
ಸಂಘ ಶಿಕ್ಷಾ ವರ್ಗ ಒಂದು ಸಾಧನಾ: ರಾಮದತ್ತ್
ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷ ಸಂಘ ಶಿಕ್ಷಾ ವರ್ಗ ನಾಗ್ಪುರದ ರೇಶಿಂಬಾಗ್ ನಲ್ಲಿರುವ ಡಾ. ಹೆಡಗೇವಾರ್ ಸ್ಮೃತಿ ಭವನದ ಮಹರ್ಷಿ ವ್ಯಾಸ ಸಭಾಗೃಹದಲ್ಲಿ ಪ್ರಾರಂಭವಾಯಿತು.
ದೀಪಪ್ರಜ್ವಲನೆ ಮತ್ತು ಭಾರತ ಮಾತಾ ಪೂಜನ್ ಕಾರ್ಯಕ್ರಮದ ನಂತರ ಮಾತನಾಡಿದ ಸಂಘ ಶಿಕ್ಷಾ ವರ್ಗದ ಪಾಲಕ ಅಧಿಕಾರಿ ಮತ್ತು ಸಹಸರಕಾರ್ಯವಾಹ ರಾಮದತ್ತ್ ಪ್ರಯತ್ನದ ಹಾದಿಯಲ್ಲಿನ ಶ್ರಮದ ಮೂಲಕ ಆನಂದವನ್ನು ಆಸ್ವಾದಿಸುವ ಭಾವವನ್ನು ಸಾಧನಾ ಎಂದು ಕರೆಯಲಾಗುತ್ತದೆ. ಸಂಘ ಶಿಕ್ಷಾ ವರ್ಗ ಅಂತಹದೊಂದು ಸಾಧನಾ ಎಂದು ಹೇಳಿದರು.

ರೈತ ತನ್ನ ಭೂಮಿಯಲ್ಲಿ ಬೀಜವನ್ನು ಬಿತ್ತುವ ಹಾಗೆ ಸಂಘ ಶಿಕ್ಷಾ ವರ್ಗದಲ್ಲಿ ಸ್ವಯಂಸೇವಕರಿಗೆ ಸಂಸ್ಕಾರವನ್ನು ಬಿತ್ತುತ್ತದೆ. ಈ ಪ್ರಕ್ರಿಯೆ ಸಂಘ ಕಾರ್ಯದಲ್ಲಿ ಪ್ರಶಿಕ್ಷಣದ ಮಹತ್ವವನ್ನು ಸಾರುತ್ತದೆ. ರೇಶಿಂಬಾಗ್ ಡಾ.ಹೆಡಗೇವಾರ್ ಮತ್ತು ಗುರೂಜಿಯವರ ತಪೋಭೂಮಿ. ಈ ಪುಣ್ಯಭೂಮಿಗೆ ಭೇಟಿ ನೀಡಿದ ಪ್ರತಿ ಸ್ವಯಂಸೇವಕನಿಗೂ ರಾಷ್ಟ್ರ ಮೊದಲು, ಸ್ವಾಭಿಮಾನ, ಪ್ರಾಮಾಣಿಕತೆ, ರಾಷ್ಟ್ರಭಕ್ತಿ, ಶಿಸ್ತು, ಬಂಧುತ್ವ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅವಕಾಶ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದ ಶಿಕ್ಷಾರ್ಥಿಗಳಲ್ಲಿ ವರ್ಗದಲ್ಲಿರುವ ಪ್ರತಿ ಪ್ರಾಂತದ ಕನಿಷ್ಠ ಇಬ್ಬರು ಶಿಕ್ಷಾರ್ಥಿಗಳನ್ನು ಪರಿಚಯ ಮಾಡಿಕೊಂಡು ಅವರ ಪ್ರಾದೇಶಿಕ ಸಮಸ್ಯೆಗಳ ಕುರಿತು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಸಂಘದ ಸ್ವಯಂಸೇವಕರು ಕೇವಲ ಸವಾಲುಗಳ ಕುರಿತು ಚರ್ಚಿಸದೇ, ಅದಕ್ಕೆ ಪರಿಹಾರವನ್ನು ನೀಡುವವರಾಗಬೇಕು ಎಂದು ಅಪೇಕ್ಷಿಸಿದರು.

ಸ್ವಯಂಸೇವಕರು ಸಂಘದ ತತ್ತ್ವವನ್ನು ಮತ್ತು ಸಾಮೂಹಿಕ ಒಪ್ಪಂದದೊಂದಿಗೆ ವೈಯಕ್ತಿಕ ಅಭಿಪ್ರಾಯಗಳನ್ನು ಸಮೀಕರಿಸುವ ಇಚ್ಛೆಯನ್ನು ಗ್ರಹಿಸುವಂತವರಾಗಬೇಕು. ಸ್ವಯಂಸ್ವೇವಕರಲ್ಲಿ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಪ್ರತಿ ಸಂಘಟನೆಯ ಸದ್ಗುಣವಾಗಿರುತ್ತದೆ ಎಂದು ನುಡಿದರು.
ವರ್ಗದ ಶಿಕ್ಷಾರ್ಥಿಗಳು ಸಮಾಜಕ್ಕಾಗಿ ದುಡಿಯುವುದಕ್ಕಾಗಿ ಸದಾ ಮುಂಚೂಣಿಯಲ್ಲಿರಬೇಕು. ಶೀಘ್ರದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಸ್ವಯಂಸೇವಕರು ತಮ್ಮ ಕರ್ತವ್ಯವನ್ನು ಅರಿತು ಸಂಘ ಕಾರ್ಯವನ್ನು ವಿವಿಧ ಆಯಾಮಗಳಲ್ಲಿ ವಿಸ್ತರಿಸುವ ಮತ್ತು ಸಂಘ ಹಾಗೂ ಸಮಾಜ ಒಂದೇ ಆಗುವವರೆಗೂ ಶ್ರಮವಹಿಸಬೇಕು ಎಂದು ನುಡಿದರು.
ವೇದಿಕೆಯಲ್ಲಿ ಅಖಿಲ ಭಾರತೀಯ ಸಹಸರಕಾರ್ಯವಾಹ ಕೆ.ಸಿ.ಮುಕುಂದ, ಅವಧ್ ಪ್ರಾಂತದ ಸಂಘಚಾಲಕ ಹಾಗೂ ವರ್ಗದ ವರ್ಗ ಸರ್ವಾಧಿಕಾರಿ ಕೃಷ್ಣ ಮೋಹನ ಉಪಸ್ಥಿತರಿದ್ದರು. ಈ ಬಾರಿಯ ಸಂಘ ಶಿಕ್ಷಾ ವರ್ಗದಲ್ಲಿ ರಾಷ್ಟ್ರದ ಎಲ್ಲಾ ಪ್ರಾಂತವನ್ನು ಪ್ರತಿನಿಧಿಸಿ 682 ಮಂದಿ ಶಿಕ್ಷಾರ್ಥಿಗಳು ಭಾಗವಹಿಸಿದರು.
ಸಂಘ ಶಿಕ್ಷಾ ವರ್ಗದ ಪಥಸಂಚಲನ ಮೇ 21ರಂದು ನಡೆಯಲಿದ್ದು, ಜೂನ್ 1 ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಈ ಬಾರಿಯ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಅಧಿಕಾರಿಗಳ ಪಟ್ಟಿ :
ವರ್ಗದ ಸರ್ವಾಧಿಕಾರಿ:
ಮಾ. ಕೃಷ್ಣಮೋಹನ್
ಮಾನ್ಯ ಪ್ರಾಂತ ಸಂಘಚಾಲಕ, ಅವಧ್ ಪ್ರಾಂತ
ವರ್ಗ ಕಾರ್ಯವಾಹ:
ಶ್ರೀ ನಾ. ತಿಪ್ಪೇಸ್ವಾಮಿ
ದಕ್ಷಿಣ-ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ
ಪಾಲಕ ಅಧಿಕಾರಿ:
ಶ್ರೀ ರಾಮದತ್
ಸಹ ಸರಕಾರ್ಯವಾಹ,
ರಾಷ್ಟ್ರೀಯ ಸ್ವಯಂಸೇವಕ ಸಂಘ
ಮುಖ್ಯಶಿಕ್ಷಕ್:
ಶ್ರೀ ಎ.ಸಿ. ಪ್ರಭು
ದಕ್ಷಿಣ ತಮಿಳುನಾಡು ಪ್ರಾಂತ ಶಾರೀರಿಕ ಪ್ರಮುಖ್
ಸಹಮುಖ್ಯಶಿಕ್ಷಕ್:
ಶ್ರೀ ಅತುಲ್ ದೇಶಪಾಂಡೆ
ವಿಭಾಗ ಪ್ರಚಾರಕರು, ಗುವಾಹಟಿ, ಉತ್ತರ ಅಸ್ಸಾಂ ಪ್ರಾಂತ
ಬೌದ್ಧಿಕ್ ಪ್ರಮುಖ್:
ಶ್ರೀ ನರೇಂದ್ರ
ಪ್ರಾಂತ ಶಾರೀರಿಕ ಪ್ರಮುಖ್, ಪಂಜಾಬ್
ಸಹ ಬೌದ್ಧಿಕ್ ಪ್ರಮುಖ್:
ಶ್ರೀ ಉದಯ್ ಶೇವಡೆ
ಕೊಂಕಣ ಪ್ರಾಂತ ಬೌದ್ಧಿಕ್ ಪ್ರಮುಖ್
ಸೇವಾ ಪ್ರಮುಖ್:
ಶ್ರೀ ಶಿವಲಹರಿ,
ಕ್ಷೇತ್ರೀಯ ಸೇವಾ ಪ್ರಮುಖ್, ರಾಜಸ್ಥಾನ ಕ್ಷೇತ್ರ
ವ್ಯವಸ್ಥಾ ಪ್ರಮುಖ್: ಶ್ರೀ ಬಾಲಚಂದ್ರ ಕಿಟ್ಕಾರು, ಸಹಕಾರ್ಯವಾಹ, ಅಜನಿ ಭಾಗ (ನಾಗ್ಪುರ)
ಸಹವ್ಯವಸ್ಥಾ ಪ್ರಮುಖ್: ಶ್ರೀ ನರೇಂದ್ರ ಭೋಕ್ಡೆ, ವ್ಯವಸ್ಥಾ ಪ್ರಮುಖ್, ಲಾಲ್ ಗಂಜ್ ಭಾಗ್ (ನಾಗ್ಪುರ)
