ಹೋಮಿಯೋಪತಿ ಸಂಸ್ಥಾಪಕ ಡಾ ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಏಪ್ರಿಲ್ 10 ರಂದು ವಿಶ್ವ ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗುತ್ತದೆ. ಹೋಮಿಯೋಪತಿ ವೈದ್ಯರ ಕಠಿಣ ಪರಿಶ್ರಮವನ್ನು ಗೌರವಿಸುವುದರ ಜೊತೆಗೆ ಜನರಿಗೆ ಅದರ ಔಷಧಿಗಳ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹೋಮಿಯೋಪತಿಯ ತತ್ವಗಳು ಮತ್ತು ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಆರೋಗ್ಯ ವೃತ್ತಿಪರರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಹೋಮಿಯೋಪತಿ ದಿನದ ಈ ವರ್ಷದ ಥೀಮ್‌ “ಹೋಮಿಯೋಪರಿವಾರ್ : ಒಂದು ಆರೋಗ್ಯ, ಒಂದು ಕುಟುಂಬ”


ಹೋಮಿಯೋಪತಿ ಎಂದರೇನು?
ಹೋಮಿಯೋಪತಿ ಔಷಧಿಗಳನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಇದು ಲೈಕ್‌ ಥೆರಪಿಸ್‌ ತತ್ವವನ್ನು ಆಧರಿಸಿದೆ. ಇದರ ಔಷಧಿಗಳು ಮಂದಗತಿಯಲ್ಲಿ ಆರೋಗ್ಯವನ್ನು ಗುಣಪಡಿಸುತ್ತದೆ. ಹೋಮಿಯೋಪತಿ ಎಂಬ ಪದವು ಗ್ರೀಕ್ ನಿಂದ ಬಂದಿದೆ. ಹೋಮಿಯೋಪತಿ ವೈದ್ಯರು ಸಸ್ಯಗಳು ಮತ್ತು ಖನಿಜಗಳಂತಹ ಸಣ್ಣ ಪ್ರಮಾಣದ ನೈಸರ್ಗಿಕ ವಸ್ತುಗಳನ್ನು ಬಳಸುತ್ತಾರೆ.


ಇತಿಹಾಸ
ವಿಶ್ವ ಹೋಮಿಯೋಪತಿ ದಿನವನ್ನು ಮೊದಲು 2005 ರಲ್ಲಿ ಆಚರಿಸಲಾಯಿತು. ಹೋಮಿಯೋಪತಿಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಖ್ಯವಾಹಿನಿಯ ಆರೋಗ್ಯ ವ್ಯವಸ್ಥೆಗಳಿಗೆ ಅದರ ಸೇರ್ಪಡೆಯನ್ನು ಉತ್ತೇಜಿಸಲು ಈ ದಿನ ಪ್ರಮುಖ ಪಾತ್ರವಹಿಸಿದೆ.


ಮಹತ್ವ
ಹೋಮಿಯೋಪತಿ ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಅದರ ಪ್ರಯೋಜನಗಳ ತಿಳಿಸಲು ಅವಕಾಶವನ್ನು ಒದಗಿಸುವ ಮಹತ್ವ ಹೊಂದಿದೆ.


ಜಾಗೃತಿ ಮೂಡಿಸುವುದು: ವಿಶ್ವ ಹೋಮಿಯೋಪತಿ ದಿನವು ಸಾರ್ವಜನಿಕರಲ್ಲಿ ಹೋಮಿಯೋಪತಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಅದರ ವಿಧಾನಗಳ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ.


ಸಮುದಾಯಗಳನ್ನು ಬೆಸೆಯುವುದು: ಹೋಮಿಯೋಪತಿಗಳು, ವೈದ್ಯರು, ಸಂಶೋಧಕರು ಮತ್ತು ಪರ್ಯಾಯ ಔಷಧದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರ ನಡುವೆ ಜ್ಞಾನ ಮತ್ತು ಸಹಯೋಗದ ವಿನಿಮಯಕ್ಕೆ ಈ ದಿನವು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.


ಶಿಕ್ಷಣದ ಮೇಲೆ ಗಮನ: ವಿಶ್ವ ಹೋಮಿಯೋಪತಿ ದಿನವು ಈ ಕ್ಷೇತ್ರದಲ್ಲಿ ನೈತಿಕತೆ ಮತ್ತು ಶಿಕ್ಷಣದ ಮೌಲ್ಯವನ್ನು ಗುರುತಿಸಲಾಗಿದೆ. ಹೋಮಿಯೋಪತಿ ಚಿಕಿತ್ಸೆಯನ್ನು ಬಯಸುವವರಿಗೆ ಜವಾಬ್ದಾರಿಯುತ ಬಳಕೆ ಮತ್ತು ಉತ್ತಮ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಪ್ರೋತ್ಸಾಹಿಸುತ್ತದೆ.


ನೈಸರ್ಗಿಕ ಗುಣಪಡಿಸುವಿಕೆ: ಹೋಮಿಯೋಪತಿ ದೇಹದ ಗುಣಪಡಿಸುವ ಶಕ್ತಿಯನ್ನು ಬಳಸಿಕೊಂಡು ವಿವಿಧ ಕಾಯಿಲೆಗಳಿಂದ ಕ್ರಮೇಣ ಚೇತರಿಕೆಗೊಳ್ಳುತ್ತದೆ.


ಹೋಮಿಯೋಪತಿ ಔಷಧಿಗಳ ಪ್ರಯೋಜನಗಳು:
• ಹೋಮಿಯೋಪತಿ 200 ವರ್ಷಗಳಷ್ಟು ಹಳೆಯದಾದ ಪರ್ಯಾಯ ಔಷಧವಾಗಿದ್ದು, ಇದು ಗುಣಪಡಿಸುವ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ.ದೇಹದ ಗುಣಪಡಿಸುವ ಸಾಮರ್ಥ್ಯವನ್ನು ಬಲಪಡಿಸುತ್ತದೆ
• ರೋಗಿಗಳಿಗೆ ದೇಹಕ್ಕೆ ಹೊಂದುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅನಾರೋಗ್ಯಕ್ಕೆ ಪ್ರತಿಕ್ರಿಯೆಯಾಗಿ ತನ್ನನ್ನು ಗುಣಪಡಿಸುವ ದೇಹದ ಸಹಜ ಸಾಮರ್ಥ್ಯವನ್ನು ಪ್ರಚೋದಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ

Leave a Reply

Your email address will not be published.

This site uses Akismet to reduce spam. Learn how your comment data is processed.