ಸಾವರ್ಕರ್ ಸಾಹಿತ್ಯ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾವರ್ಕರ್ ಅಧ್ಯಯನ ಮತ್ತು ಬರಹಗಾರರ ಕಮ್ಮಟವು ಗಿರಿನಗರದ ಸಂಸ್ಕೃತ ಭಾರತಿಯಲ್ಲಿ ನಡೆಯಿತು.
ಕಮ್ಮಟದ ಉದ್ಘಾಟನೆಯನ್ನು ಲೇಖಕರಾದ ಎಂ ನರಸಿಂಹಮೂರ್ತಿ ಅವರು ನೆರವೇರಿಸಿ ಸಾವರ್ಕರ್ ಕುರಿತು ಲಾವಣಿಯನ್ನು ಹಾಡಿದರು.ಪ್ರಥಮ ಅವಧಿಯನ್ನು ಡಾಕ್ಟರ್ ಜಿ ಬಿ ಹರೀಶ್ ಅವರು ಬರವಣಿಗೆಯ ಕಲೆ ಈ ವಿಷಯದ ಕುರಿತು ಅವಧಿಯನ್ನು ತೆಗೆದುಕೊಂಡರು.ತದನಂತರ ಡಾಕ್ಟರ್ ಎಸ್ ಆರ್ ಲೀಲಾ ಅವರು ಅನುವಾದದ ಕಲೆ ಇದರ ಕುರಿತು ವಿವರವನ್ನು ತಿಳಿಸಿದರು.
ಮೂರನೇ ಅವಧಿಯಲ್ಲಿ ಒಟ್ಟರೆ ಸಾವರ್ಕರ್ ಸಾಹಿತ್ಯ ಕೃತಿಗಳ ವಿಸ್ತೃತ ಪರಿಚಯವನ್ನು ಸಮೃದ್ಧ ಸಾಹಿತ್ಯದ ಹರ್ಷ ಅವರು ನೆರವೇರಿಸಿದರು.ನಂತರ ಪ್ರಶ್ನೋತ್ತರ ಮತ್ತು ಗುಂಪು ಚರ್ಚೆಯಾಗಿ ಕಡೆಯಲ್ಲಿ ಸಮಾರೋಪ ಭಾಷಣವನ್ನು ಡಾ. ಜಿ ಬಿ ಹರೀಶ್ ಅವರು ನಡೆಸಿಕೊಟ್ಟರು.
ಆಯ್ಕೆಯಾದ 15 ಜನರ ಕಮ್ಮಟದಲ್ಲಿ ಸಕ್ರಿಯವಾಗಿ ಭಾಗವಹಿಸಿ. ಸಾವರ್ಕರ್ ಕುರಿತು ಹೊಸ ವಿಷಯಗಳ ಬಗ್ಗೆ ಚರ್ಚೆ ಸಂವಾದ ನಡೆದಿದ್ದು ವಿಶೇಷವಾಗಿತ್ತು.ಮುಂದಿನ ದಿವಸಗಳಲ್ಲಿ ಸಾವರ್ಕರ್ ಸಾಹಿತ್ಯ ಬರವಣಿಗೆ ಮಾಡಲು ಆಸಕ್ತಿ ತೋರಿದ್ದು ವಿಶೇಷವಾಗಿತ್ತು.
ಇದು ಪ್ರಥಮ ಬಾರಿಗೆ ಸಾವರ್ಕರ್ ಕುರಿತು ಕಮ್ಮಟ ಒಂದು ನಡೆದಿದ್ದು ಒಂದು ಐತಿಹಾಸಿಕ ಕಾರ್ಯಕ್ರಮ ಎನ್ನಬಹುದು.