ಬೆಂಗಳೂರು : ವಿಕ್ರಮ ವಾರಪತ್ರಿಕೆಯು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಶೇಷ ಲಾಂಛನವನ್ನು (Logo) ಇಂದು (11.07.2022) ಬೆಳಿಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ಬೆಂಗಳೂರಿನ ಕೇಶವಕೃಪಾದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಗೌರವ ಸಂಪಾದಕರಾದ ಶ್ರೀ ನ. ನಾಗರಾಜ, ಸಂಪಾದಕರಾದ ಶ್ರೀ ವೃಷಾಂಕ ಭಟ್, ವ್ಯವಸ್ಥಾಪಕ ಸಂಪಾದಕರಾದ ಶ್ರೀ ಸು. ನಾಗರಾಜ್, ವ್ಯವಸ್ಥಾಪಕರಾದ ಶ್ರೀ ಸತೀಶ್.ಬಿ ಉಪಸ್ಥಿತರಿದ್ದರು.
ವಿಕ್ರಮ ವಾರಪತ್ರಿಕೆಯು ಪ್ರಖರ ರಾಷ್ಟ್ರೀಯ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು 1948ರ ಗುರುಪೂರ್ಣಿಮಾ ದಿನದಂದು ಪ್ರಾರಂಭಗೊಂಡಿತು.