Anwar Manippady - DVS - Jayadevji - Indresh Kumar

Bangalore Aug 24: A book on cattle protection in kannada entitled “Gou Sampattu mattu Rashtreeya Arthikathe”by Anwar Manippady Senior Muslim leader and Chairman of Minority commission Govt of Karnataka, was released in Bangalore. Indresh Kumar, Senior RSS functionary  along with Mai Cha Jayadev ji, Senior RSS Pracharak, D V Sadananda Gouda, Chief Minister of Karnataka, released the book at Bharatiya Vidya Bhavan Hall of Race Course road Bangalore.

Author Anwar Manippady announced that the money obtained by selling this book will be donated to Seva Bharati activities in Karnataka.

(Report in Kannada, is given below)

Bangalore:ಗೋಹತ್ಯೆ ನಿಷೇಧ ಕಾಯ್ದೆಗೆ ರಾಷ್ಟ್ರಪತಿ ಇನ್ನೂ ಅಂಕಿತ ಹಾಕದೇ ಇರುವುದು ದುರ್ದೈವದ ಸಂಗತಿ ಎಂದು ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ವಿಷಾದ ವ್ಯಕ್ತಪಡಿಸಿದರು. ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಗೋ ಸಂಪತ್ತು ಮತ್ತು ರಾಷ್ಟ್ರೀಯ ಆರ್ಥಿಕತೆ  ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

Anwar Manippady - DVS - Jayadevji - Indresh Kumar

ರಾಜ್ಯ ಸರ್ಕಾರವು ಗೋ ಹತ್ಯೆ  ನಿಷೇಧ ಕಾಯ್ದೆ ಜಾರಿಗೆ ಒಪ್ಪ್ಪಿಗೆ ಸೂಚಿಸಿ ರಾಷ್ಟ್ರಪತಿ ಸಹಿಗೆ ಕಳುಹಿಸಿ ತಿಂಗಳುಗಳೇ ಉರುಳಿದರೂ ರಾಷ್ಟ್ರಪತಿ ಅವರು ಅಂಕಿತ ಹಾಕದೆ ವಿಳಂಬ ಮಾಡುತ್ತಿದೆ. ಇದರಿಂದ ತಮಗೆ ಬೇಸರ ತಂದಿದೆ ಎಂದು ಅಸಮದಾನ ವ್ಯಕ್ತಪಡಿಸಿದರು. ಕಳೆದ ೬೦ ವರ್ಷಗಳ ಕಾಲಾವಧಿಯಲ್ಲಿ ಯಾವ ಸರ್ಕಾರವೂ ಜಾರಿಗೆ ತರದಂತಹ ಗೋಹತ್ಯೆ ಮಸೂದೆ ಜಾರಿಗೆ ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿ ಕೇಂದ್ರದ ಸಹಿಗೆ ಕಳುಹಿಸಿದೆ. ಆದರೆ, ರಾಷ್ಟ್ರಪತಿ ಅವರು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಶೀಘ್ರವೇ ಸಹಿ ಹಾಕಬೇಕು ಎಂದು ಅವರು ಒತ್ತಾಯಿಸಿದರು. ಗೋ ಮೂತ್ರ ಸಂಶೋಧನೆಗೆ ಸರ್ಕಾರ ಇನ್ನಷ್ಟು ಸಹಕಾರವನ್ನು ನೀಡಲಿದೆ ಎಂದ ಅವರು, ರಾಷ್ಟ್ರೀಯ ಸಂಪತ್ತು ಆದ ಗೋವನ್ನು ಉಳಿಸಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮೈ. ಚ ಜಯದೇವ್ ಮಾತನಾಡಿ, ತಿಲಕ ಹಾಗೂ ಇತರೆ ಸಂಸ್ಕಾರಗಳನ್ನು ಅನುಸರಿಸದವನು ನಿಜವಾದ ಹಿಂದೂ ಅಲ್ಲ. ಅಲ್ಲದೆ, ಗೋವನ್ನು ಸಂರಕ್ಷಿಸುವವನೇ ನಿಜವಾದ ಹಿಂದೂ ಎಂದು ಮಹಾತ್ಮ ಗಾಂದೀಜಿ ಹೇಳಿರುವ ಮಾತು ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ ಎಂದರು. ಮನುಷ್ಯನಿಗೆ ಅಜೀವ ಪರ್ಯಾಂತ ಹಾಲು ಹಾಗೂ ಇತರೆ ಕಾರ್ಯಗಳಿಗೆ ಉಪಯೋಗಕಾರಿ ಪ್ರಾಣಿ ಗೋವು. ಹಾಗಾಗಿ ಗೋವನ್ನು ಪೂಜನೀಯ ಸ್ಥಾನದಲ್ಲಿ ನೋಡಬೇಕಿದೆ ಎಂದು ಅವರು ಹೇಳಿದರು. ಯಾವುದು ಸಹಕಾರಿಯಾಗಿರುತ್ತದೋ ಅದನ್ನು ನಾವು ಮಾತಾ ಸ್ವರೂಪಿ ರೂಪದಲ್ಲಿ ಕಾಣುತ್ತೇವೆ. ಅದೇರೀತಿ ಗೋವು ಕೂಡ ಮನುಷ್ಯನಿಗೆ ಅನೇಕ ರೀತಿಯ ಪ್ರಯೋಜನಕಾರಿ ಯಾಗಿರುವುದರಿಂದ ಅದನ್ನು  ಮಾತೆಯ ಸ್ವರೂಪ ಎಂದರು. ಗೋ ಹತ್ಯೆಗೆ ಹೆಚ್ಚು ಕುಮ್ಮಕ್ಕು ನೀಡಿದವರೇ ಬ್ರಿಟೀಷರು. ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಈ ತಂತ್ರ ಮಾಡಿದರು. ಆದರೆ, ಹೈದರಾಲಿ, ಗೋ ಹತ್ಯೆ ಮಾಡುವವರ ಕೈಗಳನ್ನು ಕತ್ತರಿಸುವ ನೀತಿಯನ್ನು ಜಾರಿಗೆ ತಂದು ಗೋ ಸಂರಕ್ಷಣೆಗೆ ಒತ್ತು ನೀಡಿದರು ಎಂದರು. 

ರಾಷ್ಟ್ರೀಯ ಸ್ವಯ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಮಾತನಾಡಿ, ರಾಷ್ಟ್ರದಲ್ಲಿ ಹಲವು ಭಾಷೆಗಳು ಇದ್ದರೂ ಸಂಸ್ಕೃತಿ ಒಂದೇ ಎಂದು ಅವರು ಹೇಳಿದರು. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ವಿವಿಧ ಭಾಷೆಗಳಿವೆ. ಆದರೆ, ಎಲ್ಲರೂ ನಮ್ಮ ಹಿಂದೂ ಸಂಸ್ಕೃತಿಯನ್ನು ಆಆಚರಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚು ಮುಸಲ್ಮಾನರು ಇದ್ದರೂ ಗೋ ಹತ್ಯೆ ಮಾತ್ರ ತೀರಾ ವಿರಳ ಎಂದು ಹರ್ಷ ವ್ಯಕ್ತಪಡಿಸಿದರು.

ತಾಯಿಯ ನಂತರದ ಸ್ಥಾನವನ್ನು ಗೋವಿಗೆ ನೀಡಿದ್ದೇವೆ. 200 ವಿವಿಧ ಔಷಧಗಳಿಗೆ ಗೋ ಮೂತ್ರ ಹಾಗೂ ಗೋ ಮಲ ಹೆಚ್ಚು ಉಪಯೋಗಕಾರಿಯಾಗಿದೆ ಎಂದರು. ರಾಷ್ಟ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಶ್ರೀಮಂತರು, ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೇ ಹೊರತು ಸಾಮಾನ್ಯ ಜನತೆ ಅಲ್ಲ ಎಂದರು. ಇದೇವೇಳೆ ಮುಖ್ಯಮಂತ್ರಿ ಸದಾನಂದ ಗೌಡ ಗೋ ಸಂಪತ್ತು ಮತ್ತು ರಾಷ್ಟ್ರೀಯ ಆರ್ಥಿಕತೆ ಎಂಬ ಪುಸ್ತಕವನ್ನು ಸೇವಾ ಭಾರತಿಗೆ ಒಪ್ಪಿಸಲಾಯಿತು. ಹೊಸದಿಗಂತ ಪತ್ರಿಕೆ ಆರ್ಥಿಕ ಸಲಹೆಗಾರ ಜ್ಞಾನದೇವ್ ಕಾಮತ್, ಪುಸ್ತಕ ರಚನೆಕಾರ, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

1 thought on “RSS veteran Indresh Kumar, CM DVS releases book on ‘Cow Protection’ by Anwar Manippady

Leave a Reply

Your email address will not be published.

This site uses Akismet to reduce spam. Learn how your comment data is processed.