– ಕಿಶೋರ್ ಪಟವರ್ಧನ್,ಪ್ರಚಾರ ಪ್ರಮುಖ್,ದಕ್ಷಿಣ ಕರ್ನಾಟಕ,ಸ್ವದೇಶಿ ಜಾಗರಣ ಮಂಚ್

ರಾಜಕೀಯವಾಗಿ ಬಲವರ್ಧನೆಯಾಗುವುದು, ಹಿಂದುತ್ವವಾದಿಗಳ ವಿರುದ್ದ ಬಲವಾದ ಸಂಘಟನೆಯನ್ನು ಬೆಳೆಸುವುದು, ಈ ಉದ್ದೇಶದಿಂದ 22 ನವೆಂಬರ್ 2006 ರಲ್ಲಿ ಪ್ರಾರಂಭವಾದ ಒಂದು ಸಂಘಟನೆಯ PFI (Popular front India) ಇದರ ಅಧ್ಯಕ್ಷ ಓಮರ್ ಅಬ್ದುಲ್ ಸಲಾಂ ಮತ್ತು ಕಾರ್ಯದರ್ಶಿ ಅನಿಸ್ ಅಹಮ್ಮದ್, PFI ಈ ಸಂಘಟನೆಯ ಮುಖ್ಯ ಕಚೇರಿ ನವ ದೆಹಲಿಯಲ್ಲಿ ಇದ್ದರೂ ಈ ಸಂಘಟನೆಗೆ ಮೂಲ ಆಧಾರ ಕರ್ನಾಟಕದಲ್ಲಿತ್ತು. ಈ ಮೊದಲಿದ್ದ Karnataka form of Dignity (KFD) National Development Front (NDF) .ಈ ಎರಡು ಸಂಘಟನೆಗಳು  PFI ಜೊತೆಗೆ ಸೇರಿಕೊಂಡವು.

PFI ಈ ಸಂಘಟನೆಯ ಮೂಲ ಉದ್ದೇಶ ಹೊಸ ಭಾರತ ನಿರ್ಮಾಣ ಮತ್ತು ಹಿಂದುತ್ವದ ನಾಶ, ಜಗತ್ತಿನಲ್ಲಿ ಹಿಂದುಗಳಿಗಾಗಿ ಇರುವ ಒಂದೇ ಒಂದು ದೇಶದ ನಾಶ.  ನನಗೆ PFI ಸಂಘಟನೆಯಿಂದ ನಡೆದ ಸಮಾಜಮುಖಿ ಕೆಲಸಗಳನ್ನು ನೋಡಿದ ನೆನಪಿಲ್ಲ, ಕೋವಿಡ್ ಸಮಯದಲ್ಲಿ ಸತ್ತ ಕೆಲವು ಹಿಂದೂಗಳ ಶವವನ್ನು ಸುಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕಂಡದ್ದು ಮಾತ್ರ ಸಾಧನೆ. 

2004 ರ ಜನವರಿ 24,25 ರಂದು ಬೆಂಗಳೂರಿನಲ್ಲಿ ಮಸ್ಲಿ೦ ಬುದ್ಧಿ ಜೀವಿಗಳ ಮತ್ತು ಸೋಶಿಯಲ್ ಆಕ್ಟಿವಿಸ್ಟ್ ಗಳು ದೊಡ್ಡದೊಂದು ಸಮಾವೇಶ ಮಾಡುತ್ತಾರೆ, ಇದಾದ ಬಳಿಕ 2005 ರ ನವೆಂಬರ್ 25-26 ರಂದು ಹೈದರಾಬಾದ್ ನಲ್ಲಿ ಒಂದು ಸಮಾವೇಶ ನಡೆಯುತ್ತದೆ, ಈ ಎರಡೂ ಸಮಾವೇಶದ ಮೂಲ ಉದ್ದೇಶ ಮುಸ್ಲಿಂ ಸಮುದಾಯಕ್ಕೆ ರಾಜಕೀಯದಲ್ಲಿ ಮೀಸಲಾತಿ, ಸರ್ಕಾರಿ ಮತ್ತು ಖಾಸಗಿ ಉದ್ಯಮದಲ್ಲಿ ಕಡ್ಡಾಯ ಮೀಸಲಾತಿಯ ಒತ್ತಡವನ್ನು ಸರ್ಕಾರದ ಮೇಲೆ ತರುವುದು, ಈ ಸಮಾವೇಶಕ್ಕೆ ಒಂದರ್ಥದಲ್ಲಿ ಪರೋಕ್ಷ ಬೆಂಬಲ ನೀಡಿದವರು ಅಂದಿನ ದಿನದಲ್ಲಿ ಇದ್ದ ಸರ್ಕಾರ, ಹೈದರಾಬಾದ್ ನಲ್ಲಿ ನಡೆದ ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ರಾಜ್ಯ ಸಭಾ ಸದಸ್ಯ ರೆಹಮಾನ್ ಖಾನ್.

PFI  ಸಂಘಟನೆಯ ಉದ್ದೇಶ ಹಿಂದುತ್ವದ ನಾಶ, ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಬದಲಾಯಿಸುವುದು, ಅವರ ಕಾರ್ಯತಂತ್ರ  ಗಲಭೆ ದೊಂಬಿ, ಅರಾಜಕತೆಯ ನಿರ್ಮಾಣ, 2003 ಇಸವಿಯಲ್ಲಿ ಅಂದರೆ ಈ PFI ಸಂಘಟನೆ ಸ್ಥಾಪನೆಯ ಮೊದಲು ಮುಸ್ಲಿಂ ಜನರ ಗುಂಪೊಂದು ಕೇರಳದ ಕೋಜಿಕೊಡ್ ನಲ್ಲಿ  8 ಹಿಂದೂ ಕಾರ್ಯಕರ್ತರ ಕೊಲೆ ಮಾಡುತ್ತದೆ, ಇದಾದ ಬಳಿಕ ಹಿಂದೂ ಕಾರ್ಯಕರ್ತರ ಹತ್ಯೆಗಳು ಕೇರಳದಲ್ಲಿ ಸಾಮಾನ್ಯವಾಗಿ ಬಿಡುತ್ತವೆ, 2012 ಇಸವಿಯಲ್ಲಿ ಕೇರಳ ಸರ್ಕಾರ PFI ಸಂಘಟನೆಯ ಮೇಲೆ CPI-M ಮತ್ತು  RSS ನ ಒಟ್ಟು 27 ಕಾರ್ಯಕರ್ತರ ಕೊಲೆ ಆರೋಪ ಪಟ್ಟಿಯನ್ನು ಉಚ್ಚನ್ಯಾಯಾಲಯಕ್ಕೆ ಸಲ್ಲಿಸುತ್ತದೆ, ಇದಲ್ಲದೆ, PFI ಈ ಸಂಘಟನೆಯ ಮುಖ್ಯ ಕಚೇರಿ ದೆಹಲಿಯಲ್ಲಿ ಇದ್ದರೂ ಈ ಸಂಘಟನೆಯ ಹೆಚ್ಚಿನ ಕಾರ್ಯಾಚರಣೆ ಕೇರಳ, ಕರ್ನಾಟಕ, ತಮಿಳುನಾಡಿನ ಕೊಯಮತ್ತೂರು ಭಾಗ, ಆಂಧ್ರ ಮತ್ತು ತೆಲಂಗಾಣ, ಅತೀ ಹೆಚ್ಚು ಕೇರಳ.  ಕ್ರಿಶ್ಚಿಯನ್ ಅವರ ಮತಾಂತರದ ಕಾರಣಕ್ಕೆ ಕೇರಳದಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದರೆ, ಈ PFI ಅವರು ಮಾಡುವ ಕೊಲೆಗಳು ಹಿಂದೂಗಳ ಬದುಕನ್ನ ದುರ್ಭರಗೊಳಿಸಿತ್ತು. ಕರ್ನಾಟಕದಲ್ಲಿ ಇದ್ದ ಎರಡು ಮುಸ್ಲಿಂ ಸಂಘಟನೆಗಳು PFI ಒಳಗೆ ವಿಲೀನ ಆಗಿರುವುದರಿಂದ PFI ಬೆಳವಣಿಗೆ ಅತೀ ವೇಗವಾಗಿ ಕರ್ನಾಟಕದಲ್ಲಿ ಆಯಿತು ಮತ್ತು ಅತೀ ಹೆಚ್ಚು ಬೆಂಬಲವೂ ದೊರಕಿತು.

ಭಾರತದ ಭೂಪಟವನ್ನು ಒಮ್ಮೆ ಮನಸ್ಸಿನಲ್ಲಿ ಮೂಡಿಸಿಕೊಳ್ಳಿ, ನಾವು ಭಾರತವನ್ನು ಉತ್ತರಭಾರತ ಮತ್ತು ದಕ್ಷಿಣ ಭಾರತ ಎಂದು ಎರಡು ಭಾಗಗಳನ್ನಾಗಿ ನೋಡುತ್ತೇವೆ, ನಾವು ಮಾಡುವ ಮೊದಲ ತಪ್ಪು ಇದಾಗಿದೆ,  ಭಾರತವನ್ನು ಉತ್ತರ ಭಾರತ ದಕ್ಷಿಣ ಭಾರತ ಎಂದು ನಾವು ಕರೆಯುವುದು. ಭಾರತವನ್ನು ಎರಡು ಭಾಗ ಮಾಡುವ ಪಿತೂರಿಯ ಭಾಗ, PFI ಈ ಸಂಘಟನೆಯ ಮೂಲ ಉದ್ದೇಶ ಶಾಶ್ವತವಾಗಿ ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎಂಬ ಎರಡು ದೇಶಗಳ ನಿರ್ಮಾಣ, 1947 ಸ್ವಾತಂತ್ಯ ಬಂದ ನಂತರ ಭಾರತದ ಹತೋಟಿ ಇದ್ದ ಪಕ್ಷ ಮಾಡಿದ್ದು ಭಾರತವನ್ನು ಜಾತಿ, ಪಂಗಡ, ಶಿಕ್ಷಣ, ವರ್ಣಗಳ ಆಧಾರದಲ್ಲಿ ಒಡೆದು ಆಳಿದ್ದು, ಭಾರತವನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂದು ನಾಮಕರಣ ಮಾಡಿದ್ದೂ ಈ ಸರ್ಕಾರದ ಸಾಧನೆ ಕಾರಣ, ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನ ಈಗಾಗಲೆ ನಿರ್ಮಾಣವಾಗಿದೆ, ಭವಿಷ್ಯದಲ್ಲಿ ಉತ್ತರ ಪಾಕಿಸ್ತಾನ ಮತ್ತು ದಕ್ಷಿಣ ಪಾಕಿಸ್ತಾನ, ಸದ್ಯ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಾರಂಭಿಸಿದೆ, ಅಷ್ಟಾಗಿಯೂ ಈ ಜೋಡೋ ಯಾತ್ರೆ ಕಾಶ್ಮೀರದವರೆಗೆ ಹೋಗುವುದು ಅನುಮಾನವಿದೆ. ಕೇರಳ, ಕರ್ನಾಟಕ, ತಮಿಳುನಾಡು ಆಂಧ್ರ ಈ ರಾಜ್ಯಗಳು ಈ ಯಾತ್ರೆಗೆ  ಬಹಳ ಮುಖ್ಯವಾಗಲಿವೆ, ಈ ಯಾತ್ರೆಯಲ್ಲಿ ಕೈ ಜೋಡಿಸಿದ ಸಂಘಟನೆಗಳು ಯಾವುವು ಒಮ್ಮೆ ಗಮನಿಸಿ, ನಿಮಗೂ ಅರ್ಥ ವಾಗಬಹುದು.

ಕೇರಳದಲ್ಲಿ, PFI ಮತ್ತು ಅದರ ಕೆಲವು ಸಹಭಾಗಿ ಪಂಗಡಗಳು ನಡೆಸಿದ ಹತ್ಯಾಕಾಂಡ, ಪ್ರಚೋದಾತ್ಮಕ ಹೇಳಿಕೆಗಳು ಅವರ ಮೇಲೆ ಸರ್ಕಾರದ ಕೆಲವು ನಿಲುವು ಮತ್ತು ಉಲ್ಲೇಖಗಳು ಹೀಗಿವೆ

೧. 2012 ಇಸವಿಯಲ್ಲಿ ಕೇರಳ ಸರ್ಕಾರ PFI ಸಂಘಟನೆ 27 ಕೊಲೆ ಕೇಸುಗಳನ್ನು ಮಾಡಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುತ್ತದೆ.
೨. 2014 ರಲ್ಲೀ ಇನ್ನೊಂದು ಬಾರಿ ಇದೆ ಕೇರಳ ಸರ್ಕಾರ PFI ಮತ್ತು ಅದರ ಸಹ ಸಂಘಟನೆಗಳು ಅಂದರೆ NDF, 27 ಜಾತಿ ಮತ್ತು ಧರ್ಮಕ್ಕೆ ಆಧಾರಿತ ಕೊಲೆಗಳು, 86 ಕೊಲೆ ಪ್ರಯತ್ನಗಳು ಮತ್ತು 106 ಇತರ ಕೇಸುಗಳನ್ನು ಮಾಡಿದೆ ಎಂದು ಒಂದು ಅಫಿಡಿಟ್ ಉಚ್ಚ ನ್ಯಾಯಾಲಯಕ್ಕೇ ಸಲ್ಲಿಸುತ್ತದೆ.
೩. PFI ಕಾರ್ಯಕರ್ತ ಅಬಿದ್ ಪಾಶಾ ವೃತ್ತಿಯಲ್ಲಿ ಕಾರ್ಪೆಂಟರ್ 6 ಕೊಲೆ ಮಾಡಿದ ಆರೋಪದಲ್ಲಿ  ಸೆರೆಯಾಗುತ್ತಾನೆ.
೪.ಜುಲೈ 6 2012 ರಂದು N ಸಚಿನ್ ಗೋಪಾಲ್ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಮುಖಂಡನನ್ನು CFI ಮತ್ತು PFI ಕಾರ್ಯಕರ್ತರು ಮಚ್ಚಿನಿಂದ ಕೊಚ್ಚಿ ಕೊಲ್ಲುತ್ತಾರೆ, ವಿದ್ಯಾರ್ಥಿ ಮುಖಂಡ ವಿಶಾಲ್‌ನ ಕೊಲೆಯಾಗುತ್ತದೆ, ನಂತರ ಗೋಪಾಲ್ ಎಂಬುವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಯಾಗತ್ತದೆ, ಮಂಗಳೂರಿನ KMC ಆಸ್ಪತೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗೋಪಾಲ್ ಸಾವಿಗೀಡಾಗುತ್ತಾನೆ.
೫. ಫೆಬ್ರುವರಿ ೨೦೧೯ ರಲ್ಲಿ PFI ನ ಒಬ್ಬ ಕಾರ್ಯಕರ್ತನನ್ನು ರಾಮಲಿಂಗಂ ಎಂಬುವರ ಕೊಲೆ ಆಪಾದನೆಯಾ ಮೇಲೆ ಬಂಧನವಾಗುತ್ತದೆ ೨೦೨೧ ರಲ್ಲಿ ರಾಮಲಿಂಗಂ ಅವರ ಕೊಲೆಯ ಪ್ರಮುಖ ಆರೋಪಿ ರಹಮಾನ್ ಸಾಧಿಕ್ ನನ್ನ ಬಂಧಿಸುತ್ತಾರೆ.
೬. ೨೧ ಮೇ ೨೦೨೨ ರಲ್ಲಿ ಕೇರಳದ ಅಲಪ್ಪುಜಾ ದಲ್ಲಿ “Save the Republic” ಇಲ್ಲಿ ಹೆಗಲ ಮೇಲೆ ಕುಳಿತ ಚಿಕ್ಕ ಹುಡುಗ  “Hindus should keep rice for their last rites and Christians should keep incense for their last rites. If you live decently, you can live in our land and if you don’t live decently, we know Azadi (freedom). Live decently, decently, decently.” ಎಂದು ಘೋಷಣೆ ಕೂಗುತ್ತಾನೆ. ಈ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಪೊಲೀಸ್ PFI ನ ಜಿಲ್ಲಾ ಅಧ್ಯಕ್ಷನನ್ನು ಬಂಧಿಸುತ್ತಾರೆ.

ಕರ್ನಾಟಕದಲ್ಲಿ PFI ಮತ್ತು ಎಡಿಎ ಸಹ ಪಂಗಡಗಳು ೨೪ ಕೊಲೆಗಳನ್ನು ಮಾಡಿದ್ದು ಕೊಲೆಯಾದ ಎಲ್ಲ ಕಾರ್ಯಕರ್ತರು ಹಿಂದೂ ಸಂಘಟನೆಗಳಲ್ಲಿ ವಿವಿಧ ಜವಾಬ್ದಾರಿ ಹೊಂದಿದ್ದವರು, ಈಗಾಗಲೇ ಕರ್ನಾಟಕ ಪೊಲೀಸ್ ಇಲಾಖೆ ೧೦ ಕೊಲೆಗಳಲ್ಲಿ PFI ಮತ್ತು ಇತರ ಮುಸ್ಲಿಂ ಸಂಘಟನೆಗಳ ಕೈವಾಡವನ್ನು ಬಯಲಿಗೆಳೆದಿದ್ದು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾಗಿದೆ, ಉಳಿದ ಕೊಲೆ ಕೇಸುಗಳ ತನಿಖೆ ನಡೆಯುತ್ತಿದೆ. PFI ಈ ಸಂಘಟನೆ ಮೇಲೆ ಈ ಹಿಂದಿನ ಸರಕಾರಗಳ ಮೃದು ಧೋರಣೆ ಮತ್ತು ಹಿಂದಿನ ಸರ್ಕಾರಗಳ ಅಸಡ್ಡೆ ತನ PFI ಅಂತಹ ಸಂಘಟನೆಗಳು ಬಲವಾಗಲು ಪರೋಕ್ಷ ಕಾರಣಗಳು ಆಗಿರುವುದು ಸ್ಪಷ್ಟ.

*ಭಯೋತ್ಪಾದನೆ ಸಂಘಟನೆಗಳೊಂದಿಗೆ PFI*

೨೦೧೦ ರಲ್ಲಿ PFI ಸಂಬಂಧ ಈಗಾಗಲೆ ನಿರ್ಬಂಧವಾಗಿರುವ ಭಯೋತ್ಪಾದನೇ ಸಂಘಟನೆಯಾದ  (banned Islamic terrorist organisation) Students Islamic Movement of India (SIMI) ಅದರೊಂದಿಗೆ ಇರುವುದು ಖಚಿತವಾಗುತ್ತದೆ,  SIMI ಯ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಮತ್ತು SIMI ಸಂಘಟನೆಯಲ್ಲಿ ಇದ್ದ ಅನೇಕರು PFI ಸಂಘಟನೆಯಲ್ಲಿ ಉನ್ನತ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಭಾರತೀಯ ಸೇನೆ ನಿವೃತ್ತ ಆಫಿಸರ್ P. C. Katoch ಅವರ ಪ್ರಕಾರ PFI ಸಂಘಟನೆಯು ಪಾಕಿಸ್ತಾನದ ಕೆಲವು ಭಯೋತ್ಪಾದನಾ ಸಂಘಟನೆಗಳೊಂದಿಗೆ ಇರುವುದಾಗಿ ಹೇಳುತ್ತಾರೆ. ೨೦೧೨ ರಲ್ಲಿ ಕೇರಳ ಸರ್ಕಾರ PFI ಸಂಘಟನೆ ಭಾರತವನ್ನು ಹೇಗೆ ದ್ವೇಷಿಸುತ್ತದೆ ಇದೊಂದು ಅಪಾಯಕಾರಿ ಬೆಳವಣಿಗೆ ಮತ್ತು ಈಗಾಗಲೇ ನಿರ್ಬಂಧವಾಗಿರುವ ಸಂಘಟನೆ SIMI ಯವರು ಸ್ವಾತಂತ್ಯ ದಿನಾಚರಣೆಯಂದು ಆಯೋಜಿಸಿದ “Freedom Parade” ಇದನ್ನು ತಡೆಯುವಂತೆ ಬ್ಯಾನ್ ಮಾಡಲು ಮನವಿ ಸಲ್ಲಿಸುತ್ತದೆ,  ಆದರೆ ಉಚ್ಛ ನ್ಯಾಯಾಲಯ SIMI ಸಂಘಟನೆಯ ನಿರ್ಬಂಧವನ್ನು ಎತ್ತಿ ಹಿಡಿದರು “Freedom Parade” ಬ್ಯಾನ್ ಮಾಡುವ ಅರ್ಜಿಯನ್ನು ತಿರಸ್ಕರಿಸುತ್ತದೆ. ೨೦೧೦ ರಲ್ಲಿ ಕೇರಳದ ಪೊಲಿಸ್ ಇಲಾಖೆ PFI ಕಚೇರಿಯಿಂದ ನಾದ ಬಂದೂಕುಗಳನ್ನು, ಬಾಂಬ್ ಗಳನ್ನೂ ಮತ್ತು ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡುತ್ತದೆ, ಈ ದಾಖಲೆಗಳಿಂದ PFI ಸಂಘಟನೆಯ ನೇರಾ ನೇರ  ನಂಟು Taliban and Al-Qaeda ಇರುವುದು ಗೊತ್ತಾಗುತ್ತದೆ.

PFI ಈ ಸಂಘಟನೆಯ ಉದ್ದೇಶ ಇವರ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ ಮಾರ್ಗಗಗಳು, PFI ಸಂಘಟನೆಯ ಭಾರತದ ಸಾಮಾನ್ಯ ಎಲ್ಲ ರಾಜ್ಯಗಳಲ್ಲಿ ಅವರ ಕಚೇರಿಗಳನ್ನು ಶೋಧಿಸಿದಾಗ ರಾಜ್ಯ ಪೊಲೀಸ್ ಇಲಾಖೆಗೆ ಸಿಕ್ಕ ಮಾಹಿತಿಯನ್ನು ಆಧರಿಸಿ ಕೇಂದ್ರ ಸರ್ಕಾರದ ಭದ್ರತಾ ಇಲಾಖೆ  NIA ಇವರು ೨೨ ಸೆಪ್ಟೆಂಬರ್ ೨೦೨೨ ರಲ್ಲಿ ಮಾಡಿದ ಧಾಳಿ ಮತ್ತು ೨೭ ಸೆಪ್ಟೆಂಬರ್ ೨೦೨೨ ರಂದು ಮಾಡಿದ ಧಾಳಿ, NIA ಸಿಕ್ಕಿದ ಅಗತ್ಯ ಮಾಹಿತಿ, ಈ ಹಿಂದೆ ಆದ ಘಟನೆಗಳು, ರಾಜ್ಯ ಸರ್ಕಾರಗಳಿದ ಸಿಕ್ಕ ಮಾಹಿತಿ, ಪೊಲೀಸ್ ಇಲಾಖೆಯಿಂದ ದಾಖಲೆಗಳು, ಇವೆಲ್ಲವನ್ನೂ ಪರಿಶೀಲಿಸಿದ ಕೇಂದ್ರ ಸರ್ಕಾರ ಮುಂದಿನ ೫ ವರ್ಷಗಳಿಗೆ PFI ಮತ್ತು ಅದರ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆ, ಆದರೆ ಈ ಬ್ಯಾನ್ ಮಾಡಿದ್ದರಿಂದ ಭಾರತ ಸುರಕ್ಷಿತವೇ? ಈ ಪ್ರಶ್ನೆಗೆ ಉತ್ತರ ಭಾರತ ಸುರಕ್ಷಿತವಲ್ಲ, PFI ಮತ್ತು ಅದರೊಂದಿಗೆ ಕೈ ಜೋಡಿಸದ ಸಂಘಟನೆಗಳನ್ನು ಬ್ಯಾನ್ ಮಾಡಿದ್ದು ಮೊದಲ ಹೆಜ್ಜೆ, ಪ್ರತಿಯೊಬ್ಬ ಭಾರತೀಯ ಒಬ್ಬ ಜಾಗರೂಕ, ಪ್ರಜ್ಞಾವಂತ ಅದರಲ್ಲೂ ಹಿಂದೂಗಳು ಎಚ್ಚರವಾಗಬೇಕು.

PFI ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯಕರ್ತರಿಗೆ ಈಗಾಗಲೇ ಹೊಸದೊಂದು ಕಾರ್ಯಸೂಚಿ ಸಿಕ್ಕಿರುತ್ತದೆ, ದೇಶಪ್ರಮಿಗಳು ಎಚ್ಚರವಹಿಸಿ ನಮ್ಮ ಸುತ್ತ ಮುತ್ತ ಏನಾದರು ಸಂಶಯಾತ್ಮಕ ಬೆಳವಣಿಗೆಯಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ರವಾನಿಸುವ ಕನಿಷ್ಠ ಜವಾಬ್ದಾರಿಯನ್ನು ತೋರದಿದ್ದರೆ ಅನಾಹುತ ಕಾದಿಟ್ಟದ್ದು, ನಮಗೆ ಇರುವುಡ್ ಒಂದೇ ದೇಶ ಅದನ್ನು ಭದ್ರ ಸುಭದ್ರವನ್ನಾಗಿ ಮಾಡುವ ಜವಾಬ್ದಾರಿ ನಮ್ಮದು.

1 thought on “PFI ನಿರ್ಬಂಧ ಒಂದು ಸಮಯೋಚಿತ ಹೆಜ್ಜೆ!

Leave a Reply

Your email address will not be published.

This site uses Akismet to reduce spam. Learn how your comment data is processed.