ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಅನ್ನು ಬಲಗೊಳಿಸಬೇಕಿದೆ : ನ್ಯಾಯಮೂರ್ತಿ ಬೆಂಜಮಿನ್ ಕೋಶಿ

ಕೊಚ್ಚಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದನೆ ಮತ್ತು ಕಾಶ್ಮೀರದಲ್ಲಿ ಪಂಡಿತರ ಹತ್ಯಾಕಾಂಡದ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ನೆರೆಹೊರೆಯ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಭಯೋತ್ಪಾದನೆಯಿಂದ ಭಾರತವನ್ನು ರಕ್ಷಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಲಗೊಳ್ಳುವ ಅವಶ್ಯಕತೆಯಿದೆಯೆಂದು ಪಾಟ್ನಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜೇಕಬ್ ಬೆಂಜಮಿನ್ ಕೋಶಿ ಎಡಪ್ಪಾಲ್ಯ ನಗರದಲ್ಲಿ ನಡೆದ ಆರ್ಎಸ್ಎಸ್ ವಿಜಯದಶಮಿ ಉತ್ಸವದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಆರ್ಎಸ್ಎಸ್ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಮಾಡಿದರು.

ನಿವೃತ್ತ ನ್ಯಾಯಮೂರ್ತಿ ಜೇಕಬ್ ಬೆಂಜಮಿನ್ ಕೋಶಿ

‘ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆಳೆಯಲು ಮತ್ತು ದೇಶದ ಕೆಲವು ಭಾಗಗಳಲ್ಲಿ ನಡೆಯುವ ಹಿಂಸಾಚಾರಗಳಿಗೆ ಆರ್ಎಸ್ಎಸ್ ಅನ್ನು ಹೊಣೆಮಾಡಲು ವ್ಯವಸ್ಥಿತವಾದ, ಸಂಘಟಿತವಾದ ಸಂಚು ನಡೆಯುತ್ತಿದೆ. ಯಾವುದೇ ರಾಜಕೀಯ ಸಂಘಟನೆ ಅಥವಾ ಪಕ್ಷವನ್ನು ಬೆಂಬಲಿಸದ ಆರ್ಎಸ್ಎಸ್ ಒಂದು ದೇಶಭಕ್ತರ ಉತ್ಕೃಷ್ಟ
ಸಂಘಟನೆಯಾಗಿದ್ದು, ದೇಶದ ಸರ್ವತೋಮುಖ, ಸಮಗ್ರ ಪ್ರಗತಿಗಾಗಿ ಶ್ರಮಿಸುತ್ತಿದೆ ಮತ್ತು ಯುವಕರನ್ನು ಈ ನಿಟ್ಟಿನಲ್ಲಿ ತಯಾರು ಮಾಡುತ್ತಿದೆ’ ಎಂದು ಹೇಳುವ ಮೂಲಕ ನಿವೃತ್ತ ನ್ಯಾಯಮೂರ್ತಿ ಬೆಂಜಮಿನ್ ಕೋಶಿ ಗಮನಸೆಳೆದರು.

ನಾನು ಆರ್ಥೋಡಾಕ್ಸ್ ಚರ್ಚ್ ನ್ ಕ್ರಿಶ್ಚಿಯನ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆರ್ಎಸ್ಎಸ್ ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳು, ಸಂಸ್ಕೃತಿ, ಪದ್ಧತಿ, ಧರ್ಮ, ಜಾತಿ, ಭಾಷೆ ಇತ್ಯಾದಿಗಳನ್ನು ಒಳಗೊಂಡು ಒಟ್ಟಾರೆಯಾಗಿ ಮುಂದುವರಿಯುವ ನಿಟ್ಟಿನಲ್ಲಿ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ. ಯುವಕರನ್ನು ಈ ನಿಟ್ಟಿನಲ್ಲಿ ತಯಾರು ಮಾಡುತ್ತಿರುವ ಅದು, ಅವರಲ್ಲಿ ಭಾರತದ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಅವರು ಪ್ರವಾಹ, ಕೋವಿಡ್ ಮುಂತಾದ ಸಂದರ್ಭಗಳಲ್ಲಿ ಸೇವಾಭಾರತಿಯ ಪರಿಹಾರ, ಸೇವಾ ಕಾರ್ಯ, ಪ್ರಕಲ್ಪಗಳ ಭಾಗವಾಗಿದ್ದನ್ನು ಸ್ಮರಿಸಿಕೊಂಡರು.

ಆರ್ಎಸ್ಎಸ್ ನಿಂದ ಇಂತಹ ಸತ್ಕಾರ್ಯಗಳು ಇನ್ನಷ್ಟು ನಡೆಯಲಿ ಮತ್ತು ನವರಾತ್ರಿಯ ಈ ಸುಸಂದರ್ಭ ಎಲ್ಲರ ಬದುಕಿನ ದುಃಖ-ದುಮ್ಮಾನ ಕತ್ತಲೆಗಳನ್ನು ದೂರಗೊಳಿಸಲಿ ಎಂದು ಆಶಿಸುತ್ತೇನೆಂದರು.

ಆರ್ಎಸ್ಎಸ್ ವಿಜಯದಶಮಿ ಉತ್ಸವದಲ್ಲಿ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಮಾತನಾಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.