HH Yaduveera Krishnadatta Chamaraja Wodeyar lighting the lamp

ಮೈಸೂರು, ೨೩ ಸೆಪ್ಟೆಂಬರ್ ೨೦೧೮:

ಹೈಫಾ ಶತಮಾನ ಸಂಭ್ರಮಾಚರಣೆ ಸಮಿತಿಯ ವತಿಯಿಂದ ನಿನ್ನೆ ಮೈಸೂರು ನಗರದ ಪ್ರಸಿದ್ಧ ರಾಜೇಂದ್ರ ಕಲಾಮಂದಿರದಲ್ಲಿ ಹೈಫಾ ಶತಮಾನೋತ್ಸವ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು.

HH Yaduveera Krishnadatta Chamaraja Wodeyar lighting the lamp

ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿದ್ದು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತು. ಚಾಮರಾಜನಗರದ ಸಂಸದರಾದ ಶ್ರೀ ಧ್ರುವನಾರಾಯಣ ಅಧ್ಯಕ್ಷತೆಯನ್ನು ವಹಿಸಿದ್ದರು.

ಹೈಫಾ ಯುದ್ಧದ ರೋಚಕ ಕಥೆಯನ್ನು ಮೈಸೂರಿನ ಸುಪ್ರಸಿದ್ಧ ಲೆಕ್ಕ ಪರಿಶಿಶೋಧಕರಲ್ಲಿ ಒಬ್ಬರಾದ ಶ್ರೀ ವಿಶ್ವನಾಥ ರವರು ಸಭೆಗೆ ತಿಳಿಸಿಕೊಟ್ಟರು.
ಮೈಸೂರು- ಕೊಡಗು ಕ್ಷೇತ್ರದ ಸಂಸದ ಶ್ರೀ ಪ್ರತಾಪ್ ಸಿಂಹ ರವರು ಭಾರತ -ಇಸ್ರೇಲ್ ಸಂಬಂಧ ಬಗ್ಗೆ ಆಡಿದ ಮಾತು ಸಭಿಕರನ್ನು ಮಂತ್ರಮುಗ್ದರನ್ನಾಗಿಸಿತು.

ಹೈಫಾ ಯುದ್ಧದಲ್ಲಿ ಹೋರಾಡಿದ ೫ ಯೋಧರ ಕುಟುಂಭವನ್ನು ಇದೆ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞಾ ಶಾಲೆಯ ಮಕ್ಕಳು ವಿಶಿಷ್ಠ ರೀತಿಯಲ್ಲಿ ಹೈಫಾ ಯುದ್ಧದ ಕಥೆಯನ್ನು ತಿಳಿಸಿದರು. ವಿಜಯ ವಿಠ್ಠಲ ಶಾಲೆಯ ಮಕ್ಕಳು ಪ್ರಾರ್ಥನೆ ಮತ್ತು ರಾಷ್ಟ್ರಗೀತೆಯನ್ನು ಹಾಡಿದರು. ಶ್ರೀಮತಿ ಶೀತಲ್ ಮೋಹಿತೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಹೈಫಾ ಶತಮಾನ ಸಂಭ್ರಮಾಚರಣೆ ಸಮಿತಿಯ ಅಧ್ಯಕ್ಷರಾದ ವಿಶ್ವಪ್ರಿಯ ಆಳ್ವ ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿ ಶ್ರೀ ಹರೀಶ್ ಶೆಣೈ ಧನ್ಯವಾದ ಸಮರ್ಪಣೆ ಮಾಡಿದರು.

ವರದಿ : ಕಿರಣ್

MP Pratap Simha addresses the gathering
HH Yaduveera Krishnadatta Chamaraj Wodeyar addressing the gathering

MLA Dhruvanarayana Addressing the gathering

 

Leave a Reply

Your email address will not be published.

This site uses Akismet to reduce spam. Learn how your comment data is processed.