ಅಖಿಲ  ಭಾರತೀಯ ಗ್ರಾಹಕ ಪಂಚಾಯತ್, ತುಮಕೂರು ಜಿಲ್ಲಾ ವತಿಯಿಂದ ಅಭ್ಯಾಸ ವರ್ಗ ಹಾಗೂ ಗ್ರಾಹಕ ಮಾರ್ಗದರ್ಶನ ಸೇವಾಕೇಂದ್ರ ದ ಉದ್ಘಾಟನೆ ಸಮಾರಂಭವನ್ನು  ದಿನಾಂಕ 27/03/2022ರ ಭಾನುವಾರ  ಕೊತಿತೋಪ್‌ನಲ್ಲಿ ಇರುವ “ಸಾಧನ” ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಅಖಿಲ  ಭಾರತೀಯ ಗ್ರಾಹಕ ಪಂಚಾಯತ್ (ABGP) ಸಮಾಜದಲ್ಲಿ ಗ್ರಾಹಕರ ಹಿತಕ್ಕಾಗಿ  ರಾಷ್ಟ್ರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಯಾಗಿದೆ. ಶೋಷಣೆಗೆ ಒಳಗಾದಂತಹ ಗ್ರಾಹಕರ ಪರವಾಗಿ ನಿಂತು, ಗ್ರಾಹಕರ ಸಮಸ್ಯೆಗಳನ್ನು ಆಲಿಸುವ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸೂಕ್ತವಾದ ಮಾರ್ಗದರ್ಶನವನ್ನು ನೀಡಲು ತುಮಕೂರಿನಲ್ಲಿ ಗ್ರಾಹಕ ಮಾರ್ಗದರ್ಶನ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಶೋಷಣೆಗೊಳಗಾದ ಗ್ರಾಹಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ ಎಂದು  ABGP ಜಿಲ್ಲಾ ಅಧ್ಯಕ್ಷರು ಬಸವರಾಜು ಅವರು ತಿಳಿಸಿದರು.

ಅಭ್ಯಾಸ ವರ್ಗದಲ್ಲಿ ಹಿರಿಯರಾದ ಪ್ರಾಂತದ ನಿಕಟ ಪೂರ್ವ ಅಧ್ಯಕ್ಷರಾದ ರಂಗನಾಥ್‌ರವರು, ಸ್ವದೇಶಿ ಬಂಢಾರದ ಮಾಲಿಕರಾದ ವಿಶ್ವನಾಥ್,ವಕೀಲರು ಹಾಗು  ತುಮಕೂರು ವಿಭಾಗ ದ ಸಂಯೋಜಕರಾದ ಶಿವಪ್ರಸಾದ್, ಪ್ರಾಂತ ಮಹಿಳಾ  ಪ್ರಮುಖರಾದ ಗಾಯತ್ರಿ ನಾಡಿಗ್ ಉಪಸ್ಥಿತರಿದ್ದರು , ABGPಯ ಪರಿಚಯ ಉದ್ದೇಶ ಬಗ್ಗೆ ಶ್ರೀ ಲಕ್ಷ್ಮಿ ಯವರು ತಿಳಿಸಿದರು. ಗ್ರಾಹಕರ ಅನುಕೂಲಕ್ಕಾಗಿ ಐದು ಕ್ಷೇತ್ರಗಳಲ್ಲಿ ಆಹಾರ, ವಸತಿ, ಆರೋಗ್ಯ, ಶಿಕ್ಷಣ, ವ್ಯವಹಾರ ದಲ್ಲಿ ಗ್ರಾಹಕ ಪಂಚಾಯತ್ ಆಂದೋಲನಾತ್ಮಕ ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲು  ಸಂಘಟನೆಯ ಅವಶ್ಯಕತೆಯನ್ನು ಶ್ರೀಮತಿ. ಗಾಯತ್ರಿಯವರು ತಿಳಿಸಿದರು.

ಪ್ರದೀಪ್ ಸ್ವದೇಶಿ ಪ್ರಾಂತ ಟೋಳಿ ಸದಸ್ಯ ರು “ಕಾರ್ಯಕರ್ತರ ವ್ಯಕ್ತಿತ್ವ ವಿಕಾಸನ” ಬಗ್ಗೆ ತಿಳಿಸಿದರು, ರಾಜೇಶ್ ಪ್ರಸಾದ್ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಮಂತ್ರಿ ಯವರು ABGP ಆಯಾಮಗಳು ಹಾಗು ಚಟುವಟಿಕೆಗಳ ವಿಚಾರವಾಗಿ ಮಾತನಾಡಿದರು.

ABGP ತುಮಕೂರು ಜಿಲ್ಲಾ ಟೋಲಿಯ ನ್ನು ಘೋಷಿಸಲಾಯಿತು ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀಯುತ ರಘುರಾಮ ವರು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.