ಮೈಸೂರು, ಫೆಬ್ರವರಿ 17, 2013: “ತಂದೆ ತಾಯಿಯರ ಸಾಮಿಪ್ಯದಿಂದ ಅವರ ಪ್ರೀತಿಯಿಂದ ವಂಚಿತರಾದ ರಸ್ತೆ ಬದಿಗಳಲ್ಲಿ ಗೊತ್ತು ಗುರಿ ಇಲ್ಲದೆ ಚಿಂದಿ ಅಲೆಯುತ್ತ ದಿನ ದೂಡುತ್ತಿದ್ದ ಮಕ್ಕಳು ಈ ದೇಶಕ್ಕೆ ಸಮಾಜಕ್ಕೆ ಅಭಿಶಾಪ ಆಗಬಹುದಿತ್ತೋ, ಅಂತಹ ಮಕ್ಕಳು ನೆಲೆಯ ಪ್ರೇಮಾಲಿಂಗನದ ಒಳಗೆ ನೆಲೆಯ ಪುಣ್ಯ ಪರಿಧಿಯ ಒಳಬಂದಿದಕ್ಕೆ ದಾರಿ ತಪ್ಪಿದವರಿಗೂ ದಾರಿತೋರಿಸುವ ಭರವಸೆಯ ಮಕ್ಕಳಾಗಿದ್ದಾರೆ” ಎಂದು  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ತಿಳಿಸಿದರು.Bapat Venkataram NELEE MYSORE

ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಣೆಪಡೆದ ಸಂಸ್ಥೆ ಹಿಂದೂ ಸೇವಾ ಪ್ರತಿಷ್ಠಾನದ ಸೇವಾ ಪ್ರಕಲ್ಪವಾದ ಮೈಸೂರಿನ ಅಜಿತ ನೆಲೆ ಕಟ್ಟಡದ ಉದ್ಘಾಟನಾ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.

ಒಂದೊಮ್ಮೆ ಹೊರೆಯಾಗಿದ್ದ ಮಕ್ಕಳು ನೆಲೆಯಲ್ಲಿ ತ್ಯಾಗಮಯೀ ಸೇವಾವ್ರತಿ ಅಕ್ಕಂದಿರಿಂದ ಶಿಕ್ಷಣ ಪಡೆಯುತ್ತಾರೆ. ಈ ಮಕ್ಕಳಲ್ಲ್ಲಿರುವ ದೈವಾಂಶವನ್ನು ಹೊರತೆಗೆಯುವುದನ್ನೇ ಶಿಕ್ಷಣವೆನ್ನುತ್ತೇವೆ. ಈ ಶಿಕ್ಷಣವನ್ನು ಸಂಸ್ಕಾರ ಎನ್ನುತ್ತಾರೆ. ಈ ಸಂಸ್ಕಾರ ಭರಿತ ಶಿಕ್ಷಣದಿಂದ ಉಂಟಾದ ಸರ್ವಾಂಗೀಣ ವಿಕಾಸದ ಪ್ರಕಟೀಕರಣ ಇಂದು, ಅಜಿತ ನೆಲೆ ಸ್ವಗೃಹದ ಗೃಹಪ್ರವೇಶದ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಪ್ರದರ್ಶನ. ಪಶುವಿನಿಂದ ಶಿಶು, ಶಿಶುವಿನಿಂದ ಮನುಷ್ಯ, ಮನುಷ್ಯನಿಂದ ಮಹಾಮಾನವ, ಮಹಾಮಾನವನಿಂದ ದೇವಮಾನವ ಹೀಗೆ ಜಗತ್ತಿಗೆ ಕಲ್ಯಾಣ, ಶಾಂತಿ, ಆನಂದ ನೆಮ್ಮದಿ ನೀಡುವ ಮಹಾಮಾನವ ಪಡೆಯನ್ನು ಹಿಂದೂ ಸೇವಾ ಪ್ರತಿಷ್ಠಾನ ನೆಲೆಯ ಮೂಲಕ  ನಿರ್ಮಿಸುತ್ತಿದೆ.  ಜಾತಿಯ ಎಲ್ಲೆ ಮೀರಿ ಮಕ್ಕಳಿಗೆ ಸಮಾಜದ ಏಕತೆಯ ದೃಷ್ಠಿಕೋನ ನೀಡುವ ಕಾರಣದಿಂದ ಹಿಂಸೆ, ಆತಂಕವಾದ ಮತ್ತು ದೇಶದ್ರೋಹದ ಕಾರ್ಯ ಮಾಡುವವರನ್ನು ಸದೆಬಡಿದು ಜಗತ್ತಿನಿಂದಲೇ ಈ ಅನಿಷ್ಟಗಳನ್ನು ನಿರ್ಮೂಲನ ಮಾಡಲು ಬೇಕಾದಂತಹ ಜನಶಕ್ತಿಯನ್ನು ಹಿಂದೂ ಸೇವಾ ಪ್ರತಿಷ್ಠಾನ ತನ್ನ ನೆಲೆ ಪ್ರಕಲ್ಪದ ಮೂಲಕ ಸೃಷ್ಟಿಸುತ್ತಿದೆ. ಅದಕ್ಕೆಂದೇ ಇಂತಹಾನೂರಾರು ನೆಲೆಗಳ ಅವಶ್ಯಕತೆ ಇದೆ ಎಂದು ನುಡಿದರು.

ಮುಂದುವರಿದ ಅವರು ರಾಷ್ಟ್ರೀಯ ಸ್ವಯಂಸೇವಕಸಂಘ ಕಾಲ ಪ್ರವಾಹದಲ್ಲಿ ಕೊಚ್ಚಿಹೋಗುವ ಸರಕಾರೇತರ ಸ್ವಯಂ ಸೇವಾಸಂಸ್ಥೆ (ಎನ್.ಜಿ.ಓ)ಗಳಂತೆ ಅಲ್ಲ.  ಕಾಲ ಪ್ರವಾಹದ ವಿರುದ್ಧ ಈಜುವುದೇ ಸಂಘದ ಜಾಯಮಾನ. ಕಳೆದ ೮ ದಶಕಗಳಿಗೂ ಮಿಕ್ಕಿ ಎಲ್ಲಾ ಅಡೆತಡೆಗಳನ್ನೂ ದಾಟಿ ಪುರುಷಾರ್ಥವನ್ನು ಪ್ರಕಟೀಕರಿಸುತ್ತಿದೆ. ತಾನು ಮತ್ತು ತನ್ನ ತತ್ವ ಸಿದ್ಧಾಂತದ ಪ್ರೇರಣೆಯಿಂದ ಪ್ರಾರಂಭಗೊಂಡ ಪರಿವಾರ ಸಂಸ್ಥೆಗಳಿಂದ ಕಾಲ ಪ್ರವಾಹವನ್ನು ತಡೆಯಲು ಅಣೆಕಟ್ಟೆಯನ್ನು ನಿರ್ಮಿಸಿ ಅಲ್ಲಿ ಸಂಗ್ರಹವಾದ ಮಾನವ ಶಕ್ತಿಗೆ ವ್ಯಕ್ತಿನಿರ್ಮಾಣದ ಅನುಭವ ಮೂಡಿಸಿ ಆ ಬೃಹತ್ ಶಕ್ತಿಯನ್ನು ತಾಯಿ ಭಾರತಿಯ ಪರಮ ವೈಭವ ಸ್ಥಿತಿಯನ್ನು ಮುಟ್ಟುವ ಗುರಿಯೆಡೆಗೆ ಹಾಯಿಸಿ ತಾಯಿ ಭಾರತಿಯ ಸರ್ವಂಗೀಣ ವಿಕಾಸಕ್ಕೆ ಕಾರಣೀಭೂತವಾಗುತ್ತಿದೆ. ಇಂತಹಾ ಸಂಘಟನೆಯನ್ನೂ ದೇಶದ್ರೋಹದ ಅಪಾದನೆಗೆ ಕೆಲವರು ಗುರಿಯಾಗಿಸುವುದು ಆ ವ್ಯಕ್ತಿಗಳ ಅಜ್ಞಾನ ಮತ್ತು ಮಟ್ಟವನ್ನು ತೋರಿಸುತ್ತದೆ ಎಂದು ತಿಳಿಸಿದ ಅವರು ಈ ಸೇವಾಪ್ರಕಲ್ಪಗಳು ಹೆಚ್ಚು ಪ್ರೇರಣಾತ್ಮಕವಾಗಿ ಕಾರ್ಯನಿರ್ವಹಿಸಲು ಸ್ಪಂದಿಸುವ ಸಂವೇದನಾಶೀಲರು ಬೇಕಾಗಿದ್ದಾರೆಂದರು. ಕಟ್ಟಡ ನಿರ್ಮಾಣಕ್ಕೆ ಲಕ್ಷಾಂತರ ರೂ ಬೆಲೆಬಾಳುವ ತಮ್ಮ ಸಿ ಎಪ್ಟಿ ಆರ್ ಐ ಬಡಾವನೆಯಲ್ಲಿನ ೧೧೬ನೆ ’೬೦ ೪೦’ ರ ವಿಸ್ತಾರದ ನಿವೇಶನವನ್ನೇ ದಾನವಾಗಿ ಸು ಗೋದಾವರಿ ಅಕ್ಕ ಅವರಂತಹ ಮತ್ತು ಕಟ್ಟಡದ ನಿರ್ಮಣಕ್ಕೆ ತಮ್ಮ ಪಾಲಿನ ಕೊಡುಗೆ ನೀಡಿದ ಎಲ್ಲರ ಸಂವೇದನಾ ಶೀಲತೆಯನ್ನು ಸ್ಮರಿಸಿ ಶ್ರೀ ರಾಮಣ್ಣನವರು, ಇದು ಸಹಕಾರ ಅಥವಾ ಸಹಾಯ ಎಂದು ಬಾವಿಸುವುದಲ್ಲ. ನಾವು ಈ ಸಮಾಜದ ಜೊತೆಗೆ ಬಾಳುತ್ತಿದ್ದೇವೆ. ನಾಗರೀಕ ಸಮಾಜದಲ್ಲಿ ಹುಟ್ಟಿ ಮನುಷ್ಯರಾಗಿದ್ದೇವೆ ಅಂತಹಾ ಸಮಾಜದಿಂದ ಇಷ್ಟೆಲ್ಲಾ ಪಡೆದ ನಾವು ಅ ಸಮಾಜಕ್ಕೆ ಋಣಸಂದಾಯ ಮಾಡಬೇಕಲ್ಲವೇ ಎಂದು ಆಗ್ರಹಿಸಿ ನೆಲೆ ಕಟ್ಟಡ ಶೀಘ್ರ್ರದಲ್ಲೇ ತನ್ನ ಉದ್ದೇಶಿತ ಪೂರ್ಣಕಾರ್ಯ ಮಾಡುವಂತೆ ಕಟ್ಟಡ ಪೂರ್ಣಗೊಳ್ಳಲಿ ಎಂದು ಹಾರೈಸಿದರು.

ಪುರುಷರಿಗಿಂತ ಒಂದು ಕೈ ಮುಂದಿರುವ ೨೨ – ೨೩ರ ಯುವತಿಯರು ತಮ್ಮ ವಿದ್ಯಾಭ್ಯಾಸ ಮುಗಿದನಂತರ ಮೂರು ವರ್ಷ ಮತ್ತು ಕೆಲವರು ಇನ್ನೂ ಹೆಚ್ಚು ವರ್ಷಗಳ ಸಂಪೂರ್ಣ ಸೇವಾವ್ರತಿಗಳಾಗಿ ಕಾರ್ಯಮಾಡುತ್ತಿರುವುದನ್ನು ಶ್ಲಾಘಿಸಿದ ಶ್ರೀಯುತರು ಇವರ ನಿರಂತರ ಸೇವೆ ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಹಿಮಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಈ ಪ್ರದೇಶಗಳಲ್ಲೂ ಹರಡಿದೆ ಎಂದು ಹೆಮ್ಮೆಯಿಂದ ತಿಳಿಸಿದರು.   ಶ್ರೀರಾಮಣ್ಣನವರು  ಸಮಾರಂಭದಲ್ಲಿ ಮಕ್ಕಳ ರಂಗಮಂಚೀಯ ಕಾರ್ಯಕ್ರಮಗಳ ವೀಕ್ಷಣೆಯ ನಂತರ ಮಕ್ಕಳ ಬಗೆಗೆ ಇರುವ ಕಳಕಳಿಯಿಂದ ’ಮಕ್ಕಳು ಹೊರೆ ಅಲ್ಲ ಅವರು ನಮ್ಮ ಆಸ್ತಿ. ಹೀಗಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸೋಣ ಮಕ್ಕಳಿಗೆ ಆಸ್ತಿ ಮಾಡಿ ನಂತರ ಅವರಿಂದಲೇ ಶಾಸ್ತಿಮಾಡಿಸಿಕೊಳ್ಳುವುದು ಬೇಡ ಎಂಬ ತಮ್ಮ ಎಂದಿನ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಎಚ್ಚರಿಕೆಯ ಕಿವಿಮಾತು ಹೇಳುವುದನ್ನು ಮರೆಯಲಿಲ್ಲ.

ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ  ನಿರ್ದೇಶಕರಾದ ಶ್ರೀ ಶ್ರೀಧರ ಸಾಗರ ರವರು ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಧ್ಯೇಯೋದ್ಧೇಶಗಲನ್ನು ತಿಳಿಸುತ್ತ ಸೇವೆಯೆಂದರೆ ಸ್ವಂತಕ್ಕೆ ಏನನ್ನೂ ಅಪೇಕ್ಷಿಸದೆ ಸಮಾಜದ ಅಪೇಕ್ಷೆಗನುಗುಣವಾಗಿ ಸಮಾಜಕ್ಕೆ ಅಗತ್ಯವಾದ ಕಾರ್ಯ ಎಂದರು. ಯಾರು ಇತರರಿಗಾಗಿ ಬದುಕುತ್ತಾರೋ ಅವರೇ ನಿಜವಾಗಿ ಬದುಕುವರು. ಉಳಿಸವರು ಬದುಕಿಯೂ ಸತ್ತಂತೆ ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಸ್ಮರಿಸಿ ಇದೇ ಪ್ರೇರಣೆಯಲ್ಲಿ ಪ್ರತಿಷ್ಠಾನ ಆಸಕ್ತಿಇರುವವರೆಲ್ಲರಿಗು ಸೇವೆ ಮಾಡುವ ಅವಕಾಶ ಕಲ್ಪಿಪಿಸುತ್ತದೆ. ಇಂಥ ಅವಕಾಶುಪಯೋಗಿಸಿ ತಮ್ಮ ವಿದ್ಯಾಭ್ಯಾಸದ ನಂತರ ಸುಮಾರು ೪೨೫೦ ಯುವಕ ಯುವತಿಯರು ತಮ್ಮ ಬಹುಮೂಲ್ಯ ಜೀವನದ ೩ ವರ್ಷಕ್ಕಿಂತ ಹೆಚ್ಚು ಕಾಲವನ್ನು ಪ್ತಿಷ್ಠಾನದ ಪ್ರಕಲ್ಪಗಳಲ್ಲಿ ತೊಡಗಿದಿಕೊಂಡಿದ್ದಾರೆ. ಅವರಿಗೆ ದೊರೆತ ಜ್ಞಾನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಾಸ ದ ೩ ಹಂತಗಳಲ್ಲಿ ತರಬೇತಿಯ ಕಾರಣದಿಂದ ವಿಭಿನ್ನ ಭಾಷಾ, ವಿಭಿನ್ನ ಪರಿಸರ ವಿಭಿನ್ನ ಆಹಾರ ಪದ್ಧತಿಗಳನ್ನು ರುಡಿಸಿಕೊಂಡ ದೇಶದ ಇತರೇ ಭಾಗಗಳಲ್ಲಿ ಅಂದರೆ ಹಿಮಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಬೋಡೋಲ್ಯಾಂಡ್, ಗುಜರಾತ್ ಇನ್ನಿತರೇ ರಾಜ್ಯಗಲಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಇದು ಅವರಿಗೆ ದೊರೆತ ಭಾರತದ ಏಕಾತ್ಮತೆಯ ಶಿಕ್ಷಣದಿಂದ ಎಲ್ಲಾ ಪ್ರದೇಶವನ್ನೂ ತನ್ನದೇ ಮತ್ತು ಎಲ್ಲರನ್ನೂ ತನ್ನವರೇ ಎಂಬ ಬಾವನೆಯಿಂದ ಸಾಧ್ಯವಾಯಿತು ಎಂದರು.

ಮುಂದುವರೆದು ಶ್ರೀಯುತರು ಹಿಂದೂ ಸೇವಾಪ್ರತಿಷ್ಠಾನದಲ್ಲಿ ಸದಾ ಉಪಕಾರ ಮಾಡುತ್ತಿದ್ದೇವೆಂಬ ಅಹಂಕಾರ ಕಿಂಚಿತ್ತೂ ಇಲ್ಲ ಎಂದು ತಿಳಿಸಿ, ಸೇವೆ ಒಂದು ಆಂದೋಲನವಾಗಿ ದೀನರೂ ಸೇವೆ ಮಾಡುವಂತೆ ಅವಕಾಶಕಲ್ಪಿಸುವುದೇ ಪ್ರತಿಷ್ಠಾನದ ಉದ್ದೇಶ ಎಂದು ತಿಳಿಸಿದರು. ಪ್ರತಿಷ್ಠಾನ ತನ್ನ ೩೩ನೇ ವರ್ಷದಲ್ಲಿ ಸುಮಾರು ೧೭ ಪ್ರಕಲ್ಪಗಳನ್ನು ನಡೆಸುತ್ತಿದೆ ಎಂದು ಹೇಳಿ, ೨೦೦೭ರಲ್ಲಿ ಈಮೇಲ್‌ಗಳ ಮೂಲಕ ಪ್ರಾರಂಭಿಸಿದ ಯೂತ್ ಫಾರ್ ಸೇವಾ ಪ್ರಕಲ್ಪದಡಿಯಲ್ಲಿ ಈಗಾಗಲೇ ಐಟಿ ಕಂಪನಿಗಳಲ್ಲಿ ಉದ್ಯೋಗಮಾಡುತ್ತಿರುವ ಯುವಕ ಯುವತಿಯರಿಗೆ ವಾರದ ಕೊನೆಯಲ್ಲಿ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಈ ಪ್ರಕಲ್ಪದಲ್ಲಿ ೬೦೦೦ಕ್ಕಿಂತ ಹೆಚ್ಚು ಟೆಕ್ಕಿಗಳು ನೋಂದಣಿಮಾಡಿಸಿಕೊಂಡಿದ್ದು ಅವರಲ್ಲಿ ಲಕ್ಷಾಂತರ ರೂ ವೇತನ ಪಡೆಯುತ್ತಿದ್ದ ೨೩ ಕುಟುಂಬಗಳು

ತಮ್ಮ ವೃತ್ತಿ ತೊರೆದು ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಯುವಕರನ್ನು ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿರುವುದರ ಒಂದು ಉದಾಹರಣೆ ಮಾತ್ರ ಎಂದು ತಿಳಿಸಿದರು.

ಪ್ರತಿಷ್ಠಾನ ಯಾರನ್ನೂ ಪಾಪಿಗಳು, ಅನಾಥರು ಎಂದು ಭಾವಿಸುವುದಿಲ್ಲ. ಬದಲಾಗಿ ಅವರಲ್ಲೆರನ್ನೂ ವಿವೇಕಾನಂದರಂತೆ ಅಮೃತ ಪುತ್ರರೆಮದೇ ಭಾವಿಸುತ್ತದೆ. ಅವರಲ್ಲಿನ ಸತ್ ಶಕ್ತಿಯನ್ನು ಜಾಗೃತ ಗೊಳಿಸಿ ಅವರಿಂದ ವ್ಯಕ್ತಿ ಮತ್ತು ಸಮಾಜವನ್ನು ಸ್ವಾವಲಂಬಿ ಮತ್ತು ಸ್ವಾಭಿಮಾಜಿ ಯನ್ನಾಗಿಸುವ ಕೆಲಸದಲ್ಲಿ ಪ್ರತಿಷ್ಠನ ನಿರತವಾಗಿದೆ ಎಂದು ತಿಳಿಸಿದರು.

ಸಮಾಜ ಮರೆಯಬಹುದಾಗಿದ್ದ ಮಕ್ಕಳು ನೆಲೆಯ ಸಂಸ್ಕಾರ ಶಿಕ್ಷಣಕ್ಕೆ ಒಳಗಾಗಿ ಇಂದು ೮೦-೮೫ಅಂಕಗಲನ್ನು ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ವಿದ್ಯೆಯಲ್ಲಿ ಆಸಕ್ತಿಇಲ್ಲದವರು ವೃತ್ತಿಜೀವನದಲ್ಲಿ ತೊಡಗಿ ಗೌರವಯುತ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಸ್ವರ್ಗಿಯ ಅಜಿತರಿಂದ ಸ್ಥಾಪಿತವಾಗಿ ಈಗ ರಾಜ್ಯಾದ್ಯಂತ ನೆಲೆಸಿರುವ ೧೦ ನೆಲೆಗಳಿಂದ ಸುಮಾರು ೧೫೦ ಮಕ್ಕಳು ಈ ಪ್ರಕಲ್ಪದಡಿಯಲ್ಲಿ ಶಿಕ್ಷಣಪಡೆಯುತ್ತಿದ್ದಾರೆ. ಈ ಕಾರ್ಯ ನಿರಂತರ ಮುಂದುವರೆಯಬೇಕಾದರೆ ಸಮಾಜದ ಸಹಕಾರ ಅಗತ್ಯವೆಂದು ತಿಳಿಸಿದರು.

ಸಭಾಕಾರ್ಯಕ್ರಮದ ಮುಂಚೆ ನೆಲೆಯ ಮಕ್ಕಳಿಂದ ದೇಶಭಕ್ತಿಯ ಜಾಗೃತಿಯ ರಂಗಮಂಚೀಯ ಕಾರ್ಯಕ್ರಮಗಳು ನೆರವೇರಿದವು. ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಎಚ್. ಆರ್ ಉಮೇಶ ಆರಾಧ್ಯ ವಹಿಸಿದ್ದರು. ಶಿವಮೊಗ್ಗನೆಲೆಯ ತಮ್ಮ ಅನಿಸಿಕೆಗಲನ್ನು ಶ್ರೀ ಮೈಲಾರಿಯವರ ಸೇವಾ ವೈಖರಿಯನ್ನು ಸ್ಮರಿಸಿ ನೆಲೆಗೆ ಶುಭ ಕೋರಿದರು. ಮೈಸೂರು ಛೇಂಬರ್

ಆಪ್ ಕಾಮರ್ಸ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಶ್ರೀ ಎಸ್ ಸುಧಾಕರ್ ಶೆಟ್ಟಿಯವರು ಮತ್ತು ಮೈಸುರಿನ ಗ್ರೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ ಐ ರಮೇಶ್ ರವರು ಗಲು ಮುಖ್ಯ ಅಭ್ಯಾಗತರಾಗಿದ್ದರು. ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾದ ಮಾನ್ಯ ಶ್ರೀ ವೆಂಕಟರಾಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಕೆ ರಾಮದಾಸ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹರಾದ ಶ್ರೀ ತಿಪ್ಪೇಸ್ವಾಮಿಯವರು ಅಜಿತ ನೆಲೆಯ ಅಧ್ಯಕ್ಞಷರಾದ ಶ್ರೀ ಗೋಪಾಲಕೃಷ್ಣ ಅವರೂ ಸಭಿಕರ ಜೊತೆ ಉಪಸ್ಥಿತರಿದ್ದು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಅಚಿತ ನೆಲೆಗೆ ನಿವೇಶನ ನೀಡಿ ಸ್ವಂತಕಟ್ಟಡಕ್ಕೆ ಕಾರಣೀಭೂತರಾದ

ಶ್ರೀಮತಿ ಗೋದಾವರಿ ಅವರನ್ನು, ಕಟ್ಟಡದ ಮೇಲುಸ್ತುವಾರಿ ನೋಡಿಕೊಂಡ ಶ್ರೀ ಶ್ಯಾಂ ರವರನ್ನು ತಮ್ಮ ಇಳಿವಯಸ್ಸಿನಲ್ಲೂ ಅಜಿತನೆಲೆಯ ಎಲ್ಲಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ನಾರಾಯಣ ದಂಪತಿಗಳನ್ನು ಸತ್ಕರಿಸಲಾಯಿತು. ಪ್ರಾರಂಭದಲ್ಲಿ ಅಜಿತ ನೆಲೆಯ ಶ್ರೀಮತಿ ಲೀಲಾವತಿ ನಾರಾಯಣ್ ರವರು ಅಬ್ಯಾಗತರನ್ನು ಸ್ವಾಗತಿಸಿದರು. ಶ್ರೀ ವಿನೋದ್ ಕಾರ್ಯಕ್ರಮವನ್ನು ನಿರೂಪಿಸಿದರು.

ನೆಲೆ ಕಟ್ಟಡಕ್ಕೆ ನಿವೇಶನ ನೀಡಿದ ಶ್ರೀಮತಿ ಗೋದಾವರಿ ಅಕ್ಕ.

ಮೈಸೂರಿನ ಶ್ರೀಮತಿ ಗೋದಾವರಿಬಾಯಿ ಇವರು ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರ ಹಿರಿಯ ಸಹೋದರಿ. ಮೈಸೂರಿನಲ್ಲಿ ಸಿ.ಎಫ್.ಟಿ.ಆರ್.ಐ.ನಲ್ಲಿ ವಿಜ್ಙಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಂಜೂರಾದ  ಈ ನಿವೇಶನವನ್ನು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಬಳಸ ಬೇಕೆಂಬುದು ಅವರ ಆಶಯ. ಹೀಗೆ ನೋಡುತ್ತಿದ್ದಾಗ ಗೋಚರವಾದದ್ದು ಮೈಸೂರಿನ ಅಜಿತ ನೆಲೆ. ನೆಲೆಯ ಕಾರ್ಯಕರ್ತರು ಸಹ ನಿವೇಶನ ಹುಡುಕುತ್ತಿದ್ದ ಸಂದರ್ಭ. ಸರಿ.ತೀರ್ಮನವಾಗಿಯೇಹೋಯಿತು. ಒಂದು ಶುಭ ದಿನ ನಿವೇಶನದ ಹಸ್ತಾಂತರದ ಪ್ರಕ್ರಿಯೆ ಮುಗಿದೇಹೋಯಿತು. ಜೊತೆಯಲ್ಲಿ ರೂ ಹತ್ತುಸಾವಿರ ಗಳ ಮೂಲಧನಬೇರೆ. ಹಸ್ತಾಂತರದ ತಕ್ಷಣ ಅವರ ಬಾಯಿಯಿಂದ ಹೊರಟ ಉದ್ಗಾರ ನನ್ನ ಜೀವನ ಸಾರ್ಥಕ್ಯವನ್ನು ಪಡೆಯಿತು. ನೆಮ್ಮದಿ ನನ್ನದಾಯಿತು. ಉತ್ತಮ ಹಾಡುಗಾರ್ತಿಯು ಆಗಿದ್ದ ಶ್ರೀಮತಿ ಗೋದಾವರಿ ಅಕ್ಕ, ತಾವಷ್ಟೇಅಲ್ಲ ತಮ್ಮ ಕುಟುಂಬದ ಎಲ್ಲಾ ಸಹೋದರರ ಅವರ ಕುಟುಂಬ ಮಕ್ಕಳ ಜೊತೆ ಮಾತನಾಡಿ ಅವರೆಲ್ಲರಿಂದ ನೆಲೆಯ ಪೋಷಣೆಗೆ ಕಾರಣೀಭೂತರಾಗಿದ್ದಾರೆ. ರಾಮಕೃಷ್ಣ ಶಾರದಾಮಾತೆ ಯರ ಸದ್ಭಕ್ತರಾಗಿದ್ದ ಅಕ್ಕ ಅವರಿಗೆ ವಿವೇಕಾನಂದರ ೧೫೦ನೇ ಜನ್ಮವಷಾಚರಣೆಯ ಸಂದರ್ಭದಲ್ಲೇ  ನೆಲೆಯ ನಿವಾಸದ ಗೃಹಪ್ರವೇಶವಾಗಿದ್ದು ಅಪರಿಮಿತ ಆನಂದ ತಂದಿದೆ. ಇಂಥವರ ವಂಶ ಸಾವಿರವಾಗಲೆಂದೇ ನೆರೆದಿದ್ದ ಎಲ್ಲರ ಹಾರೈಕೆ.

ಹಣ ಮುಖ್ಯವಲ್ಲ, ಮನಸ್ಸು ಮುಖ್ಯ

ಶ್ರೀರಾಮಣ್ಣನವರು ನೆಲೆ ಗೃಹಪ್ರವೇಶದ ಮಾರನೆಯ ದಿವಸ ಟಿ ನರಸೀಪುರದಲ್ಲಿ ಶ್ರೀಯುತ ಕೆ.ಎಲ್ ವೆಂಕಟೇಶ ರವರಮನೆಗೆ ಭೇಟಿನೀಡುತ್ತಾರೆ. ನೆಲೆಯ ಉದ್ಘಾಟನೆಯ ಹಿಂದಿನ ಕಥೆಯನ್ನೆಲ್ಲಾ ವಿವರಿಸುತ್ತಿದ್ದಾಗ ಯಾರ ಗಮನಕ್ಕೂ ಬಾರದ ಎರಡು ಕಿವಿಗಳು ಈ ಕಥೆಗಳ ಬಗೆಗೆ ಆಸಕ್ತಿವಹಿಸಿರುತ್ತದೆ. ಶ್ರೀವೆಂಕಟೇಶ್ ರವರ ಪತ್ನಿ ತಾನು ನೆಲೆಯ ಕಟ್ಟಡವನ್ನು ನೋಡಬೇಕೆಂದು ಹೊರಟಾಗ ಈ ಎರಡು ಕಿವಿಗಳು ಶ್ರೀ ರಾಮಣ್ಣನವರ ಮುಂದೆ ಪ್ರತ್ಯಕ್ಷ. ಅವರು ಬೇರಾರೂ ಅಲ್ಲ, ೧೫ವರ್ಷಗಳ ಹಿಂದಿನಿಂದಲೂ ಶ್ರೀ ವೆಂಕಟೇಶ್ ರವರ ಮನೆಯ ಬಟ್ಟೆ ಪಾತ್ರೆ ತೊಳೆಯುತ್ತಾ ಪರಿಚಾರಿಕೆಯವಳಾಗಿರುವ ತಾಯಿ. ತನ್ನ ಉಡಿಯಲ್ಲಿ ಬಚ್ಚಿಟ್ಟಿದ್ದ ಎರಡು ೫೦ರೂ ನೋಟುಗಳನ್ನು ಶ್ರೀ ರಾಮಣ್ಣನವರ ಕೈಗೆ ನೀಡುತ್ತ ನನ್ನ ಕೈಲಾಗಿದ್ದದ್ದು ಇಷ್ಟೇ ಸ್ವಾಮಿ. ಮಕ್ಕಳ ಕಾರ್ಯಕ್ಕೆ ಒದಗಿ ಬರಲಿ ಎಂದು ಹೇಳಿ ಮರು ಮಾತಿಗೂ ಕಾಯದೆ ನಿರ್ಗಮಿಸಿದರು. ಸಮರ್ಪಣೆಎನ್ನುವುದು ಆತ್ಮ ಪೂರ್ತಿಯಾಗಿ ನೀಡುವಂಥದ್ದು. ವ್ಯಕ್ತಿಯ ಮಾನಸಿಕತೆಗೆ ಹಿಡಿದ ಕನ್ನಡಿ. ಇಲ್ಲಿ ಹಣದ ಮೌಲ್ಯ ಅಗಣಿತ ಈ ಮಾತುಗಳನ್ನು ಈ ವರದಿಗಾರನ ಮುಂದೆ ಹೇಳುವಾಗ ಶ್ರೀ ರಾಮಣ್ನನವರ ಕಣ್ಣುಗಳು ಹೊರಬರುತ್ತಿದ್ದ ಅಶ್ರುಹನಿಯನ್ನು ತಡೆಹಿಡಿಯಲಿಲ್ಲ.

ಸಂವೇದನಾಶೀಲರು.

ಕಾರ್ಯಕ್ರಮ ನಡೆಯುತ್ತಿತ್ತು. ಶ್ರೀ ರಾಮಣ್ಣನವರ ಪ್ರಭಾವ ತುಂಬಿದ ಮಾತುಗಳು. ಈಗ ವೇದಿಕೆಯಲ್ಲಿ ತಮ್ಮ ಪ್ರತಿಭೆ ತೋರಿದ ಮಕ್ಕಳು ಅವರ ಕಾರ್ಯಕ್ರಮವನ್ನು ಅದರಲ್ಲೂ ಸೈನಿಕರ ಪ್ರಹಸನವನ್ನು ನಡೆಸಿದ ಆ ಮಕ್ಕಳ ಅಭಿನಯ ನೋಡಿದ ಯಾಗಿಗಾದರೂ ಕಣ್ಣಂಚಿನಲ್ಲಿ ನೀರು ಜಿನುಗದಿರದು. ಇದು ಕೇವಲ ಭೇಷ್ ಎಂದು ಹೇಳಿ, ಸುಮ್ಮನೆ ಮನೆಗೆ ಹೋಗುವ ಚೆನ್ನಾಗಿತ್ತೆಂದು ಆನಂದಪಡುವ ಕಾರ್ಯಕ್ರಮ ಮಾತ್ರವಲ್ಲ. ಭಾವಾತ್ಮಕತೆಗೆ ಸ್ಪಂದಿಸದ ಸಂವೇದನೆಯನ್ನು ಮೆರೆಯದ ಹೃದಯವೇ ಇಲ್ಲಿಲ್ಲ. ಹಾಗಾದರೆ ಮರೆತು ಹೋಗಬಹುದಾಗಿದ್ದ ಈ ಮಕ್ಕಳಿಗೆ ನಾವು ನಮ್ಮ ಕರ್ತವ್ಯರೂಪದಲ್ಲಿ ಏನು ಮಾಡಬಹುದು?…ಪ್ರಶ್ನೆ ಮುಗಿದಿರಲಿಲ್ಲ. ಡಾ. ಬಾಪಟ್ ರವರು ಸಣ್ಣ ಚೀಟಿಯಲ್ಲಿ ತಿಳಿಸಿದರು, ಮೈಸೂರಿನ ಪ್ರತಿಷ್ಟಿತ ಚಿನ್ನದ ವ್ಯಾಪಾರಿಯೊಬ್ಬರು ತಮ್ಮ ಪಾಲಿನ ಕರ್ತವ್ಯವೆಂದು ಒಂದು ಲಕ್ಷದ ಒಂದು ರೂಗಳನ್ನು ನೀಡುವ ಅಭಿವಚನವನ್ನು ತಿಳಿಸಿದರಲ್ಲದೆ ಮಾರನೆಯ ದಿನ ಚೆಕ್ಕನ್ನೂ ತಲುಪಿಸಿದರು. ಈ ವಿಚಾರವನ್ನೂ ಸಭೆಯ ಗಮನಕ್ಕೆ ತಂದ ಶ್ರೀ ರಾಮಣ್ಣನವರು ಅರ್ಪನೆಗೆ ಹಣದ ಗಾತ್ರ ಮುಖ್ಯವಲ್ಲ ಒಂದು ಲಕ್ಷವಿರಬಹುದು ಒಂದೇರೂಪಾಯಿ ಇರಬಹುದು ಭಗವಂತನೇ ತಿಲಿಸಿದ್ದಾನೆ ಅವನಿಗೆ ಪತ್ರ ಪುಷ್ಪ ಫಲ ಯಾವುದನ್ನು ಬೇಕಾದರೂ ಅರ್ಪಿಸಬಹುದು ಎಂದು. ಅದಕ್ಕೇ ಅಲ್ಲವೆ ಇದನ್ನು ಸ್ಪಂದನೆ ಸಂವೇದನೆ ಎನ್ನುವುದು ಎಂದು ವಿಷಯಾಂತರ ಮಾಡಿದರು.

ವರದಿ : ಪ್ರದ್ಯುಮ್ನ ಕೆ.ಪಿ, ಮೈಸೂರು.

1 thought on “ಹಿಂದೂ ಸೇವಾ ಪ್ರತಿಷ್ಠಾನದ ಸೇವಾ ಪ್ರಕಲ್ಪವಾದ ಮೈಸೂರಿನ 'ಅಜಿತ ನೆಲೆ' ಕಾರ್ಯಾರಂಭ

  1. I was surprised to see this kind of a new report. I was curious about the by-line. lastly I found it, our dearest Pradyumnaji himself wrote this. A special touch is with the report. Thanks, Pradyuman ji for updating us about a Mysore event. Hope the same kind of inspirational report come from Mysore.

Leave a Reply

Your email address will not be published.

This site uses Akismet to reduce spam. Learn how your comment data is processed.