ಲಕ್ಷಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳ ಸ್ವಾವಲಂಬನೆ ಸಾಧನೆಗೆ ‘ಅವೇಕ್ ಸಹಾಯ’- ರೇಣುಕಾ ಮನೋಜ್

ಬೆಂಗಳೂರು: ಮಹಿಳಾ ಉದ್ಯಮಿಗಳಿಗಾಗಿ ಇರುವ ಸಂಸ್ಥೆ ‘ಅವೇಕ್’ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಮಹಿಳಾ ಉದ್ಯಮಿಗಳಿಗೆ ಸ್ವಾವಲಂಬನೆ ಸಾಧಿಸಲು ಸಹಾಯ ಮಾಡಿದೆ ಎಂದು ಅವೇಕ್ ಜಂಟಿ ಕಾರ್ಯದರ್ಶಿ ರೇಣುಕಾ ಮನೋಜ್ ತಿಳಿಸಿದರು.

ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ಬೃಹತ್ ಸ್ವದೇಶಿ ಮೇಳದಲ್ಲಿ ಮಹಿಳಾ ಉದ್ಯಮಕ್ಕಿರುವ ಅವಕಾಶಗಳು ಕುರಿತ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಷ್ಟೋ ಮಹಿಳೆಯರು ಸಣ್ಣದಾಗಿ ಶುರು ಮಾಡಿರುವ ಸಂಸ್ಥೆಗಳು ತುಂಬಾ ದೊಡ್ಡ ‘ಬ್ರಾಂಡ್’ ಗಳಾಗಿ ಬೆಳೆದಿವೆ. ಅವಶ್ಯಕತೆ ಇರುವ ಮಹಿಳೆಯರಿಗೆ ಮೊದಲಿಗೆ ಕೌನ್ಸಿಲಿಂಗ್ ಮಾಡಿ ಮಾಹಿತಿ ನೀಡಲಾಗುತ್ತದೆ. ಉದ್ಯಮವನ್ನು ಶುರು ಮಾಡುವುದಕ್ಕೂ ಮುನ್ನ ಸವಾಲುಗಳ ಕುರಿತು ಎಚ್ಚರಿಕೆ ವಹಿಸಲು ತಿಳಿಸಲಾಗುತ್ತದೆ ಎಂದರು.

ಉದ್ಯಮವನ್ನು ಶುರುಮಾಡುವ ಮೊದಲು ಸರ್ಕಾರಿ ನಿಯಮಗಳ ಬಗ್ಗೆ, ಹಣಕಾಸಿನ ನೆರವು ಪಡೆದುಕೊಳ್ಳುವ ಬಗ್ಗೆ, ನೆಟ್ವರ್ಕ್ ಬೆಳೆಸಿಕೊಳ್ಳುವ ಬಗ್ಗೆ ಹಾಗೂ ಕೌಶಲ್ಯ ವೃದ್ಧಿ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ನಂತರದ ಭಾಗವಾಗಿ ‘ಅವೇಕ್’ ನಿಂದ ಬೇರೆ ಬೇರೆ ರೀತಿಯ ಮೇಳಗಳು ಮತ್ತು ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಮಹಿಳಾ ಉದ್ಯಮಿಗಳ ಬೆಳವಣಿಗೆಗಾಗಿ ಅವೇಕ್ ಒಂದು ಬಹಳ ದೊಡ್ಡ ವೇದಿಕೆಯಾಗಿದೆ ಎಂದರು.

ಅಖಿಲ ಭಾರತೀಯ ಮಹಿಳಾ ಸಹ ಪ್ರಮುಖ್ ಆಗಿರುವ ರಶ್ಮಿ ವಿಜಯ ಕುಮಾರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತ ಮಾಹಿತಿ ನೀಡಿದರು. ದೇಶವೊಂದರ ಸ್ಥಿತಿಗತಿ ಹೇಗಿದೆ ಎಂಬುದನ್ನು ನಿರ್ಧರಿಸುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಇಂದು ಉನ್ನತ ಸ್ಥಾನವನ್ನು ತಲುಪಿದ್ದಾರೆ. ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಮಹಿಳೆಯರನ್ನು ಹೊಸ ಎತ್ತರಕ್ಕೆ ಕರೆದುಕೊಂಡು ಹೋಗಿವೆ. ವೃತ್ತಿ ಬದುಕು ಮತ್ತು ಪರಿವಾರದ ಜೊತೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಇವತ್ತಿಗೂ ಮಹಿಳೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ದೇಶದ ಬಹುಮುಖ್ಯ ಮಾನವ ಸಂಪನ್ಮೂಲವಾದ ಮಹಿಳೆಯರು ಸಂಪೂರ್ಣ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಸಂವಾದ ಉಪಯೋಗ ಆಗಲಿದೆ ಎಂದರು.

ಸಣ್ಣ ಮತ್ತು ಕಿರು ಉದ್ಯಮಗಳ ಸಲಹೆಗಾರ (ಎಂಎಸ್‍ಎಂಇ ಕನ್ಸಲ್ಟೆಂಟ್) ರವೀಂದ್ರನಾಥ್ ಕೌಶಿಕ್ ಮಾತನಾಡಿ ಹೊಸ ಉದ್ಯಮವನ್ನು ಪ್ರಾರಂಭಿಸುವುದು ಹೇಗೆ ಎನ್ನುವುದರ ಕುರಿತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದಿರುವ ವಿವಿಧ ಯೋಜನೆಗಳಿವೆ. ಸರ್ಕಾರದ ಯೋಜನೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಾಕಷ್ಟಿದೆ. ಬ್ಯಾಂಕ್ʼಗಳಲ್ಲೂ ವೈವಿಧ್ಯಮಯ ಯೋಜನೆಗಳು ಮಹಿಳೆಯರಿಗಾಗಿ ಇವೆ. ಕೇವಲ ಸರ್ಕಾರಿ ಬ್ಯಾಂಕುಗಳಲ್ಲದೇ ಖಾಸಗಿ ಬ್ಯಾಂಕುಗಳು ಕೂಡ ಮಹಿಳಾ ಸಬಲೀಕರಣಕ್ಕಾಗಿ ಆರ್ಥಿಕ ಸಹಾಯ ನೀಡುತ್ತಿವೆ. ಸರ್ಕಾರದಿಂದ ಉದ್ಯಮಿಗಳಿಗಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ಯೋಜನೆಗಳಿವೆ. ಇವುಗಳಲ್ಲಿ ಮಹಿಳೆಯರಿಗಾಗಿಯೇ ವೀಸಲಾಗಿರುವಂಥ ಸಾಲ ಸೌಲಭ್ಯಗಳೇ ಸಾಕಷ್ಟಿವೆ ಎಂದು ತಿಳಿಸಿದರು.

ಮುದ್ರಾ ಯೋಜನೆಯು ತುಂಬಾ ಸಹಕಾರಿಯಾಗಿರುವ ಯೋಜನೆಯಾಗಿದ್ದು ಮೊದಲ ವರ್ಷಗಳಲ್ಲಿ ಬರೀ ಬಡ್ಡಿಯನ್ನಷ್ಟೇ ಕಟ್ಟಬಹುದಾದ ಅವಕಾಶವೂ ಇದ್ದು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಇದಲ್ಲದೇ ಅವಶ್ಯಕವಿರುವ ಯಂತ್ರೋಪಕರಣಗಳು ಮತ್ತು ಅವಶ್ಯಕವಿರುವ ಕಚ್ಚಾ ವಸ್ತುಗಳ ಖರೀದಿಗೆ ಕೂಡ ಸಾಲ ಸೌಲಭ್ಯಗಳಿವೆ. ಇವೆಲ್ಲವೂ ಸರ್ಕಾರಿ ಯೋಜನೆಗಳಾದ ಕಾರಣ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಬರುವ ಸಾಧ್ಯತೆಗಳಿರುವುದಿಲ್ಲ. ಸಮರ್ಪಕ ದಾಖಲಾತಿಗಳಿದ್ದು, ಉದ್ಯಮ ಕಾನೂನುಬದ್ಧವಾಗಿದ್ದರೆ ಅತಿಯಾದ ವೆಚ್ಚಗಳಿಲ್ಲದೇ ಸಾಲ ಮಂಜೂರಾಗುವಂಥ ಅವಕಾಶಗಳಿವೆ. ಅದಲ್ಲದೇ ನಬಾರ್ಡ್‍ನಂಥ ಸಂಸ್ಥೆಗಳು ಕೂಡ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದು ಇವೆಲ್ಲವುಗಳ ಸಹಾಯ ಪಡೆದು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲು ಉತ್ತೇಜನ ನೀಡಿದರು. ಶಿಬಿರಾರ್ಥಿಗಳು ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ- ಶ್ರೀಮತಿ ಪ್ರತಿಮಾ ಅಡಿಗ
ಹೊರಗಿನಿಂದ ಒಂದಷ್ಟು ವಸ್ತುಗಳನ್ನು ತರುವ ಬದಲು ಮನೆಯಲ್ಲೇ ಸಿಗುವ ವಸ್ತುಗಳನ್ನು ಹೆಚ್ಚಾಗಿ ಬಳಸುವುದು ಜಾಣತನ ಎಂದು ತಾರಸಿ ತೋಟಗಳ ಕುರಿತ ಕಾರ್ಯಾಗಾರದಲ್ಲಿ ಶ್ರೀಮತಿ ಪ್ರತಿಮಾ ಅಡಿಗರವರು ತಿಳಿಸಿದರು.


ಮೊದಲಿಗೆ ಕಾಂಪೆÇೀ

ಕಾಂಪೇಸ್ಟಿಂಗ್‍ಗಳಲ್ಲಿರುವ ಏರೋಬಿಕ್ ಮತ್ತು ಅನ್ ಏರೋಬಿಕ್ ವಿಧಗಳ ಬಗ್ಗೆ ಮಾತನಾಡಿದ ವಿವರವಾಗಿ ಪ್ರಾತ್ಯಕ್ಷಿಕೆ ನೀಡಿದರು. ಯಾವುದಕ್ಕೆ ಯಾವ ವಿಧದ ಕಂಟೈನರ್ ಸೂಕ್ತವಾಗುತ್ತದೆ ಮತ್ತು ಅವುಗಳನ್ನು ಬಳಸುವ ವಿಧಾನವನ್ನು ವಿವರಿಸಿದರು. ಹಸಿರು ಮತ್ತು ಕಂದುಗಳ ಮಿಶ್ರಣದ ಅವಶ್ಯಕತೆ ಮತ್ತು ಇವುಗಳ ಸಮತೋಲನದ ಮಹತ್ವದ ಬಗ್ಗೆ ತಿಳಿಸಿದರು. ಪ್ರತಿ ಅಡುಗೆ ಮನೆಯಲ್ಲಿ ಸಿಗುವ ಹಸಿ ತ್ಯಾಜ್ಯದ ಜೊತೆಗೆ ಒಣ ಎಲೆ ಇತ್ಯಾದಿಗಳನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡುವ ಮೂಲಕ ಬಹಳ ಫಲವತ್ತಾದ ಗೊಬ್ಬರ ತರಾರಿಸುವ ಬಗ್ಗೆ ತಿಳಿಸಿದರು.


ಎಲ್ಲಕ್ಕಿಂತ ಹೆಚ್ಚಾಗಿ ಮಣ್ಣಿನ ಪ್ರಮಾಣ, ಕೊಕೋ ಪೀಟ್ ಮತ್ತು ಇತರ ಯಾವೆಲ್ಲ ವಸ್ತುಗಳನ್ನು ಬಳಸಿದರೆ ಉತ್ತಮ ಗುಣಮಟ್ಟದ ಗೊಬ್ಬರ ತಯಾರಾಗುತ್ತದೆ ಹಾಗೂ ಎಲ್ಲಾ ವಸ್ತುಗಳ ಲಭ್ಯತೆ ಹಾಗೂ ದರಗಳ ಬಗ್ಗೆ ಮಾಹಿತಿ ನೀಡಿದರು. ತಾರಸಿ ತೋಟ ಮಾಡುವಾಗ ತಯಾರಿಸುವ ಗೊಬ್ಬರವನ್ನು ಬಿಸಿಲು ಮಳೆ ಎರಡೂ ಹೆಚ್ಚಿಲ್ಲದ ಕಡೆ ಹೇಗೆ ಇಟ್ಟು ಕಾಪಾಡಿಕೊಳ್ಳಬೇಕೆಂಬುದರ ಬಗ್ಗೆಯೂ ವಿವರ ಕೊಟ್ಟರು.
ಹವಾಮಾನ ಬದಲಾವಣೆ ಹಾಗೂ ಕೆಲವೊಮ್ಮೆ ವೈಪರೀತ್ಯಗಳು ಪ್ರಕೃತಿಯ ಭಾಗವಾದ್ದರಿಂದ ಅವುಗಳಿಗೆ ಹೊಂದಿಕೊಂಡು ಕಾಂಪೆÇೀಸ್ಟಿಂಗ್ ಪ್ರಕ್ರಿಯೆಯಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು. ಹವೆಗಳಿಗೆ ಅನುಗುಣವಾಗಿ ಯಾವ ತರಕಾರಿಗಳನ್ನು ಬೆಳೆದರೆ ಒಳ್ಳೆಯ ಬೆಳೆ ಬರುತ್ತದೆಂದು ತಿಳಿಸಿದರು.


ಮೊದಲು ಸೊಪ್ಪು ಬೆಳೆಯಿರಿ…
ತಾರಸಿ ತೋಟ ಮಾಡುವವರು ಮೊದಲಿಗೆ ಸೊಪ್ಪು ಬೆಳೆಯುವ ಮೂಲಕ ಶುರು ಮಾಡುವುದು ಸೂಕ್ತ. ಹೀರೆ, ಸೋರೆ ಅಥವಾ ಇಂಥ ಕೆಲವು ತರಕಾರಿಗಳನ್ನು ಮೊದಲಿಗೇ ಬೆಳೆದರೆ ಅವು ಒಂದು ವೇಳೆ ಹಾಳಾದಲ್ಲಿ ಸೋಲಿನ ನಿರಾಸೆಯಿಂದ ತೋಟ ಮಾಡುವುದನ್ನೇ ಬಿಡುವ ಸಾಧ್ಯತೆ ಇದೆ ಎಂದು ಅನುಭವ ಹಂಚಿಕೊಂಡರು. ನಂತರ ಮೂಲಂಗಿ, ಟೊಮ್ಯಾಟೋ, ಮೂಲಂಗಿ, ಹಸಿ ಮೆಣಸು ಇತ್ಯಾದಿಗಳನ್ನು ಬೆಳೆಯುವುದು ಸೂಕ್ತ, ಯಾಕೆಂದರೆ ಇವುಗಳು ಅತೀ ಆರೈಕೆಯನ್ನು ಬಯಸುವುದಿಲ್ಲ. ಇವುಗಳನ್ನು ಬೆಳೆದು ಸ್ವಲ್ಪ ಅನುಭವ ದಕ್ಕಿದ ನಂತರ ಉಳಿದೆಲ್ಲಾ ತರಕಾರಿಗಳನ್ನು ಬೆಳೆದರೆ ಯಶಸ್ಸು ಖಂಡಿತವಾಗಿ ದೊರಕುತ್ತದೆ ಎಂದರು. ಮನೆಯಲ್ಲಿನ ತ್ಯಾಜ್ಯಗಳಲ್ಲದೇ ನಾಟಿ ಹಸುವಿನ ಸೆಗಣಿ ಮತ್ತು ಗೋಮೂತ್ರ ಸುಲಭವಾಗಿ ಸಿಗುವಂತಿದ್ದರೆ ಅದರಿಂದ ಜೀವಾಮೃತ ತಯಾರಿಸುವ ವಿಧಾನವನ್ನು ಮತ್ತು ಅದಕ್ಕೆ ಬೆರೆಸಬೇಕಾದ ನೀರಿನ ಪ್ರಮಾಣವನ್ನು ವಿವರಿಸಿ ಗಿಡಗಳಿಗೆ ಎಷ್ಟು ಪ್ರಮಾಣದಲ್ಲಿ ಇದನ್ನು ನೀಡಬೇಕೆಂದೂ ತಿಳಿಹೇಳಿದರು.

ಮನುಷ್ಯರಂತೇ ಗಿಡಗಳಿಗೂ ಕ್ಯಾಲ್ಸಿಯಂ, ಪೆÇಟ್ಯಾಷಿಯಂ ಇತ್ಯಾದಿಗಳ ಅವಶ್ಯಕತೆ ಇದ್ದು ಅವುಗಳು ಯಾವುದರಲ್ಲಿವೆ ಎಂದು ವಿವರಿಸಿದರು. ಅದೇ ರೀತಿಯಾಗಿ ಗಿಡಗಳಿಗೆ ಖಾಯಿಲೆ ಬರುವುದೂ ಸಹಜ ಮತ್ತು ಅವುಗಳನ್ನು ನಿವಾರಿಸಲು ಅಡಿಗೆ ಮನೆಯಲ್ಲಿರುವ ಯಾವ್ಯಾವ ಸಾಮಗ್ರಿಗಳನ್ನು ಔಷಧವಾಗಿ ಹೇಗೆ ಬಳಸುವುದು ಎಂಬುದನ್ನೂ ವಿವರವಾಗಿ ಕಲಿಸಿದರು.

ಪ್ರಕೃತಿಯನ್ನು ಹಾಳು ಮಾಡದೇ ಯಾವುದೇ ರೀತಿಯ ಮಾಲಿನ್ಯಕ್ಕೆ ಆಸ್ಪದವೀಯದೇ ನಮಗೆ ಬೇಕಾದ ಅಷ್ಟನ್ನೂ ನಾವೇ ಬೆಳೆಯುವ ಸಂತೋಷ ಮತ್ತು ತೃಪ್ತಿ ನಾವು ಎಲ್ಲಿಂದಲೋ ತರಕಾರಿ ಕೊಂಡು ತಂದು ತಿನ್ನುವುದರಲ್ಲಿ ಇಲ್ಲ ಎಂದರು. ಸುಮಾರು ಐದಾರು ಸದಸ್ಯರಿರುವ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಯೋಜನೆ ಹಾಕಿಕೊಂಡು ತಾರಸಿ ತೋಟ ಮಾಡಿದರೆ ಮನೆಯ ದೈನಂದಿನ ಅವಶ್ಯಕತೆಗಳಿಗೆ ಬೇಕಾದಷ್ಟನ್ನು ಸುಲಭವಾಗಿ ಮನೆಯ ತಾರಸಿಯಲ್ಲೇ ಬೆಳೆಯಬಹುದು ಎಂದು ತಮ್ಮ ಹತ್ತು ವರ್ಷಗಳ ಅನುಭದ ನಿಟ್ಟಿನಲ್ಲಿ ಹೇಳಬಲ್ಲೆ ಎನ್ನುವ ಮೂಲಕ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.