ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಶನಿವಾರ 24, ಸೆಪ್ಟೆಂಬರ್202ರಂದು ಧೀರಜ್‌ಪುರ್‌ನಲ್ಲಿ ಸಿವಿಲ್ ಸೇವಾ ಪ್ರತಿಭಾಗೀ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯ ಭವನದ ಭೂಮಿ ಪೂಜನದ ಶಿಲಾನ್ಯಾಸವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರೀಯ ಮಂತ್ರಿ ಡಾ.ಹರ್ಷವರ್ಧನ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಕುರಿತು ಉದ್ದೇಶಿಸಿ ಮಾತನಾಡಿದ ಡಾ.ಮೋಹನ್ ಭಾಗವತ್ ಅವರು  “ಸರಕಾರೀ ಸೇವೆಗಳಿಗೆ ಯುವಕರನ್ನು ತಯಾರು ಮಾಡುವ ಸಂಕಲ್ಪ ಮಾಡಲಾಗುತ್ತಿದೆ,ಇದೊಂದು ರಾಷ್ಟ್ರೀಯ ಕಾರ್ಯವೇ.ಇದರಿಂದ ಸರಕಾರೀ ವ್ಯವಸ್ಥೆಯ ಒಳಗೆ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅತ್ಯಂತ ಉಪಯೋಗವಾಗುತ್ತದೆ.ಸರಕಾರೀ ಸೇವೆಗಳಲ್ಲಿ ಹೆಣ್ಣುಮಕ್ಕಳ ಭಾಗೀದಾರಿಯೂ ಹೆಚ್ಚಾಗಬೇಕಿದೆ.ಮತ್ತು ಸಂಕಲ್ಪ ಅಕಾಡೆಮಿಯ ಈ ಹೊಸ ವಿದ್ಯಾರ್ಥಿನಿಯರ ವಸತಿನಿಲಯ ಈ ನಿಟ್ಟಿನಲ್ಲಿ ಅತ್ಯಂತ ಮಹತ್ವಪೂರ್ಣವಾದ ಹೆಜ್ಜೆಯಾಗಿದೆ” ಎಂದರು.

“ಭವನದ ನಕ್ಷೆಯು ಪೂರ್ಣಗೊಂಡಿದ್ದು ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಅನುಮತಿ ದೊರಕಿದೆ. ವಿದ್ಯಾರ್ಥಿನಿಯರ ವಸತಿನಿಲಯವು ಬೇಸ್‌ಮೆಂಟ್ ಸೇರಿದಂತೆ 6 ಅಂತಸ್ತಿನ ಕಟ್ಟಡವಾಗಿದ್ದು ಅದರಲ್ಲಿ 36 ಕೊಠಡಿಗಳ ಜೊತೆಗೆ ಕೋಚಿಂಗ್, ಊಟದ ಹಾಲ್,ಅಧ್ಯಯನ ಕೋಣೆ, ಲೈಬ್ರರಿ,ಸೆಮಿನಾರ್ ಹಾಲ್,ಪಾರ್ಕಿಂಗ್ ಇತ್ಯಾದಿ ಸೌಲಭ್ಯಗಳಿವೆ. ಭವನದ ನಿರ್ಮಾಣ ಪೂರ್ಣರೂಪವಾಗಿ ದಾನಿಗಳ ಸಹಕಾರದಿಂದ ನಡೆಯುತ್ತಿದ್ದು ಮಹಿಳಾ ಸಶಕ್ತೀಕರಣದ ನಿಟ್ಟಿನಲ್ಲಿ  ಸಂಕಲ್ಪ ಅಕಾಡೆಮಿಯ ಈ ಪ್ರಯತ್ನ ಅತ್ಯಂತ ಪ್ರೇರಣಾದಾಯಿಯಾಗಲಿದೆ. ಮತ್ತು ಇದು ದೂರಗಾಮಿಯಾಗಿ ಪರಿಣಾಮ ಬೀರುವುದು ಎಂಬ ವಿಶ್ವಾಸವಿದೆ”ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.