RSS Sarasanghachalak Mohan Bhagwat, Sarakaryavah Suresh Bhaiyyaji Joshi at ABPS, Jaipur

ರಾಜಸ್ಥಾನದ ಜೈಪುರದಲ್ಲಿ ಮಾರ್ಚ್ 15, 16 17, ಮೂರು ದಿನಗಳ ಕಾಲ ನಡೆದ ಆರೆಸ್ಸೆಸ್ಸಿನ ವಾರ್ಷಿಕ ಸಭೆಯಾದ ಅಖಿಲ ಭಾರತ ಪ್ರತಿನಿಧಿ ಸಭಾ ಜರುಗಿತು. ದೇಶದೆಲ್ಲೆಡೆಯಿಂದ ಆಯ್ದ 1300 ಪ್ರತಿನಿಧಿಗಳು ಭಾಗವಹಿಸಿದ್ದರು. ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿನಿಧಿ ಸಭಾವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ (ಸರಕಾರ್ಯವಾಹ) ಸುರೇಶ  ಭೈಯ್ಯಾಜಿ ಜೋಷಿ ಆರೆಸ್ಸೆಸ್ಸಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

RSS Sarasanghachalak Mohan Bhagwat, Sarakaryavah Suresh Bhaiyyaji Joshi at ABPS, Jaipur
RSS Sarasanghachalak Mohan Bhagwat, Sarakaryavah Suresh Bhaiyyaji Joshi at ABPS, Jaipur

2012-2013 ರ ವರದಿ

ಪರಮಪೂಜ್ಯ ಸರಸಂಘಚಾಲಕ್‌ಜೀ, ಗೌರವಾನ್ವಿತ ಅಖಿಲ ಭಾರತ ಪದಾಧಿಕಾರಿಗಳೇ, ಅ.ಭಾ. ಕಾರ್ಯಕಾರಿ ಮಂಡಲದ ಗೌ| ಸದಸ್ಯರೆ, ಗೌ| ಸಂಘ ಚಾಲಕ್‌ಜೀ, ವಿವಿಧ ರಾಜ್ಯ ಮತ್ತು ಪ್ರಾಂತಗಳ ನನ್ನ ಸಹೋದ್ಯೋಗಿ ಕಾರ್ಯವಾಹರೆ, ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸದಸ್ಯರೆ, ಸಮಾಜ ಸೇವಾ ಚಟುವಟಿಕೆಯ ವಿವಿಧ ವಿಭಾಗಗಳಲ್ಲಿ ತೊಡಗಿರುವ ಆದರಣೀಯ ಸಹೋದರ-ಸಹೋದರಿಯರೆ – ಇತಿಹಾಸ ಪ್ರಸಿದ್ಧ ನಗರ ಜೈಪುರದಲ್ಲಿ ಯುಗಾಬ್ದ ೫೧೧೪ರ ಮಾರ್ಚ್ ೨೦೧೩ರಲ್ಲಿ ಜರಗುತ್ತಿರುವ ಈ ಪ್ರತಿನಿಧಿ ಸಭಾಗೆ ತಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ.

ಶ್ರದ್ಧಾಂಜಲಿ

ಮೊದಲಿಗೆ, ರಾಷ್ಟ್ರದ ಉನ್ನತಿಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮನ್ನಗಲಿರುವ ಹಿರಿಯ ಚೇತನಗಳನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಆ ನಿಟ್ಟಿನಲ್ಲಿ ಶ್ರೀಕಾಂತ ಜೋಶಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವು ನೀಡಿದ ಯಾವುದೇ ಜವಾಬ್ದಾರಿಯನ್ನು ಸಂಪೂರ್ಣ ಅರ್ಪಣಾ ಮನೋಭಾವ ಮತ್ತು ಏಕಾಗ್ರತೆಗಳೊಂದಿಗೆ ದುಡಿದು ಯಶಸ್ವಿಯಾಗಿ ಪೂರೈಸುತ್ತಿದ್ದವರು; ಜೀವನದ ಕೊನೆಯ ಕ್ಷಣದ ತನಕ ಸಕ್ರಿಯರಾಗಿದ್ದು ನಮ್ಮನ್ನು ಅಗಲಿದ್ದಾರೆ. ಸಂತೋಷ ಹಾಗೂ ಮುಗುಳ್ನಗುವನ್ನು ನಮ್ಮ ನಡುವೆ ಹಬ್ಬಿಸುತ್ತಿದ್ದ ಕರ್ಮಯೋಗಿ ಸುರೇಂದ್ರ ಸಿಂಗ್‌ಜೀ ಚೌಹಾಣ್ ಅವರು, ತಮ್ಮ ಚಿಂತನೆ ಮತ್ತು ಕಠಿಣ ಪರಿಶ್ರಮದ ಮೂಲಕ ‘ಮಾದರಿ’ ಗ್ರಾಮದ ಬಗೆಗಿನ ಒಂದು ಯಶಸ್ವಿ ಮಾದರಿಯನ್ನು ನಮ್ಮ ಮುಂದಿಟ್ಟರು; ಅಲ್ಪಕಾಲದ ಅಸೌಖ್ಯದ ಬಳಿಕ ಅವರು ನಮ್ಮನ್ನಗಲಿದರು. ಆಳವಾದ ಬುದ್ಧಿಮತ್ತೆಯೊಂದಿಗೆ ಪ್ರತಿಭಾಪೂರ್ಣರಾಗಿದ್ದ ಪುಣೆಯ ಬಾಪೂ ಸಾಹೇಬ್ ಕೆಂದೂರ್ಕರ್ ಅವರು ಕೊನೆಯುಸಿರಿನ ತನಕ ಸಮಾಜದ ಏಳಿಗೆಗಾಗಿ ದುಡಿಯುತ್ತಾ ನಮ್ಮನ್ನು ಬಿಟ್ಟು ಹೋದರು. ಭಾರತೀಯ ಕಿಸಾನ್ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ನಾನಾಜೀ ಜೋಶಿ ಪುಣೆ ಅವರು, ತಮಗೆ ಸಂಸಾರದ ಹೊಣೆಗಾರಿಕೆಗಳು ಇದ್ದಾಗಲೂ ಜೀವನವಿಡೀ ಓರ್ವ ಸಂನ್ಯಾಸಿಯಂತೆ ದುಡಿದವರು; ಇದೇ ವರ್ಷ ನಮ್ಮನ್ನಗಲಿದರು.

ತಮ್ಮ ಸೌಮ್ಯ ಮತ್ತು ಸವಿಯಾದ ಸ್ವಭಾವದ ಮೂಲಕ ವಿರೋಧಿಗಳನ್ನು ಕೂಡ ಜಯಿಸಿದ ಹಿಂದಿನ ತಲೆಮಾರಿನ ಪ್ರಚಾರಕರಾದ ಭೈಯ್ಯಾಜಿ ಗಾಧೆ ಅವರು ಹಾಗೂ ಸರಳ ಜೀವನ, ಉನ್ನತ ಚಿಂತನೆಯ ಆದರ್ಶ ಉದಾಹರಣೆಯಂತಿದ್ದು, ಕೈಬರಹವನ್ನು ಸುಧಾರಿಸಿಕೊಳ್ಳುವ ಬಗ್ಗೆ ದೇಶಾದ್ಯಂತ ಸ್ಫೂರ್ತಿ ನೀಡುತ್ತಾ ನಿರಂತರ ಪ್ರವಾಸದಲ್ಲಿದ್ದ ನಾನಾ ಲಾಭೆ ಅವರು ನಮ್ಮನ್ನಗಲಿದರು. ನಾಗಪುರದ ಹಿರಿಯ ಪ್ರಚಾರಕರಾಗಿದ್ದು, ಮೃದು ಭಾಷಿಯಾಗಿ ತಮ್ಮ ದೈಹಿಕ ಯಾತನೆಗಳನ್ನು ಉತ್ಸಾಹದಿಂದಲೇ ಸಹಿಸಿಕೊಳ್ಳುತ್ತಿದ್ದ ಶರದ್ ರಾವ್ ಚೌತಾಯ್‌ವಾಲೆ ಅವರು ಕೂಡ ಅಗಲಿದ್ದಾರೆ. ಈ ಸಹಯಾತ್ರಿಗಳ ಅನುಪಸ್ಥಿತಿ ನಮ್ಮನ್ನು ಖಂಡಿತವಾಗಿಯೂ ಬಾಧಿಸಲಿದೆ.

ಸದ್ಗುರು ಜಗಜಿತ್ ಸಿಂಗ್‌ಜೀ ನಾಮಧಾರಿ ಅವರು ವಿಶ್ವ ಹಿಂದೂ ಪರಿಷತ್‌ನ ಆರಂಭದಿಂದಲೂ ಅದರ ಸಂಪರ್ಕ ಹೊಂದಿದ್ದವರು; ಅವರ ಶಿಷ್ಯ ಸಮುದಾಯದ ಹೃದಯದಲ್ಲಿ ಅವರಿಗೆ ಗೌರವಪೂರ್ಣವಾದ ಸ್ಥಾನವಿದೆ. ಅದೇ ರೀತಿ ಆದಿಚುಂಚನಗಿರಿ ಮಠಾಧೀಶ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಮಾಜದಲ್ಲಿ ಅತ್ಯಂತ ಗೌರವಯುತ ಸ್ಥಾನ ಹೊಂದಿದ್ದವರು. ಈ ಇಬ್ಬರೂ ಪರಂಧಾಮವನ್ನೈದಿದ್ದಾರೆ.

ಮಾಜಿ ಹಿರಿಯ ಪ್ರಚಾರಕರಾಗಿದ್ದು, ಬಿಹಾರ ಸರ್ಕಾರದ ಹಣಕಾಸು ಸಚಿವ ಮತ್ತು ಗುಜರಾತ್ ಹಾಗೂ ರಾಜಸ್ಥಾನಗಳ ರಾಜ್ಯಪಾಲರಾಗಿದ್ದ ಕೈಲಾಸಪತಿ ಮಿಶ್ರ, ಭಾರತ್ ವಿಕಾಸ ಪರಿಷತ್‌ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿ ದಕ್ಷಿಣ ಬಿಹಾರದಲ್ಲಿ ಅಂಗವಿಕಲರ ಪುನರ್ವಸತಿಗೆ ವಿಶೇಷವಾಗಿ ದುಡಿದ ದೇವಕೀನಂದನ ಮಾಥುರ್, ಸಕ್ಷಮ್‌ನ ವಿದರ್ಭ ಪ್ರಾಂತದ ಕೋಶಾಧಿಕಾರಿ ಸುಧೀರ್‌ಜೀ ದಾವಂದೆ ಇವರೆಲ್ಲ ನಮ್ಮನ್ನಗಲಿದ್ದಾರೆ.

ತಮ್ಮ ವಿದ್ವತ್ಪೂರ್ಣ ಕೆಲಸದ ಮೂಲಕ ಪ್ರಾಚ್ಯವಸ್ತು ಸಂಶೋಧನೆ ಇಲಾಖೆಗೆ ಘನತೆಯನ್ನು ತಂದು ಕೊಟ್ಟವರೂ ಲೋಥಾಲ್ ಮತ್ತು ದ್ವಾರಕೆಗಳ ಸಂಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರೂ ಆದ ಕರ್ನಾಟಕದ ಪ್ರೊ.ಎಸ್.ಆರ್.ರಾವ್, ತಮ್ಮ ಶಕ್ತಿಶಾಲಿ ಬರೆಹ ಮತ್ತು ಭಾಷಣಗಳ ಮೂಲಕ ೫೦ ವರ್ಷಗಳಿಗೂ ಮಿಕ್ಕಿ ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಮೆರೆದು ರಾಜಕೀಯಕ್ಕೆ ಹೊಸ ದಿಕ್ಕು ನೀಡಿದ ಬಾಳಾ ಸಾಹೇಬ್ ಠಾಕ್ರೆ, ಖ್ಯಾತ ಸಿತಾರ್ ವಾದಕ ಹಾಗೂ ಭಾರತರತ್ನ ಪ್ರಶಸ್ತಿ ಪುರಸ್ಕೃತ ಪಂಡಿತ್ ರವಿಶಂಕರ್, ಗಾಂಧೀ ಚಿಂತನೆಗಳಲ್ಲಿ ಪೂರ್ಣ ಬದ್ಧತೆಯನ್ನು ಹೊಂದಿ ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡ ಠಾಕುರ್‌ದಾಸ್‌ಜೀ ಬಂಗ್, ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್, ಮಾಜಿ ಕೇಂದ್ರ ಸಚಿವ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ.ಪಂತ್,  ಅರುಣಾಚಲ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ವಿದ್ಯಾಭಾರತಿ ಅರುಣಾಚಲದ ಮಾಜಿ ಅಧ್ಯಕ್ಷ ಜಿಕೋಂ ರಿಬಾ – ಇವರೆಲ್ಲ ಕಾಲದ ಪರದೆಯಾಚೆಗೆ ಸರಿದು ಹೋದರು.

ಕ್ಯಾಡಿಲ್ಲಾ ಫಾರ್ಮಾದ ಸ್ಥಾಪಕ ಅಧ್ಯಕ್ಷರಾಗಿದ್ದು ಜಗತ್ಪ್ರಸಿದ್ಧರಾಗಿದ್ದ ಇಂದ್ರವದನ್ ಮೋದಿ ಅವರು ೮೭ರ ವಯಸ್ಸಿನಲ್ಲಿ ನಿಧನ ಹೊಂದಿದರು.

ಶಿಲ್ಪ ಕಲೆಯಲ್ಲಿ ಜಗತ್ ಪ್ರಸಿದ್ಧರಾಗಿದ್ದು , ಹಲವು ಭಾರತೀಯ ನಾಯಕರ ಶಿಲ್ಪಗಳನ್ನು ಕೆತ್ತಿದ್ದ ಶ್ರೀಮತಿ ಜಶೂಬೆನ್ ಶಿಲ್ಪಿ ಅವರೀಗ ನಮ್ಮೊಂದಿಗಿಲ್ಲ.

ಗುವಾಹಟಿ ವಿಶ್ವವಿದ್ಯಾಲಯದ ಕುಲಪತಿಗಳೂ, ಮಾರ್ಕ್ಸ್‌ವಾದಿ ಚಿಂತಕರೂ ಆಗಿದ್ದು ಹಲವು ಚಳವಳಿಗಳ ನೇತೃತ್ವ ವಹಿಸಿದ್ದ ದೇವಪ್ರಸಾದ್ ಬರೂವಾ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ ನಂತರ ಬೃಹತ್ ಮತೀಯ ಆಂದೋಲನವಾದ ಶ್ರೀಮತ್ ಶಂಕರದೇವ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸೀತಾರಾಂ ಸುತಿಯಾ ಅವರು ಕೂಡ ನಮ್ಮನ್ನಗಲಿದ್ದಾರೆ.

ಆಡಳಿತದ ಅವ್ಯವಸ್ಥೆಯಿಂದಾಗಿ ಪ್ರಯಾಗದ ಪವಿತ್ರ ಕುಂಭಮೇಳದಲ್ಲಿ ಸಾವಿಗೀಡಾದವರು, ಭಯೋತ್ಪಾದಕರ ವಿವಿಧ ದಾಳಿಗಳಲ್ಲಿ ಅಸುನೀಗಿದವರು, ಪಾಕಿಸ್ಥಾನೀಯರ ಅಮಾನವೀಯ ವರ್ತನೆಗೆ ಗುರಿಯಾಗಿ ಕಾಶ್ಮೀರದ ಗಡಿಯಲ್ಲಿ ತಮ್ಮ ಪ್ರಾಣಗಳ ಬಲಿದಾನ ಮಾಡಿದವರು – ಈ ಎಲ್ಲ ಪವಿತ್ರ ಆತ್ಮಗಳನ್ನು ನಾವು ಸದಾ ಸ್ಮರಿಸುತ್ತೇವೆ. ದೆಹಲಿ ಮತ್ತು ದೇಶದ ಇತರ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಗಳು ಅತ್ಯಂತ ನೋವುಂಟ ಮಾಡುವ ಘಟನೆಗಳಾಗಿವೆ.

ಮೇಲಿನ ಎಲ್ಲ ಖ್ಯಾತ ಮತ್ತು ಅಪರಿಚಿತ ಸಹೋದರ – ಸಹೋದರಿಯರ ನಿಧನಕ್ಕೆ ಅ.ಭಾ. ಪ್ರತಿನಿಧಿ ಸಭಾ ಸಂತಾಪ ಸೂಚಿಸುತ್ತದೆ ಮತ್ತು ತನ್ನ ಚರಮಾಂಜಲಿಯನ್ನು ಸಲ್ಲಿಸುತ್ತದೆ.

ಸಂಘದ ಕೆಲಸದ ಇಂದಿನ ಸ್ವರೂಪ

ನಮ್ಮ ಸಾಂಸ್ಥಿಕ ವ್ಯವಸ್ಥೆಯಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡುವ ಸಂಘ ಶಿಕ್ಷಾ ವರ್ಗಗಳಿಗೆ ವಿಶೇಷ ಮಹತ್ವ ಇದೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ಕಳೆದ ವರ್ಷ ೫೦ ಸ್ಥಳಗಳಲ್ಲಿ ೫೨ ಸಂಘ ಶಿಕ್ಷಾ ವರ್ಗ (ಆರೆಸ್ಸೆಸ್ ತರಬೇತಿ ಶಿಬಿರ – ಆರ್‌ಟಿಸಿ)ಗಳು ಜರಗಿದವು. ಪ್ರಥಮ ವರ್ಷದ ವರ್ಗಗಳಲ್ಲಿ ೭,೪೦೮ ಸ್ಥಳಗಳಿಂದ ಬಂದ ೧೨,೫೪೯ ಮಂದಿ, ದ್ವಿತೀಯ ವರ್ಷದ ವರ್ಗಗಳಲ್ಲಿ ೨,೩೨೦ ಸ್ಥಳಗಳಿಂದ ಬಂದ. ೩,೦೬೩ ಮಂದಿ ಮತ್ತು ತೃತೀಯ ವರ್ಷದ ವರ್ಗಗಳಲ್ಲಿ ೯೨೩ ಸ್ಥಳಗಳಿಂದ ಬಂದ ೧೦೦೩ ಮಂದಿ ಭಾಗವಹಿಸಿ ತರಬೇತಿ ಪಡೆದರು. ಸಾಮಾನ್ಯ ಸಂಘ ಶಿಕ್ಷಾ ವರ್ಗದಂತಹ ವಿಶೇಷ ವರ್ಗಗಳು ಕೂಡ ೨೦೧೨-೧೩ರಲ್ಲಿ ಜರಗಿದವು. ಅದರ ಪ್ರಥಮ ವರ್ಷದ ವರ್ಗದಲ್ಲಿ ೮೯೫ ಸ್ಥಳಗಳಿಂದ ಬಂದ ೧,೨೧೮ ಮಂದಿ ಮತ್ತು ದ್ವಿತೀಯ ವರ್ಷದ ವರ್ಗದಲ್ಲಿ ೬೨೧ ಸ್ಥಳಗಳಿಂದ ಬಂದ ೭೬೮ ಮಂದಿ ಭಾಗವಹಿಸಿದ್ದರು.

ದೇಶಾದ್ಯಂತದಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ದೇಶದ 28,788 ಸ್ಥಳಗಳಲ್ಲಿ ಒಟ್ಟು 42, 981ಶಾಖೆಗಳು ನಡೆಯುತ್ತಿವೆ.  9557ಸಾಪ್ತಾಹಿಕ ಮಿಲನಗಳು (ವಾರದ ಸೇರುವಿಕೆ) ಹಾಗೂ  7178 ಸಂಘ ಮಂಡಲಿ (ತಿಂಗಳ ಸೇರುವಿಕೆ)ಗಳ ಮೂಲಕ ಕೂಡ ಸಂಘದ ಚಟುವಟಿಕೆ ನಡೆಯುತ್ತಿದೆ.

ಸಂಘದ ಶಾಖೆಗಳ ವಿಸ್ತರಣೆಗಾಗಿ ಈ ವರ್ಷ ಎಲ್ಲ ರಾಜ್ಯಗಳಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಪರಿಣಾಮವಾಗಿ, ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಶಾಖೆಗಳ ಚಟುವಟಿಕೆ ಹೆಚ್ಚಿದೆ. ಶಾಖೆಗಳ ದೃಢತೆ ಮತ್ತು ಗುಣಮಟ್ಟದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು.

ಸಾಂಸ್ಥಿಕ ಕೆಲಸದ ಸ್ಥಿತಿ – ವರದಿ

೧. ಶಾರೀರಿಕ್ ವಿಭಾಗ (ಶಾರೀರಿಕ ತರಬೇತಿ) – ಶಾರೀರಿಕ್ ವಿಭಾಗವು ಈ ವರ್ಷ ಶಾಖೆಗಳಿಗಾಗಿ ಪ್ರಹಾರ ಯಜ್ಞ ಕಾರ್ಯಕ್ರಮವನ್ನು ನಡೆಸಿದ್ದು, ವರದಿ ಸಮಾಧಾನಕರವಾಗಿದೆ.

ಪ್ರಹಾರ ಯಜ್ಞ – ೧೫,೯೨೪ ಶಾಖೆಗಳಲ್ಲಿ ಪ್ರಹಾರ ಯಜ್ಞ ನಡೆಸಿದ್ದು, ೧,೬೬,೯೫೯ ಸ್ವಯಂಸೇವಕರು ಅದರಲ್ಲಿ ಭಾಗವಹಿಸಿದ್ದರು. ಒಟ್ಟು ೫,೭೧,೭೬,೫೨೦ ಪ್ರಹಾರಗಳನ್ನು ನಡೆಸಲಾಗಿತ್ತು. ಅದರಲ್ಲಿ ೧೮,೪೨೧ ಸ್ವಯಂಸೇವಕರು ಸಾವಿರಕ್ಕೂ ಅಧಿಕ ಪ್ರಹಾರಗಳನ್ನು ಮಾಡಿದ್ದರು.

೨. ಬೌದ್ಧಿಕ್ ವಿಭಾಗ್ (ಬೌದ್ಧಿಕ್ ತರಬೇತಿ) – ಹಿಂದಿನ ವರ್ಷಗಳಂತೆಯೇ ಆಯ್ದ ೭೮ ಸ್ವಯಂಸೇವಕರಿಗೆ ಭೋಪಾಲ್‌ನಲ್ಲಿ ತರಬೇತಿ ಕಾರ್ಯಾಗಾರವನ್ನು ನಡೆಸಲಾಗಿತ್ತು. ೪೦ ಮಂದಿ ಕಾರ್ಯಕರ್ತರು ಪ್ರಬಂಧಗಳನ್ನು ಮಂಡಿಸಿದ್ದು, ಅವರ ಬೌದ್ಧಿಕ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿತ್ತು.

೩. ಪ್ರಚಾರ್ ವಿಭಾಗ್ (ಮಾಧ್ಯಮ) – ೨೦೧೨-೧೩ರ ಸಾಲಿನಲ್ಲಿ ೨೫ ರಾಜ್ಯಗಳಲ್ಲಿ ಪತ್ರಲೇಖನ ಕಾರ್ಯಾಗಾರಗಳನ್ನು ಏರ್ಪಡಿಸಿದ್ದು ೨,೨೪೮ ಸ್ವಯಂಸೇವಕರು ಪಾಲ್ಗೊಂಡಿದ್ದರು.

ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿದ್ದು, ಅದರಿಂದ ಅವರಿಗೆ ಟಿವಿ ವಿಚಾರಗೋಷ್ಠಿ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಅನುಕೂಲವಾಯಿತು. ಸುಮಾರು ೧೦೦ ಮಂದಿ ಸಹೋದರ – ಸಹೋದರಿಯರು ವಿವಿಧ ರಾಜ್ಯಗಳ ಸುಮಾರು ೫೦ ವಾಹಿನಿಗಳ ಟಿವಿ ಚರ್ಚಾಕೂಟಗಳಲ್ಲಿ ಭಾಗವಹಿಸಿದ್ದರು.

ನಾರದ ಜಯಂತಿಯ ಸಂದರ್ಭದಲ್ಲಿ ದೇಶದ ೮೨ ಸ್ಥಳಗಳಲ್ಲಿ ಒಟ್ಟು ೧೮೨ ಪತ್ರಕರ್ತರನ್ನು ಸಮ್ಮಾನಿಸಲಾಯಿತು. ಆ ಸಮಾರಂಭಗಳಲ್ಲಿ ಪತ್ರಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಪ್ರಚಾರ ವಿಭಾಗದ ಸಹಕಾರದೊಂದಿಗೆ ವಿಶ್ವ ಸಂವಾದ ಕೇಂದ್ರವು ನಡೆಸಿತ್ತು.

೩೧ ಜಾಗರಣ ಪತ್ರಿಕೆಗಳು ದೇಶಾದ್ಯಂತ ೧.೭ ಲಕ್ಷ ಗ್ರಾಮಗಳನ್ನು ತಲಪುತ್ತಿವೆ; ಆ ಮೂಲಕ ಸುದ್ದಿ ಮತ್ತು ರಾಷ್ಟ್ರೀಯವಾದಿ ಅಭಿಪ್ರಾಯಗಳನ್ನು ಅಲ್ಲಿಗೆ ಮುಟ್ಟಿಸುತ್ತಿವೆ.

‘ಸಾಮಾಜಿಕ ಮಾಧ್ಯಮ’ (Soಛಿiಚಿಟ meಜiಚಿ) ಎನ್ನುವ ಪರಿಕಲ್ಪನೆಯನ್ನು ನಾವು ರೂಪಿಸಿದ್ದು, ಸಂಘದ ಜಾಲ ತಾಣದ ಮೂಲಕ ಬಹಳಷ್ಟು ಜನ ಅದನ್ನು ಸಂಪರ್ಕಿಸುತ್ತಿದ್ದಾರೆ. ಈ ಜಾಲ ತಾಣದ ಮೂಲಕ ಪ್ರತಿ ತಿಂಗಳು ಸುಮಾರು ೧,೫೦೦ ಮಂದಿ ಸಂಘವನ್ನು ಸೇರುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿವಿಧ ರಾಜ್ಯಗಳಲ್ಲಿ ವಿಶೇಷ ಕಾರ್ಯಕ್ರಮಗಳು :

೧. ದಕ್ಷಿಣ ಬಂಗ್ (ದಕ್ಷಿಣ ಬಂಗಾಳ) – ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನದ ಅಂಗವಾಗಿ ೨೦೧೩ರ ಜನವರಿಯಲ್ಲಿ ದಕ್ಷಿಣ ಬಂಗಾಳದಲ್ಲಿ ಯುವಜನ ಶಿಬಿರವೊಂದನ್ನು ಸಂಘಟಿಸಲಾಯಿತು. ೧೫-೪೦ ವರ್ಷ ವಯೋಮಾನದವರಿಗೆ ಮಾತ್ರ ಅದರಲ್ಲಿ ಭಾಗವಹಿಸಲು ಅವಕಾಶವಿತ್ತು. ಕಲ್ಯಾಣಿಯಲ್ಲಿ ಏರ್ಪಡಿಸಿದ ಶಿಬಿರದಲ್ಲಿ ೨,೦೫೨ ಕಡೆಗಳಿಂದ ಬಂದ ೯,೧೧೫ ಮಂದಿ ಯುವಜನರು ಭಾಗವಹಿಸಿದ್ದರು. ದಕ್ಷಿಣ ಬಂಗಾಳದಲ್ಲಿ ಇದು ಸಂಘದ ಕೆಲಸದಲ್ಲಿನ ದೊಡ್ಡ ಸಾಧನೆಯಾಗಿತ್ತು. ಶಿಬಿರದಲ್ಲಿ ಶ್ರೀರಾಮಕೃಷ್ಣ ಮಠದ ಸಂನ್ಯಾಸಿಗಳು ಕೂಡ ಭಾಗವಹಿಸಿದ್ದು ಉಲ್ಲೇಖಾರ್ಹ. ಸಮಾರೋಪ ಸಮಾರಂಭದಲ್ಲಿ ನೆರೆಕರೆಯ ಹಳ್ಳಿ – ಪಟ್ಟಣಗಳಿಂದ ಬಂದ ಸುಮಾರು ೨೫ ಸಾವಿರ ನಾಗರಿಕರು ಭಾಗವಹಿಸಿದ್ದು ಗಮನಾರ್ಹವೆನಿಸಿತು.

೨. ಪೂರ್ವ ಆಂಧ್ರ ಪ್ರದೇಶ – ಪೂರ್ವ ಆಂಧ್ರದಲ್ಲಿ ‘ಹಿಂದೂ ಚೈತನ್ಯ (ಜಾಗೃತಿ) ಶಿಬಿರವೊಂದನ್ನು ಏರ್ಪಡಿಸುವ ಬಗ್ಗೆ ಸುಮಾರು ಒಂದು ವರ್ಷದಿಂದ ಸಿದ್ಧತೆಗಳು ನಡೆಯುತ್ತಿದ್ದು, ಆಂಧ್ರ ಪ್ರದೇಶದ ಪೂರ್ವ ಭಾಗದಲ್ಲಿ ಸಂಘದ ಬೆಳವಣಿಗೆಗೆ ಅದೊಂದು ಮೈಲಿಗಲ್ಲೆನಿಸುವಂತಿತ್ತು. ಭಾರತೀಯ ಪ್ರಜ್ಞಾ , ವಸ್ತು ಪ್ರದರ್ಶನ (ಭಾರತೀಯ ಬೌದ್ಧಿಕ ಸಾಧನೆಯ ಬಗೆಗಿನ ಪ್ರದರ್ಶನ)ದಿಂದಾಗಿ ಅಲ್ಲಿಗೆ ಭೇಟಿ ನೀಡಿದವರಿಗೆ ಹೆಮ್ಮೆ ಉಂmಗುವಂತಿತ್ತು. ಸುಮಾರು ೧.೨೫ ಲಕ್ಷ ಜನ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು. ೨,೪೦೪ ಊರುಗಳಿಂದ ಬಂದ ೧೭,೨೩೩ ಸ್ವಯಂಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮಾತೃ ಸಮ್ಮೇಳನದಲ್ಲಿ ಸುಮಾರು ೧೦ ಸಾವಿರ ಮಾತೆಯರು ಭಾಗವಹಿಸಿದ್ದರೆ ಪ್ರಬುದ್ಧ ಸಮ್ಮೇಳನ (ವಿದ್ಯಾವಂತರ ಸಮ್ಮೇಳನ)ದಲ್ಲಿ ೯೬೦ ಮಂದಿ ಪಾಲ್ಗೊಂಡಿದ್ದರು. ಸಂತ ಸಮ್ಮೇಳನದಲ್ಲಿ ವಿವಿಧ ಪಂಥಗಳ ೭೨ ಮಂದಿ ಸಂತರು ಭಾಗವಹಿಸಿದ್ದು ಉಲ್ಲೇಖಾರ್ಹವೆನಿಸಿತು. ಸಮಾರೋಪ ಸಮಾರಂಭದಲ್ಲಿ ಸುಮಾರು ೬೦ ಸಾವಿರ ಜನ ಭಾಗವಹಿಸಿದ್ದು ಸಂಘಟಕರ ನಿರೀಕ್ಷೆಯನ್ನೇ ಮೀರುವಂತಿತ್ತು.

೩. ಪಶ್ವಿಮ ಆಂಧ್ರ – ‘ಘೋಷ್ ತರಂಗ್’ ಎನ್ನುವ ಘೋಷ್(ಬ್ಯಾಂಡ್)ಗೆ ಸಂಬಂಧಿಸಿದ ಒಂದು ವಿಶೇಷ ಶಿಬಿರವನ್ನು ಪಶ್ಚಿಮ ಆಂಧ್ರದಲ್ಲಿ ಏರ್ಪಡಿಸಿದ್ದು. ಅದರಲ್ಲಿ ೮೬೫ ಮಂದಿ ವಾದಕರು ಪಾಲ್ಗೊಂಡಿದ್ದರು. ಈ ಅಪೂರ್ವ ಸಂದರ್ಭವನ್ನು ನೋಡಲು ಸುಮಾರು ೮,೦೦೦ ಜನ ನಾಗರಿಕರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ರಚಿಸಿದ ಸ್ವಾಗತ ಸಮಿತಿಯಲ್ಲಿ ಸಂಗೀತ ಮತ್ತು ಕಲೆಗಳ ಕ್ಷೇತ್ರದ ಬಹಳಷ್ಟು ಗೌರವಾನ್ವಿತ ವ್ಯಕ್ತಿಗಳು ಸೇರ್ಪಡೆಗೊಂಡಿದ್ದರು.

೪. ಮಾಳವಾ ಪ್ರಾಂತ ಏಕತ್ರೀಕರಣ – ಮಾಳವ ಪ್ರಾಂತ (ಮಧ್ಯಪ್ರದೇಶದ ಒಂದು ಭಾಗ)ದಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಘದ ಚಟುವಟಿಕೆಗಳು ವೇಗವಾಗಿ ಬೆಳೆಯುತ್ತಿವೆ. ಸಾಮಾನ್ಯ ಮಟ್ಟಿಗೆ ಈ ಕಾರ್ಯಕ್ರಮವನ್ನು ಸಂಘಟಿಸುವುದೆಂದು ಸಂಘದ ರಾಜ್ಯ ತಂಡ ತೀರ್ಮಾನಿಸಿತ್ತು. ಆದರೆ ಕಾರ್ಯಕರ್ತರು ಹಾಕಿದ ಕಠಿಣ ಪರಿಶ್ರಮದ ಫಲವಾಗಿ ಅದೊಂದು ಮರೆಯಲಾಗದ ಘಟನೆ ಎನಿಸಿತು. ಈ ಏಕತ್ರೀಕರಣ (ಮಿಲನ)ದಲ್ಲಿ ೩,೯೯೧ಸ್ಥಳಗಳಿಂದ ಬಂದ ೮೩,೩೪೫ ಸ್ವಯಂಸೇವಕರು ಭಾಗವಹಿಸಿದ್ದರು. ೧೦೮ ನಗರ ಮತ್ತು ಪಟ್ಟಣಗಳ ಎಲ್ಲ ವಸತಿಗಳಿಗೆ ಅದರಲ್ಲಿ ಪ್ರಾತಿನಿಧ್ಯವಿತ್ತು ಎಂಬುದಿಲ್ಲಿ ಗಮನಾರ್ಹ. ಕಾರ್ಯಕ್ರಮದ ಸಣ್ಣ ವಿವರಗಳ ಬಗ್ಗೆ ಕೂಡ ಪೂರ್ವ ಸಿದ್ಧತೆಯಲ್ಲಿ ಚಿಂತಿಸಲಾಗಿದ್ದು, ಅದರಿಂದಾಗಿ ಕಾರ್ಯಕ್ರಮ ಭಾರೀ ಪ್ರಮಾಣದ್ದಾದರೂ ಕೂಡ mಫಿಕ್ ಜಾಮ್‌ನಂತಹ ಯಾವುದೇ ಸಮಸ್ಯೆ ಉಂmಗಲಿಲ್ಲ. ಈ ವ್ಯವಸ್ಥಿತ ಯೋಜನೆಯನ್ನು ಆಡಳಿತ, ಮಾಧ್ಯಮ ಮತ್ತು ನಾಗರಿಕರೆಲ್ಲರೂ ಮೆಚ್ಚಿಕೊಂಡರು.

೫. ಕರ್ನಾಟಕ ದಕ್ಷಿಣ – ಸಂಘದಲ್ಲಿ ಕರ್ನಾಟಕ ದಕ್ಷಿಣದ ಮಂಗಳೂರು ವಿಭಾಗವು ತೀವ್ರ ಚಟುವಟಿಕೆ ಇರುವ ಒಂದು ವಿಭಾಗವಾಗಿದೆ. ಮಂಗಳೂರು ಒಂದು ಆಡಳಿತಾತ್ಮಕ ಜಿಲ್ಲೆಯಾಗಿದೆ. ಕೆಲವು ವರ್ಷಗಳ ಹಿಂದೆ ಉಡುಪಿ ಜಿಲ್ಲೆ ರಚಿಸಲಾಯಿತು. ಈ ವಿಭಾಗದ ಎಲ್ಲ ಗ್ರಾಮಗಳಲ್ಲಿ ಈಗ ಯಾವುದಾದರೂ ಒಂದು ರೀತಿಯ ಸಂಘ ಚಟುವಟಿಕೆ ನಡೆಯುತ್ತಿದೆ. ಫ್ರಬ್ರುವರಿ ತಿಂಗಳಿನಲ್ಲಿ ಮಂಗಳೂರು ಒಂದು ಬೃಹತ್ ಏಕತ್ರೀಕರಣ (ಉeಣ ಣogeಣheಡಿ)ವನ್ನು ಸಂಘಟಿಸಿತ್ತು. ಒಟ್ಟು ೧,೫೦೦ ಗ್ರಾಮಗಳಲ್ಲಿ ೧,೦೮೦, ಒಟ್ಟು ೩,೦೧೫ ಊರು (ಟoಛಿಚಿಟiಣಥಿ)ಗಳಲ್ಲಿ ೨,೭೮೬ ಪ್ರಾತಿನಿಧ್ಯವನ್ನು ಹೊಂದಿದ್ದು, ಭಾಗವಹಿಸಿದ ಗಣವೇಷಧಾರಿ ಸ್ವಯಂಸೇವಕರು ೮೫,೩೪೭.

ಈ ಬೃಹತ್ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ೨೪೭ ಮಂದಿ ಅಲ್ಪಾವಧಿ ವಿಸ್ತಾರಕರು (ಪೂರ್ಣಾವಧಿ ಸ್ವಯಂಸೇವಕರು) ತಮ್ಮ ಮನೆಗಳಿಗೆ ಹೋಗದೇನೇ ದುಡಿದರು. ೪೫೭ ಕಾರ್ಯಕರ್ತರು ರಾತ್ರಿ ಉಳಿಯಲು ಮನೆಗೆ ಹೋಗುತ್ತಿದ್ದವರಾದರೂ ಇದಕ್ಕಾಗಿ ಇಡೀ ದಿನ ದುಡಿದರು; ೧೫ ಸಾವಿರಕ್ಕೂ ಅಧಿಕ ಸ್ವಯಂಸೇವಕ ಘಟ ನಾಯಕರು (ತಂಡದ ನಾಯಕರು) ದಣಿವರಿಯದೆ ದುಡಿದರು. ಈ ಪ್ರಯತ್ನಗಳ ಫಲವಾಗಿ ಪ್ರಸ್ತುತ ಬೃಹತ್ ಕಾರ್ಯಕ್ರಮ ಯಶಸ್ವಿಯಾಯಿತು.

ಮಾಳವಾ ಮತ್ತು ದಕ್ಷಿಣ ಕನ್ನಡಗಳ ಈ ಬೃಹತ್ ಮಿಲನ್‌ಗಳ ಬಗ್ಗೆ ಹೇಳಬೇಕಾದ ಒಂದು ಅಂಶವೆಂದರೆ ಕೇವಲ ಮೌಖಿಕ ಸೂಚನೆಗಳು ಮತ್ತು ಸಂದೇಶಗಳ ಮೂಲಕ ಅವುಗಳನ್ನು ಸಂಘಟಿಸಲಾಯಿತು; ಯಾವುದೇ ಮುದ್ರಿತ ಸಾಹಿತ್ಯ ಇರಲಿಲ್ಲ. ಈ ಕಾರ್ಯಕ್ರಮಗಳಲ್ಲಿ ಸಂಘದ ಸಂಘಟನಾ ಸಾಮರ್ಥ್ಯ ವ್ಯಕ್ತವಾಯಿತು. ಇವೆರಡು ಕಾರ್ಯಕ್ರಮಗಳಲ್ಲಿ ಮತ್ತು ಕೋಲ್ಕತ್ತಾ ಹಾಗೂ ಪೂರ್ವ ಆಂಧ್ರದ ಕಾರ್ಯಕ್ರಮಗಳಲ್ಲಿ ಪ.ಪೂ. ಸರಸಂಘಚಾಲಕ್‌ಜೀ ಉಪಸ್ಥಿತರಿದ್ದರು.

೬. ಕೊಂಕಣ ಪ್ರಾಂತ – ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನದ ಪ್ರಯುಕ್ತ ಕೊಂಕಣ ಪ್ರಾಂತವು ಕಾಲೇಜು ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಶಿಬಿರವನ್ನು ಏರ್ಪಡಿಸಿತ್ತು. ೧,೪೬೭ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ೧೧ ಮತ್ತು ೧೨ನೇ ತರಗತಿಯ ೫೪೬ ವಿದ್ಯಾರ್ಥಿಗಳು, ಕಾಲೇಜು ಮಟ್ಟದ ೫೩೫ ಮಂದಿ, ಇಂಜಿನಿಯರಿಂಗ್, ಎಲ್‌ಎಲ್‌ಬಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ೬೩ ಮಂದಿ ಪಾಲ್ಗೊಂಡಿದ್ದರು.

೭. ಜೈಪುರ ಪ್ರಾಂತ – ಸಂಘದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವವರಿಗಾಗಿ ಜೈಪುರ ಪ್ರಾಂತ ಘಟಕವು ಒಂದು ಶಿಬಿರವನ್ನು ಏರ್ಪಡಿಸಿತು ಮತ್ತು ೨೦೧೨ರ ಸೆಪ್ಟಂಬರ್‌ನಲ್ಲಿ ಸರಸಂಘಚಾಲಕರ ಪ್ರವಾಸದ ವೇಳೆ ಕಾರ್ಯಕರ್ತರಿಗೆ  ತರಬೇತಿ ನೀಡಿತು. ಶಾಖಾ ತಂಡದ ಮಟ್ಟದಲ್ಲಿ ಕೆಲಸ ಮಾಡಿದವರು ಮತ್ತು ಸಂಘ ಶಿಕ್ಷಾ ವರ್ಗದಲ್ಲಿ ತರಬೇತಿ ಪಡೆದ ಸ್ವಯಂಸೇವಕರು ಮಾತ್ರ ಆ ಶಿಬಿರದಲ್ಲಿ ಭಾಗವಹಿಸಿಬಹುದಿತ್ತು. ಭಾಗಿಗಳು ಶಾರೀರಿಕ್ ಮತ್ತು ಸಾಂಘಿಕ್ ಗೀತ್‌ಗಳನ್ನು ಪ್ರಸ್ತುತಪಡಿಸಿದರು. ಅವರ ಜವಾಬ್ದಾರಿಗಳಿಗೆ ಅನುಗುಣವಾಗಿ ವಿಭಿನ್ನ ವರ್ಗದ ಕಾರ್ಯರ್ತರಿಗೆ ಪ್ರತ್ಯೇಕ ಕಾರ್ಯಾಗಾರ / ಬೈಠಕ್‌ಗಳನ್ನು ನಡೆಸಲಾಯಿತು. ೧,೯೪೬ ಊರುಗಳಿಂದ ಬಂದ ೬,೯೬೮ ಕಾರ್ಯಕರ್ತರು ಈ ಶಿಬಿರದಲ್ಲಿ ಭಾಗವಹಿಸಿದ್ದರು.

೮. ಉತ್ತರ ತಮಿಳುನಾಡು ಪ್ರಾಂತ – ರಥ ಸಪ್ತಮಿ ಸಂದರ್ಭದಲ್ಲಿ ಪ್ರಾಂತದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಲ್ಲ ೬೭೫ ಶಾಖೆಗಳು ಭಾಗವಹಿಸಿದ್ದವು. ೧೦,೭೫೧ ಸ್ವಯಂಸೇವಕರು ಭಾಗವಹಿಸಿ, ಒಟ್ಟು ೨,೨೨,೯೩೨ ಸೂರ್ಯ ನಮಸ್ಕಾರಗಳನ್ನು ಮಾಡಿದರು.

ಮೇಲಿನ ಎಲ್ಲ ಕಾರ್ಯಕ್ರಮಗಳು ನಮಗೆ ಸಂಘದ ಸಂಘಟನಾತ್ಮಕ ಬಲದ ಕಿರುಪರಿಚಯವನ್ನು ಮಾಡಿಕೊಡುತ್ತವೆ. ಈ ಎಲ್ಲ ಕಡೆಗಳಲ್ಲಿ ಅನುಪಾಲನಾ ಕ್ರಮವನ್ನು ಎಚ್ಚರದಿಂದ ಅನುಸರಿಸಲಾಗುತ್ತಿದೆ ಎನ್ನುವ ಆತ್ಮವಿಶ್ವಾಸ ನಮಗಿದೆ. ನಮ್ಮ ಕೆಲಸದ ಭವಿಷ್ಯದ ಬೆಳವಣಿಗೆಯನ್ನು ಕೂಡ ಈ ಕಾರ್ಯಗಳಿಂದ ಊಹಿಸಬಹುದು. ಈ ಕಾರ್ಯಕ್ರಮಗಳಲ್ಲಿ ನಾಗರಿಕತು ಮತ್ತು ಮಾಧ್ಯಮದವರು ಗುಣಾತ್ಮಕವಾಗಿ ಪಾಲ್ಗೊಂಡಿದ್ದರು.

ರಾಷ್ಟ್ರಮಟ್ಟದ ದೃಶ್ಯ :

೨೦೧೨-೧೩ರ ಸಾಲಿನಲ್ಲಿ ದೇಶದಲ್ಲಿ ಪ್ರಮುಖ ಘಟನೆಗಳು ಜರಗಿದವು. ಕೆಲವು ಘಟನೆಗಳು ಸ್ಫೂರ್ತಿದಾಯಕವಾಗಿದ್ದರೆ ಇನ್ನು ಕೆಲವು ಘಟನೆಗಳಿಂದ ಸಮಾಜದ ಎಲ್ಲ ಹಂತಗಳಲ್ಲಿ ಎಚ್ಚರ ಮತ್ತು ಚಿಂತನೆ ಅಗತ್ಯವೆಂಬುದು ಕಂಡು ಬಂತು.

೧. ನಮ್ಮ ಗಡಿಯೊಳಗೆ ನುಗ್ಗಲು ಪಾಕಿಸ್ಥಾನಿ ಸೇನೆಯ ಪಿತೂರಿ – ಪಾಕಿಸ್ಥಾನಿ ಸೇನಾಪಡೆಗಳು ಭಾರತದ ಭೂಪ್ರದೇಶದೊಳಗೆ ನುಗ್ಗುವುದು ಮತ್ತು ನಮ್ಮ ಸೈನಿಕರ ಮೇಲೆ ದಾಳಿ ನಡೆಸುವುದನ್ನು ಮಾಮೂಲಿ ಸಂಗತಿ ಎಂದು ತಿಳಿಯಬಾರದು. ಇದು ಪಾಕಿಸ್ಥಾನ ಪರ ನಿಂತಿರುವ ಭಯೋತ್ಪಾದಕ ಗುಂಪು ಹೆಣೆದಿರುವ ಪಿತೂರಿಯಲ್ಲದೆ ಬೇರೇನೂ ಅಲ್ಲ. ಜಾಗೃತ ದಳಗಳು ಕೂಡ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿವೆ. ಹುತಾತ್ಮರಾದ ನಮ್ಮ ಯೋಧ ಹೇಮರಾಜ್ ಅವರ ತಲೆಯನ್ನು ಕಡಿದು ಅದನ್ನು ನಮ್ಮ ಭೂಪ್ರದೇಶದಲ್ಲಿ ಎಸೆದು ಹೋಗಿರುವುದು ಪಾಕಿಸ್ಥಾನದ ಕ್ರೂರ ಸ್ವಭಾವವನ್ನು ತೋರಿಸುತ್ತದೆ. ಪಾಕಿಸ್ಥಾನ್ – ಪರ ಜಿಹಾದಿ ಗುಂಪುಗಳು ಭಾರತ ವಿರೋಧಿ ಕಾರ್ಯಕ್ರಮವನ್ನು ಹಾಕಿಕೊಂಡಿವೆ. ಭಾರತ ವಿರೋಧಿ ಶಕ್ತಿಗಳು ರಾಷ್ಟ್ರಕ್ಕೆ ಬೆದರಿಕೆಯೊಡ್ಡುತ್ತಿವೆ. ಭಾರತ ಸರ್ಕಾರ ಈ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸುವುದು ಇವತ್ತಿನ ಆವಶ್ಯಕತೆಯಾಗಿದೆ. ಸುಸಜ್ಜಿತವಾದ ಬಲಿಷ್ಠ ಸೇನೆ ಇದ್ದಾಗ ಮಾತ್ರ ಸಾಮಾನ್ಯ ನಾಗರಿಕರ ನೈತಿಕ ಸ್ಥೈರ್ಯ ಅಚಲವಾಗಿ ಇರಬಲ್ಲದು. ಭಾರತ ಸರ್ಕಾರ ಇವತ್ತಿನ ಪರಿಸ್ಥಿತಿಗೆ ಅನುಗುಣವಾದ ಸೂಕ್ತ ವ್ಯೂಹಾತ್ಮಕ ನೀತಿಗಳನ್ನು ಅನುಸರಿಸಬೇಕು ಮತ್ತು ನಮ್ಮ ಗಡಿಯ ಭದ್ರತೆಯ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಬೇಕು.

೨. ಅಕ್ರಮ ಪ್ರವೇಶ, ಒಂದು ದೊಡ್ಡ ಪಿತೂರಿ – ಬಂಗ್ಲಾದೇಶದ ಸ್ವಾತಂತ್ರ್ಯದ ದಿನದಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಆ ರಾಷ್ಟ್ರೀಯರ ಅಕ್ರಮ ಪ್ರವೇಶವು ಈಗ ಒಂದು ಬಿಕ್ಕಟ್ಟಿನ ರೂಪವನ್ನು ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಉದ್ಯೋಗವನ್ನು ಅರಸಿ ಭಾರತದೊಳಗೆ ನುಗ್ಗುತ್ತಿರುವ ಬಂಗ್ಲಾದೇಶಿ ರಾಷ್ಟ್ರೀಯರು ಅಧಿಕಾರದ ಸ್ಥಾನದಲ್ಲಿರುವವರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಅಕ್ರಮ ವಿಧಾನಗಳ ಮೂಲಕ ಭಾರತದ ನಾಗರಿಕತ್ವವನ್ನು ಪಡೆದುಕೊಳ್ಳುವ ಮೂಲಕ ನಮ್ಮ ಶಾಂತಿಯನ್ನು ಕದಡುತ್ತಿದ್ದಾರೆ. ಅವರು ನಮ್ಮ ಜನಸಂಖ್ಯಾ ಸಮತೋಲನವನ್ನು ಕೆಡಿಸುವುದಷ್ಟೇ ಅಲ್ಲ; ಆ ಪ್ರದೇಶಗಳಲ್ಲಿ ಹಿಂದೂ ಸಮಾಜಕ್ಕೆ ಸವಾಲೊಡ್ಡುವ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಸಂಭವಿಸಿದ ಈಚಿನ ಘಟನೆಗಳು ವಿವೇಕಿಗಳಾದ ಜನರ ಮನಸ್ಸಿನಲ್ಲಿ ಇದೊಂದು ವ್ಯವಸ್ಥಿತ ಪಿತೂರಿಯ ಭಾಗ ಎನ್ನುವ ಕಳವಳವನ್ನು ಮೂಡಿಸುತ್ತಿವೆ. ಅಂಥವರಿಗೆ ನೆರವಾಗುವ ಶಕ್ತಿಗಳು ನಮ್ಮ ದೇಶದಲ್ಲೇ ಇವೆ ಎಂಬುದು ದುರಂತ.

ಅಸ್ಸಾಂನ ಕೊಕ್ರಝಾರ್‌ನಲ್ಲಿ ಈಚೆಗೆ ನಡೆದ ವ್ಯಾಪಕ ಗಲಭೆಯನ್ನು ಕೇವಲ ಸ್ಥಳೀಯ ವಿವಾದ ಎಂದು ಭಾವಿಸುವುದು ದೊಡ್ಡ ತಪ್ಪೆನಿಸುತ್ತದೆ. ಇದನ್ನು ವಿಶಾಲವಾದ ಪಿತೂರಿಯ ಒಂದು ಭಾಗ ಎಂದು ಪರಿಗಣಿಸಬೇಕು.. ಅಸ್ಸಾಂನಲ್ಲಿ ಈ ಬಗೆಯ ಹಿಂಸಾಚಾರಗಳು ಹಲವು ವರ್ಷಗಳಿಂದ ನಡೆಯುತ್ತಲೇ ಇವೆ; ಆದರೆ ಇದೇ ಮೊದಲ ಬಾರಿಗೆ ಅಕ್ರಮ ಪ್ರವೇಶಿಗರು ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು ಮತ್ತು ಕೆಲವು ಪ್ರದೇಶಗಳನ್ನು ಬಿಟ್ಟುಕೊಡಬೇಕಾಯಿತು. ಅದಕ್ಕೆ ಪ್ರತಿಯಾಗಿ ಆ ಶಕ್ತಿಗಳು ಅವುಗಳ ಸ್ಥಳೀಯ ಬೆಂಬಲಿಗರ ಸಹಕಾರದೊಂದಿಗೆ ಬಲ ಪ್ರದರ್ಶನಕ್ಕೆ ಮುಂದಾದವು. ಘಟನೆ ಆ ಪ್ರದೇಶಕ್ಕೆ ಸೀಮಿತವಾಗಿ ಉಳಿಯದೆ ಮುಂಬಯಿಯಷ್ಟು ದೂರದವರೆಗೂ ವಿಸ್ತರಿಸಿತು. ಅಲ್ಲಿ ಆ ಬೆಂಬಲಿಗರು ರಜಾ ಅಕಾಡೆಮಿಯ ಆಶ್ರಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದರು ಮತ್ತು ದೇಶದ ನಾಗರಿಕರಿಗೆ ಬಹಿರಂಗವಾಗಿ ಸವಾಲೊಡ್ಡಿದರು. ದೇಶದ ವಿವಿಧ ಕಡೆ ವಿದ್ಯಾಭ್ಯಾಸ ನಡೆಸುವ ಅಥವಾ ಉದ್ಯೋಗದಲ್ಲಿರುವ ಈಶಾನ್ಯ ಭಾರತದ ಪ್ರಜೆಗಳಿಗೆ ಆ ಶಕ್ತಿಗಳು ಬೆದರಿಕೆಯೊಡ್ಡಿದ ಪರಿಣಾಮ ಅವರು ಹುಟ್ಟೂರಿಗೆ ಧಾವಿಸಿದರು. ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಮುಂತಾದ ಕಡೆ ಸಂಘದ ಸ್ವಯಂಸೇವಕರು ಮತ್ತು ಅದರಿಂದ ಪ್ರಭಾವಿತವಾದ ಸಂಘಟನೆಗಳ ಸದಸ್ಯರು ಈಶಾನ್ಯದ ಜನರಿಗೆ ಎಲ್ಲ ಸಹಕಾರ ನೀಡಿದರು. ಆದರೆ ಸೆಕ್ಯುಲರ್‌ವಾದಿಗಳೆನ್ನುವ ಜನ ಅಲ್ಯಸಂಖ್ಯಾತರ ಭದ್ರತೆಗೆ ಬೆದರಿಕೆ ಉಂmಗಿದೆ ಎನ್ನುವ ಗದ್ದಲ ಎಬ್ಬಿಸುತ್ತಾ ದೇಶದ ಭದ್ರತೆಗೆ ಎದುರಾದ ಸವಾಲನ್ನು ಅಲಕ್ಷಿಸುತ್ತಿರುವುದು ದುರದೃಷ್ಟಕರ.

೩. ಅಧಿಕಾರದಾಹದ ರಾಜಕೀಯ – ಅಲ್ಪಸಂಖ್ಯಾತರನ್ನು ಹಿಂದುಗಳ ಜತೆಗೆ ರಾಷ್ಟ್ರೀಯ ಜೀವನದ ಮುಖ್ಯವಾಹಿನಿಗೆ ತರುವ ಬದಲು ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಗಳನ್ನು ಅನುಸರಿಸುವಲ್ಲಿ ದೇಶದಲ್ಲಿ ಸ್ಫರ್ಧೆಯೇ ಕಾಣಿಸುತ್ತಿದೆ. ಮುಸ್ಲಿಮರು ಓಟ್‌ಬ್ಯಾಂಕಿಗೆ ಹೊರತಾಗಿ ಬೇರೇನೂ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿರುವ ಕೇಂದ್ರ ಗೃಹಸಚಿವರು ಹಿಂದೂ, ಕೇಸರಿ, ಸಂಘ ಮತ್ತು ಬಿಜೆಪಿಯವರೇ ಭಯೋತ್ಪಾದನೆಗೆ ಕಾರಣ ಎಂದು ಸುಳ್ಳು, ಮಾತ್ಸರ್ಯಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಹಿಂದೂ ವಿರೋಧಿ ಭಾವನೆಯನ್ನು ತೋರಿಸುತ್ತಿದ್ದಾರೆ. ‘ಹಿಂದೂ ಭಯೋತ್ಪಾದನೆ’ಯ ಮಾತನಾಡುವ ಜನರಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಹಿರಂಗವಾಗಿ ತೊಡಗಿರುವ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿಲ್ಲ. ಇದೇ ತುಷ್ಟೀಕರಣದ ನೀತಿಯ ಪರಿಣಾಮವಾಗಿ ವಿಧಾನಸಭೆಯ ಓರ್ವ ಚುನಾಯಿತ ಪ್ರತಿನಿಧಿ ಹಿಂದುಗಳ ವಿರುದ್ಧ ಬಹಿರಂಗವಾಗಿ ಹಿಂಸೆಗೆ ಕರೆ ಕೊಡುತ್ತಾನೆ ಮತ್ತು ಆಡಳಿತ ಯಂತ್ರ ಆತನ ವಿರುದ್ಧ ಕ್ರಮ ಕೈಗೊಳ್ಳಲು ಮೀನ ಮೇಷ ಮಾಡುತ್ತದೆ.

೨೪ ಪರಗಣ ಜಿಲ್ಲೆಯಲ್ಲಿ ದೇವಸ್ಥಾನಗಳು ಮತ್ತು ಹಿಂದೂ ವಸತಿ ಪ್ರದೇಶಗಳ ಮೇಲೆ ಈಚೆಗೆ ನಡೆದ ದಾಳಿಗಳು ಮತ್ತು ಭಾಗ್ಯನಗರ (ಹೈದರಾಬಾದ್)ದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಇಸ್ಲಾಮಿಕ್ ಉಗ್ರಗಾಮಿತ್ವ ಹೆಚ್ಚುತ್ತಿದೆ ಎಂದು ತಿಳಿಯಬಹುದು. ಭಯೋತ್ಪಾದಕ ಅಫ್ಜಲ್ ಗುರುವನ್ನು ನೇಣಿಗೇರಿಸಿದ ಬಳಿಕ ಜಮ್ಮು – ಕಾಶ್ಮೀರದ ಮುಖ್ಯಮಂತ್ರಿ ಮತ್ತು ಇತರ ಕೆಲವು ನಾಯಕರು ನೀಡಿದ ಹೇಳಿಕೆ ಹಾಗೂ ಪ್ರತಿಕ್ರಿಯೆಗಳು ಕಳವಳಕ್ಕೀಡು ಮಾಡುವಂತಿವೆ.

೪. ಸಂಶಯಾಸ್ಪದ ಶಸ್ತ್ರಾಸ್ತ್ರ ವ್ಯಾಪಾರ – ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಕಂಡುಬಂದಿರುವ ವ್ಯಾಪಕ ಭ್ರಷ್ಟಾಚಾರವು ತೀವ್ರ ಕಳವಳ ಮತ್ತು ಬೇಸರಗಳಿಗೆ ಕಾರಣವಾಗಿದೆ. ಹೊಣೆಯನ್ನು ಸೇನೆಯ ಅಧಿಕಾರಿಗಳ ಮೇಲೆ ಹೊರಿಸುವ ಮೂಲಕ ರಕ್ಷಣಾ ಇಲಾಖೆ ಇದರಿಂದ ಪಾರಾಗಬಹುದೆ? ಇದು ದೇಶದ ಹಿತಕ್ಕೆ ಪೂರಕವಾದ ಸಂಗತಿಯಲ್ಲ. ಸೇನೆಯ ಉನ್ನತ ಸ್ಥಾನದಲ್ಲಿರುವವರ ಮೇಲೆ ಸಾಮಾನ್ಯ ಜನತೆಯ ವಿಶ್ವಾಸ ಕುಂದುತ್ತದೆ; ರಕ್ಷಣಾ ಸಚಿವಾಲಯವು ಸಂಶಯಕ್ಕೆ ಗುರಿಯಾಗುತ್ತದೆ. ಇಂತಹ ಕೀಳು ಮಟ್ಟದ ರಾಜಕೀಯ ಮತ್ತು ಭ್ರಷ್ಟ ವ್ಯವಸ್ಥೆಗಳು ದೇಶಕ್ಕೆ ಅತ್ಯಂತ ಮಾರಕವಾಗಿವೆ.

೫. ಮಹಿಳೆಯರ ವಿರುದ್ಧ ದೌರ್ಜನ್ಯ – ದೇಶದಲ್ಲಿ ಮಹಿಳೆಯರ ವಿರುದ್ಧ ಈಚೆಗೆ ನಡೆದ ಹಿಂಸಾತ್ಮಕ ಘಟನೆಗಳಿಂದ ಸಮಾಜ ಬಹಳಷ್ಟು ಘಾಸಿಗೊಂಡಿದೆ. ನಮ್ಮ ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜೀವನ ದುರ್ಬಲವಾಗಿರುವುದೇ ಅದಕ್ಕೆ ಕಾರಣ.

ಆಧುನೀಕರಣದ ಹೆಸರಿನಲ್ಲಿ ನಮ್ಮ ಸಮಾಜದಲ್ಲಿ ತಲೆದೋರಿರುವ ವ್ಯತ್ಯಾಸಗಳಿಂದ ಸಾಮಾಜಿಕ ಜೀವನವನ್ನು ರಕ್ಷಿಸುವುದು ಹೇಗೆ? ಭದ್ರತಾ ವ್ಯವಸ್ಥೆಯ ಮೇಲೆ ಜವಾಬ್ದಾರಿ ಹೊರಿಸುವುದು, ಪೊಲೀಸರು ನಿಗಾ ಇಡುವುದು ಅಥವಾ ಕಾನೂನು – ಸುವ್ಯವಸ್ಥೆಯನ್ನು ಸುಧಾರಿಸುವುದರಿಂದ ಈ ಪರಿಸ್ಥಿತಿ ಬದಲಾಗಬಹುದೆ? ಈ ಸನ್ನಿವೇಶದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳು ಸಮಾಜದಲ್ಲಿನ ತಮ್ಮ ಪಾತ್ರದ ಬಗ್ಗೆ ಚಿಂತಿಸಬೇಕಾಗಿದೆ. ನಿಯಮಬದ್ಧ ಮತ್ತು ನೈತಿಕ ಜೀವನ ವಿಧಾನವನ್ನು ಅನುಸರಿಸುವ ಮೂಲಕ ಈ ಸಮಸ್ಯೆಯನ್ನು ಎದುರಿಸಲು ಸಾಧ್ಯ.

೬. ಫಿನ್ಸ್ ಸಂಘಟಿಸಿದ ‘ಸರ್ಹದ್ ಕೋ ಪ್ರಣಾಮ್’ – ಭಾರತದ ಮೇಲೆ ಚೀನಾ ದಾಳಿ ನಡೆದು (೧೯೬೨) ೫೦ ವರ್ಷಗಳಾದವು. ಆ ಯುದ್ಧದಲ್ಲಿ ಭಾರತದ ಸೇನೆ ಸೋತು ಹೋಯಿತು. ಆ ಘಟನೆಯ ಹಿನ್ನೆಲೆಯಲ್ಲಿ ಸಮಗ್ರ ರಾಷ್ಟ್ರೀಯ ಭದ್ರತಾ ವೇದಿಕೆ (ಈoಡಿum ಜಿoಡಿ Iಟಿಣegಡಿಚಿಣeಜ ಓಚಿಣioಟಿಚಿಟ Seಛಿuಡಿiಣಥಿ -ಫಿನ್ಸ್) ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಹಾಕಿಕೊಂಡಿತು. ರಾಷ್ಟ್ರದ ಯುವಜನರು ಒಮ್ಮೆಯಾದರೂ ದೇಶದ ಗಡಿಯನ್ನು ನೋಡಬೇಕು; ಗಡಿಪ್ರದೇಶದ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು; ರಾಷ್ಟ್ರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ ಸೈನಿಕರೊಂದಿಗೆ ಮಾತನಾಡಬೇಕು ಮತ್ತು ದೇಶದ ಗಡಿಯನ್ನು ರಕ್ಷಿಸುವ ನಿರ್ಧಾರದೊಂದಿಗೆ ಮರಳಬೇಕು – ಎಂಬುದು ‘ಸರ್ಹದ್ ಕೋ ಪ್ರಣಾಮ್’ (ಗಡಿಗೆ ನಮಸ್ಕಾರ) ಕಾರ್ಯಕ್ರಮದ ಹಿಂದಿನ ಚಿಂತನೆಯಾಗಿದೆ. ಫಿನ್ಸ್‌ನ ಸವಿನಯ ವಿನಂತಿಯ ಮೇರೆಗೆ ಸಂಘದ ಸ್ವಯಂಸೇವಕರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದರು.

ಭಾಗವಹಿಸುವವರಿಗೆ ೧೮-೩೫ ವರ್ಷದ ವಯೋಮಾನವನ್ನು ನಿಗದಿಪಡಿಸಲಾಗಿತ್ತು. ದೇಶದ ಎಲ್ಲ ಜಿಲ್ಲೆಗಳ ಪ್ರಾತಿನಿಧ್ಯ ಅದರಲ್ಲಿರಬೇಕೆಂದು ಪ್ರಯತ್ನಿಸಲಾಯಿತು. ಬಹುತೇಕ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ೫,೬೭೯ ಮಂದಿ ಯುವಜನರು ಅದರಲ್ಲಿ ಭಾಗವಹಿಸಿದ್ದರು. ದೇಶದ ೧೫ ರಾಜ್ಯಗಳು ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿವೆ. ಯುವ ಸ್ವಯಂಸೇವಕರು ಎಲ್ಲ ರಾಜ್ಯಗಳ ಗಡಿಗಳಿಗೆ ತೆರಳಿದರು. ಅವರು ತಮ್ಮೊಂದಿಗೆ ತಮ್ಮ ಊರಿನ ಪವಿತ್ರ ಜಲ (ತೀರ್ಥ)ವನ್ನು ಒಯ್ದಿದ್ದರು; ಮರಳುವಾಗ ಗಡಿಭಾಗದ ಮಣ್ಣನ್ನು ತೆಗೆದುಕೊಂಡು ಬಂದರು. ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ‘ಸೀಮಾ ಸುರಕ್ಷಾ ಶೃಂಖಲಾ’ ಎನ್ನುವ ಮಾನವ ಸರಪಳಿಯನ್ನು ರಚಿಸಲಾಯಿತು. ೧,೦೮,೧೦೫ ಮಂದಿ ಸ್ಥಳೀಯ ಸಹೋದರ – ಸಹೋದರಿಯರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ೭,೭೦೦ ಕಾರ್ಯಕರ್ತರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದರು. ಗಡಿಯ ಭದ್ರತೆಗೆ ಸಂಬಂಧಿಸಿ ಯುವಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

೭. ಸ್ವಾಮಿ ವಿವೇಕಾನಂದ ಸಾರ್ಧಶತಿ ಸಮಾರೋಪ (ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ) – ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ ಕಾರ್ಯಕ್ರಮವನ್ನು ಡಿಸೆಂಬರ್ ೨೫, ೨೦೧೨ರಂದು ‘ಸಂಕಲ್ಪ ದಿವಸ್’ ಆಗಿ ಅನೌಪಚಾರಿಕವಾಗಿ ಆರಂಭಿಸಲಾಯಿತು. ಜನ ಸಾಮಾನ್ಯರು ಇದರಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಉತ್ಸಾಹದಾಯಕವಾಗಿದೆ. ಸ್ವಯಂಸೇವಕ ಕಾರ್ಯಕರ್ತರಿಗಾಗಿ ೯,೩೭೦ ಸ್ಥಳಗಳಲ್ಲಿ ಸಂಕಲ್ಪ್ ದಿವಸ್ ಆಚರಿಸಿದ್ದು, ೪,೪೬,೯೬೯ ಪುರುಷರು ಮತ್ತು ೯೦,೭೧೫ ಮಹಿಳೆಯರು ಭಾಗವಹಿಸಿದ್ದರು. ಜನವರಿ ೧೨ರಂದು ಏರ್ಪಡಿಸಿದ ಶೋಭಾ ಯಾತ್ರೆಗಳಲ್ಲಿ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಹಿಂದುಯೇತರರು ಕೂಡ ಭಾಗವಹಿಸಿದ್ದು ಸಾಮಾಜಿಕ ಸದಾಶಯದ ದ್ಯೋತಕವಾಗಿತ್ತು. ೧,೩೭೩ ಕಡೆಗಳಲ್ಲಿ ಅದರ ಅಂಗವಾಗಿ ಮೆರವಣಿಗೆಗಳನ್ನು ನಡೆಸಿದ್ದು ೪೮ ಲಕ್ಷಕ್ಕೂ ಅಧಿಕ ಜನ ಅದರಲ್ಲಿ ಪಾಲ್ಗೊಂಡಿದ್ದರು. ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಯುವಕ-ಯುವತಿಯರಲ್ಲದೆ ಎಲ್ಲ ವಯಸ್ಸಿನ ಜನರು ಭಾಗಿಯಾಗಿದ್ದರು. ೬,೬೯೭ ಊರುಗಳ ೨೬,೫೯೭ ಶಾಲೆಗಳವರು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ೬೪,೧೭,೪೦೧ ವಿದ್ಯಾರ್ಥಿಗಳು, ೭,೨೫,೪೦೦ ಇತರ ನಾಗರಿಕರು ಹೀಗೆ ಒಟ್ಟು ೭೧,೪೩,೮೦೧ ಮಂದಿ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇದೊಂದು ದೊಡ್ಡ ದಾಖಲೆಯಾಗಿದೆ.

ವಿವೇಕಾನಂದರ ೧೫೦ನೇ ಜಯಂತಿಯ ಅಂಗವಾಗಿ ಛತ್ತೀಸ್‌ಗಢದ ಬುಡಕಟ್ಟು ಪ್ರದೇಶದ ಬೋದ್ಲಾ ಗ್ರಾಮದಲ್ಲಿ ‘ವಿಶಾಲ ಹಿಂದೂ ಸಂಗಮ’ವನ್ನು ಏರ್ಪಡಿಸಲಾಗಿತ್ತು. ‘ಮೌನಿ ಅಮಾವಾಸ್ಯೆ’ (ಮಾಘ ಮಾಸದ ಅಮಾವಾಸ್ಯೆ)ಯ ಫೆಬ್ರುವರಿ ೧೦, ೨೦೧೩ರಂದು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ, ಪ.ಪೂ.ಸರಸಂಘಚಾಲಕರು ಹಾಗೂ ಆ ರಾಜ್ಯದ ಮುಖ್ಯಮಂತ್ರಿಯವರ ಉಪಸ್ಥಿತಿಯೊಂದಿಗೆ ಹಿಂದೂ ಸಂಗಮವು ಜರಗಿತು. ೧,೫೦೦ ಗ್ರಾಮಗಳಿಂದ ಬಂದ ೧,೨೫,೦೦೦ ಮಂದಿ ಗ್ರಾಮೀಣ ಜನರು ಅದರಲ್ಲಿ ಪಾಲ್ಗೊಂಡಿದ್ದರು. ಹಿಂದುತ್ವದ ಬಗೆಗಿನ ದೃಢವಾದ ಭಾವನೆ ಮತ್ತು ಎಲ್ಲ ಭಿನ್ನಾಭಿಪ್ರಾಯಗಳನ್ನು ಮೀರಿದ ಸಂಘಟಿತ ಶಕ್ತಿಯ ಭಾವನೆ ಮತ್ತು ಎಲ್ಲ ಭಿನ್ನಾಭಿಪ್ರಾಯಗಳನ್ನು ಮೀರಿದ ಸಂಘಟಿತ ಶಕ್ತಿಯು ನಕ್ಸಲ್‌ವಾದ, ಮತಾಂತರ ಸಾಮಾಜಿಕ ಅಸಮಾನತೆಯಂತಹ ಸಮಸ್ಯೆಗಳಿಗಿರುವ ಏಕೈಕ ಪರಿಹಾರವಾಗಿದೆ; ವಿಶ್ವ ಹಿಂದೂ ಸಂಗಮವು ಆ ಸಂದೇಶವನ್ನು ಜನರಿಗೆ ಯಶಸ್ವಿಯಾಗಿ ಮುಟ್ಟಿಸಿತು.

ಸಾರ್ಧಶತಿ ಸಮಾರೋಪದ ಅಂಗವಾಗಿ ಶ್ರೀಲಂಕಾದಲ್ಲಿ ಕೂಡ ಹಿಂದೂ ಸಂಗಮವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ೧೦ ಸಾವಿರ ಮಂದಿ ಭಾಗವಹಿಸಿದ್ದರು; ಇತರ ಕಾರ್ಯಕ್ರಮಗಳಿಗೆ ಕೂಡ ಅಲ್ಲ ಉತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ಸಂಬಂಧವಾಗಿ ಮುಂದೆ ಜರಗುವ ಕಾರ್ಯಕ್ರಮಗಳಲ್ಲಿ ಕೂಡ ಸಾಮಾನ್ಯ ಜನರು ಇದೇ ರೀತಿ ಭಾಗವಹಿಸಬಹುದೆಂದು ನಾವು ನಿರೀಕ್ಷಿಸುತ್ತೇವೆ. ಈ ಕಾರ್ಯಕ್ರಮಗಳ ಯಶಸ್ಸಿನಿಂದ ತಿಳಿದುಬರುವ ಅಂಶವೆಂದರೆ, ಇವತ್ತಿನ ದಿನಗಳಲ್ಲಿ ೧೫೦ ವರ್ಷಗಳು ದಾಟಿದ ಬಳಿಕವೂ ಸ್ವಾಮಿ ವಿವೇಕಾನಂದರ ಸಂದೇಶ ಅರ್ಥಪೂರ್ಣವಾಗಿಯೇ ಇದೆ. ಸಮಾಜ ತನ್ನ ಬೌದ್ಧಿಕ ಸಾಮರ್ಥ್ಯದ ಗಟ್ಟಿ ತಳಪಾಯದ ಮೇಲೆ ಎದ್ದು ನಿಲ್ಲುವ ದೃಢ ನಿಶ್ಚಯವನ್ನು ಮಾಡಬೇಕು.

೮. ಪ್ರಯಾಗದ ಕುಂಭಮೇಳ – ಪ್ರಯಾಗದ ತ್ರಿವೇಣಿ ಸಂಗಮದ ಪವಿತ್ರ ಭೂಮಿಯಲ್ಲಿ ಜರಗಿದ ಕುಂಭಮೇಳದಲ್ಲಿ ಹಿಂದೂ ಸಮಾಜ ಬಾಂಧವರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ‘ಕೇಂದ್ರೀಯ ಮಾರ್ಗದರ್ಶಕ ಮಂಡಲ’ದ ಒಂದು ಸಭೆ ಜರಗಿತು. ವಿವಿಧ ಪಥ ಮತ್ತು ನಂಬಿಕೆಗಳ ಸಾಧುಗಳು, ಸಂತರು, ಧರ್ಮಾಚಾರ್ಯರು, ಮಹಾಮಂಡಲೇಶ್ವರರು, ಶಂಕರಾಚಾರ್ಯರು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಪೂ.ಸರಸಂಘಚಾಲಕರು ಕೂಡ ಭಾಷಣ ಮಾಡಿದರು. ಹಿಂದೂ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಆಳವಾದ ವಿಶ್ಲೇಷಣೆ ಮತ್ತು ಚರ್ಚೆಗಳು ನಡೆದವು. ಬೃಹತ್ ರಾಮ ಮಂದಿರವನ್ನು ನಿರ್ಮಿಸುವ ನಿರ್ಧಾರವನ್ನು ಮತ್ತೊಮ್ಮೆ ಪ್ರಕಟಿಸಲಾಯಿತು.

ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠವು ಸೆಪ್ಟಂಬರ್ ೩೦, ೨೦೧೦ರಂದು ನೀಡಿದ ತೀರ್ಪಿನ ಪ್ರಕಾರ ಈಗ ರಾಮ ಲಲ್ಲಾ ಮೂರ್ತಿ ಎಲ್ಲಿದೆಯೋ ಅದೇ ಶ್ರೀರಾಮನ ಜನ್ಮಸ್ಥಳ ಎಂಬುದು ಸ್ಪಷ್ಟ. ತೀರ್ಪಿಗೆ ಮುನ್ನ ಮುಸ್ಲಿಂ ಸಮಾಜವು ನೀಡಿದ ಭರವಸೆಗನುಗುಣವಾಗಿ ಆ ಸ್ಥಳವನ್ನು ಹಿಂದುಗಳಿಗೆ ಒಪ್ಪಿಸಬೇಕು; ಆ ಮೂಲಕ ಬೃಹತ್ ದೇವಾಲಯ ನಿರ್ಮಾಣಕ್ಕೆ ಸಹಕರಿಸಬೇಕು. ಆದರೆ ಅಡೆತಡೆಗಳು ಇನ್ನೂ ಪೂರ್ತಿಯಾಗಿ ಪರಿಹಾರವಾಗಿಲ್ಲ ಎನ್ನುವುದು ಹಿಂದೂ ಸಮಾಜದ ಅಭಿಪ್ರಾಯವಾಗಿದೆ. ಮಹಾಜಾಗರಣ (ಬೃಹತ್ ಜಾಗೃತಿ) ಮತ್ತು ಮಹಾ ಅನುಷ್ಠಾನ (ಬೃಹತ್ ಕಾರ್ಯಕ್ರಮ)ಗಳನ್ನು ಕೈಗೊಳ್ಳಬೇಕೆಂದು ಮಾರ್ಗದರ್ಶಕ ಮಂಡಲವು ನಿರ್ಣಯವೊಂದನ್ನು ಅಂಗೀಕರಿಸಿತು. ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ಬಗ್ಗೆ ಹಿಂದೂ ಸಮಾಜ ತನ್ನ ಪೂರ್ಣ ಬೆಂಬಲವನ್ನು ನೀಡಲು ಮುಂದೆ ಬರಬೇಕೆಂದು ಪೂಜನೀಯ ಸಂತರು ಬಯಸಿದ್ದಾರೆ. ಅಂತಹ ಎಚ್ಚೆತ್ತ ಶಕ್ತಿಯಿಂದ ಮಾತ್ರ ರಾಮಮಂದಿರದ ನಿರ್ಮಾಣ ಸಾಧ್ಯವೆಂದು ಸಂತರು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ವರ್ಷವನ್ನು ನಾವು ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿ ವರ್ಷವನ್ನಾಗಿ ಆಚರಿಸುತ್ತಿzವೆ. ಅವರ ಚಿಂತನೆಗಳು ನಮಗೆ ಸ್ಫೂರ್ತಿ ನೀಡಿ, ಶಕ್ತಿ ಮತ್ತು ಶೌರ್ಯಗಳನ್ನು ತುಂಬುತ್ತವೆ. ಆದ್ದರಿಂದ ನಾವು ಅವರ ಚಿಂತನೆಗಳನ್ನು ಕ್ರಮ ಪ್ರಕಾರ ಅಧ್ಯಯನ ಮಾಡಬೇಕು.

ಸ್ವಾಮೀಜಿ ಹೀಗೆ ಹೇಳಿದ್ದಾರೆ : “ನಮ್ಮ ವೈಫಲ್ಯವನ್ನು ನಾವು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದರೆ ಶೇ.೯೯ ಸಂದರ್ಭಗಳಲ್ಲಿ ನಮ್ಮ ಸಂಪನ್ಮೂಲಗಳ ಕಡೆಗೆ ನಾವು ಗಮನ ಕೊಡದಿದ್ದುದೇ ವೈಫಲ್ಯಕ್ಕೆ ಕಾರಣವಾಗಿರುತ್ತದೆ. ಸಾಧನ (ಮಾರ್ಗ)ಗಳ ಬಲ, ಪರಿಶುದ್ಧತೆ ಮತ್ತು ಪರಿಪೂರ್ಣತೆಗೆ ನಾವು ಗಮನಕೊಡಬೇಕು. ಮಾರ್ಗ ಸರಿಯಾಗಿದ್ದರೆ ಗುರಿ ಮುಟ್ಟುವುದು ಖಚಿತ ಎಂಬ ವಿಶ್ವಾಸ ನಮಗೆ ಬೇಕು.”

ನಮ್ಮ ಶಾಖೆಗಳು ಮತ್ತು ಅವುಗಳ ಮೂಲಕ ರೂಪಿತವಾಗುವ ಸ್ವಯಂಸೇವಕರೇ ನಮ್ಮ ಸಾಧನ. ಈ ಸಂಪನ್ಮೂಲವು ಸುಸಜ್ಜಿತವಾದಷ್ಟೂ ಒಂದು ಸಮೃದ್ಧ ರಾಷ್ಟ್ರವಾಗುವ ನಮ್ಮ ಕನಸು ಈಡೇರಲು ಹೆಚ್ಚು ಅನುಕೂಲವಾಗುತ್ತದೆ.

******************

Leave a Reply

Your email address will not be published.

This site uses Akismet to reduce spam. Learn how your comment data is processed.