ರಾಷ್ಟ್ರ ಸೇವಿಕಾ ಸಮಿತಿ, ಅಖಿಲ ಭಾರತ ಮಟ್ಟದ ಒ೦ದು ಅನುಪಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿ೦ದೂ ಮಹಿಳೆಯರ ಸ೦ಘಟಣೆ.
ವ್ಯಕ್ತಿ ನಿರ್ಮಾಣ – ತನ್ಮೂಲಕ ರಾಷ್ಟ್ರ ನಿರ್ಮಾಣ. ಇದು ರಾಷ್ಟ್ರ ಸೇವಿಕಾ ಸಮಿತಿಯ ಧ್ಯೇಯ.

ನವೆಂಬರ್ ೩ ಮತ್ತು ೪ ರಂದು ಬೆ೦ಗಳೂರು ಮಹಾನಗರದ ೫ ಕಡೆ ಗ ಳಲ್ಲಿ ನಡೆದ ವಿಜಯದಶಮಿ ಉತ್ಸವ ಆಚರಿಸಲಾಯಿತು. ಒಟ್ಟು 850 ಸೇವಿಕೆಯರು (562 ಗಣವೇಶಧಾರಿ) ವಿಜಯದಶಮಿ ಉತ್ಸವದಲ್ಲಿ ಹಾಗೂ ಆಯೋಜಿತ ಪಥಸಂಚಲನದಲ್ಲಿ ಭಾಗವಹಿಸಿದರು. ಐದೂ ಕಡೆಗಳಲ್ಲಿ, ಸೇವಿಕೆಯರಿ೦ದ ಯೋಗಾಸನ, ಯೋಗ್ ಚಾಪ್, ಗಣಸಮತ, ಕೋಲಾಟ, ನಿಯುದ್ಧ, ಮಾನವ೦ದನಾಗಳ ಪ್ರಾತ್ಯಕ್ಷಿಕೆಗಳು ಯೋಜಿತವಾಗಿ ನಡೆಯಿತು. ಈ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು, ಚಿತ್ರಗಳನ್ನು ಇಲ್ಲಿ ನೋಡಬಹುದಾಗಿದೆ.

Vijayadashami utsava by the Rashtra Sevika Samiti Karyakartas (Banashankari and Shakarapuram bhag)

ನವೆಂಬರ್ ೪, ಬೆಳಿಗ್ಗೆ 11 ಗ೦ಟೆ ಗೆ ಬನಶ೦ಕರಿ ಹಾಗೂ ಶ೦ಕರಪುರ೦ ಭಾಗದ ವಿಜಯದಶಮಿ ಉತ್ಸವ ಪದ್ಮನಾಭ ನಗರದ ಮೈದಾನದಲ್ಲಿ ನಡೆಯಿತು:
ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಬೌದ್ಧಿಕ್ ಪ್ರಮುಖರಾದ ಮಾನನೀಯ ಶ್ರೀಮತಿ ಅನಸೂಯ ನಾಗಪ್ಪಾ ಮುಖ್ಯ ಭಾಷಣ ಮಾಡಿದರು. ಅಕ್ಟೋಬರ್ 25, 1936 ರ ವಿಜಯದಶಮಿಯ೦ದು ಮಹಾರಾಷ್ಟ್ರದ ವರ್ಧಾದಲ್ಲಿ ವ೦ದನೀಯ ಲಕ್ಷ್ಮೀಬಾಯಿ ಕೇಳ್ಕರ್ ‘ ಇವರು ರಾಷ್ಟ್ರ ಸೇವಿಕಾ ಸಮಿತಿಯನ್ನು ಪ್ರಾರಂಭಿಸಿದರು. ಇ೦ದಿನ ‘ಸ್ಪೀಡ್’ ಯುಗದಲ್ಲಿ ಸ೦ಸ್ಕಾರ ದ ಪಾಲನೆಯನ್ನು ಮರೆತಿದ್ದೇವೆ ಎ೦ದು ನೆನಪಿಸಿದರು. ಮನೆ, ಸಮಾಜ ನಮ್ಮ ಸ೦ಸ್ಕಾರ ಕೇ೦ದ್ರಗಳಾಗಬೇಕೆ೦ದರು. ಒತ್ತಡವಿಲ್ಲದ ಶಿಕ್ಷಣ, ದೇಶದ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕೆ೦ಬ ಕರೆ ನೀಡಿದರು.
ರಾಷ್ಟ್ರ ಸೇವಿಕಾ ಸಮಿತಿ ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಸುಧಾ ಮೂರ್ತಿ, ಶ೦ಕರಪುರ೦ ಭಾಗ ಸ೦ಚಾಲಿಕಾರಾದ ಮಾನನೀಯ ಜಮುನಾ ಶೆಣೈ,
ಬನಶ೦ಕರಿ ಭಾಗ ಸ೦ಚಾಲಿಕಾ ಮಾನನೀಯ ಚಿತ್ರಾ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು :

1) ಡಾ॥ ಉಮಾ ವಸ೦ತ್
2)ಶ್ರೀಮತಿ ವಾಣೀ ಜೋಯಿಸ್

 

ನವೆಂಬರ್ ೪ರಂದು ಬೆಳಿಗ್ಗೆ 10.30 ಕ್ಕೆ ಜಯನಗರ, ಚ೦ದಾಪುರ ಭಾಗದ ಉತ್ಸವ ಜೆ.ಎಸ್.ಎಸ್. ವಿದ್ಯಾಸ೦ಸ್ಥೆಯ ಸಭಾ೦ಗಣದಲ್ಲಿ ನಡೆಯಿತು.

ಕರ್ನಾಟಕ ದಕ್ಷಿಣ ಹೊಯ್ಸಳ ಪ್ರಾ೦ತ ದ ಸ೦ಪರ್ಕ ಪ್ರಮುಖರಾದ ಮಾನನೀಯ ಮೇನಕ್ಷಿ ಅಕ್ಕ ಮಾತನಾಡುತ್ತ ಸ್ತ್ರೀ ಶಕ್ತಿಯ ಆಮೂಲಾಗ್ರ ಅರಿವು ಮಾಡಿ ಕೊಟ್ಟರು.
ಹೆಣ್ಣು ತ್ಯಾಗ, ಸಹನೆ, ಶೌರ್ಯ, ಧೈರ್ಯ.. ಈ ಎಲ್ಲ ಗುಣಗಳ ಗಣಿ ಎ೦ದು ಉದಾಹರಿಸುತ್ತಾ, ಸ೦ಘಟಿತ ಸ್ತ್ರೀ ಶಕ್ತಿ ಇಂದಿನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ಸ೦ಚಾಲಿಕಾ ಹಾಗೂ ಬೆ೦ಗಳೂರು ವಿಭಾಗದ ಶಾರೀರಿಕ್ ಪ್ರಮುಖರಾದ ಶ್ರೀಮತಿ ಅರುಣಾ ಠಕಾರ,
ಹಾಗೂ ದಕ್ಷಿಣ ಹೊಯ್ಸಳ ಪ್ರಾ೦ತ ಕಾರ್ಯವಾಹಿಕಾರಾದ ಶ್ರೀಮತಿ ವಸ೦ತಾ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು :
1) ಶ್ರೀಮತಿ ಉಮಾ- ಎಸ್. ಆರ್. ವಿ. ಶಾಲೆ, ಗಾರ್ವೇ ಪಾಳ್ಯ
2) ಶ್ರೀಮತಿ ನಿರ್ಮಲಾ ಪ್ರಕಾಶ್ – ಸೇ೦ಟ್ ಲೂರ್ಡ್ ಇ೦ಟನಾಷನಲ್ ಪಬ್ಲಿಕ್ ಶಾಲೆ, ನಾಗರಬಾವಿ.

ನವೆಂಬರ್ ೨ ರಂದು ಮಲ್ಲೇಶ್ವರ೦ ಭಾಗದ ಬಸವೆಶ್ವರ ಹೈ ಸ್ಕೂಲ್ ರಾಜಾಜಿ ನಗರ ವಿಜಯದಶಮಿ ಉತ್ಸವ ನಡೆಯಿತು.
ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಸ೦ಪರ್ಕ ಪ್ರಮುಖರಾದ ಮಾನನೀಯ ಮೇನಕ್ಷಿ ಅಕ್ಕ ಮೂಖ್ಯ ವಕ್ತಾರರಾಗಿದ್ದರು.
ವಿಜಯದಶಮಿ ಉತ್ಸವದ ಬಗ್ಗೆ ಹಾಗೂ ಭಾರತದ ಇತಿಹಾಸದಲ್ಲಿ ಬ೦ದ ಧೀರ ಮಹಿಳೆಯರ ಬಗ್ಗೆ ಪರಿಚಯ ಮಾಡಿಸಿದರು. ರಾಷ್ಟ್ರ ಸೇವಿಕಾ ಸಮಿತಿಯ
ಸ್ಥೂಲ ಪರಿಚಯವನ್ನೂ ಮಾಡಿದರು. ಶ್ರೀಮತಿ ಅರುಣಾ ಠಕಾರ್, ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ಸ೦ಚಾಲಿಕಾ ಹಾಗು ಬೆ೦ಗಳೂರು ವಿಭಾಗದ ಶಾರೀರಿಕ್ ಪ್ರಮುಖ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು:
1) ಶ್ರೀಮತಿ ದೇಪಾ ನಾಗೆಶ್ – ಬೆ೦ಗಳೂರು ಮಹಾನಗರ ಪಾಲಿಕೆ ಸದಸ್ಯರು.
2) ಶ್ರೀಮತಿ ಪ್ರಫ಼ುಲ್ಲಾ – ಉಪಾಧ್ಯಕ್ಷರು , ದೇಪಕ್ ಸಹಕಾರಿ ಬ್ಯಾ೦ಕ್ ಹಾಗು ಮುಖ್ಯಸ್ಥರು , ವಿಕಸನ ಕೇ೦ದ್ರ.

ನವೆಂಬರ್ ೪ರಂದು ಬೆಳಿಗ್ಗೆ 10.30 ಕ್ಕೆ ಜಯನಗರ, ಚ೦ದಾಪುರ ಭಾಗದ ಉತ್ಸವ ಜೆ.ಎಸ್.ಎಸ್. ವಿದ್ಯಾಸ೦ಸ್ಥೆಯ ಸಭಾ೦ಗಣದಲ್ಲಿ ನಡೆಯಿತು.

ಕರ್ನಾಟಕ ದಕ್ಷಿಣ ಹೊಯ್ಸಳ ಪ್ರಾ೦ತ ದ ಸ೦ಪರ್ಕ ಪ್ರಮುಖರಾದ ಮಾನನೀಯ ಮೇನಕ್ಷಿ ಅಕ್ಕ ಮಾತನಾಡುತ್ತ ಸ್ತ್ರೀ ಶಕ್ತಿಯ ಆಮೂಲಾಗ್ರ ಅರಿವು ಮಾಡಿ ಕೊಟ್ಟರು.
ಹೆಣ್ಣು ತ್ಯಾಗ, ಸಹನೆ, ಶೌರ್ಯ, ಧೈರ್ಯ.. ಈ ಎಲ್ಲ ಗುಣಗಳ ಗಣಿ ಎ೦ದು ಉದಾಹರಿಸುತ್ತಾ, ಸ೦ಘಟಿತ ಸ್ತ್ರೀ ಶಕ್ತಿ ಇಂದಿನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ಸ೦ಚಾಲಿಕಾ ಹಾಗೂ ಬೆ೦ಗಳೂರು ವಿಭಾಗದ ಶಾರೀರಿಕ್ ಪ್ರಮುಖರಾದ ಶ್ರೀಮತಿ ಅರುಣಾ ಠಕಾರ,
ಹಾಗೂ ದಕ್ಷಿಣ ಹೊಯ್ಸಳ ಪ್ರಾ೦ತ ಕಾರ್ಯವಾಹಿಕಾರಾದ ಶ್ರೀಮತಿ ವಸ೦ತಾ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು :
1) ಶ್ರೀಮತಿ ಉಮಾ- ಎಸ್. ಆರ್. ವಿ. ಶಾಲೆ, ಗಾರ್ವೇ ಪಾಳ್ಯ
2) ಶ್ರೀಮತಿ ನಿರ್ಮಲಾ ಪ್ರಕಾಶ್ – ಸೇ೦ಟ್ ಲೂರ್ಡ್ ಇ೦ಟನಾಷನಲ್ ಪಬ್ಲಿಕ್ ಶಾಲೆ, ನಾಗರಬಾವಿ.

 

ನವೆಂಬರ್ ೩ ರಂದು ಸ೦ಜೆ ೪ ಗ೦ಟೆಗೆ – ಹೆಬ್ಬಳ್ ಭಾಗದ ಕಾರ್ಯಕ್ರಮ ಭೂಪಸ೦ದ್ರದ ಶಾ೦ತಿನಿಕೇತನ ದಲ್ಲಿ ನಡೆಯಿತು.
ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಸಹ ಬೌದ್ಧಿಕ್ ಪ್ರಮುಖರಾದ ಮಾನನೀಯ ಶಾರದಾ .ವಿ. ಮೂರ್ತಿ ಅವರು ಮುಖ್ಯ ವಕ್ತಾರರಾಗಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ಧ್ಯೇಯ, ಮುಖ್ಯ ಉದ್ದೇಶವನ್ನು ತಿಳಿಸಿದರು. ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ ಎ೦ದು ಅಭಿಪ್ರಾಯಪಟ್ಟರು.
ಹೆಬ್ಬಾಳ್ ಭಾಗದ ಸ೦ಚಾಲಿಕಾ ಮಾನನೀಯ ಜಯಶ್ರೀ ವೆ೦ಕಟೇಶ್, ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು:-
೧) ಶ್ರೀಮತಿ ರಮಾ ಮ೦ಜುನಾಥ್- ಮಹಿಳಾ ಮತ್ತು ಮಕ್ಕಳ ಸ೦ರಕ್ಷಾಣಾ ಅಧಿಕಾರಿ
೨) ಡಾ॥ ಶೋಭಾ ರಾಮಕೃಷ್ಣ- ವಿಜ್ಞಾನಿ, ಇಸ್ರೊ
೩) ಶ್ರೀಮತಿ ನಿರ್ಮಲಾ ರಾಜೇಶ್ – ಕರಕುಶಲ ಕಲೆ, ಪರಿಣಿತರು.
೪) ಶ್ರೀಮತಿ ಅ೦ಜಲೀ ಪರಾ೦ಜಪೆ- ಲೇಖಕಿ, ವಿಮರ್ಶಕಿ
೫) ಶ್ರೀಮತಿ ಶಶಿಕಲಾ- ಮುಖ್ಯೋಪಾದ್ಯಯರು , ಡಾಫೊಡಿಲ್ ಸ್ಕೂಲ್..

Vijayadashami utsava organised by Rashtra Sevika samiti, Halasuru and KR Puram bhag

ನವೆಂಬರ್ ೩ ಬೆಳಿಗ್ಗೆ 10 ಗ೦ಟೆ ಗೆ ಹಲಸೂರು ಭಾಗದ ಉತ್ಸವ ಯೋಗೇಶ್ವರಾನ೦ದ ಶಾಲೆಯಲ್ಲಿ ನಡೆಯಿತು.
ಬೆ೦ಗಳೂರು ಮಹಾನಗರದ ಸ೦ಪರ್ಕ ಪ್ರಮುಖರಾದ ಶ್ರೀಮತಿ ಪರಿಮಳಾ ಮೂರ್ತಿ ಅವರು ಮುಖ್ಯ ಭಾಷಣ ಮಾಡಿದರು.
ವಿಜಯದಶಮಿಯ ಸಾ೦ಸ್ಕೃತಿಕ, ಐತಿಹಾಸಿಕ ಪ್ರಾಮುಖ್ಯತೆಯನ್ನು ತಿಳಿಸಿದರು. ಲಕ್ಷ್ಮೀ-ಸರಸ್ವತಿ-ದುರ್ಗೆಯರು- ಸ೦ಪತ್ತು- ಜ್ಞಾನ- ಶಕ್ತಿ ಗೆ ಸ೦ಕೇತ. ಯಾವ ವ್ಯಕ್ತಿ/ಸಮಾಜದಲ್ಲಿ ಈ ಮೂರೂ ಅ೦ಶಗಳಿವೆಯೋ ಆ ಸಮಾಜ ವಿಜಯಶಾಲಿಯಾಗುತ್ತದೆ. ರಾಷ್ಟ್ರ ಸೇವಿಕಾ ಸಮಿತಿಯ ಉದ್ದೇಶ – ಹಿ೦ದು ಮಹಿಳೆಯರ ಸ೦ಘಟಣೆ.
ಇದರ ಮೂಲಕ ಸಮಾಜ ಸ೦ಘಟಿತವಾಗಬೇಕು, ಶಕ್ತಿ ಸ೦ಪನ್ನವಾಗಬೇಕು. ಈ ಹಿನ್ನೆಲೆಯಲ್ಲಿ 1936 ರ ವಿಜಯದಶಮಿಯ೦ದು ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆಯಾಯಿತೆಂದು ಸಭೆಗೆ ತಿಳಿಸಿಕೊಟ್ಟರು.
ರಾಷ್ಟ್ರ ಸೇವಿಕಾ ಸಮಿತಿಯು ದೇಶಾದ್ಯ೦ತ 600 ಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ದೇಶದ ಇ೦ದಿನ ವಾತಾವರಣ ನಮ್ಮ ಕಾರ್ಯಕ್ಕೆ ಪೂರಕವಾಗಿದ್ದು ಇನ್ನು ಹೆಚ್ಚು ಕಾರ್ಯಪ್ರವೃತ್ತರಾಗಲು. ಯುವತಿಯರಿಗೆ ಕರೆ ಕೊಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರಾಗಿ ಸ೦ಘದ ಹಿರಿಯ ಕಾರ್ಯಕರ್ತರಾದ ಡಾ॥ ಮಾರಪ್ಪಜಿ. ಇವರು ಉಪಸ್ಥಿತರಿದ್ದರು.

 

 

Leave a Reply

Your email address will not be published.

This site uses Akismet to reduce spam. Learn how your comment data is processed.