ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯಾಧ್ಯಕ್ಷರು ಮತ್ತು ಹಿರಿಯ ನ್ಯಾಯವಾದಿಗಳಾದ ಅಲೋಕ್ ಕುಮಾರ್ ಅವರು ಮಾತನಾಡಿ,”ದೆಹಲಿಯ ಭಕ್ಕರವಾಲಿಯಲ್ಲಿ EWS ಫ್ಲಾಟ್‌ಗಳನ್ನು ರೋಹಿಂಗ್ಯಾ ವಲಸಿಗರಿಗೆ ಮಂಜೂರು ಮಾಡುವ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವ ಹರದೀಪ್ ಪುರಿ ಅವರ ಹೇಳಿಕೆ ನಿಜಕ್ಕೂ ಖೇದಕರ” ಎಂದಿದ್ದಾರೆ.

“ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಸದನದಲ್ಲಿ 10.13.2020ರಂದು ಮಾತನಾಡುತ್ತಾ ರೋಹಿಂಗ್ಯಾಗಳನ್ನು ಯಾವುದೇ ಕಾರಣಕ್ಕೂ ಭಾರತದೊಳಗೆ ಸ್ವೀಕಾರ ಮಾಡುವುದಿಲ್ಲ ಎಂದಿದ್ದರು, ಇದನ್ನು ನಾವು ಪುರಿಯವರಿಗೆ ಮತ್ತೆ ನೆನಪಿಸಲು ಬಯಸುತ್ತೇವೆ.”

ಅಲೋಕ್ ಕುಮಾರ್ ಅವರು ಮುಂದುವರೆದು ಮಾತನಾಡುತ್ತಾ “ರೋಹಿಂಗ್ಯಾಗಳು ಕೇವಲ ಅಕ್ರಮವಾಗಿ ಬಂದವರು ವಲಸಿಗರಲ್ಲ,ಇದೇ ನಿಲುವನ್ನು ಕೇಂದ್ರ ಸರಕಾರವು ಸುಪ್ರಿಂ ಕೋರ್ಟಿಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿಯೂ ಸಲ್ಲಿಸಿದೆ.”

“ಬೇರೆ ಬೇರೆ ದೇಶಗಳಿಂದ ಬಂದಿರುವ ಹಿಂದೂ ಶರಣಾರ್ಥಿಗಳು ದೆಹಲಿಯ ಮಜ್ನು ಕಿ ತಲಾದಲ್ಲಿ ತೀರ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವಾಗ ಸರಕಾರ ರೋಹಿಂಗ್ಯಾಗಳಿಗೆ ಈ ರೀತಿಯ ಬಹುಮಾನ ನೀಡಿರುವುದು ನಿಜಕ್ಕೂ ಅತ್ಯಂತ ಶೋಚನೀಯ”.

“ವಿಶ್ವ ಹಿಂದೂ ಪರಿಷತ್ ರೋಹಿಂಗ್ಯಾಗಳಿಗೆ ನೆಲೆ ಕೊಡುವುದರ ಬದಲಿಗೆ ಅವರನ್ನು ಭಾರತದಿಂದ ಹೊರಗೆ ಓಡಿಸಬೇಕೆಂದು ಆಗ್ರಹಿಸುತ್ತದೆ.” ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.