ಆಗಸ್ಟ್ 2 1947,

ದೆಹಲಿಯ ಯಾರ್ಕ್ ರಸ್ತೆಯಲ್ಲಿರುವ ೧೭ ನಂಬರಿನ ಮನೆ ಕೇವಲ ದೆಹಲಿಯ ಜನರಿಗೆ ಮಾತ್ರವಲ್ಲ, ಇಡೀ ಭಾರತದ ಗಮನವನ್ನು ತನ್ನತ್ತ ಸೆಳೆಯುವಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಇದು ಭವಿಷ್ಯದಲ್ಲಿ ಭಾರತದ ಪ್ರಧಾನಿ ಅಭ್ಯರ್ಥಿ ನಿಯುಕ್ತಿಗೊಂಡಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ನಿವಾಸವಾಗಿತ್ತು. ಮತ್ತು ಈ ಪ್ರಧಾನಿ ಪದವನ್ನು ‘ಗೊತ್ತುಪಡಿಸಿದ’ ಹುದ್ದೆಗೇರಲು ಕೇವಲ ೧೩ ದಿನಗಳು ಬಾಕಿ ಇದ್ದವು. ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಆಗಸ್ಟ್ ೧೫ ರಿಂದ ಕೆಲಸ ಆರಂಭಿಸುವವರಿದ್ದರು.

ಯಾರ್ಕ್ ರಸ್ತೆಯಲ್ಲಿರುವ ೧೭ ನಂಬರಿನ ಮನೆಯತ್ತ ಅಧಿಕಾರಿಗಳು ಮತ್ತು ನಾಗರಿಕರ ಭೇಟಿಗಳು ಕ್ರಮೇಣ ಹೆಚ್ಚಾಗತೊಡಗಿದವು. ವಾಸ್ತವವಾಗಿ ಯಾರ್ಕ್ ಒಂದು ಪ್ರಮುಖ ರಸ್ತೆಯಾಗಿತ್ತು. ೧೯೧೧ ರಲ್ಲಿ ಬಂಗಾಳದಲ್ಲಿ ಉಂಟಾದ ಅಶಾಂತಿಯ ಕಾರಣದಿಂದಾಗಿ ಬ್ರಿಟಿಷರು ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದಾಗ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟಿಯೆನ್ಸ್ ಗೆ ದೆಹಲಿಯನ್ನು ವಿನ್ಯಾಸ ಮಾಡುವ ಉಸ್ತುವಾರಿಯ ಹೊರೆ ಹೊರಿಸಿದ್ದರು, ಅವರು ಇದೇ ಯಾರ್ಕ್ ರಸ್ತೆಯಿಂದ ತನ್ನ ಕೆಲಸವನ್ನು ಪ್ರಾರಂಭಿಸಿದ್ದರು. ಮತ್ತು ನೆಹರುರವರು ವಾಸಿಸುತ್ತಿದ್ದ ೧೭ ನಂಬರಿನ ಮನೆಯ ಯಾರ್ಕ್ ರಸ್ತೆಯನ್ನು ೧೯೧೨ ರಲ್ಲಿ ನಿರ್ಮಿಸಲಾಯಿತು.

ನೆಹರೂ ಅವರ ಈ ಬಂಗಲೆಯಲ್ಲಿ ಬೆಳಿಗ್ಗೆ ಆಗಸ್ಟ್ ೨ರಂದು ಹಟಾತ್ತಾಗಿ ನೂಕುನುಗ್ಗಲೊಂದು ಹುಟ್ಟಿಕೊಂಡಿತು. ಬ್ರಿಟಿಷರಿಂದ ವರ್ಗಾವಣೆಗೆ ಕೇವಲ ಹದಿಮೂರು ದಿನಗಳು ಮಾತ್ರ ಉಳಿದಿದ್ದವು. ಆ ಕಾರ್ಯಕ್ರಮದ ಸಿದ್ಧತೆಗಳು ಅದಾಗಲೇ ನಿಗದಿತವಾಗಿ ತಯಾರಿಯಲ್ಲಿದ್ದವು, ಆದರೆ ಅನೇಕ ಇತರ ಸಮಸ್ಯೆಗಳು ನೆಹರೂ ಅವರ ಹೆಗಲ ಮೇಲೆ ಅಕ್ಷರಶಃ ಜಲಪಾತದಂತೆಯೇ ಬಿಳತೊಡಗಿದ್ದವು. ರಾಷ್ಟ್ರೀಯ ಗೀತೆಯ ಆಯ್ಕೆಯಿಂದ ಹಿಡಿದು ಕ್ಯಾಬಿನೆಟ್ ಮಂತ್ರಿಮಂಡಲ ರಚಿಸುವವರೆಗೂ ಕೆಲಸಗಳ ದೊಡ್ಡ ಪಟ್ಟಿಯೇ ಸಿದ್ದವಾಗಿತ್ತು, ಇವೆಲ್ಲದರ ನಡುವೆ ಆಗಸ್ಟ್ ೧೫ ರಂದು ಅತ್ಯಾಕರ್ಷಕವಾಗಿ ಕಾಣಲು ತಾನು ಏನು ಧರಿಸಬೇಕೆಂಬುದು ನೆಹರು ಅವರನ್ನು ಕಾಡುವ ದೊಡ್ಡ ಸಮಸ್ಯೆಯಾಗಿತ್ತು !

ವಿವಿಧ ವಿಷಯಗಳ ಬಗ್ಗೆ ಚರ್ಚಿಸುವುದಕ್ಕಾಗಿ ಕೆಲವು ಕಾಂಗ್ರೆಸ್ ಮುಖಂಡರು ಮತ್ತು ಆಡಳಿತದ ಹಿರಿಯ ಅಧಿಕಾರಿಗಳು ಯಾರ್ಕ್ ರಸ್ತೆಯ ನೆಹರು ನಿವಾಸಕ್ಕೆ ಆಗಮಿಸಿದರು. ಆದ್ದರಿಂದ, ಬಿಡುವಿರದ ಕಾರ‍್ಯನಿರತ ದಿನವನ್ನು ಎದುರಿಸುವದಕ್ಕಾಗಿ ನೆಹರು ತನ್ನ ಉಪಹಾರವನ್ನು ಬೇಗನೆ ಮುಗಿಸಿ ಸಿದ್ಧರಾದರು.
ಭಾರತದ ವಿವಿಧ ಸ್ಥಳಗಳಲ್ಲಿ ರಾಜವಂಶದ ರಾಜ್ಯಗಳನ್ನು ಭಾರತ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಘಟನೆಗಳು ವೇಗವನ್ನು ಪಡೆದುಕೊಂಡವು. ಸ್ವತಃ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಯೊಂದು ರಾಜ್ಯಗಳ ಮೇಲೂ ಕಣ್ಣಿಟ್ಟಿದ್ದರು. ಈ ಕಾರ‍್ಯಕ್ಕಾಗಿ ಅವರು ತನ್ನ ಇಲಾಖೆಯಲ್ಲಿ ಆಡಳಿತದಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ವಿ.ಕೆ.ಮೆನನ್ ಅವರನ್ನು ಸೇರಿಸಿಕೊಂಡಿದ್ದರು. ಸರ್ದಾರ್ ಪಟೇಲ್ ಅವರ ಸೂಚನೆಗಳ ಮೇರೆಗೆ ವಿ.ಕೆ.ಮೆನನ್ ಅವರು ಆಗಸ್ಟ್ ೨ ರ ಬೆಳಗ್ಗೆ ಬ್ರಿಟನ್ ನಲ್ಲಿ ಭಾರತೀಯ ಉಪ ಕಾರ್ಯದರ್ಷಿಯಾಗಿದ್ದ ಸರ್ ಪ್ಯಾಟ್ರಿಕ್ ಗೆ ಪತ್ರವೊಂದನ್ನು ಬರೆದರು. ಆ ಪತ್ರದಲ್ಲಿ ಅವರು ‘ಭಾರತದಲ್ಲಿ ರಾಜ್ಯದ ವಿಸ್ತಾರ ಮತ್ತು ಆರ್ಥಿಕತೆಯಲ್ಲಿ ದೊಡ್ಡ ರಾಜ್ಯ ನಿಭಾಯಿಸುತ್ತಿದ್ದ ರಾಜ ಮನೆತನಗಳಾದ ಮೈಸೂರು, ಬರೋಡಾ, ಗ್ವಾಲಿಯರ್, ಬಿಕಾನೇರ್, ಜೋಧ್ಪುರ್ ಮತ್ತು ಜೈಪುರಗಳಂತಹ ಭಾರತದೊಂದಿಗೆ ವಿಲಿನಗೊಳ್ಳಲು ಸಮ್ಮತಿ ಸೂಚಿಸಿದ್ದಾರೆ. ಆದರೆ ಹೈದರಾಬಾದ್, ಭೋಪಾಲ್ ಮತ್ತು ಇಂದೋರ್ ಗಳಂತಹ ಮುಂತಾದ ರಾಜ್ಯಗಳ ಇದುವರೇಗೂ ತಮ್ಮ ನಿರ್ಧಾರ ತಿಳಿಸಿಲ್ಲ ”

ವಾಸ್ತವವಾಗಿ ಭೋಪಾಲ್, ಹೈದರಾಬಾದ್ ಮತ್ತು ಜುನಾಗಢ್ ರಾಜ್ಯಗಳು ಯಾವುದೇ ರೀತಿಯಲ್ಲಿ ಭಾರತ ಒಕ್ಕೂಟದಲ್ಲಿ ಸೆರದಿರಲು ತಮ್ಮ ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿಕೊಂಡಿದ್ದವು. ಈ ವಿಚಾರವಾಗಿ ಭೋಪಾಲ್ ನ ನವಾಬ್ ಮತ್ತು ಮೊಹಮ್ಮದ್ ಅಲಿ ಜಿನ್ನಾನ ಆತ್ಮೀಯ ಗೆಳೆಯನಾಗಿದ್ದ ಹಮಿದುಲ್ಲಾ ಆಗಸ್ಟ್ ೨ ರಂದು ಜಿನ್ನಾಗೆ ಪತ್ರವೊಂದನ್ನು ಬರೆದಿದ್ದಾರೆ. ನವಾಬ್ ಹಮಿದುಲ್ಲಾ ಅವರ ಸ್ನೇಹಿತ ಜಿನ್ನಾಗೆ ಬರೆಯುತ್ತಾರೆ, “ಹಿಂದೂ ಭಾರತದಲ್ಲಿ ಶೇಕಡಾ ೮೦% ರಷ್ಟೀರುವ ಹಿಂದೂ ಬಹುಜನರ ನಡುವೆ, ನನ್ನ ವೈಯುಕ್ತಿಕ ಶತ್ರುಗಳು ಮತ್ತು ಇಸ್ಲಾಂನ ಶತ್ರುಗಳನ್ನು ಸುತ್ತುವರಿದುಕೊಂಡ ಭೋಪಾಲ್ ಏಕಾಂಗಿಯಾಗಿ ನಿಂತಿದೆ. ಪಾಕಿಸ್ತಾನ ನಮಗೆ ಸಹಾಯ ಮಾಡುವ ಯಾವುದೇ ಮಾರ್ಗಗಳಿಲ್ಲ ಎಂದು ನೀವು ಕಳೆದ ರಾತ್ರಿ ನನಗೆ ನೇರವಾಗಿ ನಿರಾಕರಿಸಿದ್ದೀರಿ”.

ರಾಣಿ ವಿಕ್ಟೋರಿಯಾ ರಸ್ತೆಯಲ್ಲಿರುವ ೧ ನಂಬರಿನ ಮನೆಯಲ್ಲಿ ವಾಸವಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಸಹ ಬಿಡುವಿಲ್ಲದ ಕಾರ್ಯದಲ್ಲಿ ನಿರತರಾಗಿದ್ದರು. ಭವಿಷ್ಯದ ರಾಷ್ಟ್ರಾಧ್ಯಕ್ಷರಾಗಲು ಅವರ ಬಳಿ ತುಂಬಾ ಸಮಯವಿತ್ತು. ಆದಾಗ್ಯೂ, ಪ್ರತಿಯೊಬ್ಬರೂ ಅವನನ್ನು ಹಿರಿಯರಾಗಿ ನೋಡುತ್ತಿದ್ದರು. ನಿಸ್ಸಂಶಯವಾಗಿ, ಈ ನಿರ್ಣಾಯಕ ಹಂತದಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಸಮಾಲೋಚನೆಗಳನ್ನು ರೂಪಿಸಲು ಅಥವಾ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಜನರ ಗುಂಪುಗಳು ಸದಾ ಅವರನ್ನು ಸುತ್ತುವರಿದಿರುತ್ತಿದ್ದವು.

ಡಾ. ರಾಜೇಂದ್ರ ಪ್ರಸಾದ್ ಮೂಲತಃ ಬಿಹಾರದಿಂದ ಬಂದವರು. ಆದ್ದರಿಂದ, ಬಿಹಾರದ ಹಲವು ಜನರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ಮತ್ತು ಹಲವಾರು ಸಮಸ್ಯೆಗಳ ಸಮಾಲೋಚನೆಗಾಗಿ ಇವರ ಬಳಿ ಬರುತ್ತಿದ್ದರು. ಆಗಸ್ಟ್ ೨ ರ ಮಧ್ಯಾಹ್ನ ಇದೇ ಆಗಸ್ಟ್ ೧೫ ರಂದು ನಡೆಯಲಿರುವ ಸಮಾರಂಭದ ವಿಚಾರವಾಗಿ ರಕ್ಷಣಾ ಸಚಿವ ಸರ್ದಾರ್ ಬಲ್ದೇವ್ ಸಿಂಗ್ ರಿಗೆ ಪತ್ರವೊಂದನ್ನು ಅವರು ಬರೆಯುತ್ತಿದ್ದರು. “ಪತ್ರವು ಪಾಟ್ನಾ ನಗರದ ನಾಗರಿಕರು ಮತ್ತು ಸೈನ್ಯ ಆಡಳಿತದೊಂದಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು, ಆದ್ದರಿಂದ ಸಮಾರಂಭವು ಆಡಂಬರದಿಂದ ಕೂಡಿದಂತಾಗುತ್ತದೆ” ಡಾ. ರಾಜೇಂದ್ರ ಪ್ರಸಾದ್ ಅವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದ ಸರ್ದಾರ್ ಬಲ್ದೇವ್ ಸಿಂಗ್ ಅವರು ರಾಜೇಂದ್ರ ಬಾಬು ಅವರ ಪತ್ರಕ್ಕೆ ಸೂಕ್ತವಾಗಿ ಸ್ಪಂದಿಸುತ್ತಾರೆಂಬುದು ನಿಶ್ಚಯವಾಗಿತ್ತು, ಬಲ್ದೇವ್ ಸಿಂಗ್ ಅವರು ಅಕಾಲಿ ದಳದಿಂದ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುವದು ಕೂಡಾ ನಿಶ್ಚಯವಾಗಿತ್ತು.

ಆಗಸ್ಟ್ ೨ ರ ಬೆಳಿಗ್ಗೆ ಅತ್ತ ಯುನೈಟೆಡ್ ಪ್ರಾಂತ್ಯದಲ್ಲಿ (ಇಂದಿನ ಉತ್ತರ ಪ್ರದೇಶ) ವಿಭಿನ್ನ ನಾಟಕವೊಂದು ನಡೆಯುತ್ತಿತ್ತು. ಸರ್ಕಾರಕ್ಕೆ ವಿರುದ್ಧವಾಗಿ ನೇರ ಕ್ರಮ ಕೈಗೊಳ್ಳುತ್ತಾರೆ’ ಎಂಬ ಆರೋಪದಡಿಯಲ್ಲಿ ಸರಕಾರ ಸ್ಥಳೀಯ ಹಿಂದೂ ಮಹಾಸಭಾದ ಮುಖಂಡರುಗಳನ್ನು ಹಿಂದಿನ ರಾತ್ರಿಯೇ ಬಂಧಿಸಿತ್ತು. “ನೇರ ಕ್ರಮ” ಎಂಬ ಪದವು ಭಾರತೀಯ ರಾಜಕೀಯದಲ್ಲಿ ಹೆಚ್ಚು ಕೆಟ್ಟದಾಗಿತ್ತು. ಕೇವಲ ಒಂದು ವರ್ಷದ ಹಿಂದೆ, ಮುಸ್ಲಿಮ್ ಲೀಗ್ ಗೂಂಡಾಗಳು ಐದು ಸಾವಿರ ಹಿಂದುಗಳನ್ನು ಬಂಗಾಳದಲ್ಲಿ ಹತ್ಯೆ ಮಾಡಿದ್ದರು ಮತ್ತು ಸಾವಿರಾರು ಮಹಿಳೆಯರ ಅತ್ಯಾಚಾರ ಮಾಡಿದ್ದರು. ಕಾಂಗ್ರೆಸ್ ಅಧಿಕಾರಿಯು ನಂತರದ ಅವಧಿಯಲ್ಲಿ ವಿಭಜನೆಯನ್ನು ಸ್ವೀಕರಿಸಿದ ಕಾರಣ “ನೇರ ಕ್ರಮ” ಎಂಬ ಪದದಿಂದ ಹೊರಬಂದಿತು. ಆದ್ದರಿಂದ, ಹಿಂದೂ ಮುಖಂಡರನ್ನು ಬಂದಿಸುವದು ಮತ್ತು ‘ನೇರ ಕ್ರಮ’ ಎಂಬ ಹೆಸರಿನಲ್ಲಿ ಅವರನ್ನು ಸೆರೆಹಿಡಿಯುವುದು ಸ್ವಲ್ಪ ವಿಚಿತ್ರವಾದದ್ದು, ಏಕೆಂದರೆ ‘ನೇರ ಕ್ರಮ’ ಎಂಬ ಪದವು ಮುಸ್ಲಿಂ ಲೀಗ್ ಗೆ ಸಂಬಂಧಿಸಿದೆ. ಸಿಂಗಪುರ್ ನಿಂದ ಪ್ರಕಟವಾದ ಇಂಡಿಯನ್ ಡೈಲಿ ಮೇಲ್, ಈ ಸುದ್ದಿಯನ್ನು ಬಿತ್ತರಿಸಿತ್ತು. ಅದು ಈ ಸುದ್ದಿಯನ್ನು ಆಗಸ್ಟ್ ೨ ರ ಪ್ರಮುಖ ಸುದ್ದಿಯೆಂದು ಬಿಂಬಿಸಿ ತನ್ನ ಮುಖಪುಟದಲ್ಲಿ ಬಿತ್ತರಿಸಿತ್ತು. ಅದಲ್ಲದೆ ಆಲ್ಲಿ ಹಿಂದೂ ಮಹಾಸಭಾದ ಹತ್ತು ಬೇಡಿಕೆಗಳನ್ನು ಪ್ರಕಟಿಸಿತು. ಈ ಸುದ್ದಿ ಹಿಂದೂ ಮಹಾಸಭಾ ಮತ್ತು ಅವರ ಬೆಂಬಲಿಗರಲ್ಲಿ ತತ್ಸಾರ ಮನೊಭಾವನೆ ಸೃಷ್ಟಿಸಿತು.

ಆಗಸ್ಟ್ ೨ ರ ಶನಿವಾರ ಕೊಹಿಮಾದ ಈಸ್ಟರ್ನ್ ಫ್ರಂಟ್ ನಿಂದ ಬಂದ ವರದಿಯೊಂದು ಭಾರತೀಯ ಒಕ್ಕೂಟಕ್ಕೆ ಕಹಿ ಸುದ್ದಿಯಾಗಿತ್ತು. ಕೊಹಿಮಾದ ಸ್ವತಂತ್ರ ಲೀಗ್ ಅವರು ಆಗಸ್ಟ್ ೧೫ ರಂದು ಭಾರತೀಯ ಒಕ್ಕೂಟಕ್ಕೆ ಸೇರಬಾರದೆಂದು ಘೋಷಣೆಯೊಂದನ್ನು ಹೊರಡಿಸಿದ್ದರು. ಅವರು ನಾಗಾ ಬುಡಕಟ್ಟು ಜನರು ವಾಸಿಸುವ ಸಂಪೂರ್ಣ ಪ್ರದೇಶವನ್ನೊಳಗೊಂಡ ನಾಗಾ ಜನರ ಹೊಸ ರ‍್ಕಾರ ರಚಿಸುವ ಮಾತುಗಳನ್ನಾಡುತ್ತಿದ್ದರು, ಆಗಸ್ಟ್ ೧೫ ರಂದು ಭಾರತ ಒಕ್ಕೂಟ ರಚಿಸುವ ಹುಮ್ಮಸ್ಸಿನಲ್ಲಿದ್ದ ನಾಯಕರುಗಳಿಗೆ ಸಾಗರದಷ್ಟು ಸಮಸ್ಯೆಗಳು ಮತ್ತು ರ‍್ವತದೆತ್ತರದ ತೊಂದರೆಗಳು ಕಣ್ಣಮುಂದೆ ಗೊಚರಿಸತೊಡಗಿದವು

ಈ ಎಲ್ಲ ಒತ್ತಡಗಳ ಹೊರತಾಗಿಯೂ, ಭಾರತೀಯ ಚಲನಚಿತ್ರಗಳು ದೇಶದಲ್ಲಿ ಮತ್ತು ವಿದೇಶದಲ್ಲಿ ಜನರನ್ನು ಮನರಂಜಿಸುತ್ತಿವೆ. ಅಶೋಕ್ ಕುಮಾರ್ ಮತ್ತು ವೀರ ನಟಿಸಿದ ಆಟ್ ದಿನ್ ಸಿಂಗಪುರದಲ್ಲಿ ಡೈಮಂಡ್ ಥಿಯೇರ‍್ನಲ್ಲಿ ಜನಸಂದಣಿಯನ್ನು ಆರ‍್ಷಿಸುಸುತ್ತಿತ್ತು. ಖ್ಯಾತ ರ‍್ದು ಬರಹಗಾರ ಸಾದತ್ ಹಸನ್ ಮಂಟೋ ಈ ಚಿತ್ರದ ಕಥೆಯನ್ನು ಬರೆದರು. ಸಂಗೀತ ನರ‍್ದೇಶಕ ಎಸ್.ಡಿ.ರ‍್ಮನ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದರು …!
ದೆಹಲಿಯಲ್ಲಿ ರ‍್ದಾರ್ ಪಟೇಲ್ ಅವರ ನಿವಾಸವೂ (ಇಂದಿನ ೧, ಔರಂಗಜೇಬ್ ರಸ್ತೆ) ಚಟುವಟಿಕೆಗಳೊಂದಿಗೆ ತುಂಬಿ ತುಳುಕುತ್ತಿತ್ತು. ಸಿಂಧ್, ಬಲೂಚಿಸ್ತಾನ್ ಮತ್ತು ಬಂಗಾಳದ ಗಲಭೆಗಳನ್ನು ನಿಭಾಯಿಸುವದರ ಜೊತೆಗೆ ರಾಜ ಸಂಸ್ಥಾನಗಳ ವಿಲೀನ ಪ್ರಕ್ರೀಯೆ ವಿಷಯಗಳನ್ನು ನಿಭಾಯಿಸುವುದು ಗೃಹ ಸಚಿವಾಲಯಕ್ಕೆ ಪರಿಕ್ಷೇಯನ್ನು ತಂದೊಡ್ಡಿತ್ತು
ಈ ಮಧ್ಯೆ, ಮಧ್ಯಾಹ್ನದ ವೇಳೆಗೆ ಪಂಡಿತ್ ನೆಹರೂ ಬರೆದ ಪತ್ರವೊಂದು ಸರ್ದಾರ್ ಕೈಸೇರಿತ್ತು, ಪತ್ರವು ಸಂಕ್ಷಿಪ್ತವಾಗಿತ್ತು. ಅದರಲ್ಲಿ – “ಈ ಪತ್ರವು ಕೆಲವು ಸರ್ಕಾರಿ ಔಪಚಾರಿಕತೆಗಳನ್ನು ಪೂರೈಸಲು ಬರೆಯಲಾಗಿದೆ. ನಾನು ತಮಗೆ ನನ್ನ ಕ್ಯಾಬಿನೆಟ್ ಮಂತ್ರಿಮಂಡಲ ಸೇರಲು ಅಧಿಕೃತ ಆಮಂತ್ರಣವನ್ನು ನೀಡುತ್ತಿದ್ದೇನೆ, ವಾಸ್ತವವಾಗಿ, “ಈ ಪತ್ರಕ್ಕೆ ಯಾವುದೇ ಅರ್ಥವಿಲ್ಲ ಏಕೆಂದರೆ ನೀವು ಈಗಾಗಲೇ ನನ್ನ ಮಂತ್ರಿಮಂಡಲದ ಬೆನ್ನೆಲುಬಾಗಿದ್ದೀರಿ”.
ಪಟೇಲ್ ಆ ಪತ್ರವನ್ನು ಸ್ವಲ್ಪ ಸಮಯದವರೆಗೆ ನೋಡಿ ಲಘುವಾಗಿ ನಸುನಗು ಬೀರಿದರು. ನಂತರ ತಮ್ಮ ಕಾರ್ಯದರ್ಶಿಯೊಂದಿಗೆ ಭಾರತ-ಪಾಕಿಸ್ತಾನದ ಗಡಿರೇಖೆಯನ್ನು ಗುರುತಿಸುವ ಕುರಿತು ಗಡಿಯಲ್ಲಿ ತೀವ್ರವಾಗಿ ಗಲಭೆಗೊಳಗಾದವರ ಬಗ್ಗೆ ಮಾಹಿತಿ ಪಡೆಯುತ್ತಾ ಚರ್ಚೆಗಿಳಿಯುತ್ತಾರೆ.
ಈ ಇಡೀ ವಾತಾವರಣದಿಂದ ದೂರದಲ್ಲಿದ್ದ ಕಾಂಗ್ರೆಸ್ನ ಎಡಪಂಥೀಯರ ಗುಂಪೊಂದು ಮಹಾರಾಷ್ಟ್ರದ ದೇವಚಿ ಅಲಾಂಡಿಯಲ್ಲಿ ಸಭೆ ಸೇರಿತ್ತು. ಗುಂಪಿನ ಒಂದು ಸಮಾವೇಶವನ್ನು ಅದೇ ದಿನ ಅಥವಾ ಇನ್ನೊಂದು ದಿನ ನಡೆಸಲು ಅವರ ಸಂಘಟನೆ ಎರಡು ತಿಂಗಳ ಹಿಂದೆ ನಿರ್ಧರಿಸಿದರು. ಶಂಕರರಾವ್ ಮೋರೆ ಮತ್ತು ಬಾವು ಸಾಹೇಬ್ ರಾವುತ್ ಮನವಿಯ ಮೇರೆಗೆ ಅವರೆಲ್ಲರೂ ಒಟ್ಟುಗೂಡಿದರು. ಭಾರತ ದೇಶ ಸ್ವಾತಂತ್ರ‍್ಯ ಗಳಿಸುವ ಹುಮ್ಮಸ್ಸಿನಲ್ಲಿತ್ತು, ಕಾಂಗ್ರೆಸ್ ಅಧಿಕಾರ ಹಿಡಿಯಲು ತುದಿಗಾಲಲ್ಲಿ ನಿಂತಿತ್ತು. ಆದರೆ, ಜಟೀಲ ಪ್ರಶ್ನೆಯೊಂದು ಅವರನ್ನು ಕಾಡತೊಡಗಿತ್ತು – ಅವರ ಎಡ, ಕಮ್ಯೂನಿಸ್ಟ್ ಸಿದ್ಧಾಂತ ವಿಚಾರಗಳ ಭವಿಷ್ಯವೇನು? ಅವರು ಈ ವಿಷಯದ ಬಗ್ಗೆ ಅವರುಗಳು ಜನರಿಂದ ಸಲಹೆಗಳನ್ನು ಸ್ವೀಕರಿಸಲು ಮುಂದಾದರು. ಈ ಸಲಹೆ ಸಂಗ್ರಹ ಸಮಿತಿಯು ತುಳಸಿದಾಸ್ ಜಾಧವ್, ಕೃಷ್ಣರಾವ್ ಧುಲುಪಾ, ದಯಾನೊಬಾ ಜಾಧವ್, ಜಿ.ಡಿ. ಲಗೂ, ದತ್ತಾ ದೇಶ್ಮುಖ್, ಆರ್. ಕೆ. ಖಂಡಿಲ್ಕರ್, ಕೇಶವರಾವ್ ಜೆಡೆ ಮೊದಲಾದವರನ್ನೂ ಒಳಗೊಂಡಿತ್ತು. ರೈತರು ಮತ್ತು ಕಾರ್ಮಿಕರಿಗಾಗಿ ಪ್ರತ್ಯೇಕ ಗುಂಪನ್ನು ರೂಪಿಸುವ ಯೋಜನೆಯು ರೂಪಗೊಂಡಿತು. ಈ ಸಭೆಯು ರೈತರು ಮತ್ತು ಕಾರ್ಮಿಕರ ದೊಡ್ಡ ಎಡಪಂಥೀಯ ಪಕ್ಷಕ್ಕೆ ಜನ್ಮ ನೀಡುತ್ತದೆ ಎಂದು ಕನಿಷ್ಠ ಯಾರೂ ಭಾವಿಸಲಿಲ್ಲ … ಈ ಪ್ರಸಿದ್ಧ ವ್ಯಕ್ತಿಗಳು ಆಗಸ್ಟ್ ೨ ರ ಈ ಸಭೆಯಲ್ಲಿ ಭಾರತದ ವಿಭಜನೆ ಮತ್ತು ಅಮಾನವೀಯ ಗಲಭೆಗಳ ಬಗ್ಗೆ ಒಂದೇ ಒಂದು ಮಾತು ಹೇಳಲಿಲ್ಲ.

ಅತ್ತ ದಕ್ಷಿಣದ ಮದ್ರಾಸ್ ನ ಎಗ್ಮೋರ್ ಪ್ರದೇಶದದಲ್ಲಿ, ಸಂಜೆ ನಡೆದ ಸಭೆಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಟಿ.ಎಸ್.ಎಸ್.ರಾಜನ್ ಅವರ ಆಹಾರ, ಔಷಧ ಮತ್ತು ಆರೋಗ್ಯ ಸಚಿವಾಲಯ ಆಂಗ್ಲೊ-ಇಂಡಿಯನ್ ಸಮುದಾಯದೊಂದಿಗೆ ಸಂವಹನ ನಡೆಸುತ್ತಿದ್ದರು. ಅಲ್ಲಿಯ ಹಲವಾರು ಜನರು ಬ್ರಿಟಿಷರು ಭಾರತವನ್ನು ತೊರೆದ ನಂತರ ಅವರ ಸಮುದಾಯಕ್ಕೆ ಏನಾಗಬಹುದು ಎಂದು ತಮ್ಮ ಮನಗಳಲ್ಲಿ ಪ್ರಶ್ನೆಯೊಂದನ್ನು ಹುಟ್ಟುಹಾಕಿಕೊಂಡಿದ್ದರು. ಅದೇ ರೀತಿ ಪ್ರತಿಕ್ರಿಯಿಸಿದ ಸಚಿವರು, “ನಿಮ್ಮ ಈ ಸಣ್ಣ ಸಮುದಾಯವು ಸಮಾಜದಲ್ಲಿ ಚೆನ್ನಾಗಿ ಬೆರೆತುಕೊಂಡಿದೆ, ಸ್ವಾತಂತ್ರ‍್ಯದ ನಂತರ, ಈ ಸಮುದಾಯವು ಜವಾಬ್ದಾರಿಯುತ ನಾಗರಿಕ ಪಾತ್ರವನ್ನು ವಹಿಸಬೇಕಾಗಿದೆ” ಎಂದರು.
ದೂರದ ಪುಣೆಯಲ್ಲಿ, ವೀರ್ ಸಾರ‍್ಕರ್ ಅವರ ಗೌರವಾರ್ಥ ಎಸ್. ಪಿ. ಕಾಲೇಜಿನಲ್ಲಿ ಸಾರ್ವಜನಿಕ ಸಭೆ ನಡೆಯುತ್ತಿತ್ತು. ರಾಷ್ಟ್ರದ ಸ್ವಾತಂತ್ರ‍್ಯ ಮತ್ತು ವಿಭಜನೆಯ ಮೇರೆಗೆ ದೇಶದ ಪ್ರಚಲಿತ ಪರಿಸ್ಥಿತಿ ಕುರಿತು ಸ್ವತಃ ತಾತ್ಯಾರಾವ್ (ಸಾರ‍್ಕರ್) ಮಾತನಾಡಬೇಕಾಗಿತ್ತು. ಈ ಸಭೆಗೆ ಗುಂಪು-ಗುಂಪಾದ ಜನಸಾಗರವೇ ಹರಿದು ಬಂದಿತ್ತು. ನಿಜಾರ್ಥದಲ್ಲಿ ಇದೊಂದು ಅತ್ಯಂತ ಯಶಸ್ವಿ, ದೊಡ್ಡ ಸಮಾವೇಶವಾಗಿತ್ತು. ವೀರ ಸಾರ‍್ಕರ್ ಮಾತನಾಡಿ, “ನಾವು ಹಿಂದೂಗಳೆಲ್ಲರೂ ಹಿಂದೂಗಳೆಂದು ಕರೆದುಕೊಳ್ಳಲು ಹಿಂಜರಿಕೆ ಏಕೇ?… … ಹಿಂದೂಗಳ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಮುಖ್ಯ ದೋಷಿಯಾಗಿದ್ದರೂ, ಜನರು ಸಹ ದೊಡ್ಡ ಪ್ರಮಾಣದಲ್ಲಿ ಅದಕ್ಕೆ ಕಾರಣೀಕರ್ತರಾಗಿದ್ದಾರೆ. ಇದು ಕಾಲಕಾಲಕ್ಕೆ ಅವರು ಕಾಂಗ್ರೆಸ್ಸಿಗೆ ನೀಡಿದ ಬೆಂಬಲದ ಫಲಿತಾಂಶವಾಗಿದೆ. ಇದನ್ನು ಪುನರಾವರ್ತಿಸುವ ಕಾರಣದಿಂದಾಗಿ ಈ ದೇಶವನ್ನು ವಿಭಜಿಸುವಲ್ಲಿ ಒಂದು ಮಾರ್ಗ ಯಶಸ್ವಿಯಾಗಿದೆ.” ಎಂದು ಸಿಂಹಧ್ವನಿಯಲ್ಲಿ ಗರ್ಜಿಸಿದರು.

ಏತನ್ಮಧ್ಯೆ ಶ್ರೀನಗರದಲ್ಲಿ, ಕಾಶ್ಮೀರಕ್ಕೆ ಗಾಂಧೀಜಿಯವರ ಮೊದಲ ಭೇಟಿಯ ಎರಡನೇ ದಿನ ಸಿದ್ದಗೊಂಡಿತ್ತು. ಈ ದಿನ ಯಾವುದೇ ಮುಖ್ಯವಾದ ಪ್ರಮುಖ ಘಟನೆಗಳೊಂದಿಗೆ ತುಂಬಿರಲಿಲ್ಲ, ಬೆಳಗಿನ ಪ್ರಾರ್ಥನೆಯ ನಂತರ ತನ್ನ ಮಗಳೊಂದಿಗೆ ಬೇಗಂ ಅಕ್ಬರ್ ಜಹಾನ್, ಗಾಂಧೀಜಿ ತಂಗಿದ್ದ ಕಿಶೋರಿ ಲಾಲ್ ಸೇಥಿ ಅವರ ಮನೆಗೆ ಬಂದರು, ಗಾಂಧೀಜಿಯ ಜೊತೆಗಿನ ಚರ್ಚೆಯಲ್ಲಿ, ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ತನ್ನ ಗಂಡ (ಶೇಖ್ ಅಬ್ದುಲ್ಲಾ) ಜೈಲಿನಿಂದ ಬಿಡುಗಡೆಯಾಗುವುದು ಎಷ್ಟು ಮುಖ್ಯವಾಗಿದೆ ಎಂಬುದನ್ನು ಗಾಂಧೀಜಿಗೆ ವಿವರಿಸಿದಳು. ಆ ದಿನವೂ ಸಹ, ನ್ಯಾಷನಲ್ ಕಾನ್ಫರೆನ್ಸ್ ಮುಸ್ಲಿಮ್ ಮುಖಂಡರು ಗಾಂಧೀಜಿ ಯ ಜೋತೆಯಲ್ಲಿಯೆ ಇದ್ದರು. ಹೀಗಿದ್ದರೂ, ಗಾಂಧೀಜಿ ಅಂದು ಅನೇಕ ಹಿಂದೂ ನಾಯಕರು ಸೇರಿದಂತೆ ಅನೇಕ ಜನರನ್ನು ಭೇಟಿಯಾದರು. ರಾಮಚಂದ್ರ ಕಾಕ್ ನೀಡಿದ ಆಹ್ವಾನದಂತೆ ಮರುದಿನ ಆಗಸ್ಟ್ ೩ ರಂದು ಮಹಾರಾಜ ಹರಿ ಸಿಂಗ್ ಅವರನ್ನು ಭೇಟಿ ಮಾಡಲು ಗಾಂಧೀಜಿಯವರು ಹೋಗುವವರಿದ್ದರು.

ಲಾಹೋರ್, ಪಿಂಡಿ, ಪೇಷಾವರ್, ಚಿಟ್ಗಾಂವ್, ಢಾಕಾ, ಅಮೃತಸರಗಳಲ್ಲಿ ಹಿಂದು-ಮುಸ್ಲಿಂ ಕದನಗಳು ದಿನವೂ ಮುಂದುವರೆಯಿತು. ಆದಾಗ್ಯೂ, ರಾತ್ರಿಯ ಕತ್ತಲೆ ಈ ಪ್ರದೇಶವನ್ನು ಆವರಿಸಿದ್ದರಿಂದ, ದೊಡ್ಡ ಜ್ವಾಲೆಗಳು ದಿಗಂತದಲ್ಲಿ ಗೋಚರಿಸುತ್ತಿದ್ದವು.

ಆಗಸ್ಟ್ ೨ ರ ರಾತ್ರಿಯೂ ಕೂಡಾ ಪ್ರಕ್ಷುಬ್ಧತೆಯಿಂದ ತುಂಬಿತ್ತು …!

 

ಮೂಲ ಹಿಂದಿ ಲೇಖನ: ಪ್ರಶಾಂತ್ ಪೋಲ್

ಕನ್ನಡ ಅನುವಾದ : ಪರಪ್ಪ ಶಾನವಾಡ

Leave a Reply

Your email address will not be published.

This site uses Akismet to reduce spam. Learn how your comment data is processed.