ಅಗಸ್ಟ್ 30, 2020ರ ಭಾನುವಾರದಂದು ರಾಷ್ಟ್ರಮಟ್ಟದ ‘ಪ್ರಕೃತಿ ವಂದನಾ’ ಕಾರ್ಯಕ್ರಮ
ಬೆಂಗಳೂರು ಅಗಸ್ಟ್ 27, 2020: ಹಿಂದೂ ಆಧ್ಯಾತ್ಮಿಕ ಸೇವಾ ಮೇಳ (HSSF) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಸರ ಸಂರಕ್ಷಣೆ ಗತಿವಿಧಿಯ ಜಂಟಿ ಸಹಭಾಗಿತ್ವದಲ್ಲಿ ಪ್ರಕೃತಿ ವಂದನಾ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಅಗಸ್ಟ್ 30, 2020ರ ಭಾನುವಾರದಂದು ಬೆಳಿಗ್ಗೆ 10 ರಿಂದ 12 ರ ತನಕ ರಾಷ್ಟ್ರದಾದ್ಯಂತ ಆಯೋಜಿಸಲಾಗಿದೆ.
ಅಗಸ್ಟ್ 30ರ ಭಾನುವಾರದಂದು ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ತಮ್ಮ ಮನೆಯ ಪರಿಸರದಲ್ಲಿ ಪ್ರಕೃತಿಯ ಅಂಶಗಳಾದ ಗಿಡ, ಮರ, ಭೂಮಿ ಇತ್ಯಾದಿಗಳಿಗೆ ಸಾಂಕೇತಿಕವಾಗಿ ಪೂಜೆ ನಮನಗಳನ್ನು ಸಲ್ಲಿಸುವ ಮೂಲಕ ಪ್ರಕೃತಿ ವಂದನಾ ಕಾರ್ಯಕ್ರಮವನ್ನು ಆಚರಿಸಲು ಕೋರಲಾಗಿದೆ. ಪ್ರಕೃತಿಯಿಂದಾಗಿ ಸಕಲ ಜೀವರಾಶಿಗಳ ಅಸ್ತಿತ್ವ ಇರುವುದರಿಂದ ಅಂತಹ ಪ್ರಕೃತಿಯನ್ನು ಸ್ಮರಿಸಿ ಅದಕ್ಕೆ ವಂದಿಸುವ ಹಾಗೂ ಪ್ರಕೃತಿಯ ಸಂರಕ್ಷಣೆ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಈ ಅಭಿಯಾನವು ದೇಶದಾದ್ಯಂತ ನಡೆಯಲಿದೆ.
ಪರಿಸರ ಸಂರಕ್ಷಣೆಯ ಆಶಯದ ರಾಷ್ಟ್ರಮಟ್ಟದ ಈ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭ ಸಂದೇಶವನ್ನು ನೀಡಿದ್ದಾರೆ. ಅಗಸ್ಟ್ 30 ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ‘ಪ್ರಕೃತಿ ವಂದನಾ’ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು www.facebook.com/bengaluru.hssf ನಲ್ಲಿ ನೇರ ಪ್ರಸಾರಗೊಳ್ಳಲಿದೆ.
ಮಾಹಿತಿಗಾಗಿ:
ಗಣಪತಿ ಹೆಗಡೆ 9448987819
ವೆಂಕಟೇಶ್ 908935599