Grama Nadige- Uppala Nov-18-2012

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಜೇಶ್ವರ ತಾಲೂಕು (ಬಾಯಾರು ಮಂಡಲ):

Uppala Nov 18: ವಿಜಯದಶಮಿ ಪಥಸಂಚಲನದ ಪೂರ್ವಭಾವಿಯಾಗಿ 18-11-2012 ರಂದು ಸಂಜೆ ಬಾಯಾರು ಮಂಡಲದ ಸುದೆಂಬಳ ಗ್ರಾಮದಲ್ಲಿ ಗಣವೇಷಧಾರಿ   ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ ನಡೆಯಿತು. ಸುದೆಂಬಳ ಭಜನಾ ಮಂದಿರದಿಂದ ಹೊರಟ ನಡಿಗೆ ಸಂಘ ಗೀತೆಗಳನ್ನು ಹಾಡುತ್ತಾ ದಳಿಕುಕ್ಕು ಶಾಲೆಯ ತನಕ ನಡೆಯಿತು.

Grama Nadige- Uppala Nov-18-2012

ನಂತರ ನಡೆದ ಬೌದ್ಧಿಕ್ ನಲ್ಲಿ  ಕಾಸರಗೋಡು ನಗರ ಹಾಗೂ ಮಂಜೇಶ್ವರ ತಾಲೂಕು ಕಾಲೇಜ್ ವಿದ್ಯಾರ್ಥಿ ಪ್ರಮುಖ್  ಪುರುಷೋತ್ತಮ ಪ್ರತಾಪ್ ನಗರ, ಗ್ರಾಮಗಳ ಉಳಿವಿನ ಅವಶ್ಯಕತೆಯನ್ನು ತಿಳಿಸಿ,ಗ್ರಾಮಗಳು ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕು ಹಾಗೂ ನಮ್ಮ ಜೀವನ ಪದ್ಧತಿ ರಾಷ್ಟ್ರದ ಅಭಿವೃದ್ದಿಗೆ ಪೂರಕ ಎಂದರು.ಹಿಂದುತ್ವವು ನಮ್ಮ ಈ ನೆಲದ ಮೂಲ ಮಂತ್ರ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು  ಕಳೆದ 85 ವರ್ಷಗಳಿಂದ ಇದೇ ತತ್ವವನ್ನು ಎತ್ತಿ ಹಿಡಿದಿದೆ ಎಂದರು.ಸಂಘದ ನಿತ್ಯ ಶಾಖೆಗಳಲ್ಲಿ ಸ್ವಯಂಸೇವಕರು ಸ್ವಾರ್ಥ ಬಿಟ್ಟು ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡುವಂತ ಉದಾತ್ತ ಧ್ಯೇಯವನ್ನು ಕಲಿಯುತ್ತಾರೆ. ಸಂಘದ ಕುರಿತು ವಿರೋಧಿಗಳಿಗೂ ಕೂಡಾ ವಿಶ್ವಾಸ ಇದೆ, ಹಾಗಾಗಿ  ಶಾಖೆಗೆ ಬಂದರೆ ಮಾತ್ರ ಸಂಘದ ಕುರಿತು ತಿಳಿಯಬಹುದು ಎಂದರು.

ಬಾಯಾರು: ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ
ಬಾಯಾರು: ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ

by Shivakrishna N

Leave a Reply

Your email address will not be published.

This site uses Akismet to reduce spam. Learn how your comment data is processed.