ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ವೇಳೆ ವರದಿ ಮಾಡಲು ತೆರಳಿದ್ದ ವರದಿಗಾರನ ಮೇಲೆ ಕನ್ನಡ ಪರ ಸಂಘಟನೆ ರಣಧೀರ ಪಡೆ ಹಲ್ಲೆ ನಡೆಸಿರುವುದು ಖಂಡನಾರ್ಹ.

ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಕನ್ನಡಿಗರಲ್ಲಿ ಸದಾ ಸುಪ್ತವಾಗಿರುತ್ತದೆ. ಈ ಹಿಂದೆ ನಡೆದ ಎಲ್ಲಾ ಕನ್ನಡ ಪರ ಚಳುವಳಿಗಳಾಗಲೀ ಅಥವಾ ಇನ್ಯಾವುದೇ ಹೋರಾಟವಾಗಲಿ ಅಲ್ಲಿ ಪರ ವಿರೋಧದ ಮನೋಭಾವದವರು‌ ಇದ್ದೇ ಇರುತ್ತಾರೆ. ಅವರವರ ಭಾವನೆಗಳು ವಿಭಿನ್ನವಾಗಿರುತ್ತವೆ. ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮದಲ್ಲೂ ಅಷ್ಟೆ. ಪ್ರಸ್ತುತ ವಿಚಾರಗಳ ಬಗ್ಗೆ ವಿಭಿನ್ನ ನಿಲುವುಗಳಿರುತ್ತವೆ. ಆದರೆ ಒಂದು ಕಾರ್ಯಕ್ರಮದ ವರದಿ ಮಾಡುವಾಗ ಅದು ವಸ್ತುನಿಷ್ಟವಾಗಿರುತ್ತದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ.

ವರದಿ ಮಾಡುವಾಗ ವರದಿಗಾರ ತನ್ನ ಸ್ವಂತ ನಿಲುವನ್ನು ಬದಿಗಿಟ್ಟು ವಸ್ತು ನಿಷ್ಟ ವರದಿಯನ್ನು ಸಾರ್ವಜನಿಕವಾಗಿ ತೆರೆದಿಡುತ್ತಾನೆ. ಅದೇ ಪತ್ರಿಕಾಧರ್ಮ ಕೂಡ. ಏಕೆಂದರೆ ವ್ಯವಸ್ಥೆ ಕುಸಿದಾಗ ಎಚ್ಚರಿಕೆ ನೀಡಿ ಜನರಿಗೆ ವಾಸ್ತವ ತಿಳಿಸುವುದು ಇದೇ ಪತ್ರಿಕಾ ವರದಿಗಾರರು. ಜನಜಾಗೃತಿಯಲ್ಲಿ ವರದಿಗಾರರ/ ಪತ್ತಿಕೆ/ದೃಶ್ಯಮಾಧ್ಯಮಗಳ ಪಾತ್ರ ಬಹು ಮುಖ್ಯವಾದುದು.ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಸ್ವಾತಂತ್ತ್ಯ ವಿದ್ದರೂ ವರದಿಗಾರ ವರದಿಗಾರಿಕೆಯ ಸಂದರ್ಭದಲ್ಲಿ ಅಲ್ಲಿ ಏನು ನಡೆಯುತ್ತದೆಯೋ ಅದನ್ನು ಮಾತ್ರ ವರದಿ ಮಾಡುತ್ತಾನೆ. ಅದಷ್ಟೆ ಅವನ ಕಾರ್ಯ. ಘಟನೆಯ ವಿವರ ನೀಡುತ್ತಾನೆ. ವಿಮರ್ಶೆ ಮಾಡುವುದಿಲ್ಲ. ಒಟ್ಟಾರೆ ವಸ್ತು ನಿಷ್ಟ ವರದಿಗೆ ಸ್ವ – ನಿಲುವು ಅಡ್ಡಿಯಾಗದು.


ಫ್ರೀಡಂ ಪಾರ್ಕಿನಲ್ಲಿ ಸಂವಾದ ವರದಿಗಾರನ ಮೇಲೆ ನಡೆದ ಹಲ್ಲೆ ನಿಜಕ್ಕೂ ಮಾಧ್ಯಮದ ಹಕ್ಕುಗಳ ಹರಣ. ವರದಿ ಮಾಡಲು ಬಂದ ವರದಿಗರನ ಮೇಲೆ ಹಲ್ಲೆ ಮಾಡಿದ ಕನ್ನಡ ರಣಧೀರ ಪಡೆ ಎಂಬ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿ ಅತ್ಯಂತ ಅನಾಗರೀಕವಾಗಿ ವರ್ತಿಸಿದೆ. ಕನ್ನಡ ಹೋರಾಟಗಾರರ ಹೆಸರಲ್ಲಿ ಬಹಳಷ್ಟು ಸಂಘಟನೆಗಳಿವೆ. ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಆದರೆ ಕನ್ನಡ ಪರ ಸಂಘಟನೆಯೊಂದು ಕನ್ನಡದ ವರದಿಗಾರನ ಮೇಲೆಯೇ ಹಲ್ಲೆ ಮಾಡಿರುವುದು ಸಂಘಟನೆಯ ದುರಹಂಕಾರಕ್ಕೆ ಸಾಕ್ಷಿ.ಕೆಲವು ಸಂಘಟನೆಗಳಲ್ಲಿರುವ ನೈತಿಕತೆ ನಶಿಸಿದೆ ಎಂಬುದಕ್ಕೆ ಇದು ಸಾಕ್ಷಿ.


ವರದಿಗಾರನ ಮೇಲೆ ಅನಾಗರೀಕವಾಗಿ ಪೊಲೀಸರ ಮುಂದೆಯೇ ಹಲ್ಲೆ ನಡೆಸಿದ್ದು, ಅವಾಚ್ಯವಾಗಿ ಬಯ್ದಿದ್ದು ನಾಗರೀಕ ನಡವಳಿಕೆಯಲ್ಲ. ಅದರಲ್ಲೂ ಕನ್ನಡ ಪರ ಸಂಘಟನೆ ಎಂದು ಹೇಳಿಕೊಳ್ಳುವವರು ಮಾಡುವ ಕಾರ್ಯ ಇದಲ್ಲ. ವರದಿಗಾರನ‌ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅವರೊಡನೆ ಪತ್ರಕರ್ತರೆಲ್ಲರೂ ಸದಾ ಇರಬೇಕು. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಆ ಸಂಸ್ಥೆ ಮಾಡುತ್ತದೆ. ಇಂತಹ ನೂರು ಎಡರುಗಳು ತೊಡರಬಾರದು.ಬೆದರಬಾರದು. ಕನ್ನಡಿಗರು ಇಂತಹ ಸಂಘಟನೆಗಳ ಬಗ್ಗೆ ಎಚ್ಚರದಿಂದಿರಬೇಕು. ಪತ್ರಕರ್ತ ಸಂಘಟನೆಗಳೂ ಸಹ ಇದನ್ನು ಬಲವಾಗಿ ವಿರೋಧಿಸಬೇಕು.

ಕನ್ನಡ ಪರ ಸಂಘಟನೆಗಳ ಯಶಸ್ಸಿಗೆ ಮಾಧ್ಯಮಗಳೂ ಬಹು ಮುಖ್ಯ ಕಾರಣ. ಆದರೆ ಅದೇ ಮಾಧ್ಯಮಗಳಿಂದಲೇ ಹೆಸರು ಮಾಡಿದ ಸಂಘಟನೆ ಮಾಧ್ಯಮ ವರದಿಗಾರನ ಮೇಲೆಯೇ ಹಲ್ಲೆ ಮಾಡಿರುವುದು ಅವರಲ್ಲಿನ ನೈತಿಕತೆ ಆಧಃಪತನಕ್ಕೆ ಸಾಕ್ಷಿ.

ಎಂ.ವಿ.ಬಾಲಾಜಿ,ಪತ್ರಕರ್ತರು,ಕಡೂರು

Leave a Reply

Your email address will not be published.

This site uses Akismet to reduce spam. Learn how your comment data is processed.