ಆರ್ ಎಸ್ ಎಸ್ ‘ಕಾರ್ಯಕರ್ತ ವಿಕಾಸ ವರ್ಗ – ದ್ವಿತೀಯ’ ಆರಂಭ

ನಾಗಪುರ, ಮೇ 17, 2024: ಡಾ.ಹೆಡಗೇವಾರ್ ಸ್ಮೃತಿಮಂದಿರ ಪರಿಸರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಕಾರ್ಯಕರ್ತ ವಿಕಾಸ ವರ್ಗ – ದ್ವಿತೀಯ’ ಪ್ರಾರಂಭಗೊಂಡಿದೆ.

ವರ್ಗದ ಸರ್ವಾಧಿಕಾರಿ ಇಕ್ಬಾಲ್ ಸಿಂಗ್, ಆರ್ ಎಸ್ ಎಸ್ ಸಹಸರಕಾರ್ಯವಾಹ ಡಾ.ಕೃಷ್ಣ ಗೋಪಾಲ್ ಮತ್ತು ಅಖಿಲ ಭಾರತೀಯ ಸೇವಾ ಪ್ರಮುಖ್‌ ಹಾಗೂ ವರ್ಗದ ಪಾಲಕ್ ಅಧಿಕಾರಿ ಪರಾಗ್ ಅಭ್ಯಂಕರ್ ಅವರು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ವರ್ಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಸರಕಾರ್ಯವಾಹರಾದ ಮುಕುಂದ ಸಿ ಆರ್, ರಾಮದತ್ತ್ ಚಕ್ರಧರ್ ಉಪಸ್ಥಿತರಿದ್ದರು. ರಾಷ್ಟ್ರಾದ್ಯಂತದಿಂದ 936 ಶಿಕ್ಷಾರ್ಥಿಗಳು ವರ್ಗದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ದಕ್ಷಿಣ ಪ್ರಾಂತದ 22 ಶಿಕ್ಷಾರ್ಥಿಗಳು, ಕರ್ನಾಟಕ ಉತ್ತರ ಪ್ರಾಂತದ 22 ಶಿಕ್ಷಾರ್ಥಿಗಳು ವರ್ಗದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪರಾಗ್ ಅಭ್ಯಂಕರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವಿಕಾಸ ವರ್ಗವು ಸಂಘದ ಕಾರ್ಯಕರ್ತರಿಗೆ ರಾಷ್ಟ್ರೀಯ ಏಕಾತ್ಮತೆಯ ಅನುಭೂತಿ ನೀಡುತ್ತದೆ ಎಂದು ನುಡಿದರು.

ಸಂಘಕಾರ್ಯದಲ್ಲಿ  ಪ್ರಶಿಕ್ಷಣ ವರ್ಗ ಅತ್ಯಂತ ಮಹತ್ವದ್ದಾಗಿದೆ. ಈ ಕಾರಣದಿಂದಾಗಿಯೇ ಸಂಘಕಾರ್ಯವನ್ನು ವೃದ್ಧಿಸುವ ದೃಷ್ಟಿಯಿಂದ ಪ್ರಾಂತೀಯ ಸ್ಥಳಗಳಲ್ಲಿಯೂ ಪ್ರಶಿಕ್ಷಣ ವರ್ಗಗಳನ್ನು ನಡೆಸಲು ಪ್ರಾರಂಭಿಸಲಾಯಿತು. ಕೊರೋನಾ ಸಮಯದಲ್ಲಿ  ಬಿಟ್ಟು ಪ್ರಶಿಕ್ಷಣ ವರ್ಗ ನಿರಂತರವಾಗಿ ನಡೆದುಕೊಂಡು ಬಂದಿದೆ. ಹಾಗೆಯೇ ಸಮಯಕ್ಕೆ ಅನುಗುಣವಾಗಿ ಪ್ರಶಿಕ್ಷಣ ವರ್ಗ ಅವಧಿ ಮತ್ತು ಪಠ್ಯಕ್ರಮದಲ್ಲಿ ಬದಲಾವಣೆಗಳೂ ಆಗಿವೆ. ಕಾರ್ಯಕರ್ತರ ಚಿಂತನೆ ಹೇಗಿರಬೇಕು, ಅವರ ಮುಂದಿರುವ ಸವಾಲುಗಳು ಯಾವುವು ಎಂಬುದನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದರು.

ಸಂಘಟಿತ ಹಿಂದೂ ಸಮಾಜದ ವೈಶ್ವಿಕ ದೃಷ್ಟಿಕೋನವನ್ನು ರಚಿಸಲು, ಸಮಾಜದ ಸಜ್ಜನಶಕ್ತಿಯೊಂದಿಗೆ ಸಂಪರ್ಕವನ್ನು ಸಾಧಿಸಿ ತಮ್ಮ ಶಕ್ತಿಯನ್ನು ಹೇಗೆ ಸಾಧಿಸುವುದು ಎನ್ನುವುದರ ಕುರಿತು ಪ್ರಾಯೋಗಿಕ ತರಬೇತಿಯನ್ನೂ ವರ್ಗದಲ್ಲಿ ನೀಡಲಾಗುತ್ತದೆ. ರಾಷ್ಟ್ರಾದ್ಯಾಂತದಿಂದ ಭಾಗವಹಿಸುವ ಶಿಕ್ಷಾರ್ಥಿಗಳು ರಾಷ್ಟ್ರದ ಏಕಾತ್ಮತೆಯ ಭಾವವನ್ನು ವೃದ್ಧಿಸುತ್ತದೆ, ಹಿಂದುತ್ವದ ಏಕತೆಯ ಅನುಭೂತಿಯೂ ಈ ವರ್ಗದಲ್ಲಿ ಆಗುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ
ಕಾರ್ಯಕರ್ತ ವಿಕಾಸ ವರ್ಗ-ದ್ವಿತೀಯ

ಮೇ 16 ರಿಂದ , ಜೂನ್ 11, 2024ರ ವರೆಗೆ ಕಾರ್ಯಕರ್ತ ವಿಕಾಸ ವರ್ಗ ದ್ವಿತೀಯ ನಡೆಯಲಿದೆ.


ಸರ್ವಾಧಿಕಾರಿ- ಸರ್ದಾರ್ ಇಕ್ಬಾಲ್ ಸಿಂಗ್
ಪಾಲಕ್ ಅಧಿಕಾರಿ – ಶ್ರೀ ಪರಾಗ್ ಅಭ್ಯಂಕರ್
ವರ್ಗ ಕಾರ್ಯವಾಹ – ಶ್ರೀ ಅಶೋಕ್ ಅಗ್ರವಾಲ್ (ಮಧ್ಯಕ್ಷೇತ್ರ ಕಾರ್ಯವಾಹ)
ಮುಖ್ಯಶಿಕ್ಷಕ್ – ಶ್ರೀ ನೀಲೇಶ್ ಭಂಡಾರಿ (ಪಶ್ಚಿಮ ಮಹಾರಾಷ್ಟ್ರ ಪ್ರಾಂತ ಶಾರೀರಿಕ ಪ್ರಮುಖ್)
ಸಹಮುಖ್ಯಶಿಕ್ಷಕ್ – ಶ್ರೀ ಕುಣಾಲ್ (ಜಾರ್ಖಂಡ್ ಪ್ರಾಂತ ಶಾರೀರಿಕ್ ಪ್ರಮುಖ್ )
ಬೌದ್ಧಿಕ್ ಪ್ರಮುಖ್ – ಶ್ರೀ ಉದಯ್ ಶೇವ್ ಡೆ (ಕೊಂಕಣ ಪ್ರಾಂತ ಬೌದ್ಧಿಕ್ ಪ್ರಮುಖ್)
ಸಹ ಬೌದ್ಧಿಕ್ – ಶ್ರೀ ಕೃಷ್ಣಪ್ರಸಾದ್ ಬದಿ (ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ್)
ಶ್ರೀ ಅನಮ್ (ಜಮ್ಮು ಕಾಶ್ಮೀರ ಪ್ರಾಂತ ಬೌದ್ಧಿಕ ಪ್ರಮುಖ್)
ಸೇವಾಪ್ರಮುಖ್ – ಶ್ರೀ ಧನಿರಾಮ್ -ಪಶ್ಚಿಮ ಉತ್ತರ ಪ್ರದೇಶ ಕ್ಷೇತ್ರೀಯ ಸೇವಾ ಪ್ರಮುಖ್.
ಪ್ರಬಂಧ ಪ್ರಮುಖ್ – ಶ್ರೀ ಸುನಿಲ್ ಭಲಗಾಂವಕರ್ – ನಾಗಪುರ

Leave a Reply

Your email address will not be published.

This site uses Akismet to reduce spam. Learn how your comment data is processed.