ಆತ್ಮೀಯ ಸ್ವಯಂಸೇವಕ ಬಂಧುಗಳೇ
ರಾಷ್ಟ್ರೀಯ ಸ್ವಯಂಸೇವಕ ಸಂಘವು ವ್ಯಕ್ತಿ ನಿರ್ಮಾಣ ದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಧ್ಯೇಯ ಇಟ್ಟುಕೊಂಡು ಕಳೆದ 97 ವರ್ಷಗಳಿಂದ ಯಶಸ್ವಿಯಾಗಿ ದೇಶಪ್ರೇಮ, ಸಂಘಟನೆ, ಸೇವಾ, ವ್ಯವಸ್ಥಾ ಪರಿವರ್ತನೆ ಮಾಡುತ್ತಾ ಸಮಾಜ ಪರಿವರ್ತನೆ ಕಾರ್ಯದಲ್ಲಿ ಎಲ್ಲರ ಭಾಗವಹಿಸುವಿಕೆ ಯನ್ನು ಅಪೇಕ್ಷೆ ಪಡುತ್ತದೆ.
ಪ್ರಸ್ತುತ ದೇಶದಲ್ಲಿ 62000ಶಾಖೆಗಳು,
20000 ಸಾಪ್ತಾಹಿಕ ಮಿಲನ್, 9000 ಮಾಸಿಕ ಸಂಘ ಮಂಡಳಿ ನಡೆಯುತ್ತಿವೆ.
42 ವಿವಿಧ ಕ್ಷೇತ್ರ ಸಂಘಟನೆ, 1.50 ಲಕ್ಷ ಸೇವಾ ಚಟುವಟಿಕೆಗಳು, 40 ದೇಶ ಗಳಲ್ಲಿ ಸಂಘ ಕಾರ್ಯ, 75000 ಸ್ಥಾನ ಗಳಲ್ಲಿ ಕಾರ್ಯ ನಡೆಯುತ್ತಿದೆ. ದೇಶದಲ್ಲಿ ಒಟ್ಟು
4 ಕೋಟಿ ಜನ ರಾಷ್ಟ್ರ ಕಾರ್ಯದಲ್ಲಿ ತೊಡಗಿದ್ದಾರೆ.
2025 ಕ್ಕೆ ಸಂಘಕ್ಕೆ 100 ವರ್ಷಗಳು ತುಂಬುವ ಸಂದರ್ಭಕ್ಕೆ ನಮ್ಮ ದೇಶದ ಪರಮ ವೈಭವ ಸಂಕಲ್ಪ ಸಾಕಾರಗೊಳ್ಳಬೇಕು.
ಈ ನಿಟ್ಟಿನಲ್ಲಿ ನಮ್ಮ ಪ್ರಾಂತದ ವಿಶೇಷ ಯೋಜನೆ ಡಿಸೆಂಬರ್ 11 ರ ಭಾನುವಾರದಂದು ಮಂಡಲ(ಗ್ರಾಮ ಪಂಚಾಯತ್ ಮಟ್ಟ )ಮತ್ತು ವಸತಿ ( ನಗರ ಪ್ರದೇಶ )ಸಾಂಘಿಕ್. ಒಟ್ಟು 4659 ಸ್ಥಳ ಗಳಲ್ಲಿ ಆ ದಿನ 1 ಘಂಟೆ ಯ ಸಾಂಘಿಕ್ (ಒಟ್ಟು ಸೇರಿ ವ್ಯಾಯಾಮ, ಆಟ, ಯೋಗ, ದೇಶದ ಮತ್ತು ಸ್ಥಳೀಯ ಸಮಾಜ ಚಿಂತನೆ )ಇರುತ್ತದೆ
ನಾವೆಲ್ಲರೂ ನಮ್ಮ ಊರಿನ / ಪ್ರದೇಶದ ಯಾವ ಜಾಗದಲ್ಲಿ ಯೋಜನೆ ಆಗಿದೆ ಎನ್ನುವುದನ್ನು ತಿಳಿದುಕೊಂಡು ಭಾಗವಹಿಸೋಣ. ಬೇರೆ ಕಡೆ ಇರುವ ನಮ್ಮ ಬಂಧು, ಮಿತ್ರರಿಗೆ ತಿಳಿಸೋಣ.
ವಂದನೆಗಳು,
ಡಾ. ಜಯಪ್ರಕಾಶ್ ಕರ್ನಾಟಕ ದಕ್ಷಿಣ
ಪ್ರಾಂತ ಕಾರ್ಯವಾಹ.