ಹರಿದ್ವಾರದ ಸಂನ್ಯಾಸ ರಸ್ತೆಯಲ್ಲಿರುವ ಕೃಷ್ಣ ನಿವಾಸ ಅಥವಾ ಪೂರ್ಣಾನಂದ ಆಶ್ರಮದ ವತಿಯಿಂದ ಆರು ದಿನದ ವೇದಾಂತ ಸಮ್ಮೇಳನದ ಅಂತಿಮ ದಿನವಾದ. ಏಪ್ರಿಲ್ 13ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್‌ರವರು ಭಾಗವಹಿಸಿ ಮಾತನಾಡಿದರು‌.


“ಒಂದು ನಿರ್ದಿಷ್ಟ ಹಾದಿಯಲ್ಲಿ ಸಮಾಜ ನಡೆಯಬೇಕಿದೆ,ನಾವೆಲ್ಲರೂ ನಮ್ಮ ಉದಾಹರಣೆಯನ್ನೇ ನೀಡುತ್ತಾ ಅದನ್ನು ಹೇಗೆ ನಿರ್ಮಿಸಬೇಕೆಂದರೆ ನಾವು ಯಾವಾಗಲೂ ಅದನ್ನು ಸಾಕಾರಗೊಳಿಸಲು ತೊಡಗಿಕೊಳ್ಳುವಂತೆ ನಿರ್ಮಾಣ ಮಾಡಬೇಕು. ಸಮಯ ತೆಗೆದುಕೊಳ್ಳುತ್ತದೆ. ಹೇಳುವುದೆಲ್ಲ ಎಲ್ಲವೂ ಒಂದೇ ಬಾರಿಗೆ ನಡೆಯಲು ಸಾಧ್ಯವಿಲ್ಲ. ನಮ್ಮ ಬಳಿ ಅಧಿಕಾರವಿಲ್ಲ,ಅದು ಜನರ ಬಳಿ ಇದೆ. ನಮ್ಮ ಹತ್ತಿರ ಏನೂ ಇಲ್ಲ, ಆದರೆ ಜನರ ಸಾಮೀಪ್ಯವಿದೆ.ಇಲ್ಲಿ ಜನರ ಅಂಕುಶವೇ ನಡೆಯುತ್ತದೆ. ಅವರ ಮನಸ್ಸು ಮಾಡಿದರೆ ಎಲ್ಲರ ರೀತಿಯೂ ಬದಲಾಗಿ ಬಿಡುತ್ತದೆ. ಅಂತಹ ಸಮರ್ಥ ಜನರನ್ನು ತಯಾರು ಮಾಡುತ್ತಿದ್ದೇವೆ ನೀವೂ ಮಾಡಿ.”

” ಹಾಗೆ ಮಾಡುತ್ತಾ ಹೀಗೆ ಒಟ್ಟಿಗೆ ನಡೆಯೋಣ, ಸೋಲದೆ ನಡೆಯೋಣ,ಭಯವಿಲ್ಲದೆ ನಡೆಯೋಣ,ಗೆಲುವು ಸಾಧಿಸಲು ನಡೆಯೋಣ”


ಅವರು ಮಾತನಾಡುತ್ತಾ “ಜಗತ್ತು ಶಕ್ತಿಯನ್ನು ಗೌರವಿಸುತ್ತದೆ.ನಮಗೂ ಶಕ್ತಿಯಿದೆ.ಅದನ್ನ ತೋರಿಸಬೇಕಿದೆ.ನಾವು ಅಹಿಂಸೆಯನ್ನು ಪ್ರತಿಪಾದಿಸುತ್ತೇವೆ ಆದರೆ ಎದುರಿಸಲು ಕೈಯಲ್ಲಿ ಕೋಲನ್ನು ಸದಾ ಸಿದ್ಧರಾಗಿಯೂ ಇರಿಸಿಕೊಂಡು ಜಾಗರೂಕರಾಗಿ ನಾವು ನಡೆಯಬೇಕಿದೆ ಮತ್ತು ನಡೆಯುತ್ತಿದ್ದೇವೆ.”


ಅಲ್ಲದೆ “ಇದೇ ರಾಗದಲ್ಲಿ ನಡೆದರೆ ಮಾತ್ರ ಗಣನೆಯ ಕೆಲಸವಾಗಲು ಸಾಧ್ಯ.ನಾವು ಸ್ವಲ್ಪ ರಾಗದ ದನಿ ಹೆಚ್ಚಿಸದರೆ ಸಾಕು ರಾಷ್ಟ್ರ ನಿರ್ಮಾಣದ ಕನಸಿಗೆ 20-25 ವರ್ಷಗಳೇಕೆ ಕೇವಲ 10-15ವರ್ಷಗಳೇ ಸಾಕಾಗುತ್ತದೆ.ನಾವು ಯಾವ ಭಾರತದ ಕನಸನ್ನು ಸಾಕಾರಗೊಳಿಸಬೇಕಿದೆ ಎಂದರೆ, ಸ್ವಾಮಿ ವಿವೇಕಾನಂದರು ತಮ್ಮ ಮನಃಪಟಲದಲ್ಲಿ ಭಾರತದ ಕುರಿತು ಕಂಡ ಕನಸು,ಯೋಗಿ ಅರವಿಂದರು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದ ಭಾರತದ ಕನಸು ಅದೂ ಈದೇಹದಲ್ಲಿಯೇ ,ಇದೇ ಕಣ್ಣುಗಳಲ್ಲಿಯೇ ,ಈ ಜೀವನದಲ್ಲಿಯೇ ನೋಡೋಣ,ನನ್ನ ಶುಭ ಆಕಾಂಕ್ಷೆಗಳಿವೆ,ಇದು ನಿಮ್ಮ ಇಚ್ಛೆಯೂ ಹೌದು ಹಾಗೆಯೇ ನಮ್ಮ ಎಲ್ಲರ ಸಂಕಲ್ಪವೂ ಹೌದು”

ಈ ಸಂದರ್ಭದಲ್ಲಿ ಸರಸಂಘಚಾಲಕರು ಮೂರು ಮಹಾಮಂಡಲೇಶ್ವರರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಮಿ ಕೃಷ್ಣಾನಂದ,ಸ್ವಾಮಿ ಪೂರ್ಣಾನಂದ,ಸ್ವಾಮಿ ದಿವ್ಯಾನಂದರ ಪ್ರತಿಮೆ ಹಾಗು ಜಗದ್ಗುರು ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.