ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದಿ ಮಾತ್ರ ರಾಷ್ಟ್ರಭಾಷೆ ಮತ್ತು ಸಂಘವು ಹಿಂದಿಯನ್ನು ಹಿಂದಿಯನ್ನು ಮಾತನಾಡದೇ ಇರುವ ಜನರ ಮೇಲೆ ಹೇರಲು ಬಯಸುತ್ತಿದೆ ಎಂದು ಬ್ರೇಕಿಂಗ್ ಇಂಡಿ ಬ್ರಿಗೇಡ್ ಅಪಪ್ರಚಾರ ಮಾಡುತ್ತಿದೆ ಮತ್ತು ಪ್ರಚೋದನೆಯನ್ನು ನೀಡುತ್ತಿದೆ. ಎಲ್ಲಾ ಭಾರತೀಯ ಭಾಷೆಗಳು ರಾಷ್ಟ್ರೀಯಾಷೆಗಳು ಎನ್ನುವ ವಿಚಾರದ ಬಗ್ಗೆ ಆರೆಸ್ಸೆಸ್ ಯಾವತ್ತಿಗೂ ಸ್ಪಷ್ಟನಿಲವನ್ನು ಹೊಂದಿದೆ. ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ, ಶ್ರೀ ಗುರೂಜೀ ಗೋಳ್ವಲ್ಕ್ ಅವರು ಭಾಷಾಸಮಸ್ಯೆ ಬಗ್ಗೆ ತಮ್ಮ ಅಭಿಪ್ರಾಯವನ್ನು 1957 ಡಿಸೆಂಬರ್ ಮತ್ತು 1967 ಅಕ್ಟೋಬ್ನಲ್ಲಿ ಆರ್ಗನೈಸರ್ ಪತ್ರಿಕೆಗೆ ನೀಡಿದ ಎರಡು ಸಂದರ್ಶನಗಳಲ್ಲಿ ನೀಡಿದ್ದರು.

 ನಮ್ಮ ರಾಷ್ಟ್ರೀಯ ಭಾಷೆ ಯಾವುದಾಗಿರಬೇಕು?

 ನಾನು ನಮ್ಮ ಎಲ್ಲಾ ಭಾಷೆಗಳನ್ನು ರಾಷ್ಟ್ರೀಯಭಾಷೆಗಳೆಂದು ಪರಿಗಣಿಸುತ್ತೇನೆ. ಎಲ್ಲಾ ಭಾಷೆಗಳೂ ನಮ್ಮ ರಾಷ್ಟ್ರೀಯ ಪರಂಪರೆಯಾಗಿದೆ. ಅವುಗಳಲ್ಲಿ ಹಿಂದಿಯೂ ಕೂಡ ಒಂದು ಮತ್ತು ದೇಶಾದ್ಯಂತದ ಬಳಕೆಯಿಂದಾಗಿ, ಅದನ್ನು ರಾಜ್ಯಭಾಷೆಯಾಗಿ ಸ್ವೀಕರಿಸಲಾಗಿದೆ. ಹಿಂದಿಯನ್ನು ಮಾತ್ರ ರಾಷ್ಟ್ರೀಯ ಭಾಷೆ ಎಂದು ಹೇಳುವುದು ಮತ್ತು ಉಳಿದ ಭಾಷೆಗಳನ್ನು ಪ್ರಾಂತೀಯ ಭಾಷೆಗಳು ಎನ್ನುವುದು ತಪ್ಪಾಗುತ್ತದೆ. ಇದು ಸರಿಯಾದ ದೃಷ್ಟಿಕೋನವಲ್ಲ.

 ಸ್ವಲ್ಪ ಸಮಯದ ಹಿಂದೆ ಡಾ.ಸಿ. ರಾಮಸ್ವಾಮಿ ಅಯ್ಯರ್ ಅವರು ಹಿಂದಿಯನ್ನು ಸಾರ್ವಜನಿಕವಾಗಿ ವ್ಯಂಗ್ಯವಾಡಿದ್ದರು. ಹಿಂದಿ ಎರಡು ಪ್ರಮುಖ ದೊಡ್ಡ ಪುಸ್ತಕಗಳಿವೆ. ಒಂದು ತುಳಸಿ ರಾಮಾಯಣ ಮತ್ತು ರೈಲ್ವೇ ಟೈಂ ಟೇಬಲ್ ಎಂದಿದ್ದಾರೆ ಅಯ್ಯರ್ ಅವರು ಡಾ.ಸಿ. ಅವರ ಅನುಮೋದನೆಗೆ ಸರ್ದಾರ್ ಪಣಿಕ್ಕರ್ ಅವರು ಇದನ್ನು ಪುನರ್ವರ್ತಿಸಿದರು.

  ಹಿಂದಿಯನ್ನು ಅರಿಯದ ಜನ ಮಾತ್ರ ಅಪಹಾಸ್ಯ ಮಾಡಬಹುದು.ಈ ರೀತಿ ಇತರೇ ಭಾಷೆಗಳನ್ನು ಅಪಹಾಸ್ಯ ಮಾಡುವ ಪ್ರವೃತ್ತಿ ನಿಲ್ಲಬೇಕು.ಸ್ವಲ್ಪ ಸಮಯದ ಹಿಂದೆ ಪ್ರಮುಖ ಮರಾಠಿ ನಾಟಕಕಾರ್ ರಾಮ್ ಗಣೇಶ್ ಗಡ್ಕರಿ ಅವರು ಒಂದು ಪಾತ್ರದಲ್ಲಿ ಹೀಗೆ ಹೇಳಿದರು : ಕೆಲವು ಬೆಣಚುಕಲ್ಲುಗಳನ್ನು ಟಿನ್ ಡಬ್ಬದಲ್ಲಿ ಹಾಕಿ ಅಲುಗಾಡಿಸಿ ಆಗ ನೀವು ದಕ್ಷಿಣದ ಭಾಷೆಗಳನ್ನು ಕೇಳುತ್ತೀರಿ. ಇದು ವಿನೋದದಲ್ಲಿ ಹೇಳಲಾಗಿದೆ ಎನ್ನುವುದು ತಿಳಿದೇ ಇರುವ ವಿಷಯ. ಆದರೆ ಇಂತಹ ವಿಲಕ್ಷಣ ವಿನೋದವು ದೇಶಕ್ಕೆ ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ.

 ಹಿಂದಿ ಭಾಷೆಯ ಏಳ್ಗೆಯು ತಮ್ಮ ಮಾತೃಭಾಷೆಗೆ ಗ್ರಹಣದಂತೆ ಎನ್ನುವುದು ಕೆಲವರ ಭಾವನೆ.

 ಇಲ್ಲ, ನಾನು ಹಾಗೆ ಯೋಚಿಸುವುದಿಲ್ಲ. ಉದಾಹರಣೆಗೆ: ಬಂಗಾಳಿ, ತಮಿಳು, ಮರಾಠಿ ಮತ್ತು ತೆಲುಗು ಇಂಗ್ಲಿಷ್ನ ಪ್ರಾಬಲ್ಯದಲ್ಲಿಯೂ ಪ್ರವರ್ಧಮಾನಕ್ಕೆ ಬಂದವು. ಹಿಂದಿಯ ಏಳ್ಗೆಯೊಂದಿಗೆ ಈ ಎಲ್ಲಾ ಭಾಷೆಗಳು ಜೊತೆಯಾಗಿ ಮತ್ತಷ್ಟು ಅಭಿವೃದ್ಧಿಯನ್ನು ಹೊಂದುತ್ತವೆ ಮತ್ತು ಹಿಂದಿಯನ್ನೂ ಶ್ರೀಮಂತಗೊಳಿಸುತ್ತವೆ. ಬಂಗಾಳಿಗಳು ಬಂಗಾಳಿಯ ಹಿಂದೀಕರಣ ಎನ್ನುವುದರ ಬಗ್ಗೆ ಯಾಕೆ ಭಯಪಡಬೇಕು? ಕಳೆದ 20 ವರ್ಷಗಳಿಂದ ಬಂಗಾಳಿಯು ಉರ್ದುವಿನ ಪ್ರಭಾವಕ್ಕೆ ಒಳಗಾಗಿದೆ. ಬೆಳಗ್ಗೆ ಎನ್ನುವ ಶಬ್ದಕ್ಕೆ ಪ್ರಭಾತೆ ಎನ್ನುವ ಶಬ್ದದ ಬದಲಾಗಿ ಫಜಾರೆ ಎನ್ನುವ ಶಬ್ದ ಹೆಚ್ಚು ಸ್ಥಾನಪಡೆದಿದೆ. ಆದರೆ ನಾನು ಇನ್ನೂ ಬಂಗಾಳಿ ಪ್ರತಿಭಟನೆಯನ್ನು ಕೇಳಿಲ್ಲ. ಹಾಗಾದರೆ ಹಿಂದಿಯ ಬಗ್ಗೆ ಏಕೆ ಅಲರ್ಜಿ ಮನೋಭಾವನೆ ಇರಬೇಕು? 

  ಸ್ವಲ್ಪ ಸಮಯದ ಹಿಂದೆ ಮಧುರೈನಲ್ಲಿ ವಕೀಲರೊಬ್ಬರು ಹಿಂದಿಯು ತಮಿಳಿಗೆ ನೋವುಂಟು ಮಾಡಬಹುದು ಎಂದು ಹೇಳಿದ್ದರು. ಅದು ಹೇಗೆ ಸಾಧ್ಯ ಎಂದು ಕೇಳಿದಾಗ ಅವರಿಗೆ ವಿವರಿಸಲು ಸಾಧ್ಯವಾಗಲಿಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ತಮಿಳು ಬಳಸಲು ಅನುಮತಿ ಇದ್ದರೂ ಇಂಗ್ಲಿ್ ಏಕೆ ಬಳಸುತ್ತೀರಿ ಎಂದು ಕೇಳಿದೆ, ಮತ್ತೆ ಅವರಲ್ಲಿ ಉತ್ತರವಿರಲಿಲ್ಲ. ತಮಿಳಿಗೆ ಶತ್ರು ಹಿಂದಿ ಅಲ್ಲ,ಬದಲಾಗಿ ಇಂಗ್ಲಿಷ್ ಎರಡೂ ಭಾಷೆಗಳಿಗೆ ಶತ್ರು ಎಂದು ಅವರಿಗೆ ಹೇಳಿದೆ.

 ಮಾತೃಭಾಷೆ, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಹೀಗೆ ನಾಲ್ಕು ಭಾಷೆಗಳು ಹೆಚ್ಚಾಯಿತು ಎಂದು ಅನಿಸುವುದಿಲ್ಲವೇ? ವಿದ್ಯಾರ್ಥಿಗಳು ಕನಿಷ್ಠ ಅರ್ಧದಷ್ಟು ಸಮಯವನ್ನು ಅವುಗಳಿಗಾಗಿ ಮೀಸಲಿಡಬೇಕಾಗುತ್ತದೆ.

 ಅದು ಹಾಗೆಯೇ.ಆದರೆ ನಾಲ್ಕರಲ್ಲಿ ವಿನಾಯಿತಿ ಕೊಡಬಹುದಾದ ಭಾಷೆ ಇಂಗ್ಲಿಷ್ ಎಂದು ನಾನು ಭಾವಿಸುತ್ತೇನೆ. ಅದನ್ನು ಕಡ್ಡಾಯ ಭಾಷೆಯಾಗಿ ಮಾಡಬಾರದು. ಸರ್ಕಾರವು ದೃಢನಿರ್ಧಾರ ತೆಗೆದುಕೊಂಡು, ಆ ನಿರ್ಧಾರಕ್ಕೆ ಬದ್ದವಾಗಿ ತ್ವರಿತವಾಗಿ ಕಾರ್ಯಗತಗೊಳಿಸಿದರೆ ಪ್ರಸ್ತುತ ಇರುವ ಗೊಂದಲಗಳು ಕಡಿಮೆಯಾಗುತ್ತವೆ ಮತ್ತು ಇದಕ್ಕೊಂದು ಕೊನೆಸಿಗುತ್ತದೆ. ಪ್ರಸ್ತುತ ನಿರ್ಣಯವು ಇಂಗ್ಲಿಷನ್ನು ಮಾತ್ರ ಬಲಪಡಿಸುತ್ತದೆ. ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಕ್ಕಳು ಕಾನ್ವೆಂಟ್ ಶಾಲೆಗಳಿಗೆ ಹೋಗುತ್ತಿದ್ದಾರೆ. ಕೆಲವರು ಇಂಗ್ಲಿಷ್ ಭಾರತದ ಭಾಷೆಯಾಗಿರಬೇಕು ಎಂದು ಬಹಿರಂಗವಾಗಿ ಒತ್ತಾಯಿಸಲು ಆರಂಭಿಸಿದ್ದಾರೆ. ಪ್ರಮುಖ ವಿಚಾರವಾದ ರಾಜ್ಯಭಾಷೆಯ ವಿಚಾರವಾಗಿ ನುಣುಚಿಕೊಳ್ಳುವಂತಹ ನಿಲುವನ್ನು ಸರ್ಕಾರ ತೆಗೆದುಕೊಂಡರೆ ಸಾರ್ವಜನಿಕರ ವಿಶ್ವಾಸವು ದುರ್ಬಲವಾಗುತ್ತದೆ. ಹಳೆಯ ಮಧ್ಯಪ್ರದೇಶದಲ್ಲಿ ಶಿಕ್ಷಣ ಇಲಾಖೆಯು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ವ್ಯವಹರಿಸುತ್ತಿತ್ತು.ಆದರೆ ಬಾಂಬೆ ರಚನೆಯಾದ ಬಳಿಕ,ಮಧ್ಯಪ್ರದೇಶ ಮರಾಠಿ ಪ್ರದೇಶಗಳು ಇಂಗ್ಲಿಷ್‌ಗೆ ಬದಲಾಯಿತು. 1965 ರ ಒಳಗಾಗಿ ಇಂಗ್ಲಿಷನ್ನು ರಾಜ್ಯಭಾಷೆಯಾಗಿ ಬದಲಾಯಿಸಲು ಇದು ಮಾರ್ಗಸಂಪೂರ್ಣ ಬದಲಾವಣೆಗಾಗಿ ಸಂವಿಧಾನ ನಿಗದಿಪಡಿಸಿದ ಸಮಯ ಮಿತಿ ಇದು.ಅದನ್ನು ಕಾರ್ಯಗತಗೊಳಿಸಲು ಘೋಷಿಸಲ್ಪಟ್ಟ ನೀತಿ ಮತ್ತು ಕಾರ್ಯದ ನಡುವೆ ಕೆಲವು ಸ್ಥಿರತೆ ಇರಬೇಕು.

  ಹಿಂದಿಯನ್ನು ರಾಜ್ಯ ಭಾಷೆಯಾಗಿ ಸ್ವೀಕರಿಸಿದರೆ, ಹಿಂದಿ ಮಾತನಾಡದೇ ಇರುವವರು ದ್ವಿತೀಯ ದರ್ಜೆಯ ಪೌರತ್ವಕ್ಕೆ ಇಳಿಸಲಾಗುತ್ತದೆ ಎಂದು ರಾಜಾಜಿ ಹೇಳುತ್ತಾರೆ.

 ಅಂತಹದ್ದೇನೂ ಇಲ್ಲ. ಅವರು ಭಾಷೆಗಳನ್ನು ತ್ವರಿತವಾಗಿ ಅರಿತುಕೊಳ್ಳುತ್ತಾರೆ. ಕಾಶಿ ಅಥವಾ ಪ್ರಯಾಗಕ್ಕೆ ಭೇಟಿನೀಡಿದಾಗ ದಕ್ಷಿಣಭಾರತೀಯರು ಯಾವ ಭಾಷೆ ಮಾತನಾಡುತ್ತಾರೆ? ಅದು ಒಂದು ರೀತಿಯ ಹಿಂದಿ ಅಲ್ಲವೇ?

 ಈ ಯಾತ್ರಾರ್ಥಿಗಳಲ್ಲಿ ಹೆಚ್ಚಿನವರು ಬ್ರಾಹ್ಮಣರಲ್ಲವೇ?

 ಇಲ್ಲ. ಅವರು ಪ್ರಧಾನವಾಗಿ ಇತರರು ಮತ್ತು ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಪ್ರತಿದಿನ ಅರ್ಪಿಸಲಾಗುತ್ತಿರುವ ಗಂಧ, ಹೂವು, ಧೂಪ ಎಲ್ಲವೂ ತಮಿಳುನಾಡಿನ ನಾಟ್ಕೋಟಿ ಚೆಟ್ಟಿಯಾರ್ಸ್ ಸಂಘಟನೆಯಿಂದ ಪೂರೈಸಲಾಗುತ್ತದೆ. 

 ಇಂಗ್ಲಿಷ್ ನಮ್ಮೆಲ್ಲರಿಗೂ ಸಮಾನವಾಗಿ ವಿದೇಶೀಯಾಗಿದೆ; ಆದ್ದರಿಂದ ರಾಜಭಾಷೆಯಾಗಿ ಇಂಗ್ಲಿಷಿನ ಮುಂದುವರಿಕೆ ಎಲ್ಲರಿಗೂ ನ್ಯಾಯುತವಾಗಿದೆ ಎಂದು ರಾಜಾಜಿ ಹೇಳುತ್ತಾರೆ.

 ಇದು ನಮಗೆಲ್ಲರಿಗೂ ಸಮಾನವಾಗಿ ವಿದೇಶೀಯಾಗಿರುವುದರಿಂದ, ಅದನ್ನು ಎಲ್ಲರೂ ಸಮಾನವಾಗಿ ತ್ಯಜಿಸಬೇಕು .ಇದು ಎಲ್ಲರಿಗೂ ಸಮಾನವಾಗಿ ಅನ್ಯಾಯಯುತವಾಗಿದೆ. ಈ ನಾಯಕರು ತಮಿಳನ್ನು ರಾಜ್ಯ ಭಾಷೆಯಾಗಿ ಅಳವಡಿಸಿಕೊಳ್ಳಬೇಕೆಂದು ಪ್ರತಿಪಾದಿಸಿದರೆ ಅದಕ್ಕೆ ಹೆಚ್ಚು ಅರ್ಥಗರ್ಭಿತವಾಗುತ್ತದೆ. ತಮಿಳು ಹೆಚ್ಚು ಶ್ರೀಮಂತ ಮತ್ತು ಪುರಾತನವಾದದ್ದು ಎಂದು ಅವರು ಹೇಳಬಹುದು. ಅದಕ್ಕೆ ಕೆಲವು ಸಮರ್ಥನೆಗಳು ಇರುತ್ತದೆ. ಆದರೆ ಇಂಗ್ಲಿಷ್ ಹತಾಶೆಯ ಸಲಹೆಯಾಗಿದೆ.

 ಉನ್ನತ ನಾಯಕರು ಈ ರೀತಿ ಮಾತನಾಡುವುದಕ್ಕೆ ವಿವರಣೆ ಏನು?

 ಎರಡು ವಿವರಣೆಗಳು ಸಾಧ್ಯ. ಒಂದೋ ಅವರು ಡಿಎಂಕೆ ಎನ್ನುವ ಹಡಗುಗಳಿಂದ ಗಾಳಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ ಅಥವಾ ಮನುಷ್ಯನ ಸಂಕುಚಿತತೆಗೆ ಎಡೆಮಾಡುವುದು ಮತ್ತು ಆ ಆಧಾರದ ಮೇಲೆ ರಾಜಕೀಯ ಅದೈಕಾರವನ್ನು ಸೆರೆಹಿಡಿಯುವುದು. ಹಿಂದಿನ ಪ್ರಕರಣದಲ್ಲಿ ಪ್ರಯತ್ನವು ವಿಫಲವಾಗುವುದಿಲ್ಲ.ರಾಜಾಜಿ ಅವರೇ ಡಿಎಂಕೆ ವಿಚಾರಗಳ ಗೌರವವನ್ನು ಎರವಲಿಡುತ್ತಿದ್ದಾರೆ. ಎರಡನೆಯದಾಗಿ, ಹಿಂದಿಯನ್ನು ಪರಿಚಯಿಸಿದರೆ ದೇಶವು ಮತ್ತಷ್ಟು ಉಪವಿಂಗಡನೆಯಾಗಲಿದೆ ಎಂದು ಬೆದರಿಕೆ ಹಾಕುವುದು ರಾಜಕೀಯ ಬ್ಲಾ್ಮೈಲ್ ಆಗಿದೆ. ಇಂತಹ ಮಾತುಗಳಿಂದ ಅವರು ಒಡೆಯುವ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬುತ್ತಿದ್ದಾರೆ.   

 1965 ರಲ್ಲಿ ಹಿಂದಿಯನ್ನು ರಾಜ್ಯಭಾಷೆಯನ್ನಾಗಿ ಸ್ವೀಕರಿಸಿದ ಕೆಲವು ವರ್ಷಗಳ ಬಳಿಕ ಹಿಂದಿ ಮತ್ತು ಇಂಗ್ಲಿಷ್ ದ್ವಿಭಾಷೆಯನ್ನು ಪರಿಚಯಿಸುವುದು ಸೂಕ್ತವೇ?

 ಇಲ್ಲ.1965 ಕ್ಕಿಂತ ಮೊದಲು ಕೆಲವು ವರ್ಷಗಳವರೆಗೆ ನಾವು ದ್ವಿಭಾಷೆಯನ್ನು ಹೊಂದೋಣ. ವಾಸ್ತವವಾಗಿ ನಾವು ಈಗಾಗಲೇ ಅದನ್ನು ಹೊಂದಿರಬೇಕಿತ್ತು.

 ದಕ್ಷಿಣದ ಕೆಲವರು ತಾವು ಇಂಗ್ಲಿಷಿನಲ್ಲಿ ಉತ್ತಮವಾಗಿದ್ದೇವೆ, ಅದೇ ಹಿಂದಿಯಲ್ಲಿ ಆ ಸಾಧನೆಮಾಡಲು ತುಂಬ ಸಮಯ ತೆಗೆದುಕೊಳ್ಳಬಹುದಾದ ಕಾರಣ ಇಂಗ್ಲಿಷನ್ನು ಬದಲಾಯಿಸುವುದರಿಂದ ಸಾರ್ವಜನಿಕ ಸೇವೆಗಳ ನೇಮಕಾತಿ ವಿಷಯದಲ್ಲಿ ಅನಾನುಕೂಲವನ್ನು ಉಂಟುಮಾಡುತ್ತದೆ ಎಂದು ಭಾವಿಸುತ್ತಿದ್ದಾರೆ.

 ಮೊದಲನೆಯದಾಗಿ, ದಕ್ಷಿಣದಲ್ಲಿ ಇಂಗ್ಲಿಷ್ ಉತ್ತಮವಾಗಿದೆ ಎಂದು ಹೇಳುವುದು ಸರಿಯಲ್ಲ. ಈ ದೇಶದಲ್ಲಿ ಶೇ. 1ರಷ್ಟು ಜನ ಇಂಗ್ಲಿಷ್ ಬಲ್ಲವರು, ಇಂಗ್ಲಿಷ್ ಎಂದು ಕರೆಯಲ್ಪಡುವ ಭಾಷೆಯನ್ನು ಮಾತನಾಡಬಲ್ಲವರು; ಇದಕ್ಕೆ ದಕ್ಷಿಣವೂ ಹೊರತಾಗಿಲ್ಲ.

  ಈ ವಿಚಾರವಾಗಿ ಸರ್ಕಾರ ಒಮ್ಮೆ ದೃಢನಿರ್ಧಾರ ತೆಗೆದುಕೊಂಡರೆ, ದಕ್ಷಿಣವು ಹಿಂದಿಯನ್ನು ಹತ್ತು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಅಳವಡಿಸಿಕೊಳ್ಳುತ್ತದೆ ಎನ್ನುವುದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ಈಗಾಗಲೇ ಸೇವಕರು ಮತ್ತು ಹಮಾಲಿಗಳು ಎರಡು ಪೈಸೆಯಿಂದ ದೋ ಪೈಸಾಗೆ ಬದಲಾಗಿದ್ದಾರೆ.ಆದರೆ ರಾಜಕಾರಣಿಗಳು ಅಂತಹ ವಿನಮ್ರ ಜನತೆಯ ಬಗ್ಗೆ ಯಾವ ಕಾಳಜಿ ವಹಿಸುತ್ತಾರೆ?

 ಆದರೆ ಅವರು ಹಿಂದಿ ಭಾಷಿಕರಂತೆ ಮಾತನಾಡಲು ಮತ್ತು ಬರೆಯಲು ಸಾಧ್ಯವೇ?

 ಯಾಕೆ ಸಾಧ್ಯವಿಲ್ಲ? 15-20 ಕೋಟಿಯ ಮಾತೃಭಾಷೆಯಾದ ಹಿಂದಿಯು ರಾಜ್ಯಭಾಷೆಯಾಗಲಿದೆ ಎಂದು ಯೋಚಿಸುವುದೇ ತಪ್ಪಾಗಿದೆ. ಆ ರೀತಿ ಏನೂ ಇಲ್ಲ. ಈ ಎಲ್ಲಾ ಜನರು ಹಿಂದಿಯ ಎಲ್ಲಾ ರೀತಿಯ ರೂಪಾಂತರಗಳನ್ನು ಮಾತನಾಡುತ್ತಿದ್ದಾರೆ. ಪ್ರಮಾಣಿತ ಸಂಸ್ಕೃತ ಹಿಂದಿ ಕೇಂದ್ರ ಭಾಷೆಯಾಗಿರುತ್ತದೆ. ಆ ಮಟ್ಟಿಗೆ ಪ್ರತಿಯೊಬ್ಬರೂ ಸಮಾನವಾಗಿ ಇದನ್ನು ಕಲಿಯಬಹುದು. ನಿಮಗೆ ತಿಳಿದರೆ ಆಶ್ಚರ್ಯವೆನಿಸಬಹುದು, ದಕ್ಷಿಣದ ಹಿಂದಿ ವಿದ್ಯಾರ್ಥಿಗಳು ಉತ್ತರದವರಿಗಿಂತ ಶುದ್ಧವಾದ ಹಿಂದಿ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ.

 ಹಿಂದಿ ಭಾಷಿಕರಲ್ಲದವರಿಗೆ ಅವರ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಉದ್ಯೋಗದಲ್ಲಿ ಮೀಸಲಾತಿಯ ಬೇಡಿಕೆಯನ್ನು ನೀವು ಪುರಸ್ಕರಿಸುತ್ತೀರಾ?

 ಅಂತಹ ನಡೆ ಅನಗತ್ಯ ಮತ್ತು ಅನಪೇಕ್ಷಿತವಾಗಿದೆ.ಇದು ರಾಷ್ಟ್ರದ ಏಕತೆಗೆ ಹೊಡೆತವಾಗಿದೆ.ಅವರು ಹಿಂದಿ ಭಾಷಿಕರೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಬಹುದೆನ್ನುವ ಅರಿವು ನನಗೆ ಇದೆ.ಯಾವುದೇ ಸಂದಭದಲ್ಲಿ,ಹಿಂದಿಯಲ್ಲಿ ಪ್ರಾವೀಣ್ಯತೆಯ ಅಗತ್ಯ ಅವರಿಗೆ ಇರುವುದಿಲ್ಲ.ಇತರ ವಿಷಯಗಳು ಸಮಾನವಾಗಿರುವುದರಿಂದ,ಕೇಂದ್ರದ ಸೇವೆಗಳ ಪ್ರವೇಶಾತಿಗೆ ಹಿಂದಿಯ ವ್ಯಾವಹಾರಿಕ ಜ್ಞಾನ ಮಾತ್ರ ಬೇಕಾಗುತ್ತದೆ.

ಯಾವುದೇ ತೊಂದರೆ ಇದ್ದರೂ,ಎಲ್ಲಾ ತಾಂತ್ರಿಕ ಪದಗಳಿಗೆ ಸಾಮಾನ್ಯ ಸಂಸ್ಕೃತ ಶಬ್ದವನ್ನು ಅಳವಡಿಸಿಕೊಳ್ಳುವ ಮೂಲಕ ಸರಳೀಕರಿಸಿಕೊಳ್ಳಬಹುದು. ನಮ್ಮ ಎಲ್ಲಾ ಭಾಷೆಗಳಿಗೆ ಏಕರೂಪದ ಲಿಪಿಯನ್ನು ಅಳವಡಿಸಿಕೊಳ್ಳುವ ವಿಚಾರವನ್ನು ಇದು ಸನಿಹಕ್ಕೆ ತರುತ್ತದೆ. ಇಂಗ್ಲಿಷ್ನಲ್ಲಿ ಮೀಸಲಿಡುವ ಸಮಯದ ಅರ್ಧದಷ್ಟು ಸಮಯವನ್ನು ಮೀಸಲಿಟ್ಟರೆ ಅವರು ಹಿಂದಿಯನ್ನು ಇಂಗ್ಲಿಷಿಗಿಂತ ಸುಲಭವಾಗಿ ರೂಢಿಸಿಕೊಳ್ಳಬಲ್ಲರು. 

 ಇಂಗ್ಲಿಷ್ ಬೆಂಬಲಿಗರು ಇಂಗ್ಲಿಷ್ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ರಾಜತಾಂತ್ರಿಕ ಭಾಷೆ ಎಂದು ಹೇಳುತ್ತಾರೆ.

 ಬಹುಪಾಲು ಅಲ್ಲ. ಇಂಗ್ಲಿಷ್ ಕೇವಲ ಒಂದು ಪವರ್ ಬ್ಲಾ್ನ ಪ್ರಮುಖ ಭಾಷೆಯಾಗಿದೆ. ಮತ್ತು ಅಗತ್ಯವಿರುವವರು ಸ್ವಂತವಾಗಿ ಇಂಗ್ಲಿಷ್ ಕಲಿಯಲಿ. ಉನ್ನತ ಹಣಕಾಸು ಅಥವಾ ಉನ್ನತ ರಾಜತಾಂತ್ರಿಕತೆಯೊಂದಿಗೆ ಯಾವುದೇ ಸಂಬಂಧ ಹೊಂದಿರದ ಪ್ರತಿಯೊಬ್ಬ ಶಾಲಾಬಾಲಕ ಯಾಕೆ ಕಲಿಯಬೇಕು?

 ಬಂಗಾಳ ಮತ್ತು ಮಹಾರಾಷ್ಟ್ರದಂತಹ ಹಿಂದಿ ಭಾಷೆಯನ್ನು ಹೊಂದಿರದ ಪ್ರದೇಶದಿಂದ ಅವರು ಬೆಂಬಲವನ್ನು ಹುಡುಕುವ ಸಾಧ್ಯತೆ ಇದೆಯೇ?

 ಇಲ್ಲ. ಹೆಚ್ಚಾಗಿ ಬ್ರಿಟಿಷ್ ಆಡಳಿತದ ಪ್ರಯೋಜನವನ್ನು ನಂಬುವ ಹಿರಿಯ ಉದಾರವಾದಿಗಳು ಅವರೊಂದಿಗೆ ಸೇರಿಕೊಳ್ಳುತ್ತಾರೆ. ಅವರು ತಮ್ಮದೇ ಆದ ನಿರ್ಧಿಷ್ಟ ಭೂತಕಾಲದಲ್ಲಿ ಹೆಚ್ಚು ಬೇರೂರಿರುವ ಕಾರಣ ಅದನ್ನು ಮೀರಲು ಸಾಧ್ಯವಾಗಿಲ್ಲ. 

  ಹಿಂದಿಯನ್ನು ಪರಿಚಯಿಸಲು ಸರ್ವಾನುಮತದ ಒಪ್ಪಂದವನ್ನು ಮಾಡಿಕೊಳ್ಳಬೇಕು ಎಂದು ಪ್ರಧಾನಿ ಅವರು ಹೇಳುತ್ತಾರೆ.

  ಆದರೆ ಅವರು ಜೀವವಿಮೆಯನ್ನು ರಾಷ್ಟ್ರೀಕರಣಗೊಳಿಸಿದಾಗ ಯಾರನ್ನೂ ಸಂಪರ್ಕಿಸಲಿಲ್ಲ! ಗ್ರಾಮದಾನ್ ಜೊತೆ ಮುಂದೂಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಅಥವಾ ಸಂಸತ್ತು ಕಾಯ್ದೆಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ.

   (1967 ಅಕ್ಟೋಬರ್‌ನಲ್ಲಿ ಆರ್ಗನೈಸರ್ ಪತ್ರಿಕೆಗಾಗಿ ಸಂಪಾದಕರು ನಡೆಸಿದ ಸಂದರ್ಶನ)

 ಕೇಂದ್ರದ ಭಾಷಾ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

 ನನಗೆ ಇಲ್ಲಿ ಯಾವುದೇ ನೀತಿ ಕಾಣಿಸುತ್ತಿಲ್ಲ.ಕೇವಲ ಕರಡು ಮತ್ತು ಅನಿರ್ಣಯತೆ ಕಾಣಿಸುತ್ತಿದೆ. ಸರ್ಕಾರ ಅದೇ ವೃತ್ತದಲ್ಲಿ ಚಲಿಸುತ್ತಿದೆ.

 ಶ್ರೀ ಪಿ. ಗಜೇಂದ್ರಗಡ್ಕರ್ ಅವರ ಲೇಖನವನ್ನು (ನೋಡಿ: ದಿ ಟೈಮ್ಸ್ ಆಫ್ ಇಂಡಿಯ,1967 ಅಕ್ಟೋಬರ್ 17) ಲೇಖನವನ್ನು ನೋಡಿದೆ.ಕೊನೆಯ ಪ್ಯಾರಾಗ್ರಾಫ್ ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಅನುಮೋದಿಸುತ್ತದೆ.ವಿಶ್ವವಿದ್ಯಾಲಯ ಮತ್ತು ನ್ಯಾಯಾಲಯಗಳಲ್ಲಿ ಹಿಂದಿ ಪರಿಚಯಿಸಲ್ಪಟ್ಟ ಸಂದರ್ಭದಲ್ಲಿ ಉಗ್ರಗಾಮಿ ಪ್ರತಿಕ್ರಿಯೆಯನ್ನು ಪ್ರತಿಪಾದಿಸಿದ್ದಾರೆ. 

 ಶಿಕ್ಷಣ ಮಂತ್ರಿಯಾದ ಶ್ರೀ ತ್ರಿಗುಣ ಸೇನ್ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಶಿಕ್ಷಣ ಸೂತ್ರವನ್ನು ಉತ್ತಮ ಮತ್ತು ಸಮಂಜಸವೆಂದು ನೀವು ಪರಿಗಣಿಸುತ್ತೀರಾ?

 ಹೌದು. ಇದು ಸ್ಪಷ್ಟವಾದ ವಿಚಾರವಾಗಿದೆ. ಇದನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು. ವಿಶ್ವವಿದ್ಯಾನಿಲಯದಿಂದ ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆಗೊಳ್ಳುವ ವಿದ್ಯಾರ್ಥಿಗಳಿಗೆ ತೊಂದರೆಯಂತೆ, ಅಷ್ಟಕ್ಕೂ ಅವರ ಸಂಖ್ಯೆ ಎಷ್ಟು?

 ಉನ್ನತ ಶಿಕ್ಷಣಕ್ಕೆ ಮಾಧ್ಯಮವಾಗಿ ಕಾರ್ಯನಿರ್ವಹಿಸುವಷ್ಟು ಸ್ವಂತ ಭಾಷೆ ಅಭಿವೃದ್ಧಿ ಹೊಂದಿರದ ರಾಜ್ಯಗಳು ಇದ್ದ ಸಂದರ್ಭದಲ್ಲಿ ಏನಾಗುತ್ತದೆ? ಉದಾಹರಣೆಗೆ,ಕಾಶ್ಮೀರಿಯು ಪ್ರಾಥಮಿಕ ಶಿಕ್ಷಣದಲ್ಲೂ ಮಾಧ್ಯಮವಾಗಿಲ್ಲ.

  ಅಂತಹ ಸಂದರ್ಭದಲ್ಲಿ ಹಿಂದಿ ಅಥವಾ ಇನ್ನಾವುದೇ ಭಾರತೀಯ ಭಾಷೆಯನ್ನು ತನ್ನ ಮಾಧ್ಯಮವಾಗಿ ಅಳವಡಿಸಬೇಕು ಎನ್ನುವುದನ್ನು ರಾಜ್ಯ ನಿರ್ಧರಿಸಬಹುದು. ಆದರೆ ದಕ್ಷಿಣದ ನಾಲ್ಕು ಭಾಷೆಗಳೂ ಉನ್ನತ ಶಿಕ್ಷಣಕ್ಕೆ ಮಾಧ್ಯಮವಾಗಿ ಅಳವಡಿಸಿಕೊಳ್ಳಬಲ್ಲಷ್ಟು ಅಭಿವೃದ್ಧಿಯನ್ನು ಹೊಂದಿದೆ ಎನ್ನುವುದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ಎಲ್ಲಾ ಭಾಷೆಗಳಲ್ಲಿ ಸಂಸ್ಕೃತದಿಂದ ಪಡೆದ ತಾಂತ್ರಿಕ ಪದಗಳನ್ನು ಸಾಮಾನ್ಯವಾಗಿ ಪರಿಚಯಿಸಿದರೆ ಹೆಚ್ಚಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಸ್ಥಳೀಯ ಪದಗಳನ್ನು ಸುಲಭವಾಗಿ ರೂಪಿಸಲಾಗದೇ ಇದ್ದಾಗ ವಿದೇಶೀ ಪದಗಳನ್ನು ಸ್ವೀಕರಿಸುವುದರಿಂದ ಯಾವುದೇ ಹಾನಿ ಇರುವುದಿಲ್ಲ.

 ದ್ರಾವಿಡ ಕಳಗಮ್ನ ಶ್ರೀ ಇ. ರಾಮಸ್ವಾಮಿ ನಾಯ್ಕರ್ ಅವರು ತಮಿಳು ಅನಾಗರಿಕ ಬುಡಕಟ್ಟು ಭಾಷೆ ಎಂದು ಹೇಳಿದರು?

 ಅದನ್ನು ಇವಿಆರ್ ಮಾತ್ರ ಹೇಳಬಲ್ಲರು.

 ಸಂಸ್ಕೃತವು ಕೊಂಡಿಯಾಗಿರಬೇಕು ಎಂದು ಕೆಲವರು ಹೇಳುತ್ತಾರೆ.ಇದು ಸ್ವಾಗತಾರ್ಹ ಸಲಹೆಯಲ್ಲವೇ?

 ಹಿಂದಿಯನ್ನು ವಿರೋಧಿಸುವವರೆಲ್ಲರೂ ಸಂಸ್ಕೃತವನ್ನು ಒಪ್ಪಿದರೆ, ನಾನು ಬಹಳ ಸಂತೋಷಪಡುತ್ತೇನೆ. ಆದರೆ ಸಮಸ್ಯೆ ಏನೆಂದರೆ, ಸಂಸ್ಕೃತದ ಬಗ್ಗೆ ಇದ್ದಕ್ಕಿಂದ್ದಂತೆ ಸದ್ಗುಣಗಳನ್ನು ಕಂಡುಹಿಡಿದ ಜನರು ಅದರ ಬಗ್ಗೆ ಪ್ರಾಮಾಣಿಕವಾಗಿಲ್ಲ. ಅವರು ವಾದವನ್ನು ವಿಳಂಬಗೊಳಿಸಲು ತಂತ್ರವಾಗಿ ಇದನ್ನು ಬಳಸುತ್ತಿದ್ದಾರೆ ಎನ್ನುವುದು ನನ್ನ ಹೆದರಿಕೆ.

 ಹಿಂದಿ ಕಡ್ಡಾಯ ವಿಷಯವಾಗಿರಬಾರದು,ಏಕೆಂದರೆ ಅನೇಕರಿಗೆ ಮುಂದೆ ಅದನ್ನು ಬಳಸುವ ಸಂದರ್ಭ ಬರುವುದಿಲ್ಲ ಎಂದು ಮದ್ರಾಸ್ಡಿಟ್ಮುಖ್ಯಮಂತ್ರಿ ಶ್ರಿೀ ಅಣ್ಣಾದೊರೈ ಅವರು ಹೇಳಿದರು.

 ಅದು ನಿಜ, ಆದರೆ ಈ ವಿಷಯದಲ್ಲಿ ಇನ್ನೊಂದು ಮುಖವಿದೆ.ಭಾರತೀಯರೆಲ್ಲರಿಗೂ ಹಿಂದಿಯ ಬಗ್ಗೆ ಸ್ವಲ್ಪವಾದರೂ ಜ್ಞಾನ ಇರುವುದರಿಂದ ಏಕೀಕರಣದ ಭಾವನೆ ಮತ್ತು ಸಹೋದರತ್ವದ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ.

  ಬಹುಶಃ ವಿವಿಧ ಭಾಷೆಗಳಲ್ಲಿ ಸಾಮಾನ್ಯ ಪಠ್ಯಪುಸ್ತಕಗಳು ಏಕೀಕರಣಕ್ಕೆ ಸಹಾಯ ಮಾಡಬಹುದು.

 ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಆ ಪುಸ್ತಕಗಳಲ್ಲಿ ಅಡಕವಾಗುವ ವಿಚಾರ. ನಮ್ಮ ಇತಿಹಾಸ ಪುಸ್ತಕಗಳು ಈ ವಿಚಾರದಲ್ಲಿ ವಿಶೇಷವಾಗಿ ಕೊರತೆಯನ್ನು ಹೊಂದಿವೆ. ಪಾಟಲೀಪುತ್ರದ ಸುತ್ತ ಸುತ್ತುತ್ತಾರೆ ಮತ್ತು ದೆಹಲಿಗೆ ಅಂಟಿಕೊಳ್ಳುತ್ತಾರೆ ದೇಶದ ಉಳಿದ ಭಾಗವು ಅಪ್ರಸ್ತುತವಾಗುತ್ತದೆ. ನಮ್ಮ ಪದವೀಧರರಲ್ಲಿ ಎಷ್ಟು ಮಂದಿ ಚೋಲರು, ಪಾಂಡ್ಯರು ಮತ್ತು ಪುಲಿಕೇಶಿಗಳ ಶ್ರೇಷ್ಠತೆಯ ಬಗ್ಗೆ ತಿಳಿದಿದ್ದಾರೆ? ವಿಜಯನಗರ ಹೊರತುಪಡಿಸಿ ದಕ್ಷಿಣದ ಇತಿಹಾಸದ ಬಗ್ಗೆ ಬಹಳ ಕಡಿಮೆ ವಿಚಾರವನ್ನು ಕಲಿಸಲಾಗುತ್ತದೆ. ಪೂರ್ವಭಾರತವನ್ನೇ ಮತ್ತೆ ತೆಗೆದುಕೊಳ್ಳಿ. ಖರವೇಲಾ ಉತ್ಕಲ್ನ ಮಹಾನ್ ರಾಜ. ಅವನು ತನ್ನ ಧ್ವಜವನ್ನು ಸಮುದ್ರದಾದ್ಯಂತ ಇಂಡೋನೇಷ್ಯಾಕ್ಕೆ ತೆಗೆದುಕೊಂಡು ಹೋದನು.ಆದರೆ ಆತನ ಹೆಸರನ್ನು ಎಷ್ಟು ಭಾರತೀಯ ವಿದ್ವಾಂಸರು ಕೇಳಿದ್ದಾರೆ? ನೀವು ದಕ್ಷಿಣಕ್ಕೆ ಹೊಗಿ ಅಲ್ಲಿನ ಬೃಹತ್ ದೇವಾಲಯಗಳನ್ನು ನೋಡಿ; ಆಗ ಅವುಗಳ ಹಿಂದಿನ ಹಿರಿದಾದ ಸಂಸ್ಕೃತಿಯನ್ನು ನೀವು ಅರಿತುಕೊಳ್ಳುತ್ತೀರಿ. ಆದರೆ ಇದರ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ? 

  ಹಿಂದಿಯ ಬಗ್ಗೆ ಒಂದು ಆಕ್ಷೇಪಣೆ ಎಂದರೆ ಹಿಂದಿ ಭಾಷಿಕರಲ್ಲದವರನ್ನು ಅದು ಅನನುಕೂಲಕ್ಕೆ ತಳ್ಳುತ್ತದೆ.

  ದೊಡ್ಡದಾಗಿ, ಇದು ತಪ್ಪು ಕಲ್ಪನೆಯ ಆಕ್ಷೇಪಣೆ. ವಾಸ್ತವವೆಂದರೆ, ಹಿಂದಿ ಎಂದು ಸಿ್ವೀಕರಿಸಲ್ಪಟ್ಟ ಖಾರಿ ಬೋಲಿಯು ದೆಹಲಿ-ಪ್ರದೇಶದಲ್ಲಿ ಕೆಲವೇ ಮಿಲಿಯನ್ ಜನರ ಮಾತೃಭಾಷೆಯಾಗಿದೆ. ಹಿಂದಿ ಭಾಷಿಕರು ಎಂದು ಕರೆಯಲ್ಪಡುವ ಇತರ ಜನರು ತಮ್ಮ ಮನೆಗಳಲ್ಲಿ ಖಾರಿ ಬೋಲಿ ಮಾತನಾಡುವುದಿಲ್ಲ. ಅವರು ಪಹರಿಯಿಂದ ಹಿಡಿದು ರಾಜಸ್ಥಾನಿಯವರೆಗೆ ಮತ್ತು ಅವಧಿಯಿಂದ ಮಗಧಿ, ಬ್ರಜ್ ಮತ್ತು ಮೈಥಿಲಿವರೆಗಿನ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಅವರೆಲ್ಲರೂ ಬಂಗಾಳಿ ಅಥವಾ ಮಹಾರಾಷ್ಟ್ರ ಅಥವಾ ಆಂಧ್ರ ಅಥವಾ ಮಲಯಾಳಿ ಭಾಷಿಕರಂತೆ ಹಿಂದಿ ಕಲಿಯಬೇಕು.

 ಉದ್ದೇಶಿತ ಅಧಿಕೃತ ಭಾಷಾ ಮಸೂದೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಇಂಗ್ಲಿ್ನಿಂದ ಹಿಂದಿಗೆ ಬದಲಾವಣೆಗೊಳ್ಳುವ ಕುರಿತು ಇದು ಎಲ್ಲಾ ರಾಜ್ಯಕ್ಕೂ ವೀಟೋ ನೀಡುತ್ತದೆ.

 ಹೀಗೆ ಪ್ರತಿಯೊಬ್ಬ ನಾಗರಿಕನಿಗೂ ಏಕೆ ವೀಟೋ ನೀಡಬಾರದು?ಇದು ಅನೇಕರ ಮೇಲೆ ಕೆಲವರ ದಬ್ಬಾಳಿಕೆಯ ಪ್ರಕರಣವಾಗಿದೆ. ಭಾರತೀಯ ಉದ್ಯಮಿಗಳಿಂದ ನಿಯಂತ್ರಿಸಲ್ಪಡುವ ಇಂಗ್ಲಿಷ್ ಪ್ರೆಸ್, ಭಾರತೀಯ ಭಾಷೆಗಳಿಗೆ ಪ್ರತಿಕೂಲವಾಗಿರಬೇಕು ಎಂದು ನನಗೆ ಆಶ್ಚರ್ಯವಾಗಿದೆ. 

 ಇದು ವಿದೇಶೀಯರೊಂದಿಗೆ ಅವರ ವ್ಯವಹಾರ ಸಹಯೋಗದ ವಿಸ್ತರಣೆಯಾಗಿರಬಹುದೇ?

 ನನಗೆ ಯಾವುದೇ ಆಶ್ಚರ್ಯವೆನಿಸುವುದಿಲ್ಲ.

 ಹಿಂದಿಯನ್ನು ನಮ್ಮ ದೇಶದ ರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ಅವಶ್ಯವಿದೆಯೇ?

  ಏಕೆ? ನವ್ಮು ದೇಶದಲ್ಲಿ ಹಿಂದಿ ಮಾತ್ರ ರಾಷ್ಟ್ರೀಯಭಾಷೆಯಲ್ಲ. ನಮ್ಮ ಸಂಸ್ಕೃತಿಯ ಶ್ರೇಷ್ಠ ಆಲೋಚನೆಗಳನ್ನು ವ್ಯಕ್ತಪಡಿಸಿರುವ ಈ ದೇಶದ ಎಲ್ಲಾ ಭಾಷೆಗಳು ನೂರಕ್ಕೆ ನೂರರಷ್ಟು ರಾಷ್ಟ್ರೀಯ ಭಾಷೆಯಾಗಿವೆ. ಒಂದೇ ವಿಷಯವೆಂದರೆ, ನಮ್ಮಂತಹ ವಿಶಾಲವಾದ ದೇಶದಲ್ಲಿ ನಿಸ್ಸಂದೇಹವಾಗಿ ವಿದೇಶೀ ಇಂಗ್ಲಿ್ಅನ್ನು  ಬದಲಿಸಲು ನಮಗೆ ವ್ಯವಹಾರ ಭಾಷೆಯಾಗಿ, ಕೊಂಡಿಯಾಗಿ ಒಂದು ಭಾಷೆ ಬೇಕೇ ಬೇಕು.     

 

Leave a Reply

Your email address will not be published.

This site uses Akismet to reduce spam. Learn how your comment data is processed.