ಇಂದು ಜಯಂತಿ

ಜಿ ಸುಬ್ರಹ್ಮಣ್ಯ ಅಯ್ಯರ್ ಅವರು ಪತ್ರಕರ್ತರಾಗಿ, ಸಮಾಜ ಸುಧಾರಕರಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧಿ ಪಡೆದವರು. ಅವರು ದಿ ಹಿಂದೂ ಪತ್ರಿಕೆಯನ್ನು ಸ್ಥಾಪನೆ ಮಾಡಿದರು. ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಸಹ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಪತ್ರಿಕಾ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.


ಪರಿಚಯ
ಸುಬ್ರಹ್ಮಣ್ಯ ಅಯ್ಯರ್ ಅವರು ಜನವರಿ 19, 1855 ರಲ್ಲಿ ತಂಜೂರು ಜಿಲ್ಲೆಯ ತಿರುವಡಿಯಲ್ಲಿ ಜನಿಸಿದರು. ಅವರು ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. 1871ರಲ್ಲಿ ತಂಜೂರಿನ ಸೇಂಟ್ ಪೀಟರ್ಸ್ ಕಾಲೇಜಿನಲ್ಲಿ ಮೆಟ್ರಿಕ್ಯೂಲೇಷನ್ ಪಡೆದರು. 1877 ರಲ್ಲಿ ಅವರು ತಮ್ಮ ಬಿಎ ಪರೀಕ್ಷೆಗಳನ್ನು ಖಾಸಗಿ ಅಭ್ಯರ್ಥಿಯಾಗಿ ಉತ್ತೀರ್ಣರಾದರು.


ಸೆಪ್ಟೆಂಬರ್ 20, 1878 ರಂದು ಹಿಂದೂ ಪತ್ರಿಕೆಯನ್ನು ಸ್ಥಾಪಿಸಿದರು.  ನಂತರ ಅವರು ತಮಿಳು ಭಾಷೆಯ ಸ್ವದೇಶಮಿತ್ರನ್ ಪತ್ರಿಕೆಯನ್ನು ಸ್ಥಾಪಿಸಿದರು. 1879 ರಲ್ಲಿ ಟ್ರಿಪ್ಲಿಕೇನ್ ನ ಆಂಗ್ಲೋ-ವರ್ನಾಕ್ಯುಲರ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸುಬ್ರಮಣ್ಯ ಅಯ್ಯರ್ ಅವರು ಬ್ರಿಟಿಷ್ ಸಾಮ್ರಾಜ್ಯಶಾಹಿತ್ವವನ್ನು ಪ್ರತಿಭಟಿಸಲು ತಮ್ಮ ಪತ್ರಿಕೆಯನ್ನು ಬಳಸಿದರು. 1897 ರಲ್ಲಿ, ಬಾಲಗಂಗಾಧರ ತಿಲಕ್ ಅವರನ್ನು ಬ್ರಿಟಿಷ್ ಅಧಿಕಾರಿಗಳು ಬಂಧಿಸಿದಾಗ, ದಿ ಹಿಂದೂ ಬಂಧನವನ್ನು ತೀವ್ರವಾಗಿ ಖಂಡಿಸಿತ್ತು. 3 ಡಿಸೆಂಬರ್ 1883 ರಂದು ಪತ್ರಿಕೆಯು 100 ಮೌಂಟ್ ರೋಡ್ಗೆ ಸ್ಥಳಾಂತರಗೊಂಡಿತು. ನಂತರ ‘ದಿ ನ್ಯಾಷನಲ್ ಪ್ರೆಸ್’ ಎಂಬ ತನ್ನದೇ ಆದ ಮುದ್ರಣಾಲಯವನ್ನು ಸ್ಥಾಪಿಸಿದರು. 1898 ರಲ್ಲಿ, ಸುಬ್ರಹ್ಮಣ್ಯ ಅಯ್ಯರ್ ಅವರು ಮುಖ್ಯ ಸಂಪಾದಕ ಹುದ್ದೆಯನ್ನು ತೊರೆದರು. ನಂತರ ವೀರರಾಘವಾಚಾರ್ಯರು ಅಧಿಕಾರ ವಹಿಸಿಕೊಂಡರು. 1905 ರಲ್ಲಿ, ಪತ್ರಿಕೆಯನ್ನು ಶ್ರೀಮಂತ ಬ್ಯಾರಿಸ್ಟರ್ ಕಸ್ತೂರಿ ರಂಗ ಅಯ್ಯಂಗಾರ್ ಅವರು ಖರೀದಿಸಿದರು .


ರಾಜಕೀಯ ಜೀವನ
ಸುಬ್ರಹ್ಮಣ್ಯ ಅಯ್ಯರ್ ಅವರು 1887 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮತಿ ಸದಸ್ಯರಾಗಿದ್ದರು. ಮದ್ರಾಸ್ ಮಹಾಜನ ಸಭಾದ ಸ್ಥಾಪಕ ಸದಸ್ಯರೂ ಆಗಿದ್ದರು. ಗಾಂಧಿಯವರು ತಮ್ಮ ‘ಮೈ ಎಕ್ಸ್ ಪೆರಿಮೆಂಟ್ ವಿತ್ ಟ್ರೂತ್’ ಪುಸ್ತಕದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. 1906 ರಲ್ಲಿ, ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಉದ್ದೇಶಗಳನ್ನು ಉತ್ತೇಜಿಸಲು ಸ್ಥಾಯಿ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು. ಅವರು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸ್ಥಳೀಯ ರಾಷ್ಟ್ರೀಯತಾವಾದಿ ಪ್ರಯತ್ನವನ್ನು ಸಂಘಟಿಸಿದ ಮದ್ರಾಸ್ ಮಹಾಜನ್ ಸಭಾದ (1884) ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.


ಜಿ ಸುಬ್ರಹ್ಮಣ್ಯ ಅಯ್ಯರ್ ಅವರು ಅನಾರೋಗ್ಯದ ಕಾರಣದಿಂದ ಏಪ್ರಿಲ್ 18, 1916 ರಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.