The Kenjaru Gorund (Photo taken 3 days ago)

Please Note: RSS Sarasanghachalak Mohan Bhagwat’s speech will be webcasted live in www.samvada.org from Mangalore Vibhag Maha Sanghik venue on February 3, Sunday at 4.30pm onwards.

ರಾಷ್ಟ್ರೀಯ ಸ್ವಯಂಸೇವಕ ಸಂಘ

ಸಂಘನಿಕೇತನ, ಮಣ್ಣಗುಡ್ಡೆ, ಪ್ರತಾಪನಗರ, ಮಂಗಳೂರು

ದಿನಾಂಕ : ೧-೨-೨೦೧೩

ಪತ್ರಿಕಾ ಪ್ರಕಟಣೆ

The Kenjaru Gorund (Photo taken 3 days ago)
The Kenjaru Gorund (Photo taken 3 days ago)

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಫೆಬ್ರವರಿ ೩ರ ಸಾಂಘಿಕ್ನ ಸರ್ವಸಿದ್ಧತೆಗಳು ಪೂರ್ಣತೆಯ ಹಂತಕ್ಕೆ ಬಂದಿದ್ದು, ಐತಿಹಾಸಿಕ ಸಂದರ್ಭಕ್ಕೆ ಮಂಗಳೂರು ಹೊರವಲಯದ ಕೆಂಜಾರು ಮೈದಾನ

ಸಾಕ್ಷಿಯಾಗಲಿದೆ. ಒಟ್ಟಾರೆ 65ಎಕರೆ ಪ್ರದೇಶದಲ್ಲಿ ಈ ಸಾಂಘಿಕ್ ಸಮಾವೇಶಗೊಳ್ಳಲಿದೆ. ೨೦ x ೫೦ ಅಡಿ ಉದ್ದಗಲದ ಕೇಂದ್ರೀಯ ವೇದಿಕೆ, ಅಕ್ಕಪಕ್ಕದಲ್ಲಿ 14×50 ಅಡಿಯ ಮತ್ತೆರಡು ವೇದಿಕೆಗಳು ಸಜ್ಜುಗೊಂಡಿವೆ. 20×50 ಅಡಿಯ ಮತ್ತೆರಡು ನಿರ್ಮಾಣಗೊಳ್ಳುತ್ತಲಿದ್ದು ಸಂಘಟಿತ ಹಿಂದು ಸಮಾಜದ ಆಶೋತ್ತರದ ಸಂದೇಶ ಸಾರಲಿದೆ. ಸಾಂಘಿಕ್‌ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ನಿರ್ದಿಷ್ಟ ಸ್ಥಳಾವಕಾಶವಿದ್ದು ಅದಕ್ಕೆ ಬೇಕಾದಂತೆ 250ಕ್ಕೂ ಹೆಚ್ಚು ಕಾರ‍್ಯಕರ್ತರು ಕಳೆದ 3 ದಿನಗಳಿಂದ ಮಾರ್ಕಿಂಗ್ ಕಾರ‍್ಯದಲ್ಲಿ ತೊಡಗಿದ್ದಾರೆ. ಮೈದಾನದ ಇಕ್ಕೆಲಗಳಲ್ಲಿ 20 ಸಾವಿರದಷ್ಟು  ಆಸನ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಗುವುದು.

ಭಗವಾಧ್ವಜವನ್ನು ಮುಡಿಗೇರಿಸಿಕೊಳ್ಳಲು ೭೮ ಅಡಿ ಎತ್ತರದ ಧ್ವಜಸ್ತಂಭ ಸಿದ್ಧಗೊಂಡಿದೆ. ಕೇಂದ್ರೀಯ ವೇದಿಕೆಯಲ್ಲಿ ರಾ. ಸ್ವ. ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್‌ಜೀ ಭಾಗವತ್, ಸರಕಾರ್ಯವಾಹರಾದ ಶ್ರೀ ಸುರೇಶ್ ಜೋಷಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾದ ಮೈಸೂರಿನ ಮ. ವೆಂಕಟರಾಮು, ಮಂಗಳೂರು ವಿಭಾಗ ಸಂಘಚಾಲಕರಾದ ಡಾ| ವಾಮನ ಶೆಣೈ ಆಸೀನರಾಗಲಿದ್ದಾರೆ. ಇಕ್ಕೆಲ ವೇದಿಕೆಯಲ್ಲಿ ಸಂಘದ ಹಿರಿಯ ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.

ಬೈಂದೂರಿನ ತುದಿಯಿಂದ ಕುಶಾಲನಗರದವರೆಗೆ ಹರಡಿಕೊಂಡಿರುವ ಮಂಗಳೂರು ವಿಭಾಗದ  1152ಗ್ರಾಮಗಳಲ್ಲಿ ಫೆ. 3 ರ ಸೂರ್ಯೋದಯ ಹೊಸ ಸಂಚಲನ ಮೂಡಿಸಲಿದೆ. ಸ್ವಪ್ರಯತ್ನದ ಸಿದ್ಧತೆಯೊಂದಿಗೆ ಎಲ್ಲ ಗ್ರಾಮಗಳಿಂದ ಸಾವಿರಾರು ಸ್ವಯಂಸೇವಕರು ಮಂಗಳೂರಿನತ್ತ ಹರಿದು ಬರಲಿದ್ದಾರೆ. ೯ ಕಡೆಗಳಲ್ಲಿ ಸಮಾಜದ ಸಹಯೋಗದಲ್ಲಿ ಭೋಜನ ಕೇಂದ್ರಗಳನ್ನು ತೆರೆಯಲಾಗಿದೆ. ೬ ವಾಹನ ನಿಲುಗಡೆ ಕೇಂದ್ರಗಳನ್ನು ರೂಪಿಸಲಾಗಿದೆ. ಯಾವ ತಾಲೂಕಿನವರು ಯಾವ ಮಾರ್ಗದಲ್ಲಿ ಕೆಂಜಾರು ಮೈದಾನ ತಲುಪಬೇಕು ಎಂಬುದನ್ನು ನೀಲಿನಕ್ಷೆ ಸಿದ್ಧಪಡಿಸಲಾಗಿದೆ.

ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಸಮಾವೇಶಗೊಳ್ಳುತ್ತಿರುವ ಈ ಸಾಂಘಿಕ್‌ಗೆ ಎಲ್ಲ ಗ್ರಾಮಗಳಿಂದ ಹಿಂದು ಸಮಾಜ ಜಾತಿ-ವರ್ಗಗಳ ಬೇಧ ಮರೆತು ಪಾಲ್ಗೊಳ್ಳುತ್ತಿದೆ. ಯಾವುದೇ ಕರಪತ್ರ, ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಇತ್ಯಾದಿ ಮುದ್ರಣ ಸಾಮಗ್ರಿಗಳನ್ನು ಬಳಸದೆ ನೇರ ಮನೆಯಿಂದ ಮನೆಗೆ, ಮನದಿಂದ ಮನಕ್ಕೆ ಒಯ್ದ ಸಂದೇಶದೊಂದಿಗೆ ಸಾಂಘಿಕ್ ರೂಪಗೊಳ್ಳುತ್ತಿದೆ. ಘೋಷ್ ಪ್ರದರ್ಶನ, ಶಾರೀರಿಕ ಪ್ರದರ್ಶನ, ಸ್ವಯಂಸೇವಕರಿಂದ ಸಾಂಘಿಕ್ ಗೀತೆಯ ನಂತರ ಸರಸಂಘಚಾಲರಾದ ಶ್ರೀ ಮೋಹನ್‌ಜೀ ಭಾಗವತ್ ಮಾತನಾಡಲಿದ್ದಾರೆ.

ನಗರ-ಹಳ್ಳಿಗಳಲ್ಲಿನ ಸಾಮಾನ್ಯ ಜನರ ಅಸಾಮಾನ್ಯ ಸಂಘಟಿತ ಪ್ರಯತ್ನವೆನಿಸಿದ ಈ ಸಾಂಘಿಕ್ಗೆ ಮಾಧ್ಯಮದ ಸಹಕಾರ, ಸಹಯೋಗವನ್ನು ಸಂಘ ಬಯಸುತ್ತದೆ.

ವಂದನೆಗಳೊಡನೆ

ಪ್ರಕಾಶ ಪಿ. ಎಸ್.

(ವಿಭಾಗ ಕಾರ್ಯವಾಹ)

ಸಂಪರ್ಕ ದೂರವಾಣಿ : 9480582027 /988061824/ 9742670341

Leave a Reply

Your email address will not be published.

This site uses Akismet to reduce spam. Learn how your comment data is processed.