ವಿದ್ಯಾ ಭಾರತಿಯ ಅಖಿಲ ಭಾರತೀಯ ಮಹಾಸಭೆಯು ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಏಪ್ರಿಲ್ 7-9ರ ವರೆಗೆ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಡಾ. ಕೃಷ್ಣ ಗೋಪಾಲ್ ಮಾರ್ಗದರ್ಶನ ಮಾಡಿದರು.


ಖ್ಯಾತ ಶಿಕ್ಷಣ ತಜ್ಞ ಡಾ. ಎಂ. ಕೆ. ಶ್ರೀಧರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ದೇಶದಾದ್ಯಂತ 300ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು. ಶೈಕ್ಷಣಿಕ ಕಾರ್ಯದ ಸ್ಥಿತಿಗತಿ, ಕಾರ್ಯ ವಿಸ್ತರಣೆ, ಶಿಕ್ಷಣದ ಗುಣಮಟ್ಟ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಹಳೆಯ ವಿದ್ಯಾರ್ಥಿಗಳ ಕ್ರಿಯಾಶೀಲತೆ ಇತ್ಯಾದಿಗಳ ಕುರಿತು ಚಿಂತನೆ ನಡೆಸಲಾಯಿತು.

