ನಾಗಪುರ, ಮಾರ್ಚ್‌ 1, 2024: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ – ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾರ್ಚ್ 15, 16 ಮತ್ತು 17, 2024 ರಂದು ನಾಗಪುರದಲ್ಲಿ ನಡೆಯಲಿದೆ. ಬೈಠಕ್‌ನಲ್ಲಿ 2023-24ರ ಸಂಘಕಾರ್ಯದ ಸಮೀಕ್ಷೆ, 2024-25ರ ಸಂಘಕಾರ್ಯದ ಯೋಜನೆಯ ಕುರಿತು ಚರ್ಚೆಯಾಗಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಅಖಿಲ ಭಾರತೀಯ ಕಾರ್ಯಕರ್ತರ ಪ್ರವಾಸ, ಸ್ವಯಂಸೇವಕರ ಪ್ರಶಿಕ್ಷಣ ಹಾಗೂ ಸಂಘ ಶಿಕ್ಷಾ ವರ್ಗದ ನೂತನ ಯೋಜನೆಯ ಅನುಷ್ಠಾನದ ಕುರಿತು ವಿಚಾರ ವಿನಿಮಯವಾಗಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಪ್ರಯುಕ್ತ ಕಾರ್ಯವಿಸ್ತಾರ ದೃಢೀಕರಣದ ಜೊತೆಗೆ ವಿಶೇಷವಾದ ಉಪಕ್ರಮಗಳ ಕುರಿತು ಚರ್ಚಿಸಲಾಗುತ್ತದೆ. ರಾಷ್ಟ್ರದ ವರ್ತಮಾನ ಸ್ಥಿತಿಯ ಕುರಿತು ವಿಚಾರ ಮತ್ತು ಮಹತ್ವಪೂರ್ಣ ವಿಷಯಗಳ ಕುರಿತು ಪ್ರಸ್ತಾವವೂ ಆಗಲಿದೆ.

ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪ್ರತಿ ವರ್ಷ ರಾಷ್ಟ್ರದ ವಿವಿಧ ಭಾಗಗಳಲ್ಲಿ ಆಗುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಯೋಜನೆ ನಾಗಪುರದಲ್ಲಿ ಆಗುತ್ತದೆ. ಪ್ರತಿನಿಧಿ ಸಭಾದಲ್ಲಿ 45 ಪ್ರಾಂತಗಳಿಂದ 1500 ಪ್ರತಿನಿಧಿಗಳ ಸಹಭಾಗಿತ್ವ ಇರುತ್ತದೆ. ಈ ಸಭೆಯಲ್ಲಿ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಕಾರ್ಯಕಾರಿಣಿ, ಕ್ಷೇತ್ರ ಮತ್ತು ಪ್ರಾಂತ ಕಾರ್ಯಕಾರಿಣಿ, ವಿವಿಧ ಸಂಘಟನೆಗಳ ಆಹ್ವಾನಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಸುನೀಲ್ ಅಂಬೇಕರ್,
ಅಖಿಲ ಭಾರತೀಯ ಪ್ರಚಾರ ಪ್ರಮುಖ್,
ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.