ಮೈಸೂರು, ೩೧ ಅಕ್ಟೋಬರ್ ೨೦೧೭: ನಗರದಲ್ಲಿ ಇಂದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ, ಟಿಪ್ಪುವಿನ ನಿಜ ಚಿತ್ರಣವನ್ನು ಜನರ ಮುಂದಿಡುವ ಸಲುವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

  1. ವಕೀಲರು ಹಾಗೂ ಖ್ಯಾತ ಅಂಕಣಕಾರರು ಶ್ರೀ ತೇಜಸ್ವಿ ಸೂರ್ಯ ಮಾತನಾಡಿ, ಟಿಪ್ಪು ಜಯಂತಿಯ ವಿರೋಧಿಸುವ ಕೊನೆಯ ಕಾರ್ಯಕ್ರಮ ಇದಾಗಲಿದೆ. ಮುಂದೆಂದೂ ಈ ಉದ್ಧಟತನವನ್ನು ಸರ್ಕಾರಗಳು ತಳೆಯದಿರಲಿ ಎಂದರು. ಈ ರಾಜ್ಯದ ಮುಖ್ಯ ಮಂತ್ರಿಗಳು ಎಲ್ಲಾ ಜನರ/ ಜನಾಂಗದ ಮುಖ್ಯ ಮಂತ್ರಿಯಾಗಿರದೇ ಓಲೈಕೆ ರಾಜಕಾರಣ ಮಾಡಿಕೊಂಡು ಬರುತ್ತಿರುವುದು ಹೇಯವೆಂದು ಕರೆದರು.

    ತೇಜಸ್ವಿ ಸೂರ್ಯ ಮಾತನಾಡುತ್ತಾ, ಯಾವುದೇ ವ್ಯಕ್ತಿಯ / ಮಹಾ ಪುರುಷರ ಜಯಂತಿಯನ್ನು ಆಚರಿಸುವುದು ಅವರು ನಡೆದ ಬಗೆಯನ್ನು ಸ್ಮರಿಸಿ ಅವರ ಹಾದಿಯಲ್ಲಿ ಯುವ ಜನತೆ ಮುನ್ನಡೆಯಲಿ ಎಂದು. ಹಾಗಾಗಿಯೇ ರಾಮ ನವಮಿಯನ್ನು , ಬಸವ, ವಾಲ್ಮೀಕಿ ಜಯಂತಿಯನ್ನು ಜನರೇ ಆಚರಿಸುತ್ತಾರೆ, ಆದರೆ ಟಿಪ್ಪುವಿನಲ್ಲಿ ಪ್ರೇರಣೆ ಪಡೆಯುವಂತಹುದೇನಿದೆ. ಮತ್ತು ಈ ಜಯಂತಿಯನ್ನು ಸೆಕ್ಷೆನ್ಗಳು ಹಾಕಿಯಾದರು ಪ್ರತಿಭಟನಾಕಾರರನ್ನು ತಡೆದು ಆಚರಿಸಿಯೇ ತೀರುತ್ತೇವೆ ಎಂದು ಹಠಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಟಿಪ್ಪು ಒಬ್ಬ ಅಫಘಾನದ ಮುಸಲ್ಮಾನ ದೊರೆಗೆ ಬರೆದ ಪತ್ತ್ರದಲ್ಲಿ ಭಾರತಕ್ಕೆ ಬಂದು ಇಲ್ಲಿನ ಕಾಫಿರರನ್ನು ಮತಾಂತರಗೊಳಿಸಿ ಎಂದು ಬರೆಯುವುದಲ್ಲದೇ, ಆ ದೊರೆಯನ್ನು ಉತ್ತರದಿಂದ ಭಾರತವನ್ನು ಗೆಲ್ಲುತ್ತಾ ಬನ್ನಿ, ತಾನು ದಕ್ಷಿಣದಿಂದ ಗೆಲ್ಲುತ್ತಾ ಬಂದು ಇಬ್ಬರೂ ದೇಶವನ್ನು ಹಂಚಿಕೊಳ್ಳೋಣವೆಂದು ಬರದಿದ್ದನು. ಟಿಪ್ಪುವಿನ ದಬ್ಬಾಳಿಕೆಯಿಂದ ಮುಸಲ್ಮಾನರಾಗಿ ಮತಾಂತರಗೊಂಡಿದ್ದವರನ್ನು ಮಾತೃ ಧರ್ಮಕ್ಕೆ ತರುವ ಕಾರ್ಯದಲ್ಲಿ ತೊಡಗುವುದೇ ಸರಿಯಾದ ಟಿಪ್ಪು ಜಯಂತಿ ಆಚರಣೆ ಎಂಬ ಕರೆ ನೀಡಿದರು.

ರಾಬರ್ಟ್ ರೊಸಾರಿಯೋ, ಲೇಖಕರು ಹಾಗೂ ಕ್ರೈಸ್ತ ಮುಖಂಡರು ಮಾತನಾಡಿ ಟಿಪ್ಪು ನಮ್ಮ ರಾಜ್ಯದ ದೇವಸ್ಥಾನಗಳನ್ನು ಮಾತ್ರವಲ್ಲ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ನಮ್ಮ (ಕ್ರೈಸ್ತರ) ಚರ್ಚುಗಳು ಟಿಪ್ಪುವಿನಿಂದ ಧ್ವಂಸಗೊಂಡಿವೆ, ಇಂತಹ ಮತಾಂಧ ಟಿಪ್ಪುವಿನ ಜಯಂತಿಯನ್ನು ಮುಖ್ಯಮಂತ್ರಿಗಳು ಆಚರಿಸುತ್ತಿರುವುದು ದೌರ್ಭಾಗ್ಯವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ಯಾವುದೇ ಅಲ್ಪಸಂಖ್ಯಾತ ಜನರ ಆಚರಣೆಗೆ ಧಕ್ಕೆಯಾಗದ ಹಾಗೆ ಸರ್ಕಾರದ ಕಾರ್ಯಕ್ರಮವನ್ನು ನಡೆಸಬೇಕು, ಆದರೆ ಈ ರಾಜ್ಯದ ಮುಖ್ಯಮಂತ್ರಿಗಳು ಬಹುಸಂಖ್ಯಾತ ಜನರ ವಿರೋಧದ ನಡುವೆಯೂ ಈ ಟಿಪ್ಪು ಜಯಂತಿಯನ್ನು ಆಚರಿಸುತ್ತಿದ್ದಾರೆಂಬ ವಾದವನ್ನು ಮಾಡಿದರು

ಕೊಡಗಿನ ವಕೀಲರಾದ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ ಕೊಡವರಲ್ಲಿ ಹಲವಾರು ಬಾರಿ ಯುದ್ಧಮಾಡಿ ಸೋತು ಸುಣ್ಣಾಗಿ ಹೋದ ಟಿಪ್ಪು ಫ್ರೆಂಚರ ಸೈನಿಕರ ಸಹಾಯ ತೆಗೆದುಕೊಂಡು ಕೊಡಗಿನ ಕಾಡನ್ನು ಸುತ್ತುವರಿದು ಕೊಡವರ ಮೇಲೆ ಆಕ್ರಮಣ ಮಾಡಿದವನು. ತಾಯಿ ಮಕ್ಕಳೆನ್ನದೆ ಹತ್ಯೆಗೈದ ಇಂತಹ ಕಟುಕನನ್ನು ನಾಡಪ್ರೀಮಿ ಅಥವ ದೇಶಪ್ರೇಮಿ ಎನ್ನಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

 

ವರದಿ : ಕಿರಣ, ಮೈಸೂರು

Leave a Reply

Your email address will not be published.

This site uses Akismet to reduce spam. Learn how your comment data is processed.