Sugar Cane field- symbolizing prosperity

ಸಂಕ್ರಾಂತಿ ಬೌದ್ಧಿಕ ಬಿಂದುಗಳು

Sugar Cane field- symbolizing prosperity

ಸಂಕ್ರಾಂತಿ ಹಬ್ಬದ ಹಿನ್ನೆಲೆ:

ಭಾರತೀಯ ಸಮಾಜದಲ್ಲಿ ಪ್ರತಿ ದಿನವೂ ಹಬ್ಬವೇ ! ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದೆ ಮತ್ತು ಪ್ರತೀ ಹಬ್ಬವೂ ಪ್ರಕೃತಿಗೆ ಜೋಡಿಕೊಂಡಿದೆ. ಉದಾಹರಣೆಗೆ ಹಿಂದುಗಳಿಗೆ ಹೊಸ ವರುಷ ಜನವರಿ 1 ಅಲ್ಲ- ಬದಲಾಗಿ ನಮ್ಮ ಪ್ರಕೃತಿಯಲ್ಲಿ ಹೊಸ ಚೈತನ್ಯ-ಚಿಗುರು ತರುವ ಯುಗಾದಿ ಹಬ್ಬ. ನಮ್ಮ ಹೊಸ ವರುಷ ಬರಿಯ ಕ್ಯಾಲೆಂಡರ್ ಬದಲಾಯಿಸುವ ದಿನವಲ್ಲ- ಅದು ಯಗದ ಆದಿ. ಹಿರಿಯರು ನಮ್ಮ ಹಬ್ಬಗಳಿಗೆ ಎಂಥಹಾ ಅರ್ಥಪೂರ್ಣ ಹೆಸರು ಇಟ್ಟಿದ್ದಾರೆ.

ಹಾಗೆಯೇ ಸಂಕ್ರಾಂತಿ (ಸಂಕ್ರಮಣ) = ಸಮ್ಯಕ್ ಕ್ರಾಂತಿ = ಸರಿಯಾದ ದಿಕ್ಕಿನಲ್ಲಿ ಕ್ರಮಣ, ಚಲಿಸುವಿಕೆ

ಕ್ರಾಂತಿ ಶಬ್ದದ ವ್ಯಾಪ್ತಿಯನ್ನು ಕಮ್ಯುನಿಷ್ಟರು ಬರಿಯ ಶಸ್ತ್ರ ಸಹಿತ ಬದಲಾವಣೆ ಎಂಬರ್ಥದಲ್ಲಿ ಬಳಸುತ್ತಾರೆ. ಆದರೆ ಸಂಕ್ರಾಂತಿ ಶಬ್ದದಲ್ಲಿರುವ ಕ್ರಾಂತಿ ಯು ನಮ್ಮ ನಿಸರ್ಗದಲ್ಲಿ , ಸಮಾಜದಲ್ಲಿ ಸಹಜವಾಗಿ ಆಗುವ ಬದಲಾವಣೆಯ ಸಂಕೇತ. ಬದಲಾವಣೆ ಪ್ರಕೃತಿಯ ನಿಯಮ ಮತ್ತು ಕಾಲಕ್ಕೆ ತಕ್ಕ ಹಾಗೆ ವ್ಯಕ್ತಿ, ಸಮಾಜ, ಪದ್ದತಿಗಳು ವಿಕಸಿತವಾಗುತ್ತಿರಬೇಕು. ಇದೇ ಹಿಂದು ಸಂಸ್ಕೃತಿಗೂ ಅನ್ಯ ಸಂಸ್ಕೃತಿಗಳಿಗೂ ಇರುವ ವ್ಯತ್ಯಾಸ.

ಸಂಕ್ರಾಂತಿಯು ನಮಗೆ ಈ ಸಂಗತಿಯನ್ನು ಮತ್ತೆ ಜ್ಞಾಪಿಸುತ್ತದೆ.

ನೈಸರ್ಗಿಕ ಹಿನ್ನೆಲೆ:

–     ಸೌರಮಾನ ಪಂಚಾಗದ ಪ್ರಕಾರ ಸೂರ್ಯನು ಮಕರ ರಾಶಿ ಪ್ರವೇಶಿಸುವ ದಿನ. ಅದಕ್ಕೇ ಇದು ಮಕರ ಸಂಕ್ರಮಣ. ದಕ್ಷಿಣಾಯನ ಮುಗಿದು ಉತ್ತರಾಯಣ ಪ್ರಾರಂಭವಾಗುತ್ತದೆ

–     ಚಳಿ ಕ್ರಮೇಣ ಕಡಿಮೆಯಾಗಿ ಬಿಸಿಲು, ಬೆಳಕು ಹೆಚ್ಚಾಗುತ್ತದೆ.

ಸಾಂಪ್ರದಾಯಿಕ ಹಿನ್ನೆಲೆ :

–     ಸುಗ್ಗಿಯ ಸಂಭ್ರಮ. ರೈತರು ತಮ್ಮ ದನ-ಕರುಗಳನ್ನು ಶುಚಿಗೊಳಿಸಿ ಸಿಂಗಾರಗೊಳಿಸುತ್ತಾರೆ. ಗೋಪೂಜೆ ಮಾಡುತ್ತಾರೆ. ಕಿಚ್ಚು ಹಾಯಿಸುತ್ತಾರೆ. ಸಂಕ್ರಾಂತಿಯ ನಂತರ ವ್ಯವಸಾಯದ ಕೆಲಸ ಚುರುಕುಗೊಳ್ಳುತ್ತದೆ.

–     ಮನೆ ಮನೆಗಳಲ್ಲಿ ಎಳ್ಳು-ಬೆಲ್ಲ(ಕೊಬ್ಬರಿ-ಸಕ್ಕರೆ ಅಚ್ಚು- ಕಬ್ಬು) ಹಂಚಿಕೊಳ್ಳುತ್ತಾರೆ. ಚಳಿಗಾಲವಾದರಿಂದ ನಮ್ಮ ದೇಹದಲ್ಲಿನ ಎಣ್ಣೆಯ/ಜಿಡ್ದಿನ ಅಂಶ ಕಡಿಮೆಯಾಗಿರುತ್ತದೆ. ಎಳ್ಳು-ಕೊಬ್ಬರಿ ಜಿಡ್ಡಿನ್ನು ಒದಗಿಸುತ್ತದೆ. ಆರೋಗ್ಯ ಕಾಪಾಡುತ್ತದೆ.

–     ಸಂಕ್ರಾಂತಿಯನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಬೇರೆ ವಿಧಗಳಲ್ಲಿ ಆಚರಿಸುತ್ತಾರೆ- ಉದಾ: ತಮಿಳುನಾಡು- ಪೊಂಗಲ್, ಮಹಾರಾಷ್ಟ್ರ- ತಿಲ್ ಗುಡ್ (ಎಳ್ಳು-ಬೆಲ್ಲ), ಉತ್ತರ ಭಾರತ-ಖಿಚಡಿ

–     ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು ಈ ಸಂಪ್ರದಾಯ ಆರೋಗ್ಯಪೂರ್ಣ ವ್ಯಕ್ತಿ ಮತ್ತು ತನ್ಮೂಲಕ  ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ.

ಪೌರಾಣಿಕ ಹಿನ್ನೆಲೆ :

–     ಉತ್ತರಾಯಣ ಪುಣ್ಯಕಾಲ- ಭೀಷ್ಮನು ಇಚ್ಚಾಮರಣ ಹೊಂದಿದ ದಿವಸ.

–     ಸಂಕ್ರಮಣದ ಪುಣ್ಯದಿನ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪಹರಣವಾಗುತ್ತದೆಂಬುದು ನಂಬಿಕೆ. ಇದೇ ದಿನಗಳಲ್ಲಿ ಪ್ರಯಾಗದಲ್ಲಿ ಅರ್ಧ-ಕುಂಭಮೇಳ ನಡೆಯುತ್ತಿರುವುದು ನಮಗೆಲ್ಲಾ ತಿಳಿದಿರಬೇಕಲ್ಲವೇ ? ಕೋಟ್ಯಂತರ ಜನರು-ಸಾಧುಗಳು ಅದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಂಘದಲ್ಲಿ ಸಂಕ್ರಾಂತಿ ಏಕೆ ಆಚರಿಸುತ್ತೇವೆ?

– ಡಾ|| ಜೀ ಯವರು ಹಿಂದು ಸಮಾಜದಲ್ಲಿ ಸಾಮರಸ್ಯ-ಸದ್ಭಾವನೆ ತರುವ ವಿಶೇಷ ಹಬ್ಬಗಳನ್ನು ಸಂಘದಲ್ಲಿ ಅಳವಡಿಸಿದರು. ವರ್ಷದುದ್ದಕ್ಕೂ 6 ಉತ್ಸವಗಳನ್ನು ನಿಶ್ಚಯಿಸಿ ತನ್ಮೂಲಕ ಸ್ವಯಂಸೇವಕರು/ ಕಾರ್ಯಕರ್ತರು ಇಡೀ ವರ್ಷ Pಯಾಶೀಲರಾಗಿರಬೇಕೆಂದು ಯೋಜಿಸಿದರು.

– ಸಂಕ್ರಾಂತಿಯಲ್ಲಿ ಮೇಲು-ಕೀಳು ಭಾವನೆಯಿಲ್ಲದೆಯೇ ನಾವು ಪರಸ್ಪರ ಎಳ್ಳು-ಬೆಲ್ಲ ಹಂಚುತ್ತೇವೆ. ಸ್ವಂiiಂಸೇವಕರು, ಕಾರ್ಯಕರ್ತರು ಸಮಾಜದಲ್ಲಿ ಕೆಲಸಮಾಡುವಾಗ ಎಳ್ಳಿನ ಜಿಗುಟುತನವನ್ನೂ, ಬೆಲ್ಲದ ಮಧುರತೆಯನ್ನೂ ನಮ್ಮ ಜೀವನದಲ್ಲಿ/ಸಂಘಕಾರ್ಯದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಅಪೇಕ್ಷೆ.

– ಸಂಕ್ರಾಂತಿಯು ಸೂರ್ಯನ ಪ್ರಾಮುಖ್ಯತೆಯನ್ನು, ನಿರಂತರತೆಯನ್ನು ನಮಗೆ ಜ್ಞಾಪಿಸುತ್ತದೆ. ಸೂರ್ಯನು ಇಡೀ ವರುಷ ತನ್ನ ಬೆಳಕಿನಿಂದ ಜಗತ್ತಿಗೆ ಜೀವ ಕೊಡುತ್ತಾನೆ. ಸೂರ್ಯನಿಲ್ಲದಿದ್ದರೆ ಪ್ರಪಂಚದಲ್ಲಿ ಸಸ್ಯ-ಪ್ರಾಣಿಗಳು ಇರುತ್ತಲೇ ಇಲ್ಲ. ಸೂರ್ಯ ಒಂದು ದಿನ ಕಾಣದಿದ್ದರೆ ಜೀವ ಜಂತುಗಳಿಗೆ ಏನಾಗುತ್ತದೆ ಎಂಬುದನ್ನು ನಾವು ಊಹಿಸುವುದೇ ಕಷ್ಟ. ಹೀಗೆ ಸ್ವಯಂಸೇವಕರು/ ಕಾರ್ಯಕರ್ತರು ಸೂರ್ಯನಂತೆ ನಿರಂತರತೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಯಾವುದೋ ದೊಡ್ಡ ಕಾರ್ಯಕ್ರಮಕ್ಕೆ (ಉದಾ- ಸಮಾಜೋತ್ಸವ) ಶ್ರಮಹಾಕಿ ಬರಿಯ ಸಾಂದರ್ಭಿಕ ಕಾರ್ಯಕರ್ತರಾಗದೆಯೇ ನಂತರವೂ ಶಕ್ತಿ, ಸಮಯ, ಪ್ರತಿಭೆಗಳನ್ನು ನಿರಂತರವಾಗಿ ಸಮಾಜಕ್ಕೆ ಕೊಡಬೇಕು.

ಸಂಕ್ರಾಂತಿಯ ಪ್ರಸ್ತುತತೆ

–     ಇಂದಿನಿಂದ ಬೆಳಕು ಹೆಚ್ಚುವುದು, ಕತ್ತಲು ಕಡಿಮೆಯಾಗುವುದು. ಇದರ ವಿಶೇಷತೆ ಏನು? ನಮ್ಮ ಜೀವನಗಳಲ್ಲಿ ಅರಿವು ಹೆಚ್ಚಾಗಬೇಕು ಮತ್ತು ಅಜ್ಞಾನ ದೂರವಾಗಬೇಕು. (’ತಮಸೋಮಾ ಜ್ಞ್ಯೋತಿರ್ಗಮಯ’)

ಯಾವುದರ ಅರಿವು ? ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ ಅರಿವು, ನಮ್ಮ ಸಮಾಜದ ಒಳಿತು-ಕೆಡಕುಗಳ, ಸಾಧನೆ-ಸವಾಲುಗಳ ಅರಿವು ನಮ್ಮಲ್ಲಿ ಮೂಡಬೇಕು.

–     ಹೆಚ್ಚಿದ ಜಾಗತಿಕ ಮತಾಂತರ. ಸಾರ್ವಜನಿಕರ ಪ್ರತಿಭಟನೆ. ಆಯ್ದ ಅನಧಿಕೃತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ. ಅಮಾಯಕ ಹಿಂದೂಗಳ ಮೇಲೆರಗಿದ ಶಾಂತಿ ಧೂತನ ಅನುಯಾಯಿಗಳು.

–     ಭಯೋತ್ಪಾದಕತೆ ( ಬೆಂಗಳೂರು, ಜೈಪುರ, ಅಹಮದಾಬಾದ್ ಮುಂತಾದೆಡೆ ಬಾಂಬ್ ಸಿಡಿತ. ಮುಂಬಯಿಯಲ್ಲಿ ಭಯೋತ್ಪಾದಕರ ಅಟ್ಟಹಾಸ, ಹಲವು ಅಮಾಯಕರ ಕಗ್ಗೊಲೆ, ಪಾಕಿಸ್ಥಾನದ ಕೈವಾಡ. ಭಯೋತ್ಪಾದನೆ ತಡೆಯುವಲ್ಲಿ ಪಾಕಿಸ್ಥಾನದ ನಾಟಕ ಬಯಲು).ಭಯೋತ್ಕಾದಕತೆಯ ವಿರುಧ್ದ ಸಡಿದೆದ್ದ ಸಮಾಜ. ಜಾಗೃತ ಸಮಾಜದ ಅವಶ್ಯಕತೆ.

–     ರಾಜ್ಯ/ ರಾಷ್ಟ್ರದಲ್ಲಿ ನಕ್ಸಲೀಯರ ಮುಂದುವರೆದ ಅಟ್ಟಹಾಸ

–     ಸಾಂಸ್ಕೃತಿಕ/ವೈಚಾರಿಕ/ಆರ್ಥಿಕ ಆಕ್ರಮಣ

–     ಅಮೇರಿಕದ ಅರ್ಥಿಕತೆಯನ್ನೇ ನಂಬಿದ್ದಉದ್ಯಮಗಳ ಮೇಲೆ ಆರ್ಥಿಕ ಮುಗ್ಗಟ್ಟಿನ ಕರಾಳ ಛಾಯೆ. ಮುಗ್ಗರಿಸಿದ ಜಾಗತೀಕರಣ. ಸಮಾನ್ಯ ಜನಜೀವನ ಹಾಳುಗೆಡವಿದ ಕಂಪನಿಗಳೂ ಇಂದು ದಿವಾಳಿ ಎದ್ದಿವೆ. ಕೊಳ್ಳುಬಾಕ ಸಂಸ್ಕೃತಿಯ ಅವಸಾನದ ಆರಂಭ. ಸ್ವದೇಶೀ ಜೀವನ ಶೈಲಿ ಮತ್ತಷ್ಟು ಪ್ರಸ್ತುತ.

ಕತ್ತಲೆಯ ನಂತರ ಬೆಳಕಿನಂತೆ, ಇವೆಲ್ಲದರ ನಡುವೆಯೂ ಬೆಳ್ಳಿರೇಖೆಯ ಹಾಗೆ ಹಿಂದು ಸಮಾಜ ಮೇಲಿದ್ದಿದೆ. ಅನೇಕ ಸಾಧನೆಗಳನ್ನು ನಾವು ಮಾಡಿದ್ದೇವೆ.

–     ಹಿಂದೂ ಸಂತರ ಹತ್ಯೇ ವಿರೋಧಿಸಿ ಒರಿಸ್ಸಾದ ಹಿಂದು ಸಮಾಜದ ವ್ಯಾಪಕ ಹೋರಾಟ. ಒಡೆದ ಸಹನೆಯ ಕಟ್ಟೆ. ದೇಶಾದ್ಯಂತ ಇದಕ್ಕೆ ನಡೆದ ಪ್ರತಿಭಟನೆ

–     ನಿರಂತರ ಹಿಂದೂಗಳ ಮೇಲೆ ದುರಾಕ್ರಮಣ ನಡೆದ ನಾಡು ಕಾಶ್ಮೀರದಲ್ಲಿ ಹಿಂದೂ ಹೋರಾಟಕ್ಕೆ ಜಯ – ಅಮರನಾಥ ಯಾತ್ರಿಗಳ ಆಶ್ರಯತಾಣ ಕಲ್ಪಿಸಲು ಭೂಮಿಗಾಗಿ ಹೋರಾಟ., ಹೋರಾಟಕ್ಕೆ ಇಡೀ ಸರ್ಕಾರ ನತಮಸ್ತಕ

–     ಸ್ವದೇಶೀ ತಂತ್ರಜ್ಞಾನ ಬಳಸಿ ಪ್ರತಿಷ್ಠಿತ ಚಂದ್ರಯಾನ ಸಫಲ. ಬೇರೆ ಯಾವುದೇ ದೇಶಕ್ಕಿಂತ ನಮ್ಮ ತಂತ್ರಜ್ಞಾನದಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡಿದ್ದೇವೆ ಇತ್ಯಾದಿ ಇತ್ಯಾದಿ

ದುರದೃಷ್ಟದಿಂದ ಇಂದು ನಮಗೆ ಸಮಾಜದಲ್ಲಿನ ಸವಾಲುಗಳನ್ನು ತಿಳಿಸುವ ಸಾಧನಗಳಿಲ್ಲ. ಪತ್ರಿಕಾ / ಎಲೆಕ್ತ್ರಾನಿಕ್ ಮಾಧ್ಯಮಗಳಲ್ಲಿ ಸಮರ್ಥವಾಗಿ ಈ ವಿಷಯಗಳನ್ನು ಬಿಂಬಿಸುತ್ತಿಲ್ಲ. ಈ ವಿಷಯ ತಿಳಿಯುವ ಕೆಲವೇ ಸಾಧನಗಳಲ್ಲಿ ಸಂಘವೂ ಒಂದು. ( ’ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ’ )

ಸಂಘದ 86 ವರ್ಷಗಳ ಸಾಧನೆಯೆಂದರೆ-

೧) ಹಿಂದುಗಳಲ್ಲಿ ಆತ್ಮಾಭಿಮಾನ ಮೂಡಿಸುವುದು.

೨) ವ್ಯಕ್ತಿ ಕೇವಲ ತನ್ನ ಬಗ್ಗೆ, ತನ್ನ ಕುಟುಂಬದ ಬಗ್ಗೆ ಗಮನ ಕೇಂದ್ರೀಕರಿಸದೇ, ಸಮಾಜದ ಬಗ್ಗೆ ಚಿಂತಿಸುವಂತೆ ಮಾಡುವುದು,

೩) ಕೇವಲ ಚಿಂತನೆಯಷ್ತೇ ಅಲ್ಲ, ಸಮಾಜದಲ್ಲಿನ ಓರೆ-ಕೋರೆಗಳನ್ನು ತಿದ್ದುವ ಕೆಲಸ ಮಾಡುವಂತೆ ಸಾಮಾನ್ಯ ಜನರನ್ನು ಪ್ರೇರೇಪಿಸುವುದು.

೪) ತನ್ಮೂಲಕ ನಮ್ಮ ಸಮಾಜವನ್ನು ಸದೃಢಗೊಳಿಸುವುದು.

೫) ಈ ಎಲ್ಲ ಚಟುವಟಿಕೆಗಳಿಂದ ರಾಷ್ಟ್ರವನ್ನು ಪರಮ ವೈಭವ ಸ್ಥಿತಿಗೆ ಕೊಂಡೌಯ್ಯುವುದು.

ಉಪಸಂಹಾರ:

ನಮ್ಮ ಓಡಾಟದಲ್ಲಿ ಅನುಭವಕ್ಕೆ ಅನೇಕ ಸಂಗತಿಗಳು ಬಂದಿವೆ. ಉದಾ: ಸೇವಾಬಸ್ತಿಗಳಲ್ಲಿ ಭಯಾನಕವಾದ ಮತಾಂತರದ ಸವಾಲು, ಪರಿಸರ ನೈರ್ಮಲ್ಯದ ಕೊರತೆ, ಸಂಸ್ಕಾರಗಳ ಕೊರತೆ, ಇತ್ಯಾದಿ. ಇದರ ಬಗ್ಗೆ ನಾವೆಲ್ಲಾ ಸ್ವಯಂಸೇವಕರು ಏನಾದರೂ ಮಾಡಬಹುದೇ ? ಸಮಾಜ ವಿರೋಧಿಗಳು ನಮಗಿಂತಾ ವೇಗವಾಗಿದ್ದಾರೆ. ನಾವು ಈಗಲಾದರೂ ಎಚ್ಚೆತ್ತುಕೊಲ್ಲದಿದ್ದರೆ, ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.

ಹಾಗೆಯೇ ಸಮಾಜದಿಂದ ಉತ್ತಮ ಸ್ಪಂದನ/ ಪ್ರತಿಕ್ರಿಯೆಯೂ ಬಂದಿದೆ. ಸಂಘದ ಬಗ್ಗೆ /ಸ್ವಯಂಸೇವಕರ ಬಗ್ಗೆ ಅನೇಕ ಅಪೇಕ್ಷೆಗಳೂ (exಠಿeಛಿಣಚಿಣioಟಿs) ನಮಗೆ ಕೇಳಿಬಂದಿವೆ. ಉದಾ- ಬರುವ ದಿನಗಳಲ್ಲಿ ಸೇವಾಬಸ್ತಿಗಳಲ್ಲಿ ನಾವು ಸಾಯಂ ಶಾಖೆ ಪ್ರಾರಂಭಿಸಬಹುದೇ? ಏನಾದರೂ ಪ್ರಕಲ್ಪಗಳನ್ನು ತೆಗೆದುಕೊಳ್ಳಬಹುದೇ? ಭಾರತಮಾತಾ ಪೂಜನಗಳನ್ನು ಮಾಡಬಹುದೇ? ಬಾಲ ಗೋಕುಲ ನಡೆಸಬಹುದೇ? ಕಾಲೇಜು ವಿದ್ಯಾರ್ಥಿಗಳನ್ನು ಕನಿಷ್ಟ ವಾರಕ್ಕೊಮ್ಮೆಯಾದರೂ ಸೇರಿಸಬಹುದೇ? ಅವರಿಗೆ ಸೇವಾಬಸ್ತಿಗಳಲ್ಲಿ ಅಪೇಕ್ಷೆಯಿರುವ ಏನಾದರೂ ಕೆಲಸಮಾಡಲು ಹೇಳಬಹುದೇ? ನಮ್ಮ ರಸ್ತೆಯ/ ಬಡಾವಣೆಯಲ್ಲಿರುವ ಪ್ರತಿಯೊಂದು ಮನೆಯ ಸಂಪರ್ಕ ಇಟ್ಟುಕೊಳ್ಳಬಹುದೇ ? ತನ್ಮೂಲಕ ಬಡಾವಣೆಯ ಎಲ್ಲ ಆಗು-ಹೋಗುಗಳ ಬಗ್ಗೆ ಗಮನ ಕೇಂದ್ರೀಕರಿಸಬಹುದೇ ?

ನಮ್ಮ ಕಾರ್ಯ/ಓಡಾಟ/ಚಟುವಟಿಗೆ ಕೇವಲ ಕಾರ್ಯಕ್ರಮಕ್ಕಾಗಿ ಅಲ್ಲದೇ ನಿರಂತರವಾಗಿ ನಡೆದರೆ ನಮ್ಮ ಕ್ಷಮತೆ, ಶಾಖೆಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಪೂ.ಗುರೂಜಿ ಜನ್ಮ ಶತಾಬ್ದಿ ವರ್ಷದಲ್ಲಿ ಎಲ್ಲಾ ವಸತಿಗಳೂ ಕಾರ್ಯಯುಕ್ತವಾಗಬೇಕೆಂಬುದು ನಮ್ಮ ಸಂಕಲ್ಪವಾಗಿತ್ತು. ಸಂಕ್ರಾಂತಿಯ ಸಂದೇಶವೆಂದರೆ ನಾವೆಲ್ಲರೂ ಸೂರ್ಯನಂತೆ ಸಕ್ರಿಯತೆ ಮತ್ತು ನಿರಂತರತೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವೆಲ್ಲಾ ಸ್ವಯಂಸೇವಕರೂ/ ಕಾರ್ಯಕರ್ತರೂ ನಿರಂತರವಾಗಿ ಸಂಘಕಾರ್ಯದಲ್ಲಿ ತೊಡಗೋಣ, ಸಮಾಜದ ಒಳಗಿನ-ಹೊರಗಿನ ಸವಾಲುಗಳನ್ನು ಸಶಕ್ತವಾಗಿ ಎದುರಿಸಲು ಸಜ್ಜಾಗೋಣ ಮತ್ತು ಈ ಸಂಕಲ್ಪವನ್ನು ಸಂಕ್ರಾಂತಿಯ ಶುಭಸಂದರ್ಭದಲ್ಲಿ ಮಾಡೋಣ, ಸದಾ ಕಾರ್ಯಪ್ರವೃತ್ತರಾಗೋಣ.

*-*-*-*

Leave a Reply

Your email address will not be published.

This site uses Akismet to reduce spam. Learn how your comment data is processed.