ಅಸ್ಸಾಮಿನ ಗುವಾಹಟಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವೈಚಾರಿಕ ಸಮೂಹಗಳ ಸಹಯೋಗದೊಂದಿಗೆ ನಡೆದ ಲೋಕಮಂಥನ – 2022ರ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿದರು. ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಖಾನ್ ಅವರೂ ಉಪಸ್ಥಿತರಿದ್ದರು.

“ಪೂರ್ವಾಂಚಲ ರಾಜ್ಯಗಳು ತಮ್ಮ ವೈವಿಧ್ಯತೆಯಿಂದ ಲೋಕಪರಂಪರೆಯನ್ನು ಸಂಭ್ರಮದಿಂದ ಒಳಗೊಂಡಿದೆ” ಎಂದ ಅವರು ಮುಂದುವರೆದು ಅಥರ್ವ ವೇದದ ಶ್ಲೋಕವೊಂದನ್ನು ಉಲ್ಲೇಖಿಸುತ್ತಾ ” ಭೂಮಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ” ಎಂದರು.
” ಲೋಕಮಂಥನದ  ಮುಖ್ಯ ಭೂಮಿಕೆಯೇ ‘ಭಾರತ ಮೊದಲು’ ಎಂಬ ಚಿಂತನೆಯುಳ್ಳ ಚಿಂತಕರ ಮತ್ತು ಆ ರೀತಿ ಆಚರಣೆಯಲ್ಲಿ ತಂದಿರುವವರ ಸಮಾವೇಶ. ಅನೇಕ ಬಾರಿ ಫೋಕ್ ಅನ್ನುವ ಪದವನ್ನು ಲೋಕ ಎಂಬಂತೆ ಅನುವಾದ ಮಾಡಲಾಗುತ್ತದೆ‌. ಫೋಕ್ ಎನ್ನುವ ಪದದ ಅರ್ಥಕ್ಕಿಂತ ಲೋಕಕ್ಕೆ ಹೆಚ್ಚಿನ ವ್ಯಾಪ್ತಿಯಿದೆ.ಲೋಕ ಪರಂಪರೆಯು ನಿರಂತರವಾಗಿ ಸಪ್ತ ಮಾತೆಯರ ಕಲ್ಪನೆಯ ಪ್ರಜ್ಞೆಯನ್ನು ಪ್ರವಹಿಸುತ್ತಾ ಬಂದಿದೆ. ಮತ್ತು ಭಾರತದ ಸಂಸ್ಕೃತಿಯಲ್ಲಿ ಮಾತೃಶಕ್ತಿಯ ಕುರಿತು ಅತ್ಯಂತ ಹಿರಿಯ ಸ್ಥಾನವಿದೆ.ಒಂದು ರಾಷ್ಟ್ರದ ನಿರ್ಮಾಣ ಸಂವಿಧಾನ,ಸೇನೆ, ಅಥವಾ ಹಣದ ಮೇಲೆ ಅಲ್ಲ ಬದಲಾಗಿ ಅದು ಭೂಮಿ, ಜನ, ಸಂಸ್ಕೃತಿ ಮತ್ತು ನಿಯಮಗಳ ಮೇಲೆ ನಿರ್ಮಾಣವಾಗುತ್ತದೆ”ಎಂದರು.

ಆರಿಫ್ ಖಾನ್ ಅವರು ಮಾತನಾಡುತ್ತಾ “ಜಾಗತಿಕತೆಯಲ್ಲಿ ಪ್ರಾದೇಶಿಕತೆಯನ್ನು ನಾವು ಅರ್ಥ ಮಾಡಿಕೊಂಡಾಗ, ಒಂದು ನೀರಿನ ಸಣ್ಣ ಬಿಂದುವೇ ದೊಡ್ಡ ಸಾಗರವಾಗುವುದೆಂದು ಅರ್ಥ ಮಾಡಿಕೊಳ್ಳುವಲ್ಲಿ ಯಶಸ್ವಿಯಾದಾಗ ಮಾತ್ರ ನಮಗೆ ಸತ್ಯ ಗೋಚರಿಸಲು ಸಾಧ್ಯ.ಭಾರತದ ನಿಜವಾದ ಸ್ವಾತಂತ್ರ್ಯ ಬರುವುದು ಯಾವಾಗ ಎಂದರೆ ಭಾರತದ ಜನರಿಗೆ ಸ್ವಾತಂತ್ರ್ಯ ಎನ್ನುವುದು ನಮ್ಮೊಳಗಿನ ತುಡಿತವಾಗಿ ನಮ್ಮೆದೆಯಲ್ಲಿ ಹುಟ್ಟಿದಾಗ ಮಾತ್ರ ಎನ್ನುವುದು ಅರ್ಥವಾಗಬೇಕು” ಎಂದರು.

ಮುಸಲ್ಮಾನ ಆಕ್ರಮಣಕಾರರ ವಿರುದ್ಧ ಹೋರಾಡಿದ ಅಸ್ಸಾಮಿನ ಮಹಾನ್ ಹೀರೋಗಳು, ಪ್ರಗ್ಜೋತಿಶ್ಯಪುರದ ಸ್ವಾತಂತ್ರ್ಯ ಹೋರಾಟಗಾರರು ಮುಂತಾದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.