೨೩ ಸೆಪ್ಟೆಂಬರ್ ೨೦೧೮, ಬೆಂಗಳೂರು: ಹೈಫಾ ಯುದ್ಧ ಶತಮಾನೋತ್ಸವ ಸಮಿತಿ ಬೆಂಗಳೂರು, ಜೆ ಸಿ ನಗರ ಮತ್ತು ಸ್ಥಳೀಯರ ಸಂಯುಕ್ತ ಆಶ್ರಯದಲ್ಲಿ ಹೈಫಾ ಯುದ್ಧ ಗೆಲುವಿನ 100 ವರ್ಷದ ಸಂಭ್ರಮಾಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುದ್ಧದಲ್ಲಿ ಮಡಿದ ಸೈನಿಕರಿಗೆ ಮತ್ತು ಜೆ ಸಿ ನಗರದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

1914 ಜುಲೈ ನಿಂದ 1918 ನವೆಂಬರ್ ವರೆಗೆ ನಡೆದ ಯುದ್ಧದಲ್ಲಿ ಭಾರತೀಯ ಸಂಸ್ಥಾನಗಳ ಸೈನಿಕರ ಹೋರಾಟ ಮತ್ತು ಈ ಗೆಲುವು ಮೊದಲನೆಯ ಮಹಾ ಯುದ್ಧ ಕೊನೆಗೊಳ್ಳಲು ಯಾವ ರೀತಿ ಸಹಕಾರಿಯಾಗಿದೆ ಎನ್ನುವುದನ್ನು ಪ್ರದೀಪ್ ಭಾರದ್ವಾಜ್, ಟ್ರಸ್ಟಿ ಸಮರ್ಥ ಭಾರತ ಬೆಂಗಳೂರು ಇವರು ವರ್ಣಿಸಿದರು. ಸಾಂದರ್ಭಿಕವಾಗಿ ಮಾತನಾಡಿದ ಅವರು ಹೈಫಾ ಯುದ್ಧದಲ್ಲಿ ಕುದುರೆ ಸೈನ್ಯವು ತಾನೇ ಏನು ಮಾಡಬಲ್ಲದು ಎಂಬುವುದನ್ನು ಯಾವ ರೀತಿ ಸುಳ್ಳು ಮಾಡಿಸಿ ಐತಿಹಾಸಿಕ ಗೆಲುವನ್ನು ತಂದುಕೊಟ್ಟಿದ್ದಾರೆ ಎಂದು ವರ್ಣಿಸಿದರು. ಮುಂದುವರೆಸುತ್ತಾ, ಹಿಟ್ಲರ್ ಹೇಳೋ ಪ್ರಕಾರ ಹೈಫಾ ಯುದ್ಧದಲ್ಲಿ ಗೆದ್ದಿರುವುದು ಕುದುರೆಗಳಲ್ಲ ಭಾರತೀಯ ಸೈನಿಕರ ಯೋಜನೆಗಳು. ಭಾರತ ಮಹಾ ಸಂಸ್ಥಾನಗಳ ಮೈಸೂರು, ಜೋಧಪುರ್ ಮತ್ತು ಹೈದರಾಬಾದ್ ಸೈನಿಕರು ಹೋರಾಟದ ವೈಖರಿ ಮತ್ತು ಸೇನಾನಿಗಳಾದ ಅನೂಪ್ ಸಿಂಗ್, ಅಮನ್ ಸಿಂಗ್ ಮತ್ತು ದಳಪತ್ ಸಿಂಗ್ ಶೇಖಾವತ್ ಮುಂತಾದವರನ್ನು ನೆನಪಿಸುತ್ತಾ ಅವರ ದಿಟ್ಟತನವನ್ನು ವರ್ಣಿಸಿದರು. ಹಾಗೆಯೇ ಈ ಯುದ್ಧದ ಪರಿಣಾಮವಾಗಿ ಭಾರತ ಮತ್ತು ಇಸ್ರೇಲ್ ದೇಶಗಳ ಸಂಬಂಧಗಳು ಯಾವ ರೀತಿ ಗಟ್ಟಿಯಾಗಿದೆ, ಕಾರ್ಗಿಲ್ ಯುದ್ಧದಲ್ಲಿ ಇಸ್ರೇಲ್ ನ ಸಹಾಯ , ಕೇರಳ ಪ್ರವಾಹಕ್ಕೆ ಸಹಾಯ ಹಸ್ತ ನೀಡಿರೋದನ್ನು ನೆನಪಿಸಿ ಇನ್ನು ಮುಂದೆಯೂ ಇಂಥಹ ಕಾರ್ಯಕ್ರಮಗಳನ್ನು ಮಾಡುತ್ತ ಸಮಾಜಕ್ಕೆ ನಮ್ಮ ಪೂರ್ವಜರ ಶೌರ್ಯ ನೆನಪಿಸುವ ಕಾರ್ಯಗಳು ನಡಿಬೇಕು ಎಂದು ಆಶಿಸಿದರು.

ಕಾರ್ಯಕ್ರಮಕ್ಕೆ ಯುದ್ದದಲ್ಲಿ ಹೋರಾಡಿದ ದೇಶರಾಜ್ ಅರಸ್, ರಾಜೋಜಿ ರಾವ್ ಕೇಸರ್ಕಾರ್, ವೆಂಕಟೇಶ್ ರಾವ್ ಮಾನೆ, ಗಂಗಾಜಿ ರಾವ್ ಪವಾರ್, ಮಹದೇವ್ ಬೋನ್ಸ್ಲೆ ಮುಂತಾದವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಸಿ ಮೂರ್ತಿ ನಿವೃತ್ತ ಸೈನಿಕ, ಪಿ ಆರ್ ರವೀಂದ್ರ ಪಲ್ಲಕ್ಕಿ ನಿವೃತ್ತ ಸೈನಿಕ, ನಾಟಕ ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ,  ನಾಗೇಂದ್ರ ಪ್ರಸಾದ್ ಡಿಸ್ಟ್ರಿಕ್ಟ್ ಗವರ್ನರ್ ರೊಟರಿ, ಗೌತಮ್ ಅಧ್ಯಕ್ಷರು ರೋಟರಿ ಮತ್ತು ಅನೇಕ ಹಿರಿಯರು ಪಾಲ್ಗೊಂಡಿದ್ದರು.

ದಿನೇಶ್ ಬಂಗೇರ ಅವರ ನಿರೂಪಣೆಯಿಂದ ಮೂಡಿಬಂದ ಈ ಕಾರ್ಯಕ್ರಮ ಪ್ರಕಾಶ್ ಬೆಳವಾಡಿ ಮತ್ತು ತಂಡದಿಂದ ಮೈಸೂರು ಸಂಸ್ಥಾನ ಗೀತೆಯಿಂದ ಆರಂಭಗೊಂಡು ರಾಷ್ಟ್ರಗೀತೆಯೊಂದಿಗೆ ಮುಕ್ತಯಗೊಂಡಿತು.

ವರದಿ : ದಿನೇಶ್ ಬಂಗೇರ

 

Leave a Reply

Your email address will not be published.

This site uses Akismet to reduce spam. Learn how your comment data is processed.