
ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜರಾಜೇಶ್ವರಿನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (JMRH&RC) ಕ್ಕೆ ಬುಧವಾರ ಭೇಟಿ ನೀಡಿದರು.

ಸಮಾಜದ ಯೋಗಕ್ಷೇಮಕ್ಕಾಗಿ ಶ್ರಮವಹಿಸುತ್ತಿರುವ ರಾಷ್ಟ್ರೋತ್ಥಾನದ ಪ್ರಯತ್ನದ ಕುರಿತು ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಒಬಿಜಿ ವಿಭಾಗದ ಮುಖ್ಯಸ್ಥೆ ಡಾ.ಲತಾ ವೆಂಕಟರಾಮ್ ಮತ್ತು ಡಬ್ಲ್ಯುಎಂಎನ್ ಹೆಲ್ತ್ ಸರ್ವೀಸಸ್ ಪ್ರೈ.ಲಿ. ನ ತಂಡದವರು ಉಪಸ್ಥಿತರಿದ್ದರು.
