“ಮಾತಾ ಅಮೃತಾನಂದಮಯಿ ದೇವಿ ಅವರು ಸದಾ ಪ್ರೇರಣಾದಾಯಿ” ಎಂದು ಆರ್ಎಸ್ಎಸ್ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಹೇಳಿದರು. ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿರುವ ಅಮೃತಾನಂದಮಯಿ ದೇವಿ ಅವರನ್ನು ಭೇಟಿ ಮಾಡಿ ಅವರು ಮಾತನಾಡಿದರು. “ನಮ್ಮ ಶ್ರೇಷ್ಠ ಸಂಪ್ರದಾಯ ಮತ್ತು ಸಂಸ್ಕೃತಿಯ ಬೆಳಕಿನಲ್ಲಿ ನಾವು ಯಾವಾಗಲೂ ಸರಳವಾದ ಮಾತುಗಳಲ್ಲಿ ಉತ್ತಮ ಸಲಹೆಗಳನ್ನು ಪಡೆಯುತ್ತೇವೆ. ಹೇಗೆ ವರ್ತಿಸಬೇಕು ಮತ್ತು ನಮ್ಮ ನಡೆ ಹೇಗಿರಬೇಕು ಎಂದು ಅಮ್ಮ ಯಾವಾಗಲೂ ಸಲಹೆ ನೀಡುತ್ತಾರೆ. ಇದೆಲ್ಲವೂ ಕೆಲಸಗಳಿಗೆ ಹೊಸ ಪ್ರೇರಣೆಯನ್ನು ನೀಡುತ್ತದೆ. ಹಾಗಾಗಿ ಇಲ್ಲಿಗೆ ಸತತವಾಗಿ ಬರುತ್ತಿದ್ದೇನೆ” ಎಂದರು.
ಮೋಹನ್ ಭಾಗವತ್ ಅವರು ಗುರುವಾರ ಮಧ್ಯಾಹ್ನ 3.45 ರ ಸುಮಾರಿಗೆ ಅಮೃತಪುರಿಯಲ್ಲಿರುವ ಮಾತಾ ಅಮೃತಾನಂದಮಯಿ ಮಠವನ್ನು ತಲುಪಿದರು. ಮಠದ ಹಿರಿಯ ಶ್ರೀಗಳ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಅಮ್ಮ ಅಮೃತಾನಂದಮಯಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದ ಡಾ.ಮೋಹನ್ ಭಾಗವತ್. ಎರಡು ಗಂಟೆಗಳ ಕಾಲ ಸಭೆ ನಡೆಸಿ 6 ಗಂಟೆಗೆ ವಾಪಸಾದರು.
ಆರ್ ಎಸ್ ಎಸ್ ದಕ್ಷಿಣ ಕ್ಷೇತ್ರೀಯ ಪ್ರಚಾರಕ ಎ.ಸೆಂಥಿಲ್ ಕುಮಾರ್, ಪ್ರಾಂತ ಕಾರ್ಯವಾಹ ಪಿ.ಎನ್.ಈಶ್ವರನ್, ಕ್ಷೇತ್ರೀಯ ಸೇವಾ ಪ್ರಮುಖ್ ಕೆ.ಪದ್ಮಕುಮಾರ್, ಪ್ರಾಂತ ಪ್ರಚಾರಕ ಎಸ್.ಸುದರ್ಶನ್, ಕ್ಷೇತ್ರ ವಿಶೇಷ ಸಂಪರ್ಕ ಪ್ರಮುಖ್ ಎ.ಜಯಕುಮಾರ್ ಅವರು ಸಹ ಉಪಸ್ಥಿತರಿದ್ದರು. ಸರಸಂಘಚಾಲಕರು ಅವರು ನಾಲ್ಕು ದಿನಗಳ ಭೇಟಿಗಾಗಿ ಗುರುವಾರ ಮಧ್ಯಾಹ್ನ ಕೇರಳಕ್ಕೆ ಆಗಮಿಸಿದರು.
ಅವರು ಎರ್ನಾಕುಲಂ ಪ್ರಾಂತ ಕಾರ್ಯಾಲಯ ಮಾಧವಾನಿವಾಸವನ್ನು ತಲುಪಿ ಶುಕ್ರವಾರ ಬೆಳಗ್ಗೆ ತ್ರಿಶೂರ್ ಶಂಕರ ಮಠಕ್ಕೆ ತೆರಳಿದರು. ಅಲ್ಲಿ ಇನ್ನೆರಡು ದಿನಗಳ ಕಾಲ ವಿವಿಧ ಸಂಘಟನಾ ಬೈಠಕ್ಗಳಲ್ಲಿ ಭಾಗವಹಿಸಿದರು. ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 18ರಂದು ಬೆಳಗ್ಗೆಯಿಂದ ಗುರುವಾಯೂರಿನ ರಾಧೇಯಂ ಸಭಾಂಗಣದಲ್ಲಿ ನಡೆಯುವ ಆರ್ಎಸ್ಎಸ್ ಪ್ರಾಂತ ಕಾರ್ಯಕಾರಿಣಿ ಬೈಠಕ್ನಲ್ಲಿ ಅವರು ಭಾಗವಹಿಸಲಿದ್ದಾರೆ. ಗುರುವಾಯೂರು ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಸಂಜೆ 5 ಗಂಟೆಗೆ ಗುರುವಾಯೂರಿನ ಸಂಘ ಜಿಲ್ಲಾ ಪೂರ್ಣ ಗಣವೇಶ ಸಾಂಘಿಕದಲ್ಲಿ ಪಾಲ್ಗೊಳ್ಳಲಿದ್ದಾರೆ.