ಭಾರತದ ಅವಶ್ಯಕತೆ ಎಲ್ಲರಿಗು ಇದೆ ಅದು ಎಲ್ಲರಿಗೂ ಅರಿವಿಗೆ ಬರುತ್ತಿದೆ. ಕೆಲವು ದಶಕಗಳ ಕೆಳಗೆ ಅರ್ನಾಲ್ಡ್ ಟಾಯಿನ್ಬೀ ಒಮ್ಮೆ ಹೇಳಿದ್ದರು, “ಸಹಸ್ರಮಾನದ ಆರಂಭ ಯುರೋಪಿನ ದಿಗ್ವಿಜಯದಿಂದ ಆರಂಭವಾಗಿರಬಹುದು. ಆದರೆ, ಇದರ ಅಂತ್ಯ ಭಾರತದ ದೃಷ್ಟಿಕೋನದಲ್ಲಿ ಆಗಬೇಕಿದೆ. ಇಲ್ಲವಾದರೆ, ಇಡಿಯ ಮಾನವ ಜಾತಿಯ ಅಂತ್ಯವೇ ಆಗಬಹುದು.” ಈ ರೀತಿ ಹೇಳಿದ್ದನ್ನು ಈ ಹಿಂದೆ ಕೇಳುವಾಗ ಭಾರತೀಯರಾದ ನಮಗೇ ನಗು ಬರುತ್ತಿತ್ತು. ನಾವು ಯಾವ ಸ್ಥಿತಿಯಲ್ಲಿದ್ದೇವೆ,ಇವರ ಮಾತು ಯಾವ ಸ್ತರದಲ್ಲಿದೆ ಎಂದು ಯೋಚಿಸುತ್ತಿದ್ದೆವು. ಆದರೆ ಈಗ ಹಾಗಿಲ್ಲ. ಆ ಮಾತುಗಳು ಈಗ ಜಗತ್ತಿನ ನಡುವೆ ಚರ್ಚೆಯಾಗುತ್ತಿದೆ. ಜೊತೆಗೆ ಭಾರತೀಯರ ಆತ್ಮ ವಿಶ್ವಾಸವೂ ಎತ್ತರಕ್ಕೇರಿದ್ದು, ಹಾ ಈ ರೀತಿ ಆಗಬಹುದು ಮತ್ತು ಆಗಬೇಕು ಎನಿಸುತ್ತಿದೆ. ಜಿ-20ಯಂತಹ ಸಮೂಹದ ಅಧ್ಯಕ್ಷತೆ ವಹಿಸುವುದು ಸಾಮಾನ್ಯದ ಮಾತಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಎಲ್ಲ ಪುರುಷಾರ್ಥಗಳ ಫಲಸ್ವರೂಪವಾಗಿ ಈ ಸುಫಲತೆ ಹಾಗು ಸುಭೀಕ್ಷತೆ ನಮಗೆ ದೊರಕಿದೆ. ನಾವಿನ್ನೂ ಬಹು ದೂರ ನಡೆಯಬೇಕಿದೆ. ಇನ್ನೂ ಕೇವಲ ಶುರುವಷ್ಟೆ ಆಗಿದೆ. ದೂರ ನಡೆಯಬೇಕಿದೆ ನಿಜ, ಆದರೆ ಯಾರು ನಡೆಯಬೇಕಿದೆ? ಪೂರ್ಣ ಸಮಾಜವೇ ನಡೆಯಬೇಕಿದೆ. ಭಾರತ ವಿಶ್ವ ಗುರುವಾಗಬೇಕಾದರೆ ಯಾವುದೋ ಸಂಸ್ಥೆಯ ಮೂಲಕವೋ, ತಂತ್ರದ ಮೂಲಕವೋ ಆಗಬೇಕಿಲ್ಲ.
ಭಾರತ ಯಾಕೆ ವಿಶ್ವ ಗುರುವಾಗಬೇಕಿದೆ?
ಜೀವನವನ್ನು ಜೀವಿಸುವ ಅನೇಕ ಪ್ರಯೋಗಗಳು ಮನುಷ್ಯನ ಜೀವನ ಸುಖಮಯವಾಗಿರಲಿ ಎಂದು; ಪೂರ್ಣ ಸಮಾಜ, ಮಾನವತೆ ಸುಖವಾಗಿರಲಿ ಎಂದು; ಸೃಷ್ಟಿಯೂ ಸುಖವಾಗಿರಲಿ ; ಎಲ್ಲರಿಗೂ ಸುಖ ಸಿಗಲಿ ಎನ್ನುವ ಉದ್ದೇಶಗಳನ್ನಿಟ್ಟುಕೊಂಡ ಅನೇಕ ಪ್ರಯೋಗಗಳು ಜಗತ್ತಿನಲ್ಲಿ ಕಳೆದ 2000ವರ್ಷಗಳಿಂದ ನಡೆಯುತ್ತಿದೆ. ಆದರೆ ಮನುಷ್ಯನಿಗೆ ಪೂರ್ಣ ಸುಖ ನೀಡುವ ಯಾವುದೂ ದೊರೆಯಲಿಲ್ಲ. ಒಂದೇ ಬಾರಿಗೆ ಎಲ್ಲರಿಗೂ ಸುಖ ನೀಡುವ ಯಾವುದೂ ಸಿಗಲಿಲ್ಲ. ಅನೇಕ ಪ್ರಯತ್ನಗಳು ನೆಲಕಚ್ಚಿದಾಗ ವಿಶ್ವ ಮತ್ತೆ ಪುನರ್ವಿಮರ್ಶೆಗೆ ತೊಡಗಿದಾಗ,ಅದರ ಎಲ್ಲ ಮಾತುಗಳು ಅರ್ಧಕ್ಕೇ ನಿಂತು, ಯಾವ ಪ್ರಯೋಗವೂ ಪರಿಣಾಮ ಬೀರದೆ ಇದ್ದಾಗ, ಆ ರೀತಿಯ ಪರಿಣಾಮ ಬೀರುವ ರಸ್ತೆ ಕೇವಲ ಭಾರತದ ಮೂಲಕವೇ ದೊರೆಯಲು ಸಾಧ್ಯ ಎಂಬುದನ್ನು ಅದು ಮನಗಂಡಿದೆ. ಏಕೆಂದರೆ ಒಟ್ಟಿಗೇ ಎಲ್ಲರ ಸುಖ, ಹಿತ ಬಯಸುವ ಶರೀರ, ಬುದ್ಧಿ, ಮನಸ್ಸುಗಳಿಗೆ ಒಟ್ಟಿಗೆ ಸುಖವಾಗಿಡುವ; ಮನುಷ್ಯ, ಜೀವಿ ಮತ್ತು ಸೃಷ್ಠಿಯನ್ನು ಸುಖವಾಗಿಡುವ; ಅರ್ಥ ಮತ್ತು ಕಾಮಗಳ ಅವಶ್ಯಕತೆ ಎಷ್ಟಿದೆಯೋ ಅಷ್ಟು ಪೂರ್ಣವಾದ ನಂತರ ಮುಕ್ತಿಯೆಡೆಗೆ ಮನುಷ್ಯ ಸಾಗಲಿ ಎನ್ನುವ ದಾರಿ ನೀಡುವ, ದೃಷ್ಟಿ ನೀಡುವ ಮಾತು ಯಾವುದಿದೆಯೋ ಅದು ಕೇವಲ ಭಾರತದ ಹತ್ತಿರ ಇದೆ. ಭಾರತದಲ್ಲಿಯೇ ಆ ಸುಖದ ಆನಂದದ ಅನುಭವವನ್ನು ಮೊದಲ ಬಾರಿ ಪಡೆಯಲಾಗಿದೆ. ಮತ್ತು ಭಾರತೀಯ ಋಷಿ ಮುನಿಗಳು ತಮ್ಮ ದುರ್ಭರ ತಪಸ್ಸಿನ ಫಲವಾಗಿ ಈ ಸತ್ಯವನ್ನು ಕಂಡುಕೊಂಡು ಇಡಿಯ ಅಸ್ತಿತ್ವಕ್ಕೆ ನೀಡುತ್ತಾ, ಇಡಿಯ ವಿಶ್ವ ಒಂದೇ, ಜಗತ್ತಿನ ಎಲ್ಲ ಮಾನವ ಸಮಾಜ ನಮ್ಮ ಕುಟುಂಬ ‘ವಸುಧೈವ ಕುಟುಂಬಕಂ’ಎಂದರು.
ನಮಗೂ ಸೃಷ್ಟಿಗು ಏನು ಸಂಬಂಧ? ಸೃಷ್ಟಿಯನ್ನು ನಾವು ತಾಯಿ ಎನ್ನುತ್ತೇವೆ. ನಾವು ಅದರ ಮಕ್ಕಳು.ಹಾಗಾಗಿಯೇ ತುಳಸಿಗೆ ಗೋವಿಗೆ ಭೂಮಿಗೆ ಎಲ್ಲದಕ್ಕೂ ತಾಯಿ ಎನ್ನುತ್ತೇವೆ. ಅವು ನಮ್ಮನ್ನು ಪಾಲಿಸಯತ್ತವೆ,ಹಾಗಾಗಿ ಕೃತಜ್ಞತಾ ಭಾವ ಪ್ರಕಟವಾಗುತ್ತದೆ, ಅದು ಮಾತೃ ಸ್ವರೂಪದಲ್ಲಿ.ಇಡಿಯ ವಿಶ್ವವನ್ನು ಕುಟುಂಬ ಎನ್ನುತ್ತೇವೆ, ಹಾಗಾದಾಗ ಎಲ್ಲರಿಗೂ ಸುಖ ತರುವ ವಿಚಾರವನ್ನು ಇಡಿಯ ವಿಶ್ವದೊಂದಿಗೆ ಹಂಚಬೇಕಿದೆ. ಅದಕ್ಕಾಗಿ ಒಂದು ಸಮರ್ಥ ರಾಷ್ಟ್ರದ ಉತ್ಪತ್ತಿಯಾಗಬೇಕಿದೆ. ಬಹಳ ಪರಿಶ್ರಮಕಾರಿಯಾದದ್ದು, ಅದೆಷ್ಟು ಜನರಿಗೆ ಶಿಕ್ಷಣ ನೀಡಬೇಕಾಗುತ್ತದೆ. ಇದನ್ನು ವೇದಗಳಲ್ಲಿಯು ಉಲ್ಲೇಖ ಮಾಡಲಾಗುತ್ತದೆ.
ನಿಜವಾಗಿ ಹೀಗೆ ನಿರ್ಮಾಣವಾಗುವ ರಾಷ್ಟ್ರವೇ ಹಿಂದೂ ರಾಷ್ಟ್ರ. ಹಿಂದೂ ಸರ್ವ ಪಂಥ ಮತಗಳನ್ನು ಒಟ್ಟಿಗೆ ನಡೆಸಿಕೊಂಡು ಹೋಗುತ್ತಾನೆ. ಏಕೆಂದರೆ, ಇಲ್ಲಿ ಹಿಂದೂ ಎನ್ನುವುದು ಒಂದು ಪೂಜೆಯ ಕಾರಣಕ್ಕಲ್ಲ. ಅವನು ತನ್ನ ಪರಂಪರೆಯ ಕಾರಣದಿಂದ ನಾವೆಲ್ಲರೂ ಒಂದೇ ಎಂಬ ಭಾವ ಒಳಗೊಂಡಿರುತ್ತಾನೆ. ಎಲ್ಲರೂ ಪೂಜೆ ಮಾಡುವುದು ಅವನಿಗೇ ಎಂದು ಅರ್ಥ ಮಾಡಿಕೊಂಡಿರುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಹಾಗೆ ಯಾರು ಯಾವ ಭಾವದಲ್ಲಿ ಪೂಜಿಸುತ್ತಾನೆ, ಅದೇ ಭಾವದಲ್ಲಿ ನಾನು ಪ್ರಕಟವಾಗುತ್ತೇನೆ ಎಂದದ್ದೂ ಕೂಡ ಇದೆ ಭಾವದಲ್ಲಿ. ಈ ಸತ್ಯ ತಿಳಿದುಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬುದ್ಧಿಯಿಂದ ಪ್ರಯತ್ನ ಪಡುತ್ತಾನೆ.ಅವನು ತನ್ನ ಬುದ್ಧಿಯಿಂದ ಬಂಧಿತ. ಯಾರು ಈ ಭಾವವನ್ನು ಅನುಭವಿಸುತ್ತಾರೋ ಅವರು ಇದನ್ನು ವರ್ಣಿಸಲು ಅಸಾಧ್ಯ.ಏಕೆಂದರೆ ಅನುಭವಿಸಿದ್ದನ್ನು ವರ್ಣಿಸ ಹೊರಟರೆ ಮತ್ತೆ ಬುದ್ಧಿಯ ಸೆರೆಗೆ ಸಿಲುಕಿಬಿಡಬೇಕಾದೀತು. ಹಾಗಾಗಿಯೇ ಈ ರೀತಿಯ ಅನಿರ್ವಚನೀಯ ಸತ್ಯದ ಅನುಭೂತಿ ಪಡೆದುಕೊಳ್ಳುವ ದಾರಿ ಪ್ರತಿ ವ್ಯಕ್ತಿಗೂ ಭಿನ್ನವಾಗಿರುತ್ತದೆ. ಹೀಗೆ ಭಿನ್ನವಾಗಿ ಬೇರೆಯಾದಾಗ ಈ ಸತ್ಯ ಬದಲಾಗುವುದಿಲ್ಲ, ಎಲ್ಲರ ದಾರಿಯೂ ಒಂದೇ ಆಗಬೇಕಿಲ್ಲ. ಗಂಥವ್ಯ ಒಂದೇಯಾಗಬೇಕಷ್ಟೇ.
“ಏಕಂ ಸತ್ ವಿಪ್ರಾ ಬಹುದಾ ವದಂತಿ ” ಎಂದು ನಾವು ನಂಬುತ್ತೇವೆ. ಹಾಗಾಗಿಯೇ unityಗಾಗಿ uniformityಯ ಅಗತ್ಯ ನಮಗೆ ಬೇಕಿಲ್ಲ. ನಾವು diversityಯೊಂದಿಗೆ ಬದುಕುತ್ತೇವೆ. ಆ ಎಲ್ಲ diversityಗಳೂ ಒಟ್ಟಿಗೆ ನಡೆಯಲು ಸಾಧ್ಯವಿದೆ. ಏಕೆಂದರೆ diversity is multiple expressions of same unity. ಇದನ್ನು ಅರ್ಥ ಮಾಡಿಕೊಂಡವನು ಹಿಂದೂ. ಪರಂಪರೆಯಿಂದ ಭಾರತದಲ್ಲಿ ಇದರ ಅನುಭವವಿದೆ, ಪರಂಪರೆಯಿಂದ ಭಾರತದಲ್ಲಿ ಇದರ ವಿಕಾಸವಾಗಿದೆ. ಭಾರತದ ವಿವಿಧ ಪಂಥ ಸಂಪ್ರದಾಯದ ಜನರು, ಭಾರತದ ಎಲ್ಲ ಪ್ರಾಂತದ ಜನರು, ಭಾರತದಲ್ಲಿ ಎಷ್ಟು ರೀತಿಯ ಮಾನವ ಪ್ರಕಾರಗಳಿವೆಯೋ ಅಷ್ಟು ಅವರ ವಿಧ ವಿಧವಾದ ವೈಶಿಷ್ಟ್ಯಗಳಿವೆ, ಅದರ ರಕ್ಷಣೆ ಮಾಡಲಾಗಿದೆ, ಅದಕ್ಕೆ ಗೌರವ ನೀಡಲಾಗಿದೆ. ಈ ಉನ್ನತ ವಿಚಾರವನ್ನಿಟ್ಟುಕೊಂಡು ಆ ಎಲ್ಲ ವಿವಿಧತೆಗಳನ್ನ ಒಳಗೊಂಡಿದ್ದರೂ ಒಂದೆ ಆಗಿ ಸಮಾಜ ಹೊರಹೊಮ್ಮಿದೆ. ಈ ರೀತಿ ಜಗತ್ತಿನಲ್ಲೆಲ್ಲೂ ಇಲ್ಲ. ಹಾಗಾಗಿಯೇ ಭಾರತಕ್ಕೆ ಸಿಂಧೂ ನದಿ ಪಾತ್ರದ ಜನರು ಎಂದು ಹೆಸರು ನೀಡಲಾಗಿದೆ. ‘ಹಿಂದೂ’ ಪರಂಪರೆಯಿಂದ ಭಾರತದ ನಿವಾಸಿ ಮತ್ತು ಅವನು ಭಾರತದ ಉತ್ತರದಾಯಿಯೂ ಹೌದು. ಹಿಂದೂ ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಏನೆಂದರೆ ಯಾರು ಭಾರತವನ್ನು ತನ್ನದು ಎಂದು ಭಾವಿಸುತ್ತಾನೋ,ಯಾರಲ್ಲಿ ಮನದಲ್ಲಿ ಭಾರತದ ಭಕ್ತಿ ಇದೆಯೋ, ಯಾರಲ್ಲಿ ಈ ರೀತಿಯ ಏಕತ್ವದ ಪರಿಚಯ ನೀಡುವ, ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಸದ್ಭಾವೀ ಸಂಸ್ಕೃತಿಯಿದೆಯೋ, ಹೀಗೆ ನಡೆಯಲು ಶ್ರದ್ಧೆ ಕಲಿಸುವ,ಸಂಯಮ ಕಲಿಸುವ, ಕೃತಜ್ಞತೆ ಕಲಿಸುವ ಸಂಸ್ಕೃತಿಯ ಒಳಗೆ ನಡೆಯುವ ಪ್ರಯತ್ನ ಮಾಡುವವನು ಹಾಗು ಈ ಸಂಸ್ಕೃತಿಯನ್ನು ಸಂವರ್ಧಿಸುವ, ಸುರಕ್ಷಿತಗೊಳಿಸುವ ಯಾರ ಪೂರ್ವಜರು ತ್ಯಾಗ ಬಲಿದಾನ ನೀಡಿದರೋ, ಬೆವರು ರಕ್ತ ಒಂದು ಮಾಡಿ ದುಡಿದರೋ ಅವರ ಕುರಿತಾಗಿ ಗೌರವವನ್ನಿಟ್ಟುಕೊಂಡು ಅವರ ಆದರ್ಶಗಳನ್ನು ಮನದಲ್ಲಿಟ್ಟುಕೊಂಡು ಯಾರು ಆದರಿಸುತ್ತಾರೋ ಅವನು ಹಿಂದೂ. ಅವನು ಯಾವ ಭಾಷೆಯನ್ನಾದರೂ ಮಾತನಾಡಲಿ, ಯಾರ ಪೂಜೆಯನ್ನಾದರೂ ಮಾಡಲಿ,ಮಾಡದೆ ಇರಲಿ,ಯಾವ ರೀತಿಯಲ್ಲಾದರೂ ಬಟ್ಟೆ ತೊಡಲಿ, ಯಾವ ರೀತಿಯ ಊಟವನ್ನಾದರೂ ಮಾಡಲಿ, ಯಾವ ಮನೆಯಲ್ಲಿ ಯಾವ ಜಾತಿಯಲ್ಲೇ ಹುಟ್ಟಿರಲಿ, ಯಾವ ಪ್ರದೇಶದವನೇ ಆಗಿರಲಿ. ಹಿಂದೂ ಈ ವೈಶಿಷ್ಟ್ಯಗಳನ್ನು ಖಾಯಂ ಆಗಿರಿಸಿಕೊಂಡು,ಸುರಕ್ಷಿತವಾಗಿರಿಸುತ್ತಾ ಎಲ್ಲರನ್ನೂ ಒಳಗೊಳ್ಳುತ್ತಾ ಸಮಾಜವನ್ನ ಒಟ್ಟಿಗೆ ಮುನ್ನಡೆಸುತ್ತಾನೆ. ಅವನು ಹಿಂದೂ.ಈ ರೀತಿಯ ಹಿಂದೂ ಸಮಾಜದ ಸಂಘಟನೆಯಾಗಬೇಕಿದೆ.
ಬಲ ಮತ್ತು ಶೀಲ
ಹಿಂದೂ ಸಮಾಜ ಬಲ ಮತ್ತು ಶೀಲಯುಕ್ತವಾಗಬೇಕು. ಗೀತೆಯಲ್ಲಿ ಶೀಲ, ಶಕ್ತಿ, ಪ್ರೇಮ ಈ ಮೂರು ವಿಷಯಗಳ ಬಗೆಗೆ ಹೇಳಿದೆ, ಜಗತ್ತಿನಲ್ಲಿ ಶಕ್ತಿಗೆ ಅತ್ಯಂತ ಮಹತ್ವವಿದೆ. ದುರ್ಬಲರ ವಿಚಾರಗಳನ್ನು ಯಾರೂ ಕೇಳುವುದಿಲ್ಲ.ಅದು ಎಷ್ಟೇ ಒಳ್ಳೆಯ ವಿಚಾರವಾದರೂ ಸರಿ, ದುರ್ಬಲರ ಮಾತಾದರೆ ಅದಕ್ಕೆ ಮಹತ್ವವಿಲ್ಲ. ಮತ್ತು ಜಗತ್ತಿನ ದುಷ್ಟರೆಲ್ಲರೂ ದುರ್ಬಲರ ಹಿಂದೆಯೇ ಬೀಳುತ್ತದೆ. ಏಕೆಂದರೆ ಸಬಲರ ಹಿಂದೆ ಬಿದ್ದರೆ ಒದೆ ಬೀಳುತ್ತದೆ, ಹಾಗಾಗಿ ಯಾರು ಅಶಕ್ತರೋ ಅವರನ್ನು ಎಲ್ಲರೂ ದಬಾಯಿಸುತ್ತಾರೆ. ನಾವಾದರೂ ಬಲಿ ನೀಡುವಾಗ ಏನನ್ನು ಬಲಿಗೊಡುತ್ತೇವೆ. ಕುದುರೆಯನ್ನು? ಉಹುಂ, ಒದೆಯುತ್ತದೆ. ಆನೆಯನ್ನು ಬಲಿ ಕೊಡುವುದಿಲ್ಲ ಹುಲಿಯನ್ನು ಮುಟ್ಟಲೂ ಸಾಧ್ಯವಿಲ್ಲ. ಹಾಗಾದರೆ ಮತ್ತ್ಯಾವುದು? ಕುರಿಯ ಮರಿಯ ಬಲಿ ನೀಡುತ್ತೇವೆ. ದೇವರೂ ಸಹ ದುರ್ಬಲರ ಬಲಿ ಕೇಳುತ್ತದೆ. ದೇವಂ ದುರ್ಬಲ ಘಾತಕ ಎನ್ನುತ್ತದೆ ಒಂದು ಉಕ್ತಿ. ಇದೊಂದು ಪ್ರಾಕೃತಿಕವಾದ ಕ್ರಿಯೆ, ಜಗತ್ತು ಇದನ್ನು ‘ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್’ ಎನ್ನುತ್ತದೆ. ಆದರೆ ಜಗತ್ತು ಇಲ್ಲಿಗೆ ನಿಂತು ಬಿಡುತ್ತದೆ. ಆದರೆ ಭಾರತ, ಈ ಸತ್ಯವನ್ನು ಅರಗಿಸಿ ಮುಂದೆ ಹೋಗುತ್ತದೆ, ‘ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್’ ಎನ್ನುವುದು ಸತ್ಯವಾದರೆ ನಾವು ಜಗತ್ತಿನಲ್ಲಿ ಫಿಟ್ಟೆಸ್ಟ್. ಹಾಗಾದರೆ ನಮ್ಮ ಕರ್ತವ್ಯ ಏನು? ಯಾರು ಫಿಟ್ಟೆಸ್ಟ್ ಆಗಿರುತ್ತಾರೋ ಅವರು ಎಲ್ಲರ ಸರ್ವೈವಲ್ಗಾಗಿ ಕೆಲಸ ಮಾಡಬೇಕು. ಅಂದರೆ ದುರ್ಬಲರ ರಕ್ಷಣೆ ಸಬಲರ ಕರ್ತವ್ಯವಾಗಿದೆ. ಇಲ್ಲಿಂದಲೇ ಶೀಲದ ಜನ್ಮವಾಗುತ್ತದೆ. ಎರಡು ರೀತಿಯ ಶೀಲವಿದೆ. ಒಂದು ವ್ಯಕ್ತಿಗತ ಚಾರಿತ್ರ್ಯ. ಮನುಷ್ಯ ಸತ್ಯ ವಚನೀಯನಾಗಬೇಕು. ಮನುಷ್ಯ ಅಹಿಂಸಕನಾಗಬೇಕು. ಮನುಷ್ಯ ಸಂಯಮವನ್ನು ಪಾಲಿಸುವವನಾಗಬೇಕು. ಮನುಷ್ಯ ಸಂಗ್ರಹ ಮಾಡುವವನಾಗಬಾರದು. ಹೀಗೆ ಹತ್ತು ನಿಯಮಗಳಿವೆ, ಯಮ ಮತ್ತು ನಿಯಮ ಎನ್ನುತ್ತೇವೆ.ಅದು ಸಂಪೂರ್ಣ ಮಾನವತೆಗೆ ಉಪಯುಕ್ತವಾಗಿವೆ. ಭಾರತದ ಎಲ್ಲ ಪಂಥ ಸಂಪ್ರದಾಯದಲ್ಲಿ ಎಲ್ಲರಲ್ಲೂ ಏಕತೆಯನ್ನು ಕಾಣುವುದರಿಂದ ಆರಂಭವಾಗುವುದು ಈ ಹತ್ತು ನಿಯಮಗಳ ಅನುಸರಣೆಯಿಂದ ಅಂತ್ಯಗೊಳ್ಳುತ್ತದೆ. ದರ್ಶನಗಳು ಬೇರೆಯಿರಬಹುದು, ಪೂಜೆಗಳು ಬೇರೆ ಇರಬಹುದು, ಆದರೆ ಸತ್ತ್ವ ಒಂದೇ. ಹಾಗೆ ನೋಡಿದರೆ ರಾಮಕೃಷ್ಣ ಪರಮಹಂಸರಂತಹ ಸಂತರು ಭಾರತದ ಆಚೆಯಿಂದ ಬಂದ ಉಪಾಸನೆಯನ್ನೂ ಮಾಡಿ ನೋಡಿದರು. ಮತ್ತು ಇದನ್ನೇ ಹೇಳಿದರು. ಅಂತಿಮ ಉಪಲಬ್ಧಿ ಇದೇ ಆಗಿರುವಾಗ ಜಗಳ ಯಾಕೆ ಎನ್ನುತ್ತಾರೆ, “ಜೋ ಜೋ ಮತ್ ತೋ ತೋ ಪಥ” ಎಷ್ಟು ಮತಗಳೋ ಅಷ್ಟು ಪಥಗಳು ಎನ್ನುತ್ತಾರೆ. ಇದು ವ್ಯಕ್ತಿಗತ ಚಾರಿತ್ರ್ಯ.
ಅದೇ ರೀತಿ ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ಶೀಲವಿರುತ್ತದೆ. ಪ್ರತಿ ರಾಷ್ಟ್ರದ ಉಗಮ ಸೃಷ್ಟಿಯಲ್ಲಾಗುವಾಗ ಅದಕ್ಕೊಂದು ಕಾರಣವಿರುತ್ತದೆ. ಈ ರಾಷ್ಟ್ರಕ್ಕೆ ಇಡಿಯ ಜಗತ್ತಿಗೆ ಒಂದು ಸತ್ಯ ನೀಡಬೇಕಿರುತ್ತದೆ. ಇದಕ್ಕಾಗಿಯೇ ಅದು ಹುಟ್ಟುತ್ತದೆ, ಆ ಸತ್ಯವನ್ನೇ ಇಟ್ಟುಕೊಂಡು ಬೆಳೆಯುತ್ತದೆ. ಆ ಸತ್ಯವನ್ನು ಜಗತ್ತಿಗೆ ತಿಳಿಸಿದ ನಂತರ ಜಗತ್ತಿನಲ್ಲಿ ವಿಲೀನವಾಗಿ ಹೋಗುತ್ತದೆ. ನಮ್ಮ ನಮ್ಮ ರಾಷ್ಟ್ರದ ಸತ್ಯವನ್ನು ಶಿರೋಧಾರ್ಯ ಎಂದುಕೊಂಡು ನಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಮತ್ತು ಇದನ್ನು ಸಾಧಿಸಲು ನಮ್ಮ ನಮ್ಮ ವ್ಯಕ್ತಿಗತ ಸ್ವಾರ್ಥಗಳನ್ನೂ ಕೂಡ ತೊರೆಯುವುದನ್ನು ನಾವು ರಾಷ್ಟ್ರೀಯ ಚಾರಿತ್ರ್ಯ ಎನ್ನುತ್ತೇವೆ.
ನಮ್ಮ ರಾಷ್ಟ್ರೀಯ ಚಾರಿತ್ರ್ರ್ಯ ಯಾವುದು? ನಾವು ಇಡಿಯ ಜಗತ್ತಿಗೆ ಸಂತುಲನವನ್ನು ಹೇಳಿಕೊಡುತ್ತೇವೆ. ನಾವು ಇಡಿಯ ಜಗತ್ತಿಗೆ ಅವುಗಳ ಸ್ವಭಾವಕ್ಕೆ ಅನುಗುಣವಾಗಿ ಅದರ ಕರ್ತವ್ಯವೇನು? ಇದನ್ನು ಗುರುತಿಸುವುದು ಹೇಗೆ? ಅದರ ಮೌಲ್ಯಗಳನ್ನು ನೀಡುತ್ತೇವೆ. ನಾವು ಇಡಿಯ ಜಗತ್ತಿಗೆ ಸದಾ ಸುಖ ನೀಡುವ, ಆನಂದ ನೀಡುವ ರೀತಿಯನ್ನು ತಿಳಿಸಿಕೊಡುತ್ತೇವೆ. ತಥಾಗತ ಹೇಳುವಂತೆ ಅಂತ್ಯದಲ್ಲಿ, ಮಧ್ಯದಲ್ಲಿ, ಆದಿಯಲ್ಲಿ ಯಾವಾಗಲೂ ಸುಖದಾಯಕ ಎಂದು ಆ ರೀತಿಯಲ್ಲಿ ತಿಳಿಸುತ್ತೇವೆ. ನಾವೂ ಸಹ ಇದೇ ಎಈತಿಯ ಜೀವನದ ರೀತಿಯನ್ನು ಅವಳವಡಿಸಿಕೊಳ್ಳುತ್ತೇವೆ, ಅದರಿಂದ ಇಡಿಯ ಜಗತ್ತು ಸದಾ ಸುಖವಾಗಿರುವಂತೆ ನೋಡಿಕೊಳ್ಳುತ್ತೇವೆ. ಇದಕ್ಕಾಗಿ ಕೆಲಸ ಮಾಡುತ್ತೇವೆ. ಇದಕ್ಕಾಗಿ ನಾವು ನಮ್ಮ ರಾಷ್ಟ್ರವನ್ನು ಬಲಗೊಳಿಸುತ್ತೇವೆ. ಕೆಲವೊಮ್ಮೆ ಇದಕ್ಕಾಗಿ ನಮ್ಮ ಕೆಲವು ತತ್ತ್ವಗಳನ್ನೂ ಬದಿಗಿಡಬೇಕಾಗಬಹುದು. ಕೆಲವೊಮ್ಮೆ ಇದಕ್ಕಾಗಿ ನಾವು ನಮ್ಮ ಕೆಲವು ಸ್ವಾರ್ಥಗಳನ್ನು ತ್ಯಾಗ ಮಾಡಬೇಕಾಗಿ ಬರಬಹುದು. ಇದು ರಾಷ್ಟ್ರೀಯ ಚಾರಿತ್ರ್ಯ, ಇದು ರಾಷ್ಟ್ರೀಯ ಶೀಲ. ಮತ್ತು ಇದನ್ನು ನಾವೇಕೆ ಮಾಡಬೇಕು? ನಮಗೆ ಇಡಿಯ ಜಗತ್ತನ್ನು ಗೆಲ್ಲಬೇಕು ಎಂಬ ಯಾವ ಆಸೆಯೂ ಇಲ್ಲ. ನಾವು ಜಗತ್ತನ್ನ ಜೋಡಿಸಬೇಕಿದೆ. ಸಂಘದಲ್ಲಿಯೂ ನಾವು ಪ್ರಾರ್ಥಿಸುವಾಗ ಕೇಳುತ್ತೇವೆ, ‘ಅಜಯ್ಯಾಂಚ ವಿಶ್ವಸ್ಯ ದೇಹೀಂ ಸಶಕ್ತಿಂ’. ಹೀಗೆ ಕೇಳುವಾಗ ನಾವು ವಿಶ್ವವನ್ನು ಗೆಲ್ಲಬೇಕು ಎಂಬ ಭಾವವಿಲ್ಲ. ಬದಲಾಗಿ ನಾವು ನಮ್ಮ ಕೆಲಸ ಮಾಡಬೇಕಾದರೆ ಸಶಕ್ತರಾಗಬೇಕು ಹಾಗಾಗಿ ಶಕ್ತಿಯನ್ನು ಬೇಡುತ್ತೇವೆ. ಇದನ್ನು ಕಾರ್ಯಗತಗೊಳಿಸದೆ ಇರಲು ಜಗತ್ತಿನಲ್ಲಿ ಇಂದಿಗೂ ಅನೇಕ ದುಷ್ಟ ಶಕ್ತಿಗಳು ಕಾರ್ಯಪ್ರವೃತ್ತವಾಗಿದೆ. ಭಾರತ ಮುಂದೆ ಹೋಗಬಾರದು ಎನ್ನುವ ವಿಚ್ಛಿದ್ರಕಾರಿ ಶಕ್ತಿಗಳು ನಮ್ಮ ನಡುವೆ ಕೆಲಸ ಮಾಡುತ್ತಿರುವುದು ನಮ್ಮ ಅನುಭವಕ್ಕೂ ಬಂದಿರಬಹುದು. ಸ್ವತಂತ್ರ್ಯ ಭಾರತದಲ್ಲೂ ಇದು ನಡೆದುಕೊಂಡು ಬಂದಿದೆ. ಸಣ್ಣ ಸಣ್ಣ ಭಾವನೆಗಳಿಗೆ ಧಕ್ಕೆ ಮಾಡುತ್ತಾ, ಮಧ್ಯೆ ತಂದಿಟ್ಟು ಜಗಳಗಳು ನಡೆಯುವಂತೆ ಮಾಡುವ, ಬೆಂಕಿ ಹಚ್ಚುವ ಅದರ ಕಾವಿನಲ್ಲಿ ತಮ್ಮ ರೊಟ್ಟಿ ಬೇಯಿಸಿಕೊಳ್ಳುವವರು ಇದ್ದಾರೆ. ಅನೇಕ ಬಾರಿ ನಮ್ಮಲ್ಲಿ ವ್ಯಕ್ತಿಗತ ಚಾರಿತ್ರ್ಯ ಇದೆ, ಆದರೆ ರಾಷ್ಟ್ರೀಯ ಚಾರಿತ್ರ್ಯವಿಲ್ಲ. ಹಾಗಾಗಿ ನಮ್ಮನ್ನು ನಮ್ಮ ಗುರಿ ಮುಟ್ಟುವ ತನಕ ಯಾರೂ ಗೆಲ್ಲದ ರೀತಿಯಲ್ಲಿ ರೂಪಿಸಿಕೊಳ್ಳಬೇಕಿದೆ. ನಾವು ಯಾರನ್ನೂ ಗೆಲ್ಲಬೇಕಾಗಿಲ್ಲ, ನಾವು ಗೆಲ್ಲಬೇಕಾದರೆ ಸ್ವಯಂ ನಮ್ಮನ್ನೆ ಗೆಲ್ಲಬೇಕಿದೆ. ಇಡಿಯ ಜಗತ್ತನ್ನ ಕುಟುಂಬವಾಗಿಸಿ ಅವರನ್ನು ಪ್ರೇಮದಿಂದ ಜೋಡಿಸುವುದು ನಮ್ಮ ಗುರಿ, ಕೇವಲ ಗೆಲುವಲ್ಲ. ಹೀಗಾಗಿಯೇ ಗೀತೆಯಲ್ಲಿ ಶೀಲ, ಶಕ್ತಿ ಮತ್ತು ಪ್ರೇಮದ ಬಗೆಗೆ ಹೇಳಿದ್ದಾರೆ. ಮತ್ತು ಶಕ್ತಿಯನ್ನ ಶೀಲ ಹಾಗು ಪ್ರೇಮದ ಮರ್ಯಾದೆಯ, ಮಿತಿಯ ನಡುವೆ ಇರಿಸಿದ್ದಾರೆ. ಆಗ ಅದು ನಿಜವಾದ ಶಕ್ತಿಯಾಗುತ್ತದೆ. ಹಿಂದೂ ಸಮಾಜವನ್ನು ಈ ರೀತಿಯ ಶಕ್ತಿ ಸಂಪನ್ನ ಸಮಾಜವನ್ನು ಮಾಡಬೇಕಾಗಿದೆ. ಈ ರಾಷ್ಟ್ರವನ್ನು ಈ ರೀತಿ ನಿರ್ಮಾಣ ಮಾಡುವ ಕಡೆಗೆ ಕರೆದೊಯ್ಯುವ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ. ಇದರಿಂದ ಜಗತ್ತಿಗೆ ಅದರ ಎಲ್ಲ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ, ಇದನ್ನು ಬಿಟ್ಟು ಬೇರೆ ಯಾವುದೇ ಮಾರ್ಗ ಉಳಿದಿಲ್ಲ, ಇದು ನಡೆಯಲೇಬೇಕಿದೆ.
ಒಂದೆಡೆ ಭಾರತದ ಈಶ್ವರಪ್ರದಾನ ಕರ್ತವ್ಯ ಇನ್ನೊಂದೆಡೆ ಇದನ್ನು ಮಾಡುವ ಸಮಯವೂ ಬಂದಿದೆ.ಹಾಗಾಗಿಯೇ ನಮ್ಮ ಕೃತಿ, ಜೀವನ ಈ ನಿಟ್ಟಿನ ಕಡೆಗೆ ಸಾಗಬೇಕಿದೆ. ಆಗಾಗ ಜೀವನವನ್ನು ಹೇಗೆ ನಿರ್ಮಾಣ ಮಾಡಬೇಕು ಎನ್ನುವಾಗ, ಸ್ವಯಂಸೇವಕರಿಗಂತೂ ನಾವು ಶಾಖೆಯಲ್ಲಿ ಹೇಳಿಕೊಡುತ್ತೇವೆ, ನಾವು ಕೇವಲ ಬುದ್ಧಿಯಿಂದ ಕಲಿಸುವುದಿಲ್ಲ, ಬದಲಾಗಿ ಅದನ್ನ ಅವರ ಅಭ್ಯಾಸವನ್ನಾಗಿಸುತ್ತೇವೆ. ಇಲ್ಲಿಯೂ ಸಹ ಬೇರೆ ಬೇರೆ ಪ್ರಾಂತದಿಂದ ಬಂದಿದ್ದಾರೆ, ಬೇರೆ ಬೇರೆ ರೀತಿಯಲ್ಲಿ ಅವರ ಕೃತಿಗಳಿವೆ, ವಿವಿಧ ಶೈಲಿಯ ಜೀವನ ಅವರದ್ದಾಗಿರಬಹುದು. ಆದರೆ ನಾಲ್ಕು ವಿಷಯಗಳು ಎಲ್ಲರಲ್ಲಿಯೂ ಸಮಾನವಾಗಿ ಇರಲಿದೆ.
ಮೊದಲನೆಯದ್ದು, ದೇಶದ ಪೂಜೆ. ದೇಶದ ಪೂಜೆಯೆಂದರೆ ಭಾರತಮಾತೆಯ ಫೋಟೋಗೆ ಅರಿಶಿನ ಕುಂಕುಮ ಹಾಕಿ ಹೂವು ಹಾಕಿ ಪೂಜಿಸುತ್ತಾರೆ ಅಂತಲ್ಲ. ಪೂಜೆಯೆಂದರೆ ನಾವು ಯಾರನ್ನ ಪೂಜಿಸುತ್ತೇವೆಯೋ ಆ ರೀತಿಯಾಗುವ ಪ್ರಯತ್ನ ಮಾಡುವುದು. ನಾವು ಭಾರತ ಮಾತೆಯ ವೈಭವಕ್ಕೆ ಪೂಜಿಸುತ್ತೆವೆ, ಆಕೆಯನ್ನು ಅರಿತು ಆಕೆಯ ರೀತಿಯಾಗುವ ಪ್ರಯತ್ನ ಮಾಡುತ್ತೇವೆ. ನಮಗೆಲ್ಲರಿಗೂ ಹಾಗೆಯೇ ಆಗಬೇಕಾದ ಅವಶ್ಯಕತೆ ಇದೆ. ಇದು ಕೇವಲ ಸಂಘದ ಕಾರ್ಯ ಮಾತ್ರವಲ್ಲ, ನಮ್ಮೆಲ್ಲರ ಕಾರ್ಯ. ನಾವೆಲ್ಲರೂ ಹೀಗೆ ಮಾಡಬೇಕು ಎನ್ನುವುದಕ್ಕಾಗಿಯೇ ಒಂದಷ್ಟು ಮಂದಿ ಸಂಘದ ಹೆಸರಿನಲ್ಲಿ ಈ ಕೆಲಸ ಆರಂಭ ಮಾಡಿದ್ದೇವೆ. ನಾವೆಲ್ಲರೂ ಹಾಗಾದಾಗ ಈ ಹೆಸರಿನ ಪಟ್ಟಿಯೂ ಮಾಯವಾಗುತ್ತದೆ. ಸಂಘಕ್ಕೆ ತನ್ನ ಹೆಸರನ್ನು ದೊಡ್ಡದಾಗಿಸಬೇಕೆಂದಿಲ್ಲ. ಸಂಘಕ್ಕೆ ಈ ರೀತಿಯ ಸಮಾಜ ನಿರ್ಮಾಣ ಮಾಡಬೇಕು ಎಂದಿದೆ ಅಷ್ಟೇ. ಸಂಘದ ಸ್ವಯಂಸೇವಕರು ಭಾರತದ ಪರಂಪರೆ, ರೀತಿ, ಸಂಸ್ಕೃತಿಯನ್ನು ದೇಶಾನುಕೂಲ ಮತ್ತು ಯುಗಾನುಕೂಲವಾದ ರೀತಿಯಲ್ಲಿ ಮಾಡಿಕೊಳ್ಳುತ್ತಾ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಭ್ಯಾಸ ನಡೆಸಬೇಕಿದೆ. ನಾವು ಆತ್ಮನಿರ್ಭರ ಭಾರತ ಮಾಡಬೇಕಾದರೆ ಯಾವುದನ್ನೊ ನಕಲು ಮಾಡಿ ಭಾರತ ನಿರ್ಮಾಣ ಮಾಡಲು ಸಾಧ್ಯವಿಲ್ಲ. ನಾವು ಭಾರತವನ್ನು ಅರಿಯಬೇಕು, ಭಾರತದ ಜೊತೆಗೆ ತನ್ಮಯರಾಗಬೇಕು. ಮತ್ತು ಇವತ್ತಿನ ದಿನಮಾನಕ್ಕೆ ಎಷ್ಟು ಪ್ರಾಸಂಗಿಕತೆಯ ಅಗತ್ಯವಿದೆಯೋ ಅಷ್ಟನ್ನು ಮಾತ್ರವೇ ತೆಗೆದುಕೊಂಡು ಉಳಿದುದನ್ನು ಬಿಟ್ಟು, ಇಡಿಯ ಜಗತ್ತಿನಲ್ಲಿ ಸ್ವೀಕಾರಾರ್ಹವಾದ ವಿಷಯಗಳನ್ನು ಅಳವಡಿಸಿಕೊಂಡು, ಭಾರತದ ಮೂಲ ತತ್ತ್ವದ ಆಧಾರದಲ್ಲಿ ಯುಗಾನುಕೂಲ ಭಾರತವನ್ನು ಮತ್ತೆ ಎದ್ದು ನಿಲ್ಲಿಸಬೇಕಿದೆ. ಇದಕ್ಕಾಗಿ ಸ್ವಯಂಸೇವಕರು ನಿತ್ಯ ಶಾಖೆಯಲ್ಲಿ ಅಭ್ಯಾಸ ಮಾಡುತ್ತಾರೆ, ಮತ್ತು ಸಮಾಜವೂ ಅಭ್ಯಾಸ ಮಾಡಬೇಕಿದೆ.
ಸಮಾಜದಲ್ಲಿ ತಮ್ಮ ತಮ್ಮ ಆರಾಧ್ಯ ದೈವಗಳನ್ನಷ್ಟನ್ನೇ ಮಾನ್ಯ ಮಾಡುವುದು ಹೆಚ್ಚಾಗುತ್ತಿದೆ, ಭಾರತದಲ್ಲಿ ಜಾತಿಗಳಿವೆ, ಜಾತಿಯ ಕುರಿತು ಜನರಲ್ಲಿ ಗೌರವವಿದೆ, ಆ ರೀತಿ ಗೌರವ ಹೊಂದುವುದೂ ಕೂಡ ಪಾಪವಲ್ಲ, ತಮ್ಮ ತಮ್ಮ ಭಾಷೆಗಳ ಮೇಲೆ ಅಭಿಮಾನ ಇರಬೇಕು, ಎಲ್ಲ ಭಾರತೀಯ ಭಾಷೆಗಳು ನಮ್ಮ ಮಾತೃಭಾಷೆಯೇ, ನಮ್ಮ ಜನಗಳ ರಾಷ್ಟ್ರಭಾಷೆ, ನಮ್ಮ ರಾಷ್ಟ್ರ ಭಾಷೆಯೇ, ನಮ್ಮ ಮಾತೃಭಾಷೆಯಲ್ಲಿ ನಮಗೆ ಒಳ್ಳೆಯ ಜ್ಞಾನ ಇರಬೇಕು. ಹಾಗು ಪರಸ್ಪರ ಒಂದು ಭಾಷೆಯಲ್ಲಿ ಸಂವಹನ ನಡೆಸುವಾಗ ಯಾವುದಾದರೂ ಒಂದು ಭಾಷೆ ಬೇಕು, ಅದು ಭಾರತೀಯ ಭಾಷೆ ಆಗಿರಬೇಕು. ಅನೇಕ ಪ್ರಾಂತಗಳಿವೆ, ಆದರೆ ಈ ಎಲ್ಲ ಪ್ರಾಂತಗಳು ಭಾರತದ ಪ್ರಾಂತಗಳೇ, ಇಲ್ಲಿಗೆ ನೇಪಾಳದಿಂದ ಬಂದ ಸ್ವಯಂಸೇವಕರಿಗೆ ಹೊರದೇಶದವರು ಎಂದು ಭಾವಿಸುವಾಗ ಸರಿಯೆನಿಸಲಿಲ್ಲ. “ನಾವು ಸ್ವಾತಂತ್ರ್ಯ ಪೂರ್ವದಲ್ಲಿ ಬೇರೆ ರಾಜ್ಯವಾಗಿದ್ದೆವು, ಈಗ ವ್ಯವಸ್ಥೆ ಬದಲಾಗಿದೆ ಅಷ್ಟೆ. ವ್ಯವಸ್ಥೆ ಬದಲಾದ ತಕ್ಷಣ ನಾವು ಭಾರತೀಯರಾಗದೆ ಹೋಗುವುದಿಲ್ಲ.
ನಮ್ಮನ್ನು ಭಾರತೀಯರಿಂದ ಬೇರ್ಪಡಿಸುವ ಅಂಶ ಯಾವುದು?” ಎನ್ನುತ್ತಾರೆ. ವ್ಯವಸ್ಥೆ ಬದಲಾಗುವುದರಿಂದ ಏನೂ ವ್ಯತ್ಯಾಸವಾಗುವುದಿಲ್ಲ.ನಾವು ಯಾವತ್ತಿಗೂ ಒಂದೇ. ವಿವಿಧತೆಗಳ ನಡುವೆಯೂ ನಾವು ಒಂದೆ ಆಗಿದ್ದೇವೆ, ವಿವಿಧತೆಗಳಿಗೂ ನಮ್ಮಲ್ಲಿ ಜಾಗವಿದೆ, ಗೌರವವಿದೆ, ಆದರೆ ನಮಗೆ ರಾಷ್ಟ್ರ ಸರ್ವೋಪರಿಯಾದುದು. ನಾವು ಭಾರತ ಮಾತೆಯ ಅರ್ಚನ ಮಾಡುತ್ತೇವೆ ಅಂದರೆ ಅದೇ ಅಂತಿಮ, ಉಳಿದೆಲ್ಲವೂ ನಂತರ ಎನ್ನುವ ಭಾವವನ್ನು ಧರಿಸಿಕೊಂಡು ಕೆಲಸ ಮಾಡುವುದೇ ದೇಶದ ಅರ್ಚನೆ.
ಎರಡನೆಯ ವಿಚಾರ ಸದ್ಭಾವನೆ. ಇಡಿಯ ಸಮಾಜ ಕೆಲಸ ಮಾಡಬೇಕೆಂದರೆ ಅದನ್ನು ಜೋಡಿಸಬೇಕು.ಅದೆಷ್ಟು ವಿವಿಧತೆಯಿದೆ ಇಲ್ಲಿ, ಅಷ್ಟೇ ಅಲ್ಲ ಇತಿಹಾಸದುದ್ದಕ್ಕೂ ನಮ್ಮಲ್ಲೇ ಒಂದಷ್ಟು ಕಹಿಯೂ ಇದೆ. ಇದನ್ನು ಸಹ ನಾವೇ ಮಾಡಿಕೊಂಡಿರುವುದು, ನಮ್ಮನ್ನು ನಾವೇ ಮರೆತು,ನಮ್ಮ ನಮ್ಮಲ್ಲೇ ಭೇದಭಾವ ಆರಂಭಿಸಿದೆವು. ಅದನ್ನು ಅಳಿಸುವುದು ಇನ್ನೂ ಬಾಕಿಯಿದೆ. ನಮ್ಮ ಸಂವಿಧಾನ ಆರ್ಥಿಕ,ರಾಜಕೀಯ ಸಮತೆಯನ್ನು ನೀಡಿದೆ. ಆದರೆ ಸಾಮಾಜಿಕ ಸಮತೆಯನ್ನು ನಾವು ತರಬೇಕಿದೆ. ಅದು ನಮ್ಮ ಕರ್ತವ್ಯ. ಆದರೆ ಸಾಮಾಜಿಕ ಸಮಾನತೆ ಮಾತಿನಿಂದ ಸಾಧ್ಯವಾಗುವುದಿಲ್ಲ, ಅದಕ್ಕಾಗಿ ಸದ್ಭಾವನೆ ಮೂಡಬೇಕು. ಈ ರೀತಿ ವ್ಯವಹರಿಸುವುದು,ಎಲ್ಲರನ್ನು ನಮ್ಮವರೆನ್ನುವ ದೃಷ್ಟಿಯಿಂದ ನೋಡುವುದು ಮತ್ತು ನಮ್ಮ ಸದ್ಭಾವನೆಯಿಂದ ಮತ್ತೊಬ್ಬರ ಹೃದಯದಲ್ಲೂ ಸದ್ಭಾವನೆಯ ದೀಪ ಬೆಳಗುವುದು ನಮ್ಮ ಕರ್ತವ್ಯ. ಇದರ ಅಭ್ಯಾಸ ಸ್ವಯಂಸೇವಕರಿಗೆ ಕಲಿಸಲಾಗುತ್ತದೆ. ಆದರೆ ಇಡಿಯ ಸಮಾಜದ ಕರ್ತವ್ಯವೂ ಹೌದು.
ಇದೆಲ್ಲವೂ ಮೂರನೆಯ ವಿಚಾರ ರಾಷ್ಟ್ರ ಋಣದ ಅಡಿಯಲ್ಲಿದೆ. ಆ ರಾಷ್ಟ್ರ ಋಣವನ್ನು ತೀರಿಸಬೇಕಿದೆ.ಇದರ ಅಭ್ಯಾಸವೂ ಸಂಘದ ಶಾಖೆಗಳಲ್ಲಿದೆ. ಕೆಲವು ವರ್ಷಗಳು ದೇಶ ನಮಗೆ ಏನೆಲ್ಲ ಕೊಟ್ಟಿದೆ ಎಂದು ಹೆಮ್ಮೆಪಡುತ್ತೇವೆ, ಆನಂತರ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂದು ಕೇಳಬೇಕಿದೆ. ‘ತನ್ ಸಮರ್ಪಿತ,ಮನ ಸಮರ್ಪಿತ, ಔರ್ ಏ ಜೀವನ್ ಸಮರ್ಪಿತ್, ಚಾಹತಾ ಹು ದೇಶ್ ಕಿ ಧರತಿ ಔರ್ ಕುಚ್ ಭಿ ದೂ’ ಎನ್ನುವಂತೆ ಜೀವನವನ್ನು ರೂಪಿಸಬೇಕಿದೆ.
ಈ ರೀತಿ ಜೀವಿಸಬೇಕು ಎಂದರೆ ನಾಲ್ಕನೆಯ ಈ ವಿಚಾರ ಅನಿರ್ವಾರ್ಯ. ನಾವು ವೈಯಕ್ತಿಕ ಮತ್ತು ಸಾಮಾಜಿಕ ಅನುಶಾಸನವನ್ನು ಪಾಲಿಸುವುದು ಅಗತ್ಯವಾಗಿದೆ. ಇದು ಅತ್ಯಂತ ಮಹತ್ವದ ವಿಚಾರ. ಭಗಿನಿ ನಿವೇದಿತಾ ಒಂದು ಕಡೆ ಹೇಳುತ್ತಾ “ಸ್ವತಂತ್ರ ದೇಶದಲ್ಲಿ ನಾಗರಿಕ ಅನುಶಾಸನದ ಪಾಲನೆಯೇ ದೇಶ ಭಕ್ತಿಯ ನಿತ್ಯ ಪ್ರಕಟೀಕರಣ” ಎನ್ನುತ್ತಾರೆ. ಸಂವಿಧಾನವನ್ನು ಜಾರಿಗೆ ತರುವ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮಾಡುತ್ತಾ ಈಗ ನಾವು ಸ್ವತಂತ್ರವಾಗಿದ್ದೇವೆ, ಇನ್ನು ಇಷ್ಟು ವರ್ಷಗಳ ಕಾಲ ನಾವು ನಡೆದುಬಂದ ಹಾದಿಯನ್ನು ಬದಲಿಸಬೇಕಿದೆ. ಸ್ವಾತಂತ್ರ್ಯಕ್ಕಾಗಿ ನಾವು ತುಳಿದ ಹಾದಿಯನ್ನು ಮತ್ತೆ ಹಳಿಗೆ ತರಬೇಕಿದೆ. ಇನ್ನು ಮುಂದೆ ಸತ್ಯಾಗ್ರಹವನ್ನೂ ನಾನು ಒಪ್ಪಲಾರೆ. ಈಗ ನಾವು ಸ್ವತಂತ್ರಗೊಂಡಿದ್ದೇವೆ. ದೇಶಕ್ಕೊಂದು ಕಾನೂನು, ರೀತಿ ರಿವಾಜಿದೆ. ಅದರಲ್ಲೇನಾದರೂ ತಪ್ಪಿದ್ದಲ್ಲಿ ಅದನ್ನು ತಿದ್ದುವ ಅವಕಾಶವೂ ಅದರಲ್ಲೇ ಇದೆ. ನಾವೆಲ್ಲರೂ ಆ ಸಂವಿಧಾನ ಕಾನೂನು ಪಾಲಿಸಬೇಕಿದೆ. ಸಂವಿಧಾನ ಕಾನೂನು ಯಾವುದೇ ಇರಲಿ, ನಾವು ನಮ್ಮ ಸಾಮಾಜಿಕ ಕರ್ತವ್ಯಗಳ ಪಾಲನೆ ಮಾಡಬೇಕಿದೆ. ನಾವು ಒಬ್ಬರೇ ಜೀವಿಸುವುದು ಅಲ್ಲ, ನಾವು ಒಟ್ಟಿಗೇ ಜೀವಿಸಬೇಕಿದೆ.ಆಗ ಯಾವ ರೀತಿ ಭಾವ ನಮ್ಮಲ್ಲಿರಬೇಕು? ಪೂಜನೀಯ ಬಾಬಾ ಸಾಹೇಬರು ಒಂದು ಕಥೆ ಹೇಳುತ್ತಿದ್ದರು. ಒಮ್ಮೆ ಒಂದು ಯುದ್ಧ ನಡೆಯಿತು. ಮುಗಿದ ನಂತರ ಡಾಕ್ಟರ್ಗಳು ಪ್ರಥಮ ಚಿಕಿತ್ಸೆಗೆ ಬಂದರು. ಅಲ್ಲೇ ಒಬ್ಬ ಸೈನಿಕ ಬಿದ್ದಿದ್ದ. ಅವನಿಗೆ ಸ್ಟ್ರೆಚರ್ ತರಲು ಹೋದರು, ಅಲ್ಲೇ ಇದ್ದ ಜನರಲ್ಗೆ ನೀರು ಕೊಡಲು ಹೋದಾಗ ಮೊದಲು ಆ ಸೈನಿಕನಿಗೆ ಕೊಡಿ, ಎಂದಾಗ ಸೈನಿಕ ನೀವು ಜನರಲ್ ಅಂದಾಗ ,’thy need is greater’ ಎಂದರಂತೆ. ಆ ರೀತಿಯ ಭಾವ ನಮ್ಮ ಮನಸಲ್ಲಿರಬೇಕು. ಸಂಘದ ಸ್ವಯಂಸೇವಕರಿಗೆ ಇದನ್ನು ಕಲಿಸಲಾಗುತ್ತದೆ.ಅಲ್ಲದೆ ಇಡೀ ಸಮಾಜ ಈ ರೀತಿ ವರ್ತಿಸಬೇಕಿದೆ. ಈ ನಾಲ್ಕು ವಿಚಾರಗಳ ಆಧಾರದಲ್ಲಿ ಕೆಲಸ ಮಾಡಬೇಕಿದೆ.
ದೇಶದ ಉತ್ಥಾನ ಕೇವಲ ಪ್ರತಿಭೆಯ ಆಧಾರದ ಮೇಲೆ, ತಂತ್ರಜ್ಞಾನದ ಆಧಾರದ ಮೇಲೆ ನಡೆಯುವುದಿಲ್ಲ. ಇದು ಬೇಡ ಎಂತಲ್ಲ. ಬದಲಾಗಿ ಸಮಾಜ ನಮ್ಮ ದೇಶವನ್ನು ಉನ್ನತವಾಗಿಸಿಯೇ ತೀರುತ್ತೇವೆ ಎನ್ನುವ ಭಾವ ತಳೆಯಬೇಕು.ಅದಕ್ಕಾಗಿ ಈ ನಾಲ್ಕು ವಿಚಾರಗಳನ್ನು ಪಾಲಿಸಲೇಬೇಕಿದೆ.
ದೇಶವೇನೋ ಸ್ವತಂತ್ರವಾಗಿದೆ. ಆದರೆ ನಿರಂತರವಾಗಿ ಸ್ವತಂತ್ರವಾಗಿಡಲು ನಾವು ಪ್ರಯತ್ನ ಮಾಡಬೇಕಿದೆ. ಮತ್ತೆ ಪರತಂತ್ರ್ಯಕ್ಕೆ ಹೋಗುವುದಿಲ್ಲ ಎಂಬ ಗ್ಯಾರೆಂಟಿ ಏನಿದೆ? ಏಕೆಂದರೆ ಸಿಕಂದರನ ಕಾಲದಿಂದಲೂ ಮತ್ತೆ ಮತ್ತೆ ಪರತಂತ್ರ್ಯದ ಅಡಿಯೇ ಬಂದಿದ್ದೇವೆ.ಈ ಚಕ್ರವನ್ನು ನಾವು ಮುರಿಯಬೇಕು. ಹಾಗಾಗಿ ನಾವು ಸಮಾಜದಲ್ಲಿ ಪರಿವರ್ತನೆ ತರಬೇಕಿದೆ.ಅದರ ಗುಣವತ್ತತೆ ಹೆಚ್ಚಿಸಬೇಕಿದೆ.ಅದರಲ್ಲಿನ ಕೆಟ್ಟ ಆಚರಣೆಗಳನ್ನು ಬದಲಿಸಬೇಕಿದೆ.ಇದನ್ನು ಯಾರಾದರೂ ಮಾಡಲೇಬೇಕಿದೆ.ಎಲ್ಲರೂ ಅವರವರ ಕೆಲಸಗಳ ನಡುವೆ ಇದನ್ನು ಮಾಡಲು ಸಮಯವಿಲ್ಲ ಎಂದುಕೊಂಡಾಗ ಡಾ.ಹೆಡ್ಗೆವಾರ್ ಅವರು “ಹಾಗಾದರೆ ನಾನು ಎಲ್ಲವನ್ನು ಬಿಟ್ಟು ಈ ಕೆಲಸಕ್ಕೆ ತೊಡಗುತ್ತೇನೆ” ಎಂದರು.ಪ್ರಯೋಗ ನಡೆಸಿದರು. ನಮ್ಮ ಸಂಸ್ಕೃತಿ, ಪುರ್ವಜರ ಪರಂಪರೆ, ದೇಶದ ಎಡೆಗಿನ ಭಕ್ತಿ ಇವೆಲ್ಲವನ್ನೇ ನಾವು ಹಿಂದುತ್ವ ಎನ್ನುತ್ತೇವೆ. ಈ ಎಲ್ಲವನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಅಭ್ಯಾಸ ಮಾಡುವುದೇ ನಮ್ಮ ಕೆಲಸವಾಗಬೇಕಿದೆ. ಇದೇ ಸಂಘದ ಕೆಲಸ. ಹಾಗಾಗಿಯೇ ನಮ್ಮ ಈ ಶಿಬಿರಗಳು ನಡೆಯುತ್ತದೆ. ಸಂಘದ ಕೆಲಸ ಸಂಘದ ಕೆಲಸ ಮಾತ್ರವೇ ಅಲ್ಲ, ಅದು ಸಮಾಜದ ಕೆಲಸವಾಗಿದೆ. ಸಮಾಜ ತನ್ನ ಕೆಲಸ ಮಾಡಲಿ ಎನ್ನುವುದಕ್ಕಾಗಿಯೇ ಸಂಘವಿದೆ. ಸಮಾಜ ತನ್ನ ಕೆಲಸ ಮಾಡಲು ಆರಂಭಿಸಿದರೆ, ಸಂಘ ಅದರ ಹಿಂದೆ ಇರುತ್ತದೆ. ವಾಸ್ತವದಲ್ಲಿ ಭಾರತದ ಉತ್ಥಾನದ ಶ್ರೇಯ ಭಾರತದ ಸಮಾಜಕ್ಕೇ ಸಲ್ಲಬೇಕು ಏಕೆಂದರೆ ಅದು ನಡೆಯದಿದ್ದರೆ ಭಾರತದ ಉತ್ಥಾನ ಸಾಧ್ಯವಿಲ್ಲ. ಸಂಘವು ಎಲ್ಲರನ್ನು ತನ್ನ ಸ್ವಯಂಸೇವಕರೆಂದೇ ಪರಿಗಣಿಸುತ್ತದೆ. ಕೆಲವರು ಇಂದು ಸ್ವಯಂಸೇವಕರಾಗಿದ್ದಾರೆ ಕೆಲವರು ನಾಳೆ ಆಗುತ್ತಾರೆ.
ಒಮ್ಮೆ ಗುರೂಜಿಯವರು ವಿನೋಭಾ ಭಾವೆಯವರನ್ನು ಭೇಟಿ ಮಾಡಲು ಹೋದರು. ಆಗ ಅವರು ಗೋಳ್ವಲ್ಕರ್ ಅವರೇ ನಾನು ಅಸಭ್ಯ ಸಭ್ಯ ಎನ್ನುತ್ತಾರೆ. ಅಂದರೆ ಎಂದಾಗ ನಾನು ಸಭೆಯಲ್ಲಿ ಇರುವುದಿಲ್ಲ, ಆದರೆ ಸಭೆಯಲ್ಲಿ ನಿಶ್ಚಯವಾದುದೆಲ್ಲವನ್ನೂ ಮಾಡುತ್ತೇನೆ ಎನ್ನುತ್ತಾರೆ. ಹಾಗೆ ಅನೇಕರು ನಮ್ಮೊಂದಿಗೆ ಇದ್ದಾರೆ. ಅದರ ಅಭ್ಯಾಸಕ್ಕಾಗಿ ದಿನವೂ ಏನಾದರೊಂದು ಮಾಡಬೇಕು ಎನ್ನುವುದು ಗುರಿ. ನಿಮ್ಮಲ್ಲಿ ಹಾಗೆ ದಿನವೂ ಮಾಡಲು ಬೇರೆ ಯಾವುದೇ ದಾರಿಯಿಲ್ಲವಾದರೆ ಸಂಘದ ಶಾಖೆ ಇದೆ.ಹಾಗಾಗಿ ದಿನದ ಒಂದು ಗಂಟೆ ಸಮಾಜಕ್ಕಾಗಿ ಪ್ರಮಾಣಿಕವಾಗಿ, ನಿಸ್ವಾರ್ಥವಾಗಿ ಕೆಲಸ ಮಾಡಿ. ಈ ಆಹ್ವಾನವನ್ನು ಸಂಘ ತೆಗೆದುಕೊಂಡು ಬಂದಿದೆ.ಇದನ್ನು ಪೂರ್ಣಗೊಳಿಸಿದ ಮೇಲೆ ಸಂಘಕ್ಕೆ ಬೇರೇನೂ ಮಾಡುವುದಕ್ಕೆ ಉಳಿಯುವುದಿಲ್ಲ. ಈ ಧ್ಯೇಯವೊಂದೆ ನಮ್ಮೆಲ್ಲರ ಎದುರು ಇದೆ. ತುಕಡೋಜಿ ಮಹಾರಾಜರು ಹೇಳುತ್ತಾರೆ, “ಭಾರತದ ಉತ್ಥಾನ ನಮ್ಮೆಲ್ಲರ ಜನ್ಮದ ಕಾರಣ, ನಮ್ಮೆಲ್ಲರ ಮೋಕ್ಷದ ಸಾಧನ”. ರಾಷ್ಟ್ರದ ಯೋಗಿಗಳಾಗೋಣ ಮಾಡುವ ಭಾರತದ ಧ್ಯಾನ ಎನ್ನುವುದನ್ನ ನಿಮ್ಮ ಮುಂದಿಡುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.