ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷದ್  ಕಾರ್ಯಾಲಯದಲ್ಲಿ ಇಂದು ನೆಡೆದ ಸಾಧು ಸಂತರ ಸಭೆ. ಈ ಸಭೆಯಲ್ಲಿ 15ಕ್ಕೂ  ಹೆಚ್ಚು ಸಾಧು ಸಂತರು ಭಾಗವಹಿಸಿದ್ದರು. 

ಸಭೆಯಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಚಾರಕರಾದ ಶ್ರೀ ಸುಧೀರ್ ಅವರು ಅಭಿಯಾನದ ಮಾಹಿತಿ ನೀಡಿದರು. ಜನವರಿ15ರಿಂದ ಮಾರ್ಚ್ 27 ರವರೆಗೂ ಅಭಿಯಾನ ನೆಡೆಯುತ್ತದೆ, ಕರ್ನಾಟಕ ದಕ್ಷಿಣ ಪ್ರಾಂತ್ಯದಲ್ಲಿ ಸುಮಾರು 19 ಸಾವಿರ ಗ್ರಾಮಗಳಿವೆ ಎಲ್ಲಾ ಗ್ರಾಮದ ಎಲ್ಲಾ ಮನೆಗಳನ್ನು ಮತ್ತು ಜನರನ್ನು ಶ್ರೀರಾಮ ಕಾರ್ಯದಲ್ಲಿ ತೊಡಗಿಸುವ ಸಂಕಲ್ಪವಿದೆ. ಇದರಲ್ಲಿ ಸ್ವಾಮೀಜಿಗಳ ಪಾತ್ರ ತುಂಬಾ ದೊಡ್ಡದು, ಸಮಾಜವನ್ನು ಧರ್ಮ ಮಾರ್ಗದಲ್ಲಿ ನೆಡೆಸುವ ಗುರುಗಳು ನೀವೆಲ್ಲ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತಾವೆಲ್ಲ ಪಾಲ್ಗೊಂಡು ನಮಗೆ ಮಾರ್ಗದರ್ಶನ ಮಾಡಬೇಕು ಮತ್ತು ತಮ್ಮ ಮಠಗಳಿಂದ ಮಂದಿರ ಕಟ್ಟಲು ದೇಣಿಗೆಯನ್ನು ನೀಡಬೇಕು ಎಂದು ಸುಧೀರ್ ನಿವೇದನೆ ಮಾಡಿದರು.

ಎಲ್ಲಾ ಸಾಧು, ಸಂತರು,ಸಾದ್ವಿಯರು ಮಾತನಾಡಿ ನಾವು ಧರ್ಮ ಕಾರ್ಯಕ್ಕಾಗಿ ಸದಾ ಸಿದ್ಧರಿದ್ದೇವೆ, ನಮ್ಮ ಶಿಷ್ಯ ವೃಂದಕ್ಕೂ ತಿಳಿಸಿ ಎಲ್ಲರೊಂದಿಗೆ ಈ ನಿಧಿ ಸಂಗ್ರದಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.

ಕೊನೆಯಲ್ಲಿ ವಿಶ್ವ ಹಿಂದೂ ಪರಿಷದ್ ನ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಟನಾ ಮಂತ್ರಿ ಕೇಶವ್ ಹೆಗಡೆ ಜಿ ಮಾತನಾಡುತ್ತಾ  ಈಗ ನಿರ್ಮಾಣವಾಗುತ್ತಿರವುದು ಬರೀ ಮಂದಿರವಲ್ಲ ಹಿಂದುರಾಷ್ಟ್ರ ಎಂದರು.  ಹಾಗೂ ವಿಶ್ವ ಹಿಂದೂ ಪರಿಷದ್ ಸುದೀರ್ಘ ಹೋರಾಟದ ಫಲದಿಂದ ಇವತ್ತು ಮಂದಿರ ನಿರ್ಮಾಣವಷ್ಟೇ ಅಲ್ಲದೆ ಸಮಾಜವೇ ಬದಲಾಗಿದೆ , ಒಳ್ಳೆ ಸರ್ಕಾರಗಳು ಬಂದಿವೆ, ಸಮಾಜದಲ್ಲಿ ಶಕ್ತಿ ಬಂದಿದೆ ಕಾರಣ ಶ್ರೀರಾಮ ಮಂದಿರ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ದೇಶಾಮನೆ, ಪ್ರಾಂತ ಸಂಘಟನಾ ಮಂತ್ರಿ ಬಸವರಾಜ್ , ಪ್ರಾಂತ ಉಪಾಧ್ಯಕ್ಷರಾದ ಟಿ.ಎ. ಪಿ. ಶೆಣೈ , ಪ್ರಾಂತ ಧರ್ಮ ಪ್ರಸಾರ ಪ್ರಮುಖ್ ಕೃಷ್ಣಮೂರ್ತಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.