ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್ ಆಗಿ ನೇಮಕ ಮಾಡುವ ಮೂಲಕ ಐಎಎಫ್ ತನ್ನ ಯುದ್ಧ ಘಟಕಕ್ಕೆ ಮೊದಲ ಬಾರಿಗೆ ನಾರಿ ನಾಯಕತ್ವ ನೀಡಿದೆ. ಆ ಮೂಲಕ ಮುಂಚೂಣಿ ನೆಲೆ ಸೇರಿದಂತೆ ಕಾರ್ಯಾಚರಣೆ ನಡೆಸುವ ಪ್ರದೇಶಗಳಲ್ಲಿನ 50 ಘಟಕಗಳ ನೇತೃತ್ವವನ್ನು ಶಾಲಿಜಾ ಧಾಮಿ ವಹಿಸಲಿದ್ದಾರೆ.
ಮೂಲತಃ ಪಂಜಾಬಿನ ಲೂಧಿಯಾನದವರಾದ ಶೈಲಜಾ ಧಾಮಿ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿ ಪಡೆದಿದ್ದಾರೆ. 2003ರಲ್ಲಿ ಹೆಲಿಕಾಫ್ಟರ್ ಪೈಲಟ್ ಆಗಿ ನೇಮಕಗೊಂಡು ಮೊದಲ ಬಾರಿಗೆ ಹೆಚ್ಎಎಲ್ ಎಚ್ಪಿಟಿ ದೀಪಕ್-32 ಹೆಲಿಕಾಫ್ಟರ್ ಚಲಾಯಿಸಿದ್ದರು. ನಂತರ ೨೦೦೫ರಲ್ಲಿ ಫ್ಲೈಟ್ ಲೆಫ್ಟಿನೆಂಟ್, 2009ರಲ್ಲಿ ಸ್ಕ್ವಾಡ್ರನ್ ಲೀಡರ್, 2019ರಲ್ಲಿ ಫೈಟ್ ಕಮಾಂಡರ್ ಆಗಿ ಪದೋನ್ನತಿ ಹೊಂದಿದರು. ತಮ್ಮ ಈ ಹದಿನೈದು ವರ್ಷಗಳ ಸೇನಾ ಅವಧಿಯಲ್ಲಿ 2800 ಗಂಟೆಗಳ ಕಾಲ ಹೆಲಿಕಾಫ್ಟರ್ ಹಾರಾಟ ನಡೆಸಿದ್ದಾರೆ. ಅಷ್ಟೇಯಲ್ಲದೆ ಫ್ಲೈಯಿಂಗ್ ಶಾಖೆಯಲ್ಲಿ ಶಾಶ್ವತ ಆಯೋಗವನ್ನು ಪಡೆದ ಮೊದಲ ಫೈಯಿಂಗ್ ಬೋಧಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.