“ಸಕ್ಷಮ” ಅಖಿಲ ಭಾರತ ಪ್ರತಿನಿಧಿ ಸಭಾ” ವಿಶೇಷಚೇತನರ ಅಖಿಲ ಭಾರತ ಸಂಘಟನೆ, ಸಕ್ಷಮ ದ ಅಖಿಲಭಾರತ ಪ್ರತಿನಿಧಿ ಸಭಾ ಹೈದರಾಬಾದ್ ನ ಶಾರದ ಧಾಮ ಶಿಕ್ಷಣ ಕೇಂದ್ರದಲ್ಲಿ ವಿದ್ಯುಕ್ತವಾಗಿ ಇಂದು ತಾ ೧೪-೦೯-೨೦೧೯ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ, ಪೂಜ್ಯ ಸ್ವಾಮೀಜಿ ಪರಿಪೂರ್ಣಾನಂದ ಜಿ ಅವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು .ಸ್ವತಃ ತನ್ನ ತಾಯಿಗೆ ದೃಷ್ಟಿ ಸವಾಲಿನ ಕಾರಣದಿಂದಾಗಿ ತಾನು ಗಂಡು ಮಗನಾದರೂ ಅವರಿಗೆ ತಾಯಿಯಾಗಿ ಸಹಕರಿಸಿದ ಅದ್ಭುತ ಅನುಭವವನ್ನು ಹಂಚಿಕೊಂಡರು.ದೃಷ್ಟಿ ಸವಾಲಿನ ಮಧ್ಯದಲ್ಲೂ ಸ್ವಾಭಿಮಾನದ ಬದುಕಿದ ಆಕೆ ಅನೇಕರಿಗೆ ಸಹಾಯ ಪ್ರೇರಣೆ ನೀಡಿದ್ದಾರೆ ಎಂದು ಸ್ಮರಿಸಿದರು.ಅಂಗವಿಕಲತೆ ಅಂಗವಿಕಲರ ಲಿಲ್ಲ ಬದಲಾಗಿ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳ ಇಚ್ಛಾಶಕ್ತಿ, ಸರಕಾರಿ ಅಧಿಕಾರಿಗಳು ಮತ್ತು ಸಮಾಜದ ಅಲಕ್ಷ ದಲ್ಲಿ ಅಂಗವಿಕಲತೆ ಇದೆ ಎಂದು ಅಭಿಪ್ರಾಯಪಟ್ಟರು,. ಮುಂದುವರೆದು ಮಾತನಾಡಿದ ಅವರು ಸಕ್ಷಮ ದ ಅಖಿಲಭಾರತ ಪ್ರಯತ್ನ ಹಿಂದೂ ಮುಸಲ್ಮಾನ್ ,ಕ್ರೈಸ್ತರ ಎನ್ನದೆ ಎಲ್ಲರನ್ನೂ ಸಮಭಾವದಿಂದ ಕಂಡು ಆದರಿಸುವ ಉಪಚರಿಸುವ ಗುಣವನ್ನು, ಮತಾಂತರದ ಕಾರ್ಯಕ್ಕೆ ಉಪಯೋಗಿಸಿ ಕೊಂಡಿಲ್ಲ ಎಂಬುದನ್ನು ಬೊಟ್ಟು ಮಾಡಿದರು. ಮಿಷನರಿ ಗಳ ಸೇವೆಗೂ ಸಂಘ ಪ್ರೇರಿತ ಸಂಘಟನೆ ಗಳಿಗೆಇರುವ ವ್ಯತ್ಯಾಸ ಇದು ಮಾಧ್ಯಮದವರು ಸಮಾಜದ ಬಂಧುಗಳು ಅವಶ್ಯಗಮನಿಸಬೇಕು ಎಂದರು. ವೇದಿಕೆಯ ಮೇಲೆ ಆರ್ ಎಸ್ ಎಸ್ ನ ಅಖಿಲ ಭಾರತ ಸಹಸರಕಾರ್ಯವಾಹ ಮನಮೋಹನ್ ವೈದ್ಯ ,ಡಾಕ್ಟರ್ ಸುದರ್ಶನ್ ರೆಡ್ಡಿ ,ಮಿಲಿಂದ ಕಸ್ಬೇಕರ್, ಅಧ್ಯಕ್ಷರು ಶ್ರೀ ದಯಾಳ್ ಸಿಂಗ್ ಪನ್ವಾರ್ , ಕಮಲಾಕಾಂತ ಪಾಂಡೆ, ತೆಲಂಗಾಣ ಪ್ರಾಂತ ಪ್ರಚಾರಕ್ ದೇವೇಂದ್ರ ಜಿ ಉಪಸ್ಥಿತರಿದ್ದರು. ಕಮಲಾಕಾಂತ ಪಾಂಡೆ ಸ್ವಾಗತಿಸಿ ಕಾಶಿನಾಥ್ ಲಕ್ಕ ರಾಜು ವಂದಿಸಿದರು ತಾ 13, 14, 15 ಮೂರು ದಿನಗಳ ಕಾಲ ಪ್ರತಿನಿಧಿ ಸಭ ನಡೆಯಲಿದ್ದು, ಸಂಘಟನೆಗೆ ಬಲವರ್ಧನೆಗೆ ಕಾನೂನು, ಕಾಯ್ದೆಗಳು, ಇತ್ಯಾದಿ ಸಂಬಂಧಪಟ್ಟ ಚರ್ಚೆ ನಡೆಯಲಿದೆ ಎಂದು ವಂದನಾರ್ಪಣೆ ಸಲ್ಲಿಸಿದ ಕಾಶಿನಾಥ್ ಲಕ್ಕ ರಾಜ ನುಡಿದರು. ದೇಶದ 33 ರಾಜ್ಯಗಳಿಂದ ಮುನ್ನೂರಕ್ಕೂ ಮಿಕ್ಕಿ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಡಾ|ಸುಧೀರ್ ಪೈ ಹಾಗೂ |ಎಸ್.ಬಿ.ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕದ ೧೫ ಜನ ಪ್ರತಿನಿಧಿಗಳು ಭಾಗವಹಿಸಿದ್ದಾರೆ. mom