ಮಾರ್ಚ್ 12-14 ರ ವರೆಗೆ ಹರಿಯಾಣದಲ್ಲಿ ಆರ್ ಎಸ್ ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾರ್ಚ್ 12, 13 ಮತ್ತು 14ರಂದು ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಸಮಾಲ್ಕದಲ್ಲಿ ನಡೆಯಲಿದೆ. ಈ ಸಭೆಯಲ್ಲಿ 2022-23 ನೇ ಸಾಲಿನ ಸಂಘ ಕಾರ್ಯದ ಸಮೀಕ್ಷೆ ಮತ್ತು ಬರುವ 2023-24 ನೇ ಸಾಲಿನ ಸಂಘ ಕಾರ್ಯದ ವಾರ್ಷಿಕ ಯೋಜನೆಯ ಕುರಿತು ಚರ್ಚಿಸಲಾಗುತ್ತದೆ. ಹಾಗೆಯೇ ಕಾರ್ಯಕರ್ತರ ನಿರ್ಮಾಣಕ್ಕಾಗಿ ಪರಿಶ್ರಮ, ಸಂಘ ಶಿಕ್ಷ ವರ್ಗದ ಯೋಜನೆ, ಶತಾಬ್ದಿ ವಿಸ್ತಾರದ ಕುರಿತಾಗಿ ಯೋಜನೆ ಮತ್ತು ಕಾರ್ಯದ ದೃಢೀಕರಣ ಹಾಗೂ ರಾಷ್ಟ್ರದ ವರ್ತಮಾನ ಸ್ಥಿತಿಗತಿಗಳ ಕುರಿತು ಪ್ರಸ್ತಾಪವಾಗಲಿದೆ.

ಅಖಿಲ ಭಾರತೀಯ ಪ್ರತಿನಿಧಿ ಸಭಾ ಕಾರ್ಯಕ್ರಮದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹಸರಕಾರ್ಯವಾಹರು, ಅಖಿಲ ಭಾರತೀಯ ಕಾರ್ಯಕಾರಿಣಿಗಳು, ಕ್ಷೇತ್ರ ಮತ್ತು ಪ್ರಾಂತದ ಕಾರ್ಯಕಾರಿಣಿಗಳು, ಸಂಘದ ಅಖಿಲ ಭಾರತೀಯ ಪ್ರತಿನಿಧಿಗಳು, ಎಲ್ಲಾ ವಿಭಾಗ ಪ್ರಚಾರಕರು, ವಿವಿಧ ಸಂಘಟನೆಗಳ ಆಹ್ವಾನಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರಾಷ್ಟ್ರಾದ್ಯಂತ ಸುಮಾರು 1400 ಕಾರ್ಯಕರ್ತರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Akhil Bharatiya Pratinidhi Sabha’s Annual Meet on March 12-14 in Samalkha, Haryana

The Rashtriya Swayamsevak Sangh’s Akhil Bharatiya Pratinidhi Sabha (ABPS) will hold its annual meeting from 12 to 14th March this year in Samalkha in the Panipat district of Haryana. The Sabha will review Sangh’s previous year’s (2022-23) activities, and also chalk out strategies and plan of action for the next year (2023-24).
The three-day meeting would discuss Karyakarta Nirman and their training, as well as planning and organization of RSS Shiksha Vargs (annual camps).
https://www.rss.org/Encyc/2023/3/1/Akhil-Bharatiya-Pratinidhi-Sabha-s-Annual-Meet-on-March-12-14-in-Samalkha-Haryana.html

Leave a Reply

Your email address will not be published.

This site uses Akismet to reduce spam. Learn how your comment data is processed.