ಇಂದು ಜಯಂತಿ

ಭಾರತೀಯ ನವೋದಯದ ಪಿತಾಮಹ ಎಂದೇ ಕರೆಯಲ್ಪಡುವ ರಾಜಾ ರಾಮಮೋಹನ್ ರಾಯ್ ಅವರು ಸುಧಾರಕರಾಗಿ, ಧಾರ್ಮಿಕ ತತ್ವಜ್ಞಾನಿ ಮತ್ತು ವಿದ್ವಾಂಸರಾಗಿದ್ದರು. ರಾಜಕೀಯ, ಸಾರ್ವಜನಿಕ ಆಡಳಿತ , ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇವರು ಸತಿ ಪದ್ಧತಿ, ಬಾಲ್ಯವಿವಾಹ ವಿರುದ್ಧ ಹೋರಾಡಿದವರು. ಇಂದು ಅವರ ಜಯಂತಿ.


ಪರಿಚಯ
ರಾಜಾ ರಾಮಮೋಹನ್ ರಾಯ್ ಅವರು ಮೇ  22 , 1772 ಬಂಗಾಳ ಪ್ರೆಸಿಡೆನ್ಸಿಯ ಹೂಗ್ಲಿ ಜಿಲ್ಲೆಯ ರಾಧಾನಗರದಲ್ಲಿ ಜನಿಸಿರು. ಇವರು ಧಾರ್ಮಿಕ ತತ್ತ್ವಶಾಸ್ತ್ರವನ್ನು ಹೊಂದಿದವರು. ಇವರು ಬಂಗಾಳಿ ಮತ್ತು ಸಂಸ್ಕೃತದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಪರ್ಷಿಯನ್‌ ಮತ್ತು ಅರೇಬಿಕ್‌ ಭಾಷೆ ಕಲಿಯಲು ಪಾಟ್ನಾಗೆ ತೆರಳಿದರು. ಜೊತೆಗೆ ಇವರು ಧರ್ಮಗ್ರಂಥಗಳಾದ ವೇದಗಳು, ಉಪನಿಷತ್‌ ಗಳು ಕಲಿಯಲು ಪ್ರಾರಂಭಿಸಿದರು. ಅವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾದರು ಮತ್ತು ಧರ್ಮಗಳ ಏಕತೆ ಮತ್ತು ವೈಚಾರಿಕತೆಯ ಸಂದೇಶವನ್ನು ಹರಡಿದರು. ಭಾರತೀಯ ರಾಷ್ಟ್ರೀಯತೆಯ ಪುನರುತ್ಥಾನಕ್ಕೆ ಸಹಾಯ ಮಾಡಿದರು. ರಾಜರಾಮಮೋಹನ್ ಯುರೋಪಿಯನ್ನರ ಜನಾಂಗೀಯ ಶ್ರೇಷ್ಠತೆಯನ್ನು ವಿರೋಧಿಸಿದರು. ಜನರ ನಾಗರಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.

ಸಾಮಾಜಿಕ ಸುಧಾರಣೆ
ರಾಜಾ ರಾಮಮೋಹನ್ ಅವರು ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ‘ಸತಿ’ ಪದ್ಧತಿ, ಬಹುಪತ್ನಿತ್ವ, ಬಾಲ್ಯವಿವಾಹ, ಜಾತಿ-ವ್ಯವಸ್ಥೆ, ಅಸ್ಪೃಶ್ಯತೆ, ಪರ್ದಾ ಪದ್ಧತಿ ನಿರ್ಮೂಲನೆಗೆ ಹೋರಾಡಿದರು. ಅವರು ಅಂತರ್ಜಾತಿ ವಿವಾಹಗಳು, ಮಹಿಳಾ ಶಿಕ್ಷಣ, ವಿಧವಾ ಪುನರ್ವಿವಾಹಗಳು ಇತ್ಯಾದಿಗಳನ್ನು ಬೆಂಬಲಿಸಿದರು. ರಾಜಾ ರಾಮಮೋಹನ್‌ ರಾಯ್‌  ಅವರು ಕಲ್ಕತ್ತಾದಲ್ಲಿ ಇಂಗ್ಲಿಷ್ ಶಾಲೆ, ಹಿಂದೂ ಕಾಲೇಜು ಮತ್ತು ವೇದಾಂತ ಕಾಲೇಜುಗಳನ್ನು ಪ್ರಾರಂಭಿಸಿದರು.

ರಾಜಾರಾಮ್‌ ಮೋಹನ್‌ ರಾಯ್‌ ಸೆಪ್ಟೆಂಬರ್‌ 27, 1833 ರಂದು 61ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.