ದಿನಾಂಕ 24 ಜೂನ್ 2018: ಸಕ್ಷಮ ಸಂಸ್ಥಾಪನದಿನ, ವಿಶ್ವ ಪರಿಸರ ದಿನ ಹಾಗೂ ಹೆಲನ್ ಕೆಲ್ಲರ್ ಜಯಂತಿಯನ್ನು ಶಿಶು ನಿವಾಸ ಮಕ್ಕಳ ದೇಗುಲ, ಬಸವನಗುಡಿ ಸಭಾಂಗಣದಲ್ಲಿ, ಶಿಶು ನಿವಾಸದ ಅಧ್ಯಕ್ಷರಾದ ಶ್ರೀ ಸಿ ವಿ ವೆಂಕಟ ಕೃಷ್ಣ ರವರ ಅಧ್ಯಕ್ಷತೆಯಲ್ಲಿ ಹಾಗೂ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಯೋಜಕರಾದ ಶ್ರೀ ಜಯರಾಂ ಬೊಲ್ಲಾಜೆ ಮತ್ತು ವರದ ಹೆಗಡೆ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಜಯಪುರದ ಸ್ವರಸಕ್ಷಮ ತಂಡದಿಂದ ಸಂಗೀತ ಕಾರ್ಯಕ್ರಮ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಶ್ರೀ ರಮೇಶ್ ಪ್ರಭುಗಳಿಂದ ನಿರೂಪಣೆ ಪ್ರಾರಂಭವಾಗಿ ಸಕ್ಷಮ ಕರ್ನಾಟಕ ದಕ್ಷಿಣ ಸಹ ಕಾರ್ಯದರ್ಶಿಗಳಾದ ಶ್ರೀ ಹರಿಕೃಷ್ಣ ರೈ ರವರಿಂದ ಸಕ್ಷಮದ ಕಿರು ಪರಿಚಯ ಹಾಗೂ ಕಳೆದ 10 ವರ್ಷದ ಸೇವಾಕಾರ್ಯದ ವಿವರವನ್ನು ನೀಡಿದರು.

ಸಕ್ಷಮ ಕರ್ನಾಟಕ ದಕ್ಷಿಣ ಕಾರ್ಯದರ್ಶಿಗಳಾದ ಶ್ರೀ ವಸಂತ ಮಾಧವ್ ರವರು ಹೆಲನ್ ಕೆಲ್ಲರ್ ರ ಬಗ್ಗೆ ಮಾಹಿತಿ ನೀಡಿದರು. ಕೌಶಲ್ಯ ಪ್ರಕೋಷ್ಠ ಪ್ರಮುಖ್ ಶ್ರೀ ಅರುಣ್ ರವರು ದಾನಿಗಳು ಟೆಕ್ಸಾಸ್ ಕಂಪನಿ, ಇವರಿಗೆ ಗೌರವ ಸೂಚಿಸಿ ಕಂಪನಿಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಿಶೇಷ ಚೇತನರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು ಹಾಗು ಅಲ್ಲಿಯ ಸಹಾಯಕರನ್ನು ಗುರುತಿಸಿ ಗೌರವಿಸಲಾಯಿತು. ಎರಡು ವಿಶೇಷಚೇತನ ಶಾಲೆಗಳಿಗೆ ೨೦೦ ಬ್ಯಾಗ್ ಮತ್ತು ಪುಸ್ತಕಗಳನ್ನೊಳಗೊಂಡ ಸ್ಕೂಲ್ ಕಿಟ್ ಗಳನ್ನು ವಿತರಿಸಲಾಯಿತು. ರವಿಕುಮಾರ್ ರವರು ವಿಶ್ವ ಪರಿಸರ ದಿನದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪ್ಯಾರ ಅಥ್ಲೀಟ್ ಸಂದೇಶ್ ಬಿ ಜಿ, ಸಿ ವಿ ವೆಂಕಟ ಕೃಷ್ಣ, ನವಚೇತನ ಸಂಸ್ಥೆ ಶ್ರೀಮತಿ ವಿಜಯರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ!ಸುದೀರ್ ಪೈ , ಅರ್ ಎನ್ ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಇವರನ್ನು ಸಕ್ಷಮ ಕರ್ನಾಟಕದ ದಕ್ಷಿಣ ಪ್ರಾಂತ ಅದ್ಯಕ್ಷರಾಗಿ ಘೋಷಿಸಿಸಲಾಯಿತು. ಕೊನೆಯಲ್ಲಿ ಸಹಕರಿಸಿದ ಎಲ್ಲರಿಗೂ ವಸಂತ ಕುಮಾರ್ ರವರು ವಂದಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

Leave a Reply

Your email address will not be published.

This site uses Akismet to reduce spam. Learn how your comment data is processed.