್ವಾಸ, ನಂಬಿಕೆಗಳ ಬಲದಿಂದ ಇನ್ನಷ್ಟು ಬಲಶಾಲಿಯಾಗಿ ಮೇಲೆ ಬಂದಿದೆ. ಅದಲ್ಲದೆ, ಪ್ರತಿಯೊಂದು ಸಲವೂ ಪಿತೂರಿಗಾರರನ್ನು ರಾಷ್ಟ್ರ ನಿರ್ದಯವಾಗಿ ದಂಡಿಸಿದೆ. ಈ ಬಾರಿ ಕೂಡ ಆರೆಸ್ಸೆಸ್ ಮತ್ತು ಹಿಂದೂ ಆಂದೋಲನದ ಮೇಲೆ ಕೆಸರೆರಚುವ ಪಿತೂರಿ ನಡೆಸುತ್ತಿರುವವರಿಗೆ ಅದೇ ದುರವಸ್ಥೆ ಕಾದಿದೆ. ಹಾಗೂ ಪಿತೂರಿಗಾರರು ತಮ್ಮ ದುರುದ್ದೇಶ ಮತ್ತು ಅನಿಷ್ಟ ಕೃತ್ಯಗಳಿಗೆ ಸರಿಯಾದ ಬೆಲೆಯನ್ನೇ ತೆರುತ್ತಾರೆ ಎಂಬುದರಲ್ಲಿ ನಮಗೆ ಯಾವ ಸಂದೇಹವೂ ಇಲ್ಲ.

ಸಂಘದ ವಿರುದ್ಧವಾದ ಆಧಾರರಹಿತ ಆರೋಪಗಳು ಹಾಗೂ ಹಿಂದೂಗಳ ನಂಬಿಕೆ ಮತ್ತು ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶವುಳ್ಳ ರಾಜಕೀಯಪ್ರೇರಿತ ಷಡ್ಯಂತ್ರಗಳನ್ನು ಬಯಲುಗೊಳಿಸಿ ಜನಜಾಗೃತಿ ಮೂಡಿಸುವುದು ಈ ಧರಣಿಯ ಉದ್ದೇಶ. ಸತ್ಯ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಈ ರಾಷ್ಟ್ರೀಯ ಹೋರಾಟವನ್ನು ತಮ್ಮ ಪೂರ್ಣ ಶಕ್ತಿಯೊಂದಿಗೆ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಆರೆಸ್ಸೆಸ್ ವಿನಂತಿಸುತ್ತದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ್ ೧೦ರಂದು ಬೆಳಗ್ಗೆ ೧೧ಕ್ಕೆ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ಬೆಂಗಳೂರಿನಲ್ಲಿ ಪ್ರತಿಭಟನಾ ಧರಣಿಯು ಟೌನ್ ಹಾಲ್ ಮುಂಭಾಗದಲ್ಲಿ ನಡೆಯಲಿದ್ದು ನಂತರ ಸಂಘದ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ.

ಕೇಂದ್ರ ಸರ್ಕಾರದ ಕೆಲವು ನಾಯಕರು ಮತ್ತು ರಾಜಕೀಯ ಪಕ್ಷಗಳು ರಾಜಕೀಯಪ್ರೇರಿತವಾಗಿ ಹಿಂದು ಮತ್ತು ಹಿಂದುತ್ವ ವಿರೋಧಿಯಾದ ದ್ವೇಷಪೂರ್ಣ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ದೇಶದಾದ್ಯಂತ ಎಲ್ಲಾ ರಾಜ್ಯದ ರಾಜಧಾನಿಗಳು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ್ ೧೦ರಂದು ಬೃಹತ್ ಪ್ರತಿಭಟನಾ ಧರಣಿಯನ್ನು ಕೈಗೊಳ್ಳಲು, ಅಕ್ಟೋಬರ್ ೩೧ರಂದು ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಮೂರು ದಿನಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆಯಂತಹ ಜನರನ್ನು ದಿಕ್ಕುತಪ್ಪಿಸುವ ಆಪಾದನೆಗಳು, ಹಿಂದೂ ಸಂತರನ್ನು, ಹಿಂದೂ ಸಂಘಟನೆಗಳನ್ನು ಕಳಂಕಿತರೆಂದು ಬಿಂಬಿಸುವ ಹುನ್ನಾರಗಳು, ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೆಸ್ಸೆಸ್ ಮತ್ತು ಆರೆಸ್ಸೆಸ್ಸಿನ ಕಾಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ – ಇವೆಲ್ಲಾ ಈ ಹಿಂದೂ ವಿರೋಧಿ ರಾಜಕೀಯ ಷಡ್ಯಂತ್ರದ ಭಾಗಗಳೇ ಆಗಿವೆ.

ಆರೆಸ್ಸೆಸ್ ಸಮಾಜದಲ್ಲಿ ಸನ್ನಡತೆ, ಶಿಸ್ತು ಹಾಗೂ ದೇಶಪ್ರೇಮಗಳನ್ನು ತುಂಬುದಕ್ಕೆ ಬದ್ಧವಾದ ಒಂದು ಸಂಘಟನೆ ಎನ್ನುವುದುಸುಪರಿಚಿತ ವಿಷಯವಾಗಿದೆ.  ಕಳೆದ ೮೫ ವರ್ಷಗಳಲ್ಲಿ ನಮ್ಮ ರಾಷ್ಟ್ರೀಯ ಜೀವನದಲ್ಲಿ ಆರೆಸ್ಸೆಸ್ ವಹಿಸುತ್ತಿರುವ ಪಾತ್ರ ಮಹತ್ವದ್ದು. ಸೈದ್ಧಾಂತಿಕವಾಗಿ ಹೇಳುವುದಾದರೆ ಜಿಹಾದಿಗಳು, ಮಾಮೋವಾದಿಗಳು, ಈಶಾನ್ಯ ಭಾರತದ ಬಂಡುಕೋರರು ಹಾಗೂ ಕಾಶ್ಮೀರಿ ಭಯೋತ್ಪಾದಕರು ಸೇರಿದಂತೆ ಎಲ್ಲ ಬಗೆಯ ಭಯೋತ್ಪಾದನೆಗಳ ಕುರಿತು ಆರೆಸ್ಸೆಸ್ ಮೃದುಧೋರಣೆಗಳನ್ನು ತಳೆದದ್ದಿಲ್ಲ. ಭಯೋತ್ಪಾದನೆಯಿಂದ ತೊಂದರೆಗೊಳಗಾದವರನ್ನೇ ಇಂದು ಕೆಲವು ಸ್ವಾರ್ಥಿ ರಾಜಕಾರಣಿಗಳು ಭಯೋತ್ಪಾದಕ ಕೃತ್ಯಗಳಿಗೆ ಜವಾಬ್ದಾರರನ್ನಾಗಿಸ ಹೊರಟಿರುವುದು ವಿಪರ್ಯಾಸವೇ ಸರಿ.

೨೦೦೭ ಮತ್ತು ೨೦೦೮ರಲ್ಲಿ ದೇಶದಲ್ಲಿ ಸಂಭವಿಸಿದ ಕೆಲವು ಬಾಂಬ್ ಸ್ಫೋಟದ ಪ್ರಕರಣಗಳ ತನಿಖೆಯ ಅಂಗವಾಗಿ ತನಿಖಾ ಸಂಸ್ಥೆಗಳು ಕೆಲವು ವ್ಯಕ್ತಿಗಳನ್ನು ಬಂಧಿಸಿವೆ. ಅಂಥವರ ವಿರುದ್ಧ ಮಾಡಲಾದ ದೋಷಾರೋಪಗಳು ನ್ಯಾಯಾಲಯಗಳಲ್ಲಿ ಇನ್ನಷ್ಟೇ ಸಾಬೀತಾಗಬೇಕಾಗಿದೆ. ದೇವೇಂದ್ರ ಗುಪ್ತ ಎನ್ನುವ ಆರೆಸ್ಸೆಸ್ ವಿಭಾಗ ಪ್ರಚಾರಕರು ಆ ಬಗ್ಗೆ ಆರೋಪಕ್ಕೆ ಗುರಿಯಾದ ಒಬ್ಬರಾಗಿದ್ದಾರೆ. ಅವರ ಬಂಧನಕ್ಕೆ ಆರೆಸ್ಸೆಸ್‌ನ ಸರಕಾರ್ಯವಾಹ ಭಯ್ಯಾಜಿ ಜೋಶಿ ಅವರು ತಕ್ಷಣವೇ ಹೇಳಿಕೆಯೊಂದನ್ನು ನೀಡಿ, ತನಿಖಾ ಸಂಸ್ಥೆಗಳಿಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದ್ದರು. ಆರೋಪಕ್ಕೊಳಗಾದ ಕಾರ್ಯಕರ್ತನ ಹೊಣೆಗಾರಿಕೆಗಳನ್ನು ಕೂಡಲೇ ರದ್ದುಪಡಿಸಲಾಯಿತು.

ತನಿಖಾ ಸಂಸ್ಥೆಗಳಿಗೆ ನೀಡಿದ ಭರವಸೆಗೆ ಅನುಗುಣವಾಗಿ ಸಂಘನೆಯ ಕಾರ್ಯಕರ್ತರು ಎಟಿಎಸ್ ರಾಜಸ್ಥಾನ, ಎಟಿಎಸ್ ಮಹಾರಾಷ್ಟ್ರ ಹಾಗೂ ಸಿಬಿಐಯಂತಹ ಸಂಸ್ಥೆಗಳಿಗೆ ಸಾಧ್ಯವಾದ ಎಲ್ಲ ಸಹಕಾರವನ್ನು ನೀಡಿದರು. ಜಾರ್ಖಂಡ್, ಮಧ್ಯಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಈ ಸಂಸ್ಥೆಗಳ ಕೆಲವು ಕಿರಿಯ ಅಧಿಕಾರಿಗಳು ತನಿಖೆಯ ವೇಳೆ ದೈಹಿಕ ಮತ್ತು ಮಾನಸಿಕ ಕಿರುಕುಳದಂತಹ ಆಕ್ಷೇಪಾರ್ಹ ವಿಧಾನಗಳನ್ನು ಅನುಸರಿಸಿದ್ದಿದೆ. ಆದರೆ, ಸಂಘಟನೆ ತನ್ನ ಉದಾರ ಚಿಂತನೆಗೆ ಅನುಗುಣವಾಗಿ ನ್ಯಾಯಸಮ್ಮತ ತನಿಖೆಯ ಹಿತದೃಷ್ಟಿಯಿಂದ ಈ ಲೋಪಗಳನ್ನು ಅಲಕ್ಷಿಸಿತು.

ರಾಜಸ್ಥಾನದ ಎಟಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯ ಕುರಿತು ಸೌಮ್ಯವಾಗಿ ಹೇಳಬೇಕೆಂದರೆ ’ನಿರಾಶಾದಾಯP’ ಎನ್ನಬೇಕಾಗುತ್ತದೆ. ಪ್ರತಿಯೊಬ್ಬ ಆರೋಪಿಯನ್ನು ಆರೆಸ್ಸೆಸ್ ಕಾರ್ಯಕರ್ತರೆಂದು ಉಲ್ಲೇಖಿಸಿದ್ದನ್ನು ಗಮನಿಸಿದರೆ ಇದರ ಹಿಂದೆ ಯಾವುದೋ ದುಷ್ಟ ಉದ್ದೇವಿದೆ ಎನಿಸದಿರದು. ನಿಜವೆಂದರೆ, ಮೇಲೆ ಹೇಳಿದ ವಿಭಾಗ ಪ್ರಚಾರಕ್ ದೇವೆಂದ್ರಗುಪ್ತ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಕಳೆದ ಹಲವಾರು ವರ್ಷಗಳಿಂದ ಆರೆಸ್ಸೆಸ್‌ನ ಸಂಪರ್ಕವೇ ಇಲ್ಲ. . ಅದೇ ರೀತಿ ಆರೆಸ್ಸೆಸ್ ಹಿರಿಯ ಮುಖಂಡರಾದ ಇಂದ್ರೇಶ್ ಕುಮಾರ್ ಅವರ ಹೆಸರನ್ನು ದೋಷಾರೋಪ ಪಟ್ಟಿಗೆ ಎಳೆದು ತರಲಾಗಿದೆ. ಆರೋಪಿಗಳು ಉಪಸ್ಥಿತರಿದ್ದ ಸಭೆಯೊಂದರಲ್ಲಿ ಅವರು ಭಾಷಣ ಮಾಡಿದ್ದರು ಎನ್ನುವ ಈ ಆರೋಪವನ್ನು ಕಾಣುವಾಗ ಇದೊಂದು ದುಷ್ಟ ಪಿತೂರಿಯಲ್ಲದೆ ಬೇರೇನೂ ಅಲ್ಲ ಎನಿಸುತ್ತದೆ. ದೋಷಾರೋಪ ಪಟ್ಟಿ ಆ ಸಭೆಯ ಬಗ್ಗೆ ಯಾವುದೇ ಸಾಕ್ಷ್ಯ ನೀಡುವುದಿಲ್ಲ. ಮತ್ತು ಇಂದ್ರೇಶ್ ಕುಮಾರ್ ವಿರುದ್ಧ ನಿರ್ದಿಷ್ಟ ಆರೋಪವನ್ನು ಕೂಡ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಇಂದ್ರೇಶ್ ಕುಮಾರ್ ಅವರನ್ನು ಹೇಗಾದರೂ ಮಾಡಿ ಸಿಲುಕಿಸುವುದು ಆ ಮೂಲಕ ಅವರ ಮತ್ತು ಸಂಘಟನೆಯ ಗೌರವಕ್ಕೆ ಮಸಿ ಬಳಿಯುವ ಪಿತೂರಿ ಇದರ ಹಿಂದಿರುವುದು ಸ್ಪಷ್ಟ.

ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಲೇ ರಾಜಸ್ಥಾನ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಇಂದ್ರೇಶ್ ಕುಮಾರ್ ಹಾಗೂ ಆರೆಸ್ಸೆಸ್ ವಿರುದ್ಧ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿದ್ದು ಎದ್ದುಕಾಣಿಸುವಂತಿತ್ತು. ’ಹಿಂದೂ ಭಯೋತ್ಪಾದನೆ’ ಎನ್ನುವ ವಿರೋಧಾಭಾಸದ ಹುಯಿಲನ್ನು ಇನ್ನೊಮ್ಮೆ ಎಬ್ಬಿಸುವುದಕ್ಕೆ ಕೂಡ ಅವರು ಯತ್ನಿಸಿದರು. ನಿಜವೆಂದರೆ, ಈ ವಿರೋಧಾಭಾಸಕ್ಕೆ ಜನ್ಮವಿತ್ತ ಕೀರ್ತಿ ಕೇಂದ್ರ ಗೃಹಸಚಿವರಿಗೆ ಸಲ್ಲಬೇಕು.

ಅಜ್ಮೀರ್, ಹೈದರಾಬಾದ್ ಹಾಗೂ ಸಂಜೌತಾ ಎಕ್ಸ್‌ಪ್ರೆಸ್‌ಗಳಲ್ಲಿನ ಬಾಂಬ್ ಸ್ಫೋಟಗಳಿಗೆ ಹುಜಿ ಮತ್ತು ಲಷ್ಕರ್ ಎ ತೋಯ್ಬಾ (ಎಲ್‌ಇಟಿ) ಗಳು ಕಾರಣವೆಂದು ಅವರ ಸರಕಾರವೇ ಹಿಂದೆ ಅಭಿಪ್ರಾಯಪಟ್ಟಿತೆಂಬುದನ್ನು ನಾವು ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ನೆನಪಿಸಬಯಸುತ್ತೇವೆ. ಜುಲೈ ೨೦೦೬ರಲ್ಲಿ ಸಂಭವಿಸಿದ ಮುಂಬಯಿ ಉಪನಗರ ರೈಲಿನ ಸ್ಫೋಟ ಮತ್ತು ಫೆಬ್ರವರಿ ೨೦೦೭ರಲ್ಲಿ ನಡೆದ ಸಂಜೌತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಎಲ್‌ಇಟಿಯ  ಮುಖ್ಯ ಸಂಚಾಲಕ ಅರಿಫ್ ಕಾಸ್ಮಾನಿ ಪಾಲ್ಗೊಂಡಿದ್ದನೆಂದು ಅಮೆರಿಕಾ ರಾಜ್ಯಾಂಗ ಇಲಾಖೆಯೇ ಹೇಳಿದೆ. ಪಾಕಿಸ್ತಾನದ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಒಂದು ವಿದೇಶಿ ಭಯೋತ್ಪಾದಕ ಸಂಘಟನೆ ಮತ್ತು ಅದರ ಸದಸ್ಯ ಇಲ್ಯಾಸ್ ಕಾಶ್ಮೀರಿ ಓರ್ವ ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಅಮೆರಿಕ ರಾಜ್ಯಾಂಗ ಇಲಾಖೆ ಆಗಸ್ಟ್ ೬, ೨೦೧೦ರಂದು ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ. ಅಮೆರಿಕದ ಸಲಹೆಯ ಮೇರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ವಿರೋಧಿ ನಿರ್ಬಂಧ ಸಮಿತಿಯು ಅದೇ ದಿನ ಅಂಥದೇ ಕ್ರಮವನ್ನು ಕೈಗೊಂಡಿತ್ತು. ಆದರೆ ಇದನ್ನು ಹಿಂದು ಭಯೋತ್ಪಾದನೆ ಎಂದು ಈಗ ನಮ್ಮ ಕೇಂದ್ರ ಸರಕಾರ ಹೇಳುತ್ತಿದೆ.

ಇದೆಲ್ಲದರಿಂದ ನಮಗೆ ಸ್ಪಷ್ಟವಾಗುವ ಸಂಗತಿಯೆಂದರೆ ವಿಶೇಷವಾಗಿ ಆರೆಸ್ಸೆಸ್ ಅನ್ನು ಹಾಗೂ ಒಟ್ಟಿನಲ್ಲಿ ಹಿಂದೂ ಚಳುವಳಿಯನ್ನು ಕಳಂಕಿತಗೊಳಿಸುವ ಕುಟಿಲ ರಾಜಕೀಯ ಪಿತೂರಿಯೊಂದು ಈಗ ಚಾಲನೆಯಲ್ಲಿದೆ. ಇದು ಓಟಿನ ದಾಹ ಹತ್ತಿಸಿಕೊಂಡ ರಾಜಕಾರಣಿಗಳ ಹಳೆಯ ಆಟವೇ ಸರಿ. ಅಲ್ಪಸಂಖ್ಯಾತರ ಮತೀಯ ಓಟ್ ಬ್ಯಾಂಕಿನ ಬೇಟೆಗೆ ಅವರು ಹೊರಟಾಗಲೆ ಆರೆಸ್ಸೆಸ್‌ನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಲು ಯತ್ನಿಸುವುದು ಮಾಮೂಲಿಯಾಗಿಬಿಟ್ಟಿದೆ.

ಆರೆಸ್ಸೆಸ್ ಮತ್ತು ಇತರ ಹಲವು ಸಂಘಟನೆಗಳು ಹುಟ್ಟು ಹಾಕಿದ ಹಿಂದೂ ಆಂದೋಲನಗಳು ಮತಾಂತರದಂತಹ ಚಟುವಟಿಕೆಗಳಲ್ಲಿ ತೊಡಗಿದ ರಾಷ್ಟ್ರವಿರೋಧಿ ಹಾಗೂ ಹಿಂದೂ ವಿರೋಧಿ ಶಕ್ತಿಗಳಿಗೆ ಗಂಟಲಿನ ಮುಳ್ಳಾಗಿ ಪರಿಣಮಿಸಿದೆ. ಈ ಶಕ್ತಿಗಳ ತಂತ್ರಗಳನ್ನು ಸೋಲಿಸುವಂತಹ ಚಳವಳಿಗಳಿಗೆ ಚಾಲನೆ ನೀಡುವಲ್ಲಿ ಆರೆಸ್ಸೆಸ್‌ನ ಸ್ವಯಂಸೇವಕರು ತುಂಬ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಮರನಾಥ ಚಳವಳಿ, ತಿರುಪತಿ ದೇವಳದ ಪಾವಿತ್ರ್ಯ ರಕ್ಷಣೆಯ ಚಳವಳಿ ಹಾಗೂ ನಾಶಗೊಳಿಸಲು ಹೊರಟಿದ್ದ ರಾಮಸೇತುವಿನ ರಕ್ಷಣೆ-ಇವು ಇತ್ತೀಚೆಗಿನ ಕೆಲವು ಉದಾಹರಣೆಗಳಾಗಿವೆ.

ವಾಸ್ತವವಾಗಿ, ಸಂತರು, ದೇವಾಲಯಗಳು ಹಾಗೂ ಸಂಘದ ವಿರುದ್ಧ ಈ ಹಿಂದು ವಿರೋಧಿ ಶಕ್ತಿಗಳು ಕಳೆದ ಕೆಲವು ವರ್ಷಗಳಿಂದ ನಿರಂತರ ಅಪಪ್ರಚಾರ  ನಡೆಸುತ್ತಾ ಬಂದಿರುವುದನ್ನು ರಾಷ್ಟ್ರ ಗಮನಿಸಿದೆ. ಕಾಂಚಿ ಮಠದ ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳು, ಬಾಬಾ ರಾಮದೇವ್, ಶ್ರೀಶ್ರೀ ರವಿಶಂಕರ್ ಗುರೂಜಿ ಹಾಗೂ ಆಶ್ರಮ್ ಬಾಪು ಅವರಂತಹ ಪ್ರಖ್ಯಾತ ಹಿಂದು ಸಂತರ ವಿರುದ್ಧ ಹೇಯ ಅಪಪ್ರಚಾರ, ಕಂದಮಾಲ್‌ನ ಸ್ವಾಮಿ ಲಕ್ಷಣಾನಂದ ಸರಸ್ವತಿ ಅವರ ಭೀಕರ ಹತ್ಯೆ-ಇವೆಲ್ಲ ಆ ಆಳವಾದ ಪಿತೂರಿಯ ಭಾಗವೇ ಆಗಿದೆ.

ಜಮ್ಮು -ಕಾಶ್ಮೀರದಲ್ಲಿನ ಅವರ ಕುತಂತ್ರಗಳಿಗೆ ಆರೆಸ್ಸೆಸ್ ಅತಿದೊಡ್ಡ ತಡೆಯಾಗಿ ಪರಿಣಮಿಸಿದ ಕಾರಣ ಈ ಹಿಂದು ವಿರೋಧಿ,   ರಾಷ್ಟ್ರವಿರೋಧಿ ಶಕ್ತಿಗಳಿಗೆ ಸಂಘವು ದಾಳಿಯ ಪ್ರಮುಖ ವಸ್ತುವಾಗಿದೆ. ಸಂಘದ ನಿರಂತರ ಪ್ರಯತ್ನದ ಫಲವಾಗಿ ಅಯೋಧ್ಯೆ ವಿಷಯದಲ್ಲಿ ಕೂಡ ಅವರ ಪಿತೂರಿ ವಿಫಲವಾಯಿತು. ಈಗ ಅವರ ದಾಳಿ ಆರೆಸ್ಸೆಸ್ ಮೇಲೆ ನಡೆಯುತ್ತಿರುವುದಕ್ಕೆ ಅದೇ ಕಾರಣವೆನ್ನಬಹುದು.

ನಕ್ಸಲ್ ದಾಂಧಲೆಕೋರರು ಹಾಗೂ ಗಿಲಾನಿ ಮತ್ತು ಅರುಂಧತಿ ರಾಯ್ ಅವರಂತಹ ವಿಷಕಾರುವ ರಾಷ್ಟ್ರವಿರೋಧಿಗಳ ವಿರುದ್ಧ ಅಸಹಾಯಕನಂತೆ ನಡೆದುಕೊಳ್ಳುವ ಕೇಂದ್ರ ಸರ್ಕಾರ ಆರೆಸ್ಸೆಸ್‌ನಂತಹ ದೇಶಪ್ರೇಮಿ ಸಂಘಟನೆಗಳಿಗೆ ಕಿರುಕುಳ ನೀಡುವಲ್ಲಿ ಅತ್ಯುತ್ಸಾಹ ತೋರಿಸುತ್ತಿರುವುದು ಅತ್ಯಂತ ದುಃಖದ ವಿಷಯ.

ಕಾಂಗ್ರೆಸ್ ಪಕ್ಷದ ಕೆಲವು ವಿಭಾಗಗಳ ದುಷ್ಟ ರಾಜಕಾರಣವು ದೇಶದ ಜನತೆಗೆ ಸುಪರಿಚಿತ. ರಾಜಕೀಯ ಅಧಿಕಾರಕ್ಕಾಗಿ ಈ ಜನ ಬಹಳಷ್ಟು ಸಲ ಸ್ಪಲ್ಪವೂ ಹಿಂಜರಿಕೆಯಿಲ್ಲದೆ ರಾಷ್ಟ್ರದ ಹಿತಾಸಕ್ತಿಗಳನ್ನು ಬಲಿಕೊಟ್ಟಿದ್ದಾರೆ. ಕಳೆದ ಆರು ದಶಕಗಳಲ್ಲಿ ಅವರು ಆರೆಸ್ಸೆಸ್ ಮೇಲೆ ದಾಳಿ ನಡೆಸಲು ಹಲವು ಬಾರಿ ಯತ್ನಿಸಿ ಸೋತಿದ್ದಾರೆ. ಆದರೆ, ಅಂತಹ ದುಷ್ಟ ಪಿತೂರಿ ನಡೆಸಿದ ಎಲ್ಲ ಸಂದರ್ಭಗಳಲ್ಲೂ ಆರೆಸ್ಸೆಸ್, ದೇಶದ ಜನತೆಯ ಪ್ರೀತಿ, ವಿಶ್ವಾಸ, ನಂಬಿಕೆಗಳ ಬಲದಿಂದ ಇನ್ನಷ್ಟು ಬಲಶಾಲಿಯಾಗಿ ಮೇಲೆ ಬಂದಿದೆ. ಅದಲ್ಲದೆ, ಪ್ರತಿಯೊಂದು ಸಲವೂ ಪಿತೂರಿಗಾರರನ್ನು ರಾಷ್ಟ್ರ ನಿರ್ದಯವಾಗಿ ದಂಡಿಸಿದೆ. ಈ ಬಾರಿ ಕೂಡ ಆರೆಸ್ಸೆಸ್ ಮತ್ತು ಹಿಂದೂ ಆಂದೋಲನದ ಮೇಲೆ ಕೆಸರೆರಚುವ ಪಿತೂರಿ ನಡೆಸುತ್ತಿರುವವರಿಗೆ ಅದೇ ದುರವಸ್ಥೆ ಕಾದಿದೆ. ಹಾಗೂ ಪಿತೂರಿಗಾರರು ತಮ್ಮ ದುರುದ್ದೇಶ ಮತ್ತು ಅನಿಷ್ಟ ಕೃತ್ಯಗಳಿಗೆ ಸರಿಯಾದ ಬೆಲೆಯನ್ನೇ ತೆರುತ್ತಾರೆ ಎಂಬುದರಲ್ಲಿ ನಮಗೆ ಯಾವ ಸಂದೇಹವೂ ಇಲ್ಲ.

ಸಂಘದ ವಿರುದ್ಧವಾದ ಆಧಾರರಹಿತ ಆರೋಪಗಳು ಹಾಗೂ ಹಿಂದೂಗಳ ನಂಬಿಕೆ ಮತ್ತು ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶವುಳ್ಳ ರಾಜಕೀಯಪ್ರೇರಿತ ಷಡ್ಯಂತ್ರಗಳನ್ನು ಬಯಲುಗೊಳಿಸಿ ಜನಜಾಗೃತಿ ಮೂಡಿಸುವುದು ಈ ಧರಣಿಯ ಉದ್ದೇಶ. ಸತ್ಯ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಈ ರಾಷ್ಟ್ರೀಯ ಹೋರಾಟವನ್ನು ತಮ್ಮ ಪೂರ್ಣ ಶಕ್ತಿಯೊಂದಿಗೆ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಆರೆಸ್ಸೆಸ್ ವಿನಂತಿಸುತ್ತದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ್ ೧೦ರಂದು ಬೆಳಗ್ಗೆ ೧೧ಕ್ಕೆ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ಬೆಂಗಳೂರಿನಲ್ಲಿ ಪ್ರತಿಭಟನಾ ಧರಣಿಯು ಟೌನ್ ಹಾಲ್ ಮುಂಭಾಗದಲ್ಲಿ ನಡೆಯಲಿದ್ದು ನಂತರ ಸಂಘದ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.