ಶಿವಮೊಗ್ಗ: ಹಿಂದೂ ಯುವಕರಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳಿಸುವ ನಿಟ್ಟಿನಲ್ಲಿ, ದೈಹಿಕ ಹಾಗೂ ಬೌದ್ಧಿಕವಾಗಿ ಸದೃಢಗೊಳಿಸಿ ರಾಷ್ಟ್ರ ಕಾರ್ಯದಲ್ಲಿ ತೊಡಗಿಸುವ ಉದ್ಧೇಶದಿಂದ ಪ್ರತಿ ವರ್ಷ ಬಜರಂಗದಳ ಸಂಘಟನೆ ವತಿಯಿಂದ ಆಯ್ದ ಕಾರ್ಯಕರ್ತರಿಗೆ ಶೌರ್ಯ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗುತ್ತದೆ.

ಈ ವರ್ಷದ ವರ್ಗವು ಶಿವಮೊಗ್ಗದಲ್ಲಿ ನಡೆಯಿತು. ಈ ವರ್ಗದಲ್ಲಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಿರಿಯರ ಮಾರ್ಗದರ್ಶನ ಹಾಗೂ ಬಜರಂಗದಳದ ರಾಷ್ಟ್ರೀಯ ಶಿಕ್ಷಕ ವರ್ಗ ಪೂರೈಸಿದ ಉತ್ಕೃಷ್ಟ ಶಿಕ್ಷಕರಿಂದ ಶಾರೀರಿಕ ಶಿಕ್ಷಣ ನೀಡಲಾಯಿತು. ವರ್ಗದಲ್ಲಿ ಸುಮಾರು 200 ಕಾರ್ಯಕರ್ತರು ಭಾಗವಹಿಸಿದರು.

ವರ್ಗದಲ್ಲಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ್ ಹೆಗಡೆ, ಕ್ಷೇತ್ರೀಯ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ಹೆಗಡೆ, ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್, ಸಹ ಸಂಯೋಜಕ ಪ್ರಬಂಜನ್ ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.