
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಯನಗರ ಭಾಗದ ಸಂಘಚಾಲಕರಾಗಿದ್ದ ಡಾ||ರಾಮಮೋಹನ ರಾವ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಖ್ಯಾತ ಅರಿವಳಿಕೆ ತಜ್ಞರಾದ ಡಾ|| ರಾಮಮೋಹನ ರಾವ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಬಳ್ಳಾರಿ ಬೆಂಗಳೂರು ಸರ್ಕಾರೀ ಮತ್ತು ಖಾಸಗೀ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದರು. ಇವರ ಪುತ್ರ ಡಾ. ರವಿಮೋಹನ್ ರಾವ್ ಖ್ಯಾತ ನರ ಶಸ್ತ್ರಚಿಕಿತ್ಸಾ ತಜ್ಞರು (neuro surgeon) ಮತ್ತು ಓರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ.ಮಿಥಿಕ್ ಸೊಸೈಟಿಯ ಅಜೀವ ಸದಸ್ಯರಾಗಿದ್ದರು.
ರಾಮ್ ಮೋಹನ್ ರಾಯರ ನಿಧನಕ್ಕೆ ಆರೆಸ್ಸೆಸ್ ಕ್ಷೇತ್ರೀಯ ಕಾರ್ಯವಾಹ ನಾ ತಿಪ್ಪೇಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.