Summary: RSS organised DHARMA SAMSAD held at Mangaluru, Swamiji’s of several prominent Math of Mangaluru Zone attended the Dharma Samsad, A resolution passed to Stop Forced Conversions and to eradicate social evils which are the hurdles to achieve complete social harmony.
ಮಂಗಳೂರು ಜುಲೈ 5, 2016: ಧರ್ಮಜಾಗರಣ ಸಮನ್ವಯ ವಿಭಾಗ ಮಂಗಳೂರು ವತಿಯಿಂದ ಅವಿಭಜಿತ ಜಿಲ್ಲೆಗಳ ಪೂಜ್ಯ ಸಾಧುಸಂತರ ‘ಧರ್ಮಸಂಸತ್’ ಮಂಗಳವಾರ ನಗರದ ಸಂಘನಿಕೇತನದಲ್ಲಿ ಜರಗಿತು.
ಮತಾಂತರದ ಗಂಡಾಂತರ , ಪರಾವರ್ತನ (ಮರಳಿ ಮಾತೃಧರ್ಮಕ್ಕೆ ಕರೆತರುವುದು) ಮತ್ತು ಸಾ ಮರಸ್ಯ- ಸಂಸ್ಕಾರಗಳ ಕುರಿತು ಚರ್ಚೆ ನಡೆದು, ಬಳಿಕ ಹಿಂದು ಸಮಾಜದ ಹಿತರಕ್ಷಣೆಗಾಗಿ ಮಠ-ಮಂದಿರಗಳು ಮಾಡಬೇಕಾದ ಕಾರ್ಯಗಳ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ , ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಕೇಮಾರು ಸಾಂದೀಪನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಬಲ್ಯೊಟ್ಟು ಶ್ರೀವಿಖ್ಯಾತಾನಂದ ಸ್ವಾಮೀಜಿ, ಮರಕಡ ಶ್ರೀ ಆದಿ ಪರಾಶಕ್ತಿ ಕೇಂದ್ರದ ಶ್ರೀನರೇಂದ್ರನಾಥ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದಜೀ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಬಾಳೆಕೋಡಿ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿ, ಆನೆಗೊಂದಿ ಮಠದ ಶ್ರೀ ಕಾಳಹಸ್ತೇಂದ್ರನಾಥ ಸ್ವಾಮೀಜಿ ಭಾಗವಹಿಸಿದ್ದರು.
ಆರೆಸ್ಸೆಸ್ನ ಸಹಪ್ರಾಂತ ಸಂಘಚಾಲಕ್ ಡಾ. ವಾಮನ್ ಶೆಣೈ, ಆರೆಸ್ಸೆಸ್ ಕ್ಷೇತ್ರೀಯ ಸೇವಾಪ್ರಮುಖ್ ಗೋಪಾಲ್ಚೆಟ್ಟಿಯಾರ್, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವಿಹಿಂಪ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಉಡುಪಿ ಜಿಲ್ಲಾ ಸಂಘಚಾಲಕ್ ಶಂಭುಶೆಟ್ಟಿ, ಮಂಗಳೂರು ವಿಭಾಗ ಕಾರ್ಯವಾಹ ಹಾಗೂ ಧರ್ಮಜಾಗರಣ ಪ್ರಾಂತ ಸಂಯೋಜಕ ನ. ಸೀತರಾಮ, ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಎಸ್. ಆರ್.ರಂಗಮೂರ್ತಿ, ಧರ್ಮಜಾಗರಣದ ಪ್ರಾಂತ ಸಂಸ್ಕೃತಿ ಪ್ರಮುಖ್ ಶ್ರೀಧರ್ ಹಾಗೂ ಬಜರಂಗದಳ ಪ್ರಾಂತ ಸಹಸಂಚಾಲಕ ಶರಣ್ ಪಂಪ್ವೆಲ್ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಜಾಗರಣ ಪ್ರಾಂತ ಪ್ರಮುಖ್ ಮುನಿಯಪ್ಪ , ಆದಿಯಿಂದಲೂ ಧರ್ಮಮಾರ್ಗದಲ್ಲಿ ನಡೆದು ಸಮಾಜವನ್ನು ರಕ್ಷಿಸುವ ಸಂತಪರಂಪರೆ ಹಿಂದು ಸಮಾಜದ ಶಕ್ತಿಯಾಗಿದೆ. ದೇಶವನ್ನು ಧರ್ಮಮಾರ್ಗದಲ್ಲಿ ಮುನ್ನಡೆಸಬಲ್ಲ ಸಂತಶಕ್ತಿ ಹಿಂದು ಸಮಾಜ ರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿದೆ. ಭೋಗಮೆಟ್ಟಿ ತ್ಯಾಗ ಮೆರೆದ ಸಂತರೇ ಹಿಂದುಧರ್ಮಕ್ಕೆ ಶಕ್ತಿ ತುಂಬಿದವರು. ಅವರಿಂದಲೇ ಯುವಪೀಳಿಗೆಗೆ ಧರ್ಮ, ಸಂಸ್ಕೃತಿ, ಪರಂಪರೆಯ ಮಾರ್ಗದರ್ಶನವಾಗಬೇಕು. ಇಂದು ಮತಾಂತರ, ಲವ್ಜೆಹಾದ್, ಜನಸಂಖ್ಯಾ ವ್ಯತ್ಯಯದಂತಹ ಸವಾಲುಗಳು ಹಿಂದು ಸಮಾಜವನ್ನು ಅಪಾಯಕ್ಕೊಡ್ಡಿರುವ ಹಿನ್ನೆಲೆಯಲ್ಲಿ ಧರ್ಮಸಂಸತ್ನ್ನು ಆಯೋಜಿಸಲಾಗುತ್ತಿದೆ ಎಂದು ನುಡಿದರು.
20ನೇ ಶತಮಾನ ಆಧ್ಯಾತ್ಮದ ಶತಮಾನವಾಗಿರಲಿದೆ. ದೇಶದ ಬಾಹ್ಯ ಹಾಗೂ ಆಂತರಿಕ ಸಮಸ್ಯೆಗಳಿಗೆ ಸಂತ ಶಕ್ತಿಯೇ ಉತ್ತರ ನೀಡಲಿದೆ. ಆಸೆ ಆಮಿಷದ ಮುಖಾಂತರ ನಡೆಯುವ ಮತಾಂತರ, ಈಗಾಗಲೇ ಮತಾಂತರಗೊಂಡ ಹಿಂದುಬಂಧುಗಳನ್ನು ‘ ಮರಳಿ ಮಾತೃಧರ್ಮಕ್ಕೆ’ ಮೂಲಕ ಪರಾವರ್ತನ ಹಾಗೂ ನಮ್ಮೊಳಗಿನ ಬೇಕಿರುವ ಸಾಮರಸ್ಯ ಹಾಗೂ ಅದಕ್ಕಿರುವ ಸಂಸ್ಕಾರಗಳಿಗೆ ಸಾಧುಸಂತರೇ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹೆಣ್ಣುಮಕ್ಕಳ ವೇದಘೋಷದೊಂದಿಗೆ ದೀಪಬೆಳಗಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರೋಪದಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ , ಹಿಂದು ಸಮಾಜದಲ್ಲಿ ಹಿಂದುಳಿದವರು-ಮುಂದುಳಿದವರೆಂದಿಲ್ಲ. ಇಂದು ಅಸ್ಪೃಶ್ಯರೆಂದು ಹೇಳಲ್ಪಟ್ಟವರಿಂದಲೇ ಹಿಂದು ಸಮಾಜ ಉಳಿದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈಗ ನಾವು ಮೇಲರಿಮೆ-ಕೀಳರಿಮೆ ಹೊಂದದೆ ನಾವೆಲ್ಲ ಹಿಂದುಗಳು ಎಂಬ ಏಕೋ ಭಾವದಿಂದ ಧರ್ಮನಿಷ್ಠರಾಗಿ ಸವಾಲುಗಳಿಗೆ ಉತ್ತರಿಸಬೇಕಾಗಿದೆ . ಈ ಕಾರ್ಯಕ್ಕೆ ಸಂತರ ಮಾರ್ಗದರ್ಶನ ಬೇಕಾಗಿದೆ . ಸಂತರು ಈ ಕಾರ್ಯಕ್ಕೆ ಧುಮುಕಿದರೆ ಹಿಂದು ಸಮಾಜ ಎಲ್ಲ ದುರಿತಗಳಿಂದ ಮುಕ್ತಿಹೊಂದಲು ಸಾಧ್ಯ. ಸಂತರು ಈ ಕಾರ್ಯಕ್ಕೆ ವೇಗ ನೀಡಲು ಇಲ್ಲಿ ಸಂಕಲ್ಪ ತಳೆದಿರುವುದು ಹಿಂದು ಸಮಾಜದಲ್ಲಿ ಹೊಸ ಆತ್ಮವಿಶ್ವಾಸ ತುಂಬುವಂತೆ ಮಾಡಲಿದೆ ಎಂದರು.
ಧರ್ಮ ಸಂಸತ್ ನಿರ್ಣಯಗಳು :
ಹಿಂದು ಸಮಾಜ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪರಮಪೂಜ್ಯ ಸಾಧುಸಂತರ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಅನೇಕ ಸಾಧುಸಂತರು ಹಿಂದು ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತ ಚಿಂತನೆ ನಡೆಸಿ ಕೈಗೊಂಡ ನಿರ್ಣಯಗಳು ಇಂತಿವೆ:
- ದೇಶದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಮಿಷನರಿಗಳಿಂದ ಹಿಂದುಗಳ ಮತಾಂತರ ಕೃತ್ಯಗಳು ಇನ್ನಷ್ಟು ವ್ಯಾಪಕಗೊಂಡಿದೆ. ಅದೀಗ ಹಿಂದು ಸಮಾಜದ ಎಲ್ಲ ವರ್ಗಗಳನ್ನು ಗುರಿಯಾಗಿರಿಸಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರತಿ ಹಿಂದು ಜಾತಿಯನ್ನು ಪ್ರತ್ಯೇಕವಾಗಿ ಗುರಿಯಾಗಿಸಿ ಆಯಾ ಜಾತಿಯ ವ್ಯಕ್ತಿಯನ್ನೇ ಪಾದ್ರಿಯನ್ನಾಗಿಸಿ ಆಯಾ ಜಾತಿಗಾಗಿಯೇ ಪ್ರತ್ಯೇಕ ಚರ್ಚ್ ನಿರ್ಮಿಸಿ ಹಿಂದುಗಳನ್ನು ಮತಾಂತರಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ‘ಮಿಷನ್ ಮ್ಯಾಂಡೇಟ್’ಹೆಸರಿನಲ್ಲಿ ನಡೆದಿದೆ. ಇದು ಅತ್ಯಂತ ಕಳವಳಕಾರಿ. ಇದನ್ನು ತಡೆಯಲು ಹಿಂದು ಸಮಾಜ ಜಾಗೃತವಾಗಬೇಕಾಗಿದ್ದು, ಹಿಂದು ಸಮಾಜದ ರಕ್ಷಣೆಗೆ ನಾವೆಲ್ಲ ಸಂತರು ಒಟ್ಟಾಗಿ ಶ್ರಮಿಸಲಿದ್ದೇವೆ.ಮತಾಂತರಕ್ಕೆ ತಡೆ ಮತ್ತು ಪರಾವರ್ತನ ಕಾರ್ಯಕ್ಕೆ ನಾವು ಸಿದ್ಧರಾಗಿದ್ದೇವೆ.
- ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿ , ಪ್ರೇಮದ ಹೆಸರಿನಲ್ಲಿ (ಲವ್ ಜೆಹಾದ್, ಲವ್ ವೇವ್)ವಂಚನೆಯ ಸುಳಿಗೆ ಬೀಳಿಸಿ ಮತಾಂತರಗೊಳಿಸುವುದು ಇನ್ನಷ್ಟು ತೀವ್ರಗೊಂಡಿದ್ದು, ಇದರ ವಿರುದ್ಧ ಪ್ರತಿ ಹಿಂದು ಮನೆಯಲ್ಲಿ ತಂದೆ-ತಾಯಿ -ಹಿರಿಯರು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸೂಕ್ತ ಅರಿವು-ತಿಳುವಳಿಕೆ ಮೂಡಿಸಬೇಕು. ಅವರಲ್ಲಿ ಧರ್ಮ ಸಂಸ್ಕಾರದ ಮೌಲ್ಯಗಳನ್ನು ತುಂಬಲು ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ ಮಠ-ಮಂದಿರಗಳಲ್ಲಿ ಕಾರ್ಯಕ್ರಮ ರೂಪಿಸಲು ಕರೆ .
- ಮತಾಂತರಗೊಂಡವರನ್ನು ಪರಾವರ್ತನೆಗೊಳಿಸುವುದು ಧರ್ಮ ಸಮ್ಮತವಾಗಿದೆ. ದೇವಲ ಮಹರ್ಷಿಗಳೇ ತಮ್ಮ ದೇವಲ ಸ್ಮೃತಿ ರಚನೆಯ ಮೂಲಕ ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ತರುವ ಕೆಲಸಕ್ಕೆ ಶಾಸ್ತ್ರ ಸಮ್ಮತಿ ಕಲ್ಪಿಸಿದ್ದು, ನಮ್ಮ ಸಂತ ಪರಂಪರೆಯಲ್ಲಿ ನೂರಾರು ಸಂತಶ್ರೇಷ್ಠರು ಮತಾಂತರ ತಡೆಯುವ ಮತ್ತು ಪರಾವರ್ತನೆಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಧರ್ಮ-ರಾಷ್ಟ್ರ ರಕ್ಷಣೆ ಕಾರ್ಯಕ್ಕೆ ವೇಗ ನೀಡಲು ತೀರ್ಮಾನ.
- ಹಿಂದು ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಿಸುವಲ್ಲಿ ಪೂರ್ಣವಾಗಿ ತೊಡಗುವುದು. ಇದಕ್ಕಾಗಿ ಕಾಲನಿ, ಮನೆ, ಹಳ್ಳಿಗಳಿಗೆ ಭೇಟಿ ಮೂಲಕ ಧರ್ಮ ಜಾಗರಣೆ.ಹಿಂದು ಸಮಾಜದ ಎಲ್ಲ ವರ್ಗಗಳನ್ನು ಧರ್ಮದ ಪ್ರೀತಿ ಬಂಧದಲ್ಲಿ ಜೋಡಿಸಲು ಕಾರ್ಯಕ್ರಮ.
- ಅಸ್ಪೃಶ್ಯತೆ ನಿವಾರಣೆಯಲ್ಲಿ ಮೇಲ್ವರ್ಗದವರ ಪಾತ್ರ ಮುಖ್ಯ. ಇದು ನಮ್ಮ ಹಿಂದು ಸಮಾಜ-ಧರ್ಮ ರಕ್ಷಣೆಗಾಗಿ ಎಂಬ ಅರಿವು ಹೊಂದಿ ಹಿಂದಿನಿಂದ ಬಂದ ಅಸ್ಪೃಶ್ಯತೆ ಉಪೇಕ್ಷಿತರಲ್ಲಿ ಕೀಳರಿಮೆಗೆ ಕಾರಣವಾಗಿದೆ. ಇದನ್ನು ನೀಗಿಸಿ ಅವರನ್ನು ಹಿಂದುತ್ವದ ವಾತ್ಸಲ್ಯದಡಿ ತಂದು ಸಾಮರಸ್ಯಪೂರ್ಣ ಸಮಾಜವನ್ನು ಮತ್ತೆ ಕಟ್ಟಲು ತೊಡಕಾಗಿರುವ ಎಲ್ಲ ಸಂಕುಚಿತತೆಗಳನ್ನೂ ಬದಿಗಿಟ್ಟು ಕಾರ್ಯನಿರ್ವಹಿಸಲು ಪ್ರೇರಣೆ.
- ಮನೆ -ಮನೆಗೆ ಧಾರ್ಮಿಕ ಗ್ರಂಥಗಳನ್ನು ತಲುಪಿಸಲು ಯೋಜನೆ ರೂಪಿಸಲಿದ್ದೇವೆ. ಮರಳಿ ಮಾತೃಧರ್ಮಕ್ಕೆ ಕರೆತರುವ ವೇಳೆ ಆಯಾ ಸಮುದಾಯಕ್ಕೆ ಸೇರಿಸಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಹಿಂದು ಸಮುದಾಯಗಳೂ ಕೈಜೋಡಿಸಬೇಕು. ಈ ಕಾರ್ಯದಲ್ಲಿ ಸಂತರೂ ಮಾರ್ಗದರ್ಶನ ಮಾಡಲಿದ್ದಾರೆ.
- ಒಟ್ಟಿನಲ್ಲಿ ಮತಾಂತರಕ್ಕೆ ಹಿಂದು ವಿರೋಧಿಗಳ ಷಡ್ಯಂತ್ರಕ್ಕೆ ಯಾವೊಬ್ಬ ಹಿಂದುವೂ ಬಲಿಬೀಳದಂತೆ ನಾವೆಲ್ಲ ಕಟ್ಟೆಚ್ಚರ ವಹಿಸಬೇಕಾಗಿದ್ದು, ಬಡತನ, ಧರ್ಮಶಿಕ್ಷಣದ ಕೊರತೆ ಮತ್ತು ಸಾಮರಸ್ಯದ ಕೊರತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು. ಇದಕ್ಕಾಗಿ ಗ್ರಾಮ-ನಗರ-ಹಳ್ಳಿಗಳ ಎಲ್ಲ ಧರ್ಮ-ಶ್ರದ್ಧಾ ಕೇಂದ್ರಗಳಲ್ಲಿ ಧರ್ಮ ಜಾಗರಣೆ ಕಾರ್ಯಕ್ರಮ ರೂಪಿಸುವುದು, ಬಡವರ ಸೇವಾ ಕಾರ್ಯಕ್ರಮ ರೂಪಿಸುವುದು ಮತ್ತು ಸಾಮರಸ್ಯಕ್ಕೆ ತೊಡಕಾಗಿರುವ ಎಲ್ಲ ರಾಜಕೀಯ , ಜಾತೀಯ, ಸ್ವಾರ್ಥ ಪ್ರೇರಿತ ಸಂಗತಿಗಳನ್ನು ನಿವಾರಿಸಲು ನಾವೆಲ್ಲ ಒಟ್ಟಾಗಿ ಬಲಿಷ್ಠ ಧರ್ಮನಿಷ್ಠ ಹಿಂದು ಸಮಾಜವನ್ನು ಮತ್ತೆ ಕಟ್ಟಲು ಸಂಕಲ್ಪಿಸಬೇಕು ಎಂದು ಸಭೆ ನಿರ್ಣಯಿಸಿದ್ದು, ಸಂತರು, ಹಿಂದು ನಾಯಕರು ಹಾಗೂ ಕಾರ್ಯಕರ್ತರು ಓಂಕಾರದ ಮೂಲಕ ಇದಕ್ಕೆ ಪೂರ್ಣ ಬೆಂಬಲ ನೀಡಿತು.
The Dharma Samsad talk of unity among Hindus. O.K. These Mutts run their own Patashalas and have temples. If these so called Sants are honest then they should admit boys and girls of all castes into their Pata shalas strictly based on merit. Do they come forward to admit children belonging to S.C and S.T into their Patashalas and train them to be priests? I doubt very much. Further, these mutt heads even to do not have common worship mode. Each worship in a different manner which is against Vedas. The Sanganta Sutra of Vedas ordain that we must speak,walk,and think uniformly and worship done together uniformly. obviously this is not done and they talk of unity among Hindus. Unless this is done all talk of Unity among Hindus is only gas.
Further, the resolution talks of bringin non-Hindus to Hindu hold and quote Maharshi Deval. But they forget this Smriti is long forgotten and nobody knows how this was done. But it was Swami Dayanand[1824-1883] thru Shuddi process was able to bring back non-Hindus on equality basis. But this Dharma Sansad glosses over the contribution of Swami Dayanand in forging Hindu unity on durable basis. The Dharma Sansad resolution has no capacity to forge unity among Hindus. Hindus continue to be divided and foreign missionaries will be having a field day so long the concept of Hindu unity as propagated by Swami Dayanand based on Vedas is not followed. By the by what is the Unity Mantra they chanted in the conferene?