ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ದಕ್ಷಿಣದ ಪ್ರಚಾರ ವಿಭಾಗದ ವತಿಯಿಂದ ಜಾಲತಾಣ ಸಮಾವೇಶವು ಜಯನಗರದ ರಾಷ್ಟ್ರೋತ್ಥಾನ ಪರಿಷತ್‌ ಸಭಾಂಗಣದಲ್ಲಿ ನಡೆಯಿತು.

ಸಮಾವೇಶದಲ್ಲಿ ಸಮಾಜಿಕ ಜಾಲತಾಣದ ಪ್ರಭಾವಿ ಶ್ರೀ ಕಿರಣ್ ಕುಮಾರ್ ಕೆ.ಎಸ್ ಅವರು ಸಾಮಾಜಿಕ ಜಾಲತಾಣದ ಪ್ರಭಾವಶಾಲಿ ಬಳಕೆಯ ಕುರಿತಾಗಿ ಅವಧಿ ತೆಗೆದುಕೊಂಡರು.ಶ್ರೀ ವಿನಯ್ ಕೃಷ್ಣ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಸಾಮಾಜಿಕ ಜಾಲತಾಣಗಳು ಮತ್ತದರ ಕಾರ್ಯಚಟುವಟಿಕೆಗಳ ಕುರಿತು ಎರಡನೆಯ ಅವಧಿಯಲ್ಲಿ ಮಾತನಾಡಿದರು. ವಕೀಲರಾದ ಶ್ರೀಮತಿ ಕ್ಷಮಾ ನರಗುಂದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಖ್ಯಾನಗಳ ಪಾತ್ರದ ಕುರಿತು ಅವಧಿ ತೆಗೆದುಕೊಂಡರು.

ಪ್ರಚಾರ ವಿಭಾಗದ ಪ್ರಾಂತ ಟೋಳಿ ಸದಸ್ಯರಾದ ಶ್ರೀಪರಪ್ಪ ಶಾನವಾಡ ಅವರು ಕಾರ್ಯಾಗಾರದ ಮುಂದಿನ ಚಟುವಟಿಕೆಗಳು ಮತ್ತು ಹೊಸ ಕಾರ್ಯಕರ್ತರ ಜೋಡಣೆಯ ಕುರಿತಾಗಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಚಾರ ವಿಭಾಗದ ಶ್ರೀ ಹರೀಶ್ ಕುಲಕರ್ಣಿ,ಶ್ರೀ ಯೋಗೇಶ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.